Udayavni Special

ಶಶಿಕಲಾ ಜೊತೆ ಬಂದ ಪುಟ್ಟರಾಜು!


Team Udayavani, Aug 10, 2018, 6:00 AM IST

x-30.jpg

ದೇಸಿ ಕ್ರೀಡೆ ಕುರಿತ ಅನೇಕ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ  “ಪುಟ್ಟರಾಜು ಲವ್ವರ್‌ ಆಫ್ ಶಶಿಕಲಾ’ ಚಿತ್ರವೂ ಸೇರಿದೆ. ಇಲ್ಲಿ ಕೋಕೋ ಆಟ ಹೈಲೆಟ್‌. ನೈಜ ಘಟನೆಯನ್ನಾಧರಿಸಿದ ಈ ಚಿತ್ರವು, ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದೇ ಸಂತೋಷದಲ್ಲಿ ಚಿತ್ರತಂಡದವರು ತಮ್ಮ ಚಿತ್ರದ ಬಗ್ಗೆ ಮಾತನಾಡುವುದಕ್ಕೆ ಬಂದಿದ್ದರು.

ನಿರ್ದೇಶಕ ಸಹದೇವ ಅವರಿಗೆ ಒಳ್ಳೆಯ ಕಥೆ ಇರುವ ಚಿತ್ರವನ್ನು ಕನ್ನಡಿಗರು ಎಂದೂ ಬಿಡುವುದಿಲ್ಲ ಎಂಬ ನಂಬಿಕೆ. “ಇದು ನೈಜ ಘಟನೆಯೊಂದರ ಸುತ್ತ ಹೆಣೆದ ಕಥೆ. ಕಳೆದ 2001ರಲ್ಲಿ ತುಮಕೂರು ಸಮೀಪ ನಡೆದ ಒಂದು ಘಟನೆ ಚಿತ್ರಕ್ಕೆ ಸ್ಫೂರ್ತಿ’ ಎನ್ನುವ ನಿರ್ದೇಶಕ ಸಹದೇವ, ಪ್ರೌಢಶಾಲೆ ವಿದ್ಯಾರ್ಥಿ-ವಿದ್ಯಾರ್ಥಿನಿ ನಡುವೆ ನಡೆಯೋ ಕಥೆಯಲ್ಲಿ ಕೋಕೋ ಆಟ ಪ್ರಧಾನವಾಗಿದೆ. ಚಿತ್ರದ ನಾಯಕಿ ರಾಜ್ಯ ಕೋಕೋ ಆಟಗಾರ್ತಿ. ಅವಳ ಮೇಲೆ ಆ ಹುಡುಗನಿಗೆ ಮನಸ್ಸಾಗುತ್ತೆ. ಅವಳನ್ನು ಹೇಗಾದರೂ ಮಾಡಿ ಪಟಾಯಿಸಬೇಕು ