Priya Shatamarshan: ಇನ್ಸ್ ಪೆಕ್ಟರ್‌ ಗಿರಿಜಾ ರಿಪೋರ್ಟಿಂಗ್‌ ಸಾರ್‌..


Team Udayavani, Sep 20, 2024, 6:41 PM IST

Priya Shatamarshan spoke about her fame after Bheema movie

“ಈ ಯಶಸ್ಸಿನಿಂದ ಹೊಸ ಜವಾಬ್ದಾರಿ ಬಂದಿದೆ..’ ಹೀಗೆ ನಗುತ್ತಲೇ ಮಾತು ಆರಂಭಿಸಿದರು ಪ್ರಿಯಾ. ಭೀಮಾ ಸಿನಿಮಾದಲ್ಲಿ ನಟ ದುನಿಯಾ ವಿಜಯ್‌ಗೆ ಎಷ್ಟು ಸಿಳ್ಳೆ, ಚಪ್ಪಾಳೆ, ಜೈಕಾರಗಳು ಬಂದಿದ್ದವೋ ಅಷ್ಟೇ ಪ್ರಿಯಾ ನಟನೆಗೂ ಬಂದಿರುವುದು ನಟಿಯೊಬ್ಬಳಿಗೆ ಸಿಕ್ಕ ದೊಡ್ಡ ಪ್ರಶಂಸೆ ಎನ್ನಬಹುದು.

ಯಾವುದೇ ನಟ, ನಟಿಗೆ ಒಮ್ಮೆ ಯಶಸ್ಸು ಸಿಕ್ಕಾಗ ಬಹುಬೇಗ ಜನಪ್ರಿಯರಾಗುತ್ತಾರೆ. ಕೆಲ ಕಾಲ ಎಲ್ಲೆಡೆ ಅವರದ್ದೇ ಮಾತು, ಅವರದ್ದೇ ಹವಾ… ಈ ಯಶಸ್ಸನ್ನೇ ಚೆನ್ನಾಗಿ ನಿಭಾಯಿಸಿದರೇ ಜೀವನ ಸಾಧನೆಯ ಶಿಖರವನ್ನೂ ಕಾಣಬಹುದು. ಸದ್ಯ ಚಂದನವನದಲ್ಲಿ ಹತ್ತಾರು ನಟಿಮಣಿಯರು ಬಂದು ಹೋಗುತ್ತಿದ್ದಾರೆ. ಆದರೆ, ಗಟ್ಟಿಯಾಗಿ ನೆಲೆ ನಿಲ್ಲುತ್ತಿರುವವರು ಅತೀ ಕಡಿಮೆ. ಇದರ ನಡುವೆಯೇ “ನಾನು ಒಬ್ಬಳು ಇದ್ದೇನೆ’ ಎಂದು ನಟನೆ ಮೂಲಕವೇ ನಿರೂಪಿಸಿದವರು ಪ್ರಿಯಾ ಶಟಮರ್ಶನ್‌.

ಭೀಮಾ ಸಿನಿಮಾದ ಇನ್ಸಪೆಕ್ಟರ್‌ ಗಿರಿಜಾ ಪಾತ್ರಧಾರಿ ಈಗಲೂ ಚರ್ಚೆಯಲ್ಲಿರುವ ಪ್ರತಿಭೆ. ತಮ್ಮ ಯಶಸ್ಸಿನ ಕುರಿತು ಮಾತನಾಡುವ ಪ್ರಿಯಾ, “ಭೀಮಾ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ವಿಜಯ್‌ ಅವರ ಜೊತೆ ನಾನು ಬೇರೆ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅವಕಾಶ ಸಿಕ್ಕಿದ್ದು ಭೀಮಾ ಚಿತ್ರದ ಇನ್ಸಪೆಕ್ಟರ್‌ ಗಿರಿಜಾ ಪಾತ್ರಕ್ಕೆ. ಮುಂದಿನದೆಲ್ಲ ರೋಚಕ ಅನುಭವ. ಯಶಸ್ಸಿನಿಂದ ಜವಾಬ್ದಾರಿ ಜೊತೆಗೆ ಆತಂಕ, ಒತ್ತಡ ಹೆಚ್ಚಾಗಿದೆ’ ಎನ್ನುತ್ತಾರೆ.

