ಮಾಫಿಯಾ ಟೀಸರ್ ಗೆ ಮೆಚ್ಚುಗೆ: ನಿರೀಕ್ಷೆ ಹೆಚ್ಚಿಸುತ್ತಿದೆ ಪ್ರಜ್ವಲ್ ಚಿತ್ರ
Team Udayavani, Jan 28, 2022, 3:32 PM IST
ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸುತ್ತಿರುವ, ಲೋಹಿತ್ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಮಾಫಿಯಾ’ ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು ಚಿತ್ರದ ಟೀಸರ್ ಕೂಡ ಏಕಕಾಲಕ್ಕೆ ಬಿಡುಗಡೆಯಾಗಿದೆ. ಕನ್ನಡದಲ್ಲಿ ಧ್ರುವ ಸರ್ಜಾ, ನೀನಾಸಂ ಸತೀಶ್ ಹಾಗೂ ರಿಷಬ್ ಶೆಟ್ಟಿ, ತೆಲುಗಿನಲ್ಲಿ ಸುಧೀರ್ ಬಾಬು ಮತ್ತು ರಾಜಶೇಖರ್ ಹಾಗೂ ತಮಿಳಿನಲ್ಲಿ ಸತ್ಯರಾಜ್, ವೆಂಕಟ್ ಪ್ರಭು, ಪಾರ್ಥಿಬನ್ ಹಾಗೂ ನಿರ್ದೇಶಕ ಶಿಶೀಂದ್ರನ್ ಮಾಫಿಯಾ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ಇದನ್ನೂ ಓದಿ:ಮನ ಮೆಚ್ಚಿದ ಹುಡುಗನ ಬಗ್ಗೆ ಅದಿತಿ ಮಾತು
ಅಷ್ಟೇ ಅಲ್ಲದೇ ಚಿತ್ರದ ಆಡಿಯೋ ಹಕ್ಕು ಸಹ ಆನಂದ್ ಆಡಿಯೋಗೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದು, ದೇವರಾಜ್ ಅವರು ಸಹ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಧುಕೋಕಿಲ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. ತರುಣ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.