Udayavni Special

ಹೆಚ್ಚುತ್ತಿದೆ ಪ್ರೀ ರಿಲೀಸ್‌ ಇವೆಂಟ್‌ ಟ್ರೆಂಡ್‌

ಪ್ರೇಕ್ಷಕರ ಬಳಿಗೆ ಸಿನಿಮಾ ತಂಡ

Team Udayavani, Mar 19, 2021, 1:54 PM IST

movie

ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್‌ವೊಂದು ಶುರುವಾಗಿದೆ. ಅದು ಪ್ರೀ ರಿಲೀಸ್‌ ಇವೆಂಟ್‌. ಸಿನಿಮಾ ಬಿಡುಗಡೆ ಪೂರ್ವದಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಈಗ ಸಿನಿಮಾ ತಂಡಗಳು ಪ್ರೀ ರಿಲೀಸ್‌ ಇವೆಂಟ್‌ ಮೊರೆ ಹೋಗುತ್ತಿವೆ. ಹಾಗಂತ ಇದು ಕನ್ನಡಕ್ಕೆ ತೀರಾ ಹೊಸದೇನು ಅಲ್ಲ. ಈ ಹಿಂದೆ ಅಲ್ಲೊಂದು-ಇಲ್ಲೊಂದು ಸಿನಿಮಾಗಳು ಈ ತರಹದ ಕಾರ್ಯಕ್ರಮ ಮಾಡುತ್ತಿದ್ದವು. ಆದರೆ, ಈಗ ಬಹುತೇಕ ಎಲ್ಲಾ ಸ್ಟಾರ್‌ ಸಿನಿಮಾಗಳು ಸಿನಿಮಾ ಬಿಡುಗಡೆಗೆ ಮುನ್ನ ಈ ತರಹದ ಒಂದು ಇವೆಂಟ್‌ ಪ್ಲ್ರಾನ್‌ ಮಾಡಿಕೊಳ್ಳುತ್ತಿವೆ.

ಇತ್ತೀಚೆಗೆ ಈ ತರಹದ ಇವೆಂಟ್‌ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆದ ಚಿತ್ರಗಳಲ್ಲಿ ಎರಡು ಪ್ರಮುಖವಾಗಿವೆ. ಅದು “ಪೊಗರು’ ಹಾಗೂ “ರಾಬರ್ಟ್‌’. ಧ್ರುವ ಸರ್ಜಾ ನಟನೆಯ “ಪೊಗರು’ ಚಿತ್ರ ಬಿಡುಗಡೆಗೆ ಮೊದಲು ದಾವಣಗೆರೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿ, ಆ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸೇರಿಸಿತ್ತು. ಇನ್ನು ದರ್ಶನ್‌ ನಟನೆಯ “ರಾಬರ್ಟ್‌’ ಚಿತ್ರ ಕೂಡಾ ಪ್ರೀ ರಿಲೀಸ್‌ ಇವೆಂಟ್‌ ಮೂಲಕ ಅಭಿಮಾನಿಗಳನ್ನು ಸೆಳೆದಿದ್ದು ಸುಳ್ಳಲ್ಲ. ಮೊದಲು ಹೈದರಾಬಾದ್‌ನಲ್ಲಿ ಕಾರ್ಯಕ್ರಮ ಮಾಡಿ, ತೆಲುಗು ಪ್ರೇಕ್ಷಕರ ಮನಗೆದ್ದ “ರಾಬರ್ಟ್‌’ ತಂಡ ಬಳಿಕ ಹುಬ್ಬಳ್ಳಿಯಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಿತು. ಇದು ಸಿನಿಮಾಕ್ಕೆ ಪ್ಲಸ್‌ ಪಾಯಿಂಟ್‌ ಆಗಿದ್ದು, ಸುಳ್ಳಲ್ಲ.