ಎಲ್ಲೆಡೆಯಿಂದ ಮೆಚ್ಚುಗೆ

ಕೆಲವರು ಸಿನಿಮಾದಲ್ಲಿ ಮಾತ್ರ ಮಿಂಚಿ ಕಣ್ಮರೆಯಾಗುತ್ತಾರೆ. ಆದರೆ, ನಟಿ ಪ್ರಿಯಾ ಅವರ ನಟನೆ ಸಿನಿಮಾದಿಂದ ಸೋಶಿ ಯಲ್‌ ಮಿಡಿಯಾವರೆಗೆ ಸಾಕಷ್ಟು ಹವಾ ಸೃಷ್ಟಿಸಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ರೀಲ್ಸ್‌ಗಳಲ್ಲಿ ಇವರ ನಟಿಸಿದ ದೃಶ್ಯಗಳೇ ಬಹಳ ವೈರಲ್‌ ಆಗಿದ್ದವು.

“ಭೀಮ ರಿಲೀಸ್‌ ಆಗಿ, ಆ ದಿನ ಮಲಗಿ ಬೆಳಗ್ಗೆ ಏಳುವ ಹೊತ್ತಿಗೆ ನನ್ನ ಇನ್‌ಸ್ಟಾಗ್ರಾಂ ಫಾಲೊವರ್ಸ್‌ ಹೆಚ್ಚಾಗಿದ್ರು. ಇದರಿಂದ ಆಶ್ಚರ್ಯಗೊಂಡೆ. ಈ ರೀತಿ ಮೆಚ್ಚುಗೆಯ ಸುರಿಮಳೆ ಬರುವೆದೆಂದು ಊಹಿಸಿರಲಿಲ್ಲ. ಪರಿಚಯ ಇಲ್ಲದವರೂ ಬಂದು ಆಶೀರ್ವಾದ ಮಾಡ್ತಾರಲ್ಲ ಆಗ ಆನಂದದ ನಿದ್ದೆ ಬರುತ್ತೆ. ನನಗೆ ಅದೊಂದು ಶ್ರೀರಕ್ಷೆ’ ಎಂದರು ಪ್ರಿಯಾ.

ಇದು ಪ್ರಯೋಗ ಶಾಲೆ

ರಂಗಭೂಮಿ ಹಿನ್ನೆಲೆಯ ಪ್ರಿಯಾ ಶಟಮರ್ಶನ್‌ ಕಿರುತೆರೆಯಲ್ಲೂ ಗುರುತಿಸಿಕೊಂಡವರು. ನಟನೆಯಷ್ಟೇ ಅಲ್ಲದೇ ವಸ್ತ್ರ ವಿನ್ಯಾಸ ಕಾರ್ಯದಲ್ಲೂ ಸಕ್ರಿಯರಾಗಿದ್ದಾರೆ. ಭೀಮ ಯಶಸ್ಸಿನಿಂದ ಹಲವು ಅವಕಾಶಗಳು ಪ್ರಿಯಾ ಅವರನ್ನು ಅರಸಿ ಬರುತ್ತಿವೆ. ಅದರಲ್ಲೂ ಪೋಲೀಸ್‌ ಪಾತ್ರಗಳಿಗೆ ಪ್ರಿಯಾ ಸದ್ಯ ಬೇಡಿಕೆಯ ನಟಿಯಾಗಿದ್ದಾರೆ. “ಸದ್ಯ ಆರೇಳು ಚಿತ್ರಗಳಿಗೆ ಕರೆ ಬಂದಿವೆ. ಅದರಲ್ಲಿ ಅರ್ಧ ಪೋಲೀಸ್‌ ಪಾತ್ರಗಳಿಗಾಗಿಯೇ… ಸದ್ಯ ನಾನು ನಟಿಸಿರುವ ಚುರ್ಮುರಿ, ಸೈಡವಿಂಗ್‌, ಗಾಂಧಿ ಸ್ಕ್ವೇರ್‌ ಚಿತ್ರಗಳು ಬಿಡುಗಡೆಯಾಗಬೇಕು. ಪೊಲೀಸ್‌ ಪಾತ್ರದಲ್ಲಿ ಮಿಂಚಿದ ಮಾತ್ರಕ್ಕೆ ಅದೇ ಪಾತ್ರಕ್ಕೆ ಅಂಟಿಕೊಂಡಿರಲು ಬಯಸುವುದಿಲ್ಲ. ಸಿನಿಮಾ ಒಂದು ಪ್ರಯೋಗಾಲಯ. ಇಲ್ಲಿ ಕಲಾವಿದರ ಮೇಲೆ ಪಾತ್ರ ಪ್ರಯೋಗ ನಡೆಯುತ್ತಲೇ ಇರಬೇಕು ಎನ್ನುತ್ತಾರೆ.

