ಮನೋರಂಜನೆ “ಪ್ರಾರಂಭ”

ಹೊಸ ಲುಕ್‌ನಲ್ಲಿ ಕ್ರೇಜಿ ಬಾಯ್‌

Team Udayavani, Aug 30, 2019, 5:27 AM IST

ರವಿಚಂದ್ರನ್‌ ಪುತ್ರ ಅಂದಾಗ ನಿರೀಕ್ಷೆ ಜಾಸ್ತಿ. ಈ ಚಿತ್ರದಲ್ಲಿ ಕಿಸ್ಸಿಂಗ್‌ ಸೀನ್‌ ಇದೆ ಅಂದಾಗ, ಮೊದಲು ಮಾಡಲ್ಲ ಅಂದೆ. ಕೊನೆಗೆ ರವಿಚಂದ್ರನ್‌ ಫ್ಯಾನ್ಸ್‌ ಇಷ್ಟಪಡ್ತಾರೆ ಸರ್‌, ಕಥೆ ಕೂಡ ಡಿಮ್ಯಾಂಡ್‌ ಮಾಡುತ್ತಿದೆ ಎಂಬ ನಿರ್ದೇಶಕರ ಮಾತು ಕೇಳಿ, ಕಥೆಗೆ ಅದು ಬೇಕು ಅನಿಸಿದ್ದರಿಂದಲೇ ನಾನು ಕಿಸ್‌ ಸೀನ್‌ಗೆ ಒಪ್ಪಿದೆ…’

– ಹೀಗೆ ಹೇಳಿ ಹಾಗೊಮ್ಮೆ ಪಕ್ಕದಲ್ಲಿದ್ದ ನಿರ್ದೇಶಕರ ಮುಖ ನೋಡಿದರು ನಟ ಮನೋರಂಜನ್‌. ಅವರು ಹೀಗೆ ಹೇಳಿದ್ದು, ‘ಪ್ರಾರಂಭ’ ಚಿತ್ರದ ಬಗ್ಗೆ. ಇತ್ತೀಚೆಗೆ ‘ಪ್ರಾರಂಭ’ ಚಿತ್ರತಂಡ ಸಿನಿಮಾ ಬಗ್ಗೆ ಹೇಳಿಕೊಳ್ಳಲು ಪತ್ರಕರ್ತರ ಮುಂದೆ ಬಂದಿತ್ತು. ಅಂದು ಮೊದಲು ಮಾತಿಗಿಳಿದದ್ದು, ಮನೋರಂಜನ್‌. ಅವರು ಹೇಳಿದ್ದಿಷ್ಟು. ‘ನನಗೆ ಈ ಚಿತ್ರದ ಕಥೆ ಇಷ್ಟ ಆಯ್ತು. ಹಾಗೆಯೇ ಟೀಮ್‌ ಕೂಡ. ಟೀಸರ್‌ ನೋಡಿದವರು ಮೆಚ್ಚಿದ್ದಾರೆ. ಆ ಟೀಸರ್‌ಗೆ ದರ್ಶನ್‌ ವಾಯ್ಸ ಕೊಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್‌ ಹೇಳ್ತೀನಿ. ಕ್ಲೈಮ್ಯಾಕ್ಸ್‌ನಲ್ಲೂ ಅವರ ವಾಯ್ಸ ಇರಲಿದೆ. ಸಿನಿಮಾಗೆ ಗಟ್ಟಿ ಧ್ವನಿ ಬೇಕಿತ್ತು. ಹಾಗಾಗಿ, ಅವರನ್ನು ಕೇಳಿಕೊಂಡಾಗ, ಒಪ್ಪಿ ಧ್ವನಿ ಕೊಟ್ಟಿದ್ದಾರೆ. ಟೀಸರ್‌ ನೋಡಿದವರು ‘ಅರ್ಜುನ್‌ ರೆಡ್ಡಿ’ ಅಂತಾರೆ. ಆದರೆ, ಅದರ ಚಿಕ್ಕ ಲೈನ್‌ ಕೂಡ ಇಲ್ಲಿಲ್ಲ. ಇದು ಸಂಪೂರ್ಣ ಹೊಸ ಸ್ಟೋರಿ. ನಾನಿಲ್ಲಿ ಎರಡು ಶೇಡ್‌ ಇರುವ ಪಾತ್ರ ಮಾಡಿದ್ದೇನೆ. ಲವ್‌ ಟ್ರ್ಯಾಕ್‌ನಲ್ಲಿ ಲವ್ವರ್‌ ಬಾಯ್‌ ಆಗಿದ್ದರೆ, ಇನ್ನೊಂದು ಟ್ರ್ಯಾಕ್‌ನಲ್ಲಿ ಗಡ್ಡ ಬಿಟ್ಟು, ಎಣ್ಣೆ ಹೊಡ್ಕಂಡು, ಸಿಗರೇಟ್ ಸೇದ್ಕೊಂಡು ಇರುವ ಪಾತ್ರ. ದ್ವಿತಿಯಾರ್ಧದಲ್ಲಿ ಹೊಸ ಅಂಶ ಇದೆ. ಎಲ್ಲವನ್ನೂ ಈಗಲೇ ಹೇಳಿದರೆ ಮಜ ಇರಲ್ಲ. ಇನ್ನು, ‘ಪ್ರಾರಂಭ’ ಅಂದರೆ, ಆರಂಭ ಎಂದರ್ಥ. ಬದುಕು ಮತ್ತು ಪ್ರೀತಿ ಇವೆರೆಡರ ನಡುವಿನ ಕಥೆ ಇಲ್ಲಿದೆ. ಎಲ್ಲ ಮುಗಿದ ಮೇಲೆ ಹೊಸ ಬದುಕು ಶುರುವಾಗುತ್ತೆ. ಅದು ಹೇಗೆ ಅನ್ನೋದೇ ‘ಪ್ರಾರಂಭ’. ಇಲ್ಲಿ ಪ್ರೇಮಲೋಕವೂ ಉಂಟು, ರಣಧೀರನ ಗತ್ತು ಉಂಟು. ಲವ್‌ಸ್ಟೋರಿ ಜೊತೆ ಎಮೋಷನ್ಸ್‌, ಆ್ಯಕ್ಷನ್‌, ಸೆಂಟಿಮೆಂಟ್ ಇದೆ. ಪ್ರೀತಿಯಲ್ಲಿ ಫೇಲ್ಯೂರ್‌ ಆದವರು ಎಣ್ಣೆ ಹೊಡ್ಕಂಡ್‌ ಬಿದ್ದಿರಬೇಕೆಂಬ ರೂಲ್ ಇಲ್ಲ. ಪ್ರೀತಿ ಸಿಗದವರು ಹೇಗಿರಬೇಕೆಂಬ ಅಂಶ ಇಲ್ಲಿ ಹೈಲೈಟ್. ಚಿತ್ರದ ಸ್ಟ್ರೆಂಥ್‌ ಅಂದರೆ ಅದು ಛಾಯಾಗ್ರಾಹಕ ಸುರೇಶ್‌ ಬಾಬು ಹಾಗು ನಿರ್ಮಾಪಕರು’ ಎಂದು ಹೇಳಿಕೊಂಡರು ಮನೋರಂಜನ್‌.

ನಿರ್ದೇಶಕ ಮನು ಕಲ್ಯಾಡಿ ಅವರಿಗೆ ಇದು ಮೊದಲ ಚಿತ್ರ. ಅವರ ಕಥೆ ಕೇಳಿದ ಅವರ ಸಹೋದರ ಜಗದೀಶ್‌ ಕಲ್ಯಾಡಿ ನಿರ್ಮಾಣ ಮಾಡಿದ್ದಾರೆ. ‘ಪ್ರಾರಂಭ’ದಲ್ಲಿ ಪ್ರೀತಿ ಮತ್ತು ಬದುಕಿನ ಅನಾವರಣವಿದೆ. ಒಂದು ಕಮರ್ಷಿಯಲ್ ಚಿತ್ರಕ್ಕೆ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ’ ಎಂಬುದು ಮನು ಕಲ್ಯಾಡಿ ಮಾತು.

ನಾಯಕಿ ಕೀರ್ತಿ ಅವರಿಗೂ ಇದು ಮೊದಲ ಸಿನಿಮಾ. ಅಂದು ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರಿಗೆ ಥ್ಯಾಂಕ್ಸ್‌ ಹೇಳುತ್ತಲೇ, ‘ಮನೋರಂಜನ್‌ ಜೊತೆ ಮೊದಲ ಚಿತ್ರ ಮಾಡುತ್ತಿರುವುದಕ್ಕೆ ಖುಷಿ ಇದೆ’ ಎಂದಷ್ಟೇ ಹೇಳಿ ಸುಮ್ಮನಾದರು ಅವರು.

ನಿರ್ಮಾಪಕ ಜಗದೀಶ್‌ ಕಲ್ಯಾಡಿ ಅವರಿಗೂ ಇದು ಮೊದಲ ಸಿನಿಮಾ. ಸಹೋದರ ಹೇಳಿದ ಕಥೆ ಇಷ್ಟವಾಗಿದ್ದರಿಂದ ನಿರ್ಮಾಣಕ್ಕಿಳಿದಿದ್ದಾರಂತೆ. ಸಿನಿಮಾಗೆ ಏನೆಲ್ಲಾ ಬೇಕೋ ಎಲ್ಲವನ್ನೂ ಕೊಟ್ಟಿದ್ದೇನೆ. ಸುಮಾರು 70 ದಿನಗಳ ಕಾಲ ಚಿತ್ರೀಕರಣಗೊಂಡಿದೆ ಎಂದರು ನಿರ್ಮಾಪಕರು.

ರಘು ಶ್ರೀವತ್ಸ ಅವರಿಲ್ಲಿ ಗೆಳೆಯನ ಪಾತ್ರ ಮಾಡಿದ್ದಾರಂತೆ. ಸಂಗೀತ ನಿರ್ದೇಶಕ ಪ್ರಜ್ವಲ್ ಪೈ ಅವರಿಗಿಲ್ಲಿ ಒಳ್ಳೆಯ ಹಾಡು ಕೊಟ್ಟ ಖುಷಿ ಇದೆಯಂತೆ. ಛಾಯಾಗ್ರಾಹಕ ಸುರೇಶ್‌ ಬಾಬು ಅವರಿಗೆ ತೃಪ್ತಿ ಕೊಟ್ಟ ಚಿತ್ರಗಳಲ್ಲಿ ಇದೂ ಒಂದಂತೆ. ಸಂಕಲನಕಾರ ವಿಜಯ್‌, ‘ಇದೊಂದು ಒಳ್ಳೆಯ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ನಿಮ್ಮೆಲ್ಲರ ಸಹಕಾರ ಬೇಕು’ ಅಂದರು.

ವಿಜಯ್‌ ಭರಮಸಾಗರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಏನ್‌ ಸಖತ್‌ ಗುರು ಅವ್ನು....' - ಸಿನಿಮಾ ನೋಡಿ ಹೊರಬಂದವರು ಹೀಗೆ ಹೇಳಬೇಕು. ಅಂಥದ್ದೊಂದು ಸಿನಿಮಾ ಕಟ್ಟಿಕೊಡುವ ನಿಟ್ಟಿನಲ್ಲೇ ಕೆಲಸ ಮಾಡುತ್ತಿದ್ದೇನೆ. ಹೀಗೆ ಹೇಳುತ್ತಾ...

  • ಎರಡು ಹಾಡುಗಳನ್ನು ಫಾರಿನ್‌ನಲ್ಲಿಪ್ಲ್ಯಾನ್‌ ಮಾಡಿದ್ದೇವೆ... | ಚಿತ್ರದ ಮುಕ್ಕಾಲು ಭಾಗ ವಿದೇಶದಲ್ಲೇ ನಡೆಯಲಿದೆ.. | ವಿದೇಶದಲ್ಲಿ ಯಾರೂ ಮಾಡದ ಲೊಕೇಶನ್‌ನಲ್ಲಿ...

  • "ಟಗರು' ಚಿತ್ರದ "ಡಾಲಿ' ಪಾತ್ರದ ಮೂಲಕ ಅಬ್ಬರಿಸಿದ "ಡಾಲಿ' ಅಂದಿನಿಂದ ಇಂದಿನವರೆಗೆ ತಿರುಗಿ ನೋಡಿಲ್ಲ. ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ....

  • "ಸಿನಿಮಾ ಅಂದ್ರೆ ಅದು ಒಬ್ಬರಿಂದ ಆಗುವ ಕೆಲಸವಲ್ಲ. ಅಲ್ಲಿ ಹತ್ತಾರು ಜನರಿಸುತ್ತಾರೆ. ನೂರಾರು ಯೋಚನೆಗಳಿರುತ್ತವೆ. ಸಾವಿರಾರು ಚರ್ಚೆಗಳಾಗುತ್ತವೆ. ಅವೆಲ್ಲವೂ...

  • ಬಿಗ್‌ಬಾಸ್‌ ವಿನ್ನರ್‌ ಆಗಿ ಹೊರಬಂದ ಮೇಲೆ ಹತ್ತಾರು ಸಿನಿಮಾಗಳ ಆಫ‌ರ್ ಬರುತ್ತಿರು ವುದೇನೋ ನಿಜ. ಈಗಲೂ ನನಗೆ ಬರುವ ಸಿನಿಮಾ ಆಫ‌ರ್‌ಗಳ ಕಥೆ ಕೇಳುತ್ತೇನೆ. ಒಳ್ಳೆಯ...

ಹೊಸ ಸೇರ್ಪಡೆ