Prajwal Devaraj: ದೀಪಾವಳಿಗೆ ರಾಕ್ಷಸ ಆರ್ಭಟ; ರೆಗ್ಯುಲರ್ ಆ್ಯಕ್ಷನ್ ಬಿಟ್ಟ ಪ್ರಯತ್ನವಿದು
Team Udayavani, Sep 13, 2024, 3:29 PM IST
ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ಸಿನಿಮಾವೊಂದರ ಮೇಲೆ ಗಾಂಧಿನಗರ ಒಂದು ಕಣ್ಣಿಟ್ಟಿದೆ. ಅದಕ್ಕೆ ಕಾರಣ ಈಗಾಗಲೇ ಆ ಸಿನಿಮಾದ ಫಸ್ಟ್‌ಲುಕ್, ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವುದು. ಹೀಗೆ ಸದ್ದು ಮಾಡುತ್ತಾ ಬರಲು ಸಿದ್ಧವಾಗಿರುವ ಚಿತ್ರ “ರಾಕ್ಷಸ’ (Rakshasa movie). ಈ ಚಿತ್ರ ದೀಪಾವಳಿಗೆ ಬಿಡುಗಡೆಯಾಗಲಿದೆ.
ಇದು ಪ್ರಜ್ವಲ್ ಕೆರಿಯರ್‌ನ ಭಿನ್ನ ಸಿನಿಮಾಗಳ ಸಾಲಿನಲ್ಲಿ ನಿಲ್ಲಲಿದೆ. ಏಕೆಂದರೆ “ರಾಕ್ಷಸ’ ರೆಗ್ಯುಲರ್ ಹೊಡೆದಾಟ-ಬಡಿದಾಟದ ಆ್ಯಕ್ಷನ್ ಸಿನಿಮಾವಲ್ಲ. ಇಡೀ ತಂಡದ ಅದರಾಚೆ ಹೊಸದನ್ನು ಪ್ರಯತ್ನಿಸಿದೆ. ಲೋಹಿತ್ ಈ ಸಿನಿಮಾದ ನಿರ್ದೇಶಕರು. ಇದೊಂದು ಹಾರರ್ ಹಿನ್ನೆಲೆಯಲ್ಲಿ ಸಾಗುವ ಚಿತ್ರವಾಗಿದ್ದು, ಟೈಮ್ ಲೂಪ್ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಟೈಮ್ ಲೂಪ್‌ನಡಿ ಹಾರರ್ ಕಥೆ ಬಂದಿರೋದು ತೀರಾ ವಿರಳ. ಈಗ ಲೋಹಿತ್ ಇಂತಹ ಪ್ರಯತ್ನ ಮಾಡಿದ್ದಾರೆ.
ಇಡೀ ಸಿನಿಮಾವನ್ನು ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಚಿತ್ರಿಕರಣ ಮಾಡಲಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ಅನ್ನು ವಿಶೇಷವಾಗಿ ಚಿತ್ರೀಕರಿಸಲಾಗಿದ್ದು, ಅಂಡರ್ ವಾಟರ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಶಾನ್ವಿ ಎಂಟರ್‌ಟೈನ್ಮೆಂಟ್ಸ್‌ನಡಿ ದೀಪು ಬಿ ಎಸ್, ನವೀನ್ ಗೌಡ ಹಾಗೂ ಮಾನಸ ಅವರು ರಾಕ್ಷಸ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಇನ್ನು ಪ್ರಜ್ವಲ್ ಜೊತೆಯಾಗಿ ಅರುಣ್ ರಾಥೋಡ್, ಶ್ರೀಧರ್, ಗೌತಮ್, ಸೋಮಶೇಖರ್, ವಿಹಾನ್ ಕೃಷ್ಣ ಜಯಂತ್ ಇನ್ನು ಅನೇಕರು ಅಭಿನಯಿಸಿದ್ದಾರೆ. ನೋಬಿನ್ ಪೌಲ್ ಸಂಗೀತ ನಿರ್ದೇಶನ, ಜೇಬಿನ್ ಪಿ ಜೋಕಬ್ ಛಾಯಾಗ್ರಹಣ ಸಿನಿಮಾಗಿದೆ. ಇಷ್ಟು ದಿನಗಳ ಕಾಲ ಕಮರ್ಷಿಯಲ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಜ್ವಲ್ ಇದೇ ಮೊದಲ ಬಾರಿಗೆ ವಿಭಿನ್ನವಾಗಿ ಹಾರರ್ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Martin Box Office: ಹೇಗಿದೆ ʼಮಾರ್ಟಿನ್ʼ ಹವಾ.. ಎರಡು ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು?
Yuva: ರೌಡಿಸಂ ಸುತ್ತ ಯುವ ರಾಜಕುಮಾರ್: ಹೊಸ ಚಿತ್ರಕ್ಕೆ 3 ನಿರ್ಮಾಪಕರು
Box office: ಮಾರ್ಟಿನ್ To ಜಿಗ್ರಾ.. ದಸರಾಕ್ಕೆ ರಿಲೀಸ್ ಆದ ಸಿನಿಮಾಗಳು ಗಳಿಸಿದ್ದೆಷ್ಟು?
Darshan; ವಿಜಯಲಕ್ಷ್ಮೀ ಪೋಸ್ಟ್ ವೈರಲ್: ದರ್ಶನ್ ಬಿಡುಗಡೆಯ ಸೂಚನೆ?
Kannada cinema: ನವೆಂಬರ್ 22ಕ್ಕೆ ʼಮರ್ಯಾದೆ ಪ್ರಶ್ನೆʼ ತೆರೆಗೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.