ನಿತೀಶ ಡಂಬಳ

ಟಾಪ್ ನ್ಯೂಸ್

1-asss-bg

Baba Siddique ಪ್ರಕರಣಕ್ಕೆ ಜಲಂಧರ್ ನಂಟು: 4ನೇ ಆರೋಪಿ ಜೀಶನ್ ಅಖ್ತರ್

Kapil Sibal;

EVM ಬಗ್ಗೆ ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳಿಗೆ ಚುನಾವಣ ಆಯೋಗ ಸ್ಪಷ್ಟನೆ ನೀಡಲೇಬೇಕು: ಸಿಬಲ್

BBK11:ಬಿಗ್ ಬಾಸ್‌ ಮನೆಯಲ್ಲಿ ನಮಗೆ ಯಾವ ತೊಂದರೆಯೂ ಆಗಿಲ್ಲ..ಮಹಿಳಾ ಸ್ಪರ್ಧಿಗಳಿಂದ ಸ್ಪಷ್ಟನೆ

BBK11:ಬಿಗ್ ಬಾಸ್‌ ಮನೆಯಲ್ಲಿ ನಮಗೆ ಯಾವ ತೊಂದರೆಯೂ ಆಗಿಲ್ಲ..ಮಹಿಳಾ ಸ್ಪರ್ಧಿಗಳಿಂದ ಸ್ಪಷ್ಟನೆ

yallamma-Meeting

Savadatthi: ಯಲ್ಲಮ್ಮ ದೇವಿ ಭಕ್ತರಿಗೆ ದಾಸೋಹ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ ನೀಡಿ: ಸಿಎಂ

salman-khan

Salman Khan ವಿರುದ್ದದ ಸೇಡು? ..; ಎಲ್ಲಾ ಕೋನಗಳಲ್ಲಿ ತನಿಖೆ ಎಂದ ಮುಂಬಯಿ ಪೊಲೀಸರು

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

Congress: ವಿಧಾನ ಪರಿಷತ್‌ ಉಪ ಚುನಾವಣೆ: ಕಾಂಗ್ರೆಸ್‌ ಉಸ್ತುವಾರಿಗಳ ನೇಮಕ

1-reee

Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Martin Box Office: ಹೇಗಿದೆ ʼಮಾರ್ಟಿನ್ʼ ಹವಾ.. ಎರಡು ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು?

Martin Box Office: ಹೇಗಿದೆ ʼಮಾರ್ಟಿನ್ʼ ಹವಾ.. ಎರಡು ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು?

Yuva: ರೌಡಿಸಂ ಸುತ್ತ ಯುವ ರಾಜಕುಮಾರ್‌: ಹೊಸ ಚಿತ್ರಕ್ಕೆ 3 ನಿರ್ಮಾಪಕರು

Yuva: ರೌಡಿಸಂ ಸುತ್ತ ಯುವ ರಾಜಕುಮಾರ್‌: ಹೊಸ ಚಿತ್ರಕ್ಕೆ 3 ನಿರ್ಮಾಪಕರು

Box office: ಮಾರ್ಟಿನ್‌ To ಜಿಗ್ರಾ.. ದಸರಾಕ್ಕೆ ರಿಲೀಸ್‌ ಆದ ಸಿನಿಮಾಗಳು ಗಳಿಸಿದ್ದೆಷ್ಟು?

Box office: ಮಾರ್ಟಿನ್‌ To ಜಿಗ್ರಾ.. ದಸರಾಕ್ಕೆ ರಿಲೀಸ್‌ ಆದ ಸಿನಿಮಾಗಳು ಗಳಿಸಿದ್ದೆಷ್ಟು?

Vijayalakshmi Darshan

Darshan; ವಿಜಯಲಕ್ಷ್ಮೀ ಪೋಸ್ಟ್‌ ವೈರಲ್: ದರ್ಶನ್‌ ಬಿಡುಗಡೆಯ ಸೂಚನೆ?

Kannada cinema maryade prashne

Kannada cinema: ನವೆಂಬರ್‌ 22ಕ್ಕೆ ʼಮರ್ಯಾದೆ ಪ್ರಶ್ನೆʼ ತೆರೆಗೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

6

Kumbla: ಕಾಡು ಹಂದಿಯಿಂದ ಸ್ಕೂಟರ್‌ ಹಾನಿ

POlice

Kundapur: ಹಲ್ಲೆ; ಓರ್ವ ಆಸ್ಪತ್ರೆಗೆ ದಾಖಲು

accident

Padubidri: ಪಿಕ್‌ ಅಪ್‌ ವಾಹನ ಡಿಕ್ಕಿ; ವ್ಯಕ್ತಿ ಮೃತ್ಯು

1-asss-bg

Baba Siddique ಪ್ರಕರಣಕ್ಕೆ ಜಲಂಧರ್ ನಂಟು: 4ನೇ ಆರೋಪಿ ಜೀಶನ್ ಅಖ್ತರ್

mis behaviour

Kasaragod: ಲೈಂಗಿಕ ಕಿರುಕುಳ; ಇಬ್ಬರು ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.