
ಪಾವನಾ ಕೈ ತುಂಬಾ ಸಿನ್ಮಾ
ಸವಾಲಿನ ಪಾತ್ರಗಳ ನಿರೀಕ್ಷೆಯಲ್ಲಿ ...
Team Udayavani, Oct 26, 2020, 8:10 AM IST

ಸದಾ ಒಂದರ ಹಿಂದೊಂದು ಕಮರ್ಷಿಯಲ್ ಸಿನಿಮಾಗಳು, ಸ್ಟಾರ್ ನಟರ ಜೊತೆ ಅಭಿನಯಿಸುವ ಅವಕಾಶಗಳು ಸಿಕ್ಕರೆ ಮಾತ್ರಹೀರೋಯಿನ್‌ಗಳು ಹೆಚ್ಚು ಕಾಲ ಚಿತ್ರರಂಗದಲ್ಲಿರಲು ಸಾಧ್ಯ ಅನ್ನೋದು ಚಿತ್ರರಂಗದಲ್ಲಿರುವ ಕೆಲವರ ಮಾತು. ಆದರೆ ಈ ಮಾತಿಗೆ ವಿರುದ್ದ ಎನ್ನುವಂತೆ, ಕೆಲವು ನಟಿಯರು ತಮ್ಮ ವಿಭಿನ್ನ ಸಿನಿಮಾಗಳು, ಅಪರೂಪದ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ತಮ್ಮದೇಯಾದ ಛಾಪು ಮೂಡಿಸಲು ಯಶಸ್ವಿಯಾಗಿರುತ್ತಾರೆ. ಸದಾ ಹೊಸ ಪ್ರಯೋಗಗಳಿಗೆ ತಮ್ಮನ್ನು ತೆರೆದುಕೊಂಡು, ಚಿತ್ರರಂಗದಲ್ಲಿ ಸಕ್ರಿಯವಾಗಿರುತ್ತಾರೆ. ಅಂತಹ ನಟಿಯರ ಪೈಕಿ ಪಾವನಾ ಗೌಡ ಕೂಡ ಒಬ್ಬರು.
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಂದಷ್ಟು ಹೊಸತರದ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪಾವನಾ, ಸದ್ದಿಲ್ಲದೆ ಸದಭಿರುಚಿ ಸಿನಿಪ್ರಿಯರಿಗೆ ಹತ್ತಿರವಾಗುತ್ತಿದ್ದಾರೆ. ಪಾವನಾ ಸದ್ದಿಲ್ಲದೆಯೇ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದು, ಆ ಎಲ್ಲಾ ಚಿತ್ರಗಳು ಬಹುತೇಕ ಪೂರ್ಣಗೊಂಡಿದ್ದು, ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿವೆ. ಆ ಬಗ್ಗೆಯೂ ಪಾವನಾ ಹೇಳಿದ್ದು ಹೀಗೆ. ಹೌದು, ನಾನು ಒಂದಷ್ಟು ಚಿತ್ರಗಳಲ್ಲಿ ಬ್ಯುಝಿಯಾಗಿದ್ದು ನಿಜ.
ಈಗ “ಮೈಸೂರು ಡೈರೀಸ್’, “ರುದ್ರಿ’, “ಪ್ರಭುತ್ವ’, “ತೂತು ಮಡಿಕೆ’ ಹೀಗೆ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಇದರೊಂದಿಗೆ ರೋಜರ್ ನಾರಾಯಣ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಕಾರ್ಕಿ’ ಚಿತ್ರಕ್ಕೂ ನಾಯಕಿಯಾಗಿದ್ದೇನೆ. “ಕಾರ್ಕಿ’ ಚಿತ್ರದಲ್ಲಿ ಒಟ್ಟು ಮೂವರು ನಾಯಕಿಯರಿದ್ದು, ಅದರಲ್ಲಿ ಒಂದು ಪಾತ್ರವನ್ನು ನಾನು ನಿರ್ವಹಿಸುತ್ತಿದ್ದೇನೆ. “ಕಾರ್ಕಿ’ ಚಿತ್ರದಲ್ಲಿ ಪೂರ್ವಿ ಎನ್ನುವ ಬೋಲ್ಡ್ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ಮೂವರು ನಾಯಕಿಯರ ಪಾತ್ರಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಹಾಗಾಗಿ ಈ ಪಾತ್ರವನ್ನು ಒಪ್ಪಿಕೊಂಡೆ. ಬೋಲ್ಡ್ ಗರ್ಲ್ ಅಂದ ಕೂಡಲೇ ನಾನು ಧರಿಸುವ ಕಾಸ್ಟ್ಯೂಮ್ ಅಂತಲ್ಲ, ಸ್ವಭಾವದಲ್ಲಿ ಬೋಲ್ಡ್ ಎನ್ನಬಹುದು. ತುಂಬಾ ಪ್ರಾಕ್ಟಿಕಲ್ ಆಗಿಯೋಚಿಸುವ ಹುಡುಗಿ ಏನೇನು ಮಾಡುತ್ತಾಳೆ ಅನ್ನೋದು ನನ್ನ ಪಾತ್ರ’ ಎಂದು ಪಾತ್ರದ ಬಗ್ಗೆ ವಿವರಣೆ ಕೊಡುತ್ತಾರೆ ಪಾವನಾ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಶಾಲಾ ಮಕ್ಕಳ ಸಮವಸ್ತ್ರ: ಸರಕಾರದ ವಿರುದ್ಧ ಎಚ್ಡಿಕೆ ಕಿಡಿ

ರಾಜ್ಯ ಸರಕಾರದ ಕಮಿಷನ್ ಶೇ.80ಕ್ಕೆ: ಟ್ವೀಟ್ ಮೂಲಕ ಕುಟುಕಿದ ಕಾಂಗ್ರೆಸ್

ಕೊಣಾಜೆ ಪೊಲೀಸರ ದಾಳಿ: 27 ಲಕ್ಷ ರೂ ಮೌಲ್ಯದ 111ಕೆ.ಜಿ. ಗಾಂಜಾ ವಶ, ಮೂವರ ಬಂಧನ

ಗ್ರಾಮ ಪಂಚಾಯತ್ ಚುನಾವಣೆ: ಚುನಾವಣ ಆಯೋಗದಿಂದ ವೇಳಾಪಟ್ಟಿ ಪ್ರಕಟ

ಬೈಬಲ್ಗೆ ಬೆಂಕಿ ಹಚ್ಚಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರಗೈದ ಆರೋಪಿಯ ಬಂಧನ