Udayavni Special

ಪಾರುಲ್‌ ಕನಸು


Team Udayavani, Dec 7, 2018, 6:00 AM IST

d-80.jpg

ಪಾರುಲ್‌ ಯಾದವ್‌ ಸದ್ಯ ಸಿಕ್ಕಾಪಟ್ಟೆ ನಿರೀಕ್ಷೆಯೊಂದಿಗೆ ಸಿನಿಮಾವೊಂದಕ್ಕೆ ಎದುರು ನೋಡುತ್ತಿದ್ದಾರೆ. ಅದು “ಬಟರ್‌ ಫ್ಲೈ’. ಇದು ಪಾರುಲ್‌ ಯಾದವ್‌ ನಟಿಸಿರುವ ಸಿನಿಮಾ. ಸುಮಾರು ಒಂದೂವರೆ ವರ್ಷದಿಂದ ಯಾವುದೇ ಸಿನಿಮಾ ಒಪ್ಪಿಕೊಳ್ಳದ ಪಾರುಲ್‌ ಈಗ “ಬಟರ್‌ಫ್ಲೈ’ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಪಾರುಲ್‌ ಯಾದವ್‌ “ಬಟರ್‌ಫ್ಲೈ’ ಚಿತ್ರದ ನಿರ್ಮಾಣದಲ್ಲೂ ತೊಡಗಿದ್ದಾರೆ. ಸಾಮಾನ್ಯವಾಗಿ ನಟಿಯರು ನಿರ್ಮಾಣದಿಂದ ದೂರ ಇರುತ್ತಾರೆ. ಆದರೆ, ಪಾರುಲ್‌ ನಿರ್ಮಾಣದಲ್ಲಿ ಭಾಗಿಯಾಗಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. . ಸಿನಿಮಾದ ಕಥೆ ನನಗೆ ಇಷ್ಟವಾಗಿದ್ದರಿಂದ, ಮತ್ತು ಒಳ್ಳೆಯ ಟೀಮ್‌ ಇದ್ದಿದ್ದರಿಂದ, ನಾನು ಕೂಡ ಸಹ ನಿರ್ಮಾಪಕಿಯಾಗಿ ಈ ಸಿನಿಮಾದಲ್ಲಿ ತೊಡಗಿಸಿಕೊಂಡೆ’ ಎನ್ನುವ ಪಾರುಲ್‌ ತಮ್ಮ ನಿರ್ಮಾಣದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. “ನಾನು ನಟಿಯಾಗಿ ನಿರ್ಮಾಪಕರನ್ನು ಹತ್ತಿರದಿಂದ ನೋಡಿದ್ದೆ. ಆದರೆ ಅವರ ಕೆಲಸಗಳೇನು, ಒತ್ತಡಗಳೇನು ಅನ್ನೋದು ಗೊತ್ತಿರಲಿಲ್ಲ. ಈ ಚಿತ್ರದಲ್ಲಿ ನಟಿಯಾಗಿ ಅನುಭವಕ್ಕಿಂತ ನಿರ್ಮಾಪಕಿಯಾಗಿ ಹೆಚ್ಚು ಅನುಭವ ಕೊಟ್ಟಿದೆ. ನಿಜಕ್ಕೂ ಒಂದು ಸಿನಿಮಾ ಮಾಡೋದು ಎಷ್ಟೊಂದು ದೊಡ್ಡ ಚಾಲೆಂಜ್‌ ಅನ್ನೋದು ಈ ಸಿನಿಮಾ ಮಾಡಿದ ಮೇಲೆ ಗೊತ್ತಾಗುತ್ತಿದೆ. ಒಂದು ಒಳ್ಳೆಯ ಸಿನಿಮಾ ಗೆಲ್ಲೋದು ಒಳ್ಳೆಯ ಕಥೆ ಮತ್ತು ಅದನ್ನು ಅಷ್ಟೇ ಚೆನ್ನಾಗಿ ಪ್ರಸೆಂಟ್‌ ಮಾಡುವ ಟೀಮ್‌ನಿಂದ ಅನ್ನೋದನ್ನ ಕಲಿತುಕೊಂಡೆ’ ಎನ್ನುತ್ತಾರೆ.  ಈ ಚಿತ್ರದಲ್ಲಿ ಪಾರುಲ್‌  ಕರಾವಳಿಯ ಮಧ್ಯಮ ವರ್ಗದ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ” ಕನಸುಗಳನ್ನು ಕಾಣುವ ಹುಡುಗಿಯೊಬ್ಬಳು ಅದನ್ನು ನನಸು ಮಾಡಿಕೊಳ್ಳಲು ಹೇಗೆಲ್ಲ ಪರಿಶ್ರಮ ಪಡುತ್ತಾಳೆ ಅನ್ನೋದೇ ನನ್ನ ಪಾತ್ರ. ಕೊನೆಗೆ ಏನಾಗುತ್ತದೆ ಅನ್ನೋದೆ ಚಿತ್ರದ ಕಥೆ’ ಎನ್ನುತ್ತಾರೆ ಪಾರುಲ್‌. 

ಟಾಪ್ ನ್ಯೂಸ್

Singhu border murder- Accused Nihang Saravjeet Singh sent to 7-day judicial custody

ಸಿಂಘು ಗಡಿ ಹತ್ಯೆ ಪ್ರಕರಣ:- ಆರೋಪಿ ನಿಹಾಂಗ್‌ ಸರ್ವಜೀತ್ ಗೆ 7 ದಿನ ಪೊಲೀಸ್‌ ಕಸ್ಟಡಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

b-c-nagesh

1 ರಿಂದ 5ರ ವರೆಗೆ ಶಾಲೆ ಆರಂಭಕ್ಕೆ ಸರ್ವ ಸಿದ್ದತೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

20

ಶೆರ್ಲಿನ್ ದೂರು: ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ಬಂಧನದ ಭೀತಿ

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಪೋ ಕಲ್ಪಿತಂ

ಸೆನ್ಸಾರ್‌ ಪಾಸಾದ ‘ಕಪೋ ಕಲ್ಪಿತಂ’

ಡಿಜಿಟಲ್‌ ಲೋಕದ ಸುತ್ತ ‘ಗ್ರೇ ಗೇಮ್ಸ್‌’ ಶುರು

ಡಿಜಿಟಲ್‌ ಲೋಕದ ಸುತ್ತ ‘ಗ್ರೇ ಗೇಮ್ಸ್‌’ ಶುರು

dhanya ramkumar

‘ಶೋ ಪೀಸ್‌ ಆಗಲಾರೆ’: ರಾಜ್‌ ಮೊಮ್ಮಗಳು ಧನ್ಯಾ ಉತ್ತರಿಸಿದ 5 ಪ್ರಶ್ನೆಗಳು

ಸಕ್ಸಸ್‌ ಮೀಟ್‌ ಸಂಭ್ರಮ ತಂದ ಭರವಸೆ

ಸಕ್ಸಸ್‌ ಮೀಟ್‌ ಸಂಭ್ರಮ ತಂದ ಭರವಸೆ: ಸಕ್ಸಸ್‌ ರೇಟ್‌ ಹೆಚ್ಚಾಗೋ ನಿರೀಕ್ಷೆ

ಈ ವಾರ ತೆರೆ ಕಾಣಲಿದೆ ನಾಲ್ಕು ಚಿತ್ರಗಳು

ಈ ವಾರ ತೆರೆ ಕಾಣಲಿದೆ ನಾಲ್ಕು ಚಿತ್ರಗಳು

MUST WATCH

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

ಹೊಸ ಸೇರ್ಪಡೆ

Singhu border murder- Accused Nihang Saravjeet Singh sent to 7-day judicial custody

ಸಿಂಘು ಗಡಿ ಹತ್ಯೆ ಪ್ರಕರಣ:- ಆರೋಪಿ ನಿಹಾಂಗ್‌ ಸರ್ವಜೀತ್ ಗೆ 7 ದಿನ ಪೊಲೀಸ್‌ ಕಸ್ಟಡಿ

DEMAND FOR PURE WATER

ಶುದ್ಧ ಕುಡಿವ ನೀರಿನ ಘಟಕ ದುರಸ್ತಿಗೆ ಗ್ರಾಮಸ್ಥರ ಒತ್ತಾಯ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

1-yy

ವಾಲ್ಮೀಕಿ ಸಮಾಜದ ಮೀಸಲಾತಿ ಶೇ.7.5ಕ್ಕೆ ಹೆಚ್ಚಿಸಿ

ಯುವಕನ ಮೇಲೆ ಹಲ್ಲೆ : ಮುಧೋಳ ಪಿಐ ಅಮಾನತು; ಕಾವೇರಿದ ಕಾಂಗ್ರೆಸ್ – ಬಿಜೆಪಿ ಪ್ರತಿಭಟನೆ

ಯುವಕನ ಮೇಲೆ ಹಲ್ಲೆ: ಮುಧೋಳ ಪಿಐ ಅಮಾನತು; ಕಾವೇರಿದ ಕಾಂಗ್ರೆಸ್ – ಬಿಜೆಪಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.