ತಮ್ಮ ಬಳಿಗೆ ಬಂದ ನಾಯಕನ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕೆಂಬ ಕಾರಣದಿಂದ ಆ ಭಾಗದ ಜನ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಪರಿಣಾಮವಾಗಿ ಕಲೆಕ್ಷನ್‌ ಕೂಡಾ ಚೆನ್ನಾಗಿದೆ. ಈಗ ಮತ್ತಷ್ಟು ಚಿತ್ರತಂಡಗಳು ಈ ತರಹದ ಇವೆಂಟ್‌ಗೆ ಮುಂದಾಗಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಯುವರತ್ನ’ ಚಿತ್ರದ ಪ್ರೀ-ರಿಲೀಸ್‌ ಇವೆಂಟ್‌ ಮೈಸೂರಿನಲ್ಲಿ ನಡೆಯಬೇಕಿತ್ತು. ಅದಕ್ಕೆ ಸಿದ್ಧತೆಗಳು ಕೂಡಾ ನಡೆದಿದ್ದವು. “ಯುವ ಸಂಭ್ರಮ’ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಸಲು ಚಿತ್ರತಂಡ ಮುಂದಾಗಿತ್ತು. ಆದರೆ, ಕೊರೊನಾ ಹೆಚ್ಚಾಗುತ್ತಿರುವ ಕಾರಣದಿಂದ ಚಿತ್ರತಂಡ ಸದ್ಯಕ್ಕೆ ಆ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿದೆ. ಮುಂದಿನ ದಿನಗಳಲ್ಲಿ ಮಾಡುವ ಯೋಚನೆ ಕೂಡಾ ಇದೆ.

ಇನ್ನು “ಯುವರತ್ನ’ ಚಿತ್ರ ತೆಲುಗಿನಲ್ಲೂ ತೆರೆಕಾಣುತ್ತಿದ್ದು, ಅಲ್ಲೂ ಚಿತ್ರತಂಡ ಇವೆಂಟ್‌ ಮಾಡುವ ಯೋಚನೆ ಇದೆ ಎನ್ನಲಾಗಿದೆ. ಇದಲ್ಲದೇ, ಶಿವರಾಜ್‌ ಕುಮಾರ್‌ ಹಾಗೂ ಎ.ಹರ್ಷ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ “ಭಜರಂಗಿ-2′ ಚಿತ್ರತಂಡ ಕೂಡಾ ರಾಯಚೂರಿನಲ್ಲಿ ಪ್ರೀ ರಿಲೀಸ್‌ ಇವೆಂಟ್‌ವೊಂದನ್ನು ಮಾಡುವ ಯೋಚನೆಯಲ್ಲಿದೆ.

ಉತ್ತರ ಕರ್ನಾಟಕದಲ್ಲೇ ಹೆಚ್ಚು :

ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಬಹುತೇಕ ಸಿನಿಮಾ ಕಾರ್ಯಕ್ರಮಗಳು ಉತ್ತರ ಕರ್ನಾಟಕ ಕಡೆ ನಡೆಯುತ್ತವೆ. ಸಿನಿಮಾ ಮಂದಿ ಆ ಭಾಗದಲ್ಲಿ ಇವೆಂಟ್‌ ನಡೆಸಲು ಹೆಚ್ಚು ಉತ್ಸಾಹ ತೋರುತ್ತಾರೆ ಅದಕ್ಕೆ ಕಾರಣ ಕನ್ನಡ ಸಿನಿಮಾಕ್ಕೆ ದೊಡ್ಡ ಮಟ್ಟದ ಪ್ರೇಕ್ಷಕರಿರೋದು ಉತ್ತರ ಕರ್ನಾಟಕ ಭಾಗದಲ್ಲಿ. ಕನ್ನಡ ಸಿನಿಮಾಕ್ಕೆ ಮೊದಲ ಆದ್ಯತೆ ಕೊಡುವ ಜನರ ಊರಲ್ಲಿ ಕಾರ್ಯಕ್ರಮ ಮಾಡಿ ಅವರನ್ನು ಖುಷಿಪಡಿಸುವ ಜೊತೆಗೆ ಸಿನಿಮಾಕ್ಕೆ ಸೆಳೆಯುವ ಪ್ರಯತ್ನ ಇದಾಗಿದೆ.

ರವಿಪ್ರಕಾಶ್‌ ರೈ

 

ಟಾಪ್ ನ್ಯೂಸ್

ಅನಾಥ ಶವದ ಅಂತ್ಯಕ್ರಿಯೆ ಮಾಡುವ  ಮೂಲಕ ಮಾನವೀಯತೆ ಮೆರೆದ ತಹಶೀಲ್ದಾರ್

ಅನಾಥ ಶವದ ಅಂತ್ಯಕ್ರಿಯೆ ಮಾಡುವ  ಮೂಲಕ ಮಾನವೀಯತೆ ಮೆರೆದ ತಹಶೀಲ್ದಾರ್

Patanjali sells biscuits business to ruchi soya for-rs60 cr

ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮವ ರುಚಿ ಸೋಯ ತೆಕ್ಕೆಗೆ..!?

ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಧ್ಯಮ ನಿರ್ವಹಿಸುತ್ತಿರುವ ಜವಾಬ್ದಾರಿ ಹಿರಿದು: ಸುರೇಶ್ ಕುಮಾರ್

ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಧ್ಯಮ ನಿರ್ವಹಿಸುತ್ತಿರುವ ಜವಾಬ್ದಾರಿ ಹಿರಿದು: ಸುರೇಶ್ ಕುಮಾರ್

nnnnnnnnnnn

ಮತ್ತೆ ಕಿರುತೆರೆಗೆ ಮರಳಿದ ವಿಜಯ್ ಸೇತುಪತಿ

Son death from a heart attack

ಸೋಂಕಿಗೆ ತಾಯಿ ಬಲಿ, ಹೃದಯಾಘಾತದಿಂದ ಮಗ ಸಾವು

ಸಿದ್ದರಾಮಯ್ಯ

ಮಹಿಳಾಪರ ಬಜೆಟ್ ಎನ್ನುವುದು ಬಾಯಿಮಾತಿಗಷ್ಟೇ ಸೀಮಿತವೇ?: ಸಿದ್ದರಾಮಯ್ಯ

ಮೂಳೂರು‌: ಅಕ್ರಮ‌ ಕಸಾಯಿ ಖಾನೆಗೆ ದಾಳಿ; 6 ಮಂದಿ ಸೆರೆ, ನಾಲ್ಕು ಕರುಗಳ‌ ರಕ್ಷಣೆ

ಮೂಳೂರು‌: ಅಕ್ರಮ‌ ಕಸಾಯಿ ಖಾನೆಗೆ ದಾಳಿ; 6 ಮಂದಿ ಸೆರೆ, ನಾಲ್ಕು ಕರುಗಳ‌ ರಕ್ಷಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

darshan-1620756574

ದರ್ಶನ್ ಫಾರ್ಮ್ ಹೌಸ್ ಗೆ ಹೊಸ ಅತಿಥಿಯಾಗಿ ಬಂದ ಗಿಣಿರಾಮ

jftytyt

ಚಿತ್ರರಂಗದ 3 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಣೆಗೆ ಮುಂದಾದ ನಟ ಉಪೇಂದ್ರ

iouyhijghg

ರಾಮು ಅಗಲಿಕೆಯಿಂದ ಹೃದಯ ಚೂರಾಗಿದೆ : ನಟಿ ಮಾಲಾಶ್ರೀ

dsggg

ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ ಮಾದರಿಯಾದ ವಸಿಷ್ಠ ಸಿಂಹ

ghghtutu

ಮಾಸ್ಟರ್‌ಶೆಫ್ ಆಗಲಿದ್ದಾರೆ ಕಿಚ್ಚ

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

ಅನಾಥ ಶವದ ಅಂತ್ಯಕ್ರಿಯೆ ಮಾಡುವ  ಮೂಲಕ ಮಾನವೀಯತೆ ಮೆರೆದ ತಹಶೀಲ್ದಾರ್

ಅನಾಥ ಶವದ ಅಂತ್ಯಕ್ರಿಯೆ ಮಾಡುವ  ಮೂಲಕ ಮಾನವೀಯತೆ ಮೆರೆದ ತಹಶೀಲ್ದಾರ್

Ishwarkhandre insists on completing vaccine

ಲಸಿಕೆ ಪೂರೈಸಲು ಈಶ್ವರ್‌ಖಂಡ್ರೆ ಒತ್ತಾಯ

Patanjali sells biscuits business to ruchi soya for-rs60 cr

ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮವ ರುಚಿ ಸೋಯ ತೆಕ್ಕೆಗೆ..!?

ಹಸೆಮಣೆ ಏರಬೇಕಿದ್ದ ಯುವತಿ ಕೋವಿಡ್‌ಗೆ ಬಲಿ

ಹಸೆಮಣೆ ಏರಬೇಕಿದ್ದ ಯುವತಿ ಕೋವಿಡ್‌ಗೆ ಬಲಿ

ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಧ್ಯಮ ನಿರ್ವಹಿಸುತ್ತಿರುವ ಜವಾಬ್ದಾರಿ ಹಿರಿದು: ಸುರೇಶ್ ಕುಮಾರ್

ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಧ್ಯಮ ನಿರ್ವಹಿಸುತ್ತಿರುವ ಜವಾಬ್ದಾರಿ ಹಿರಿದು: ಸುರೇಶ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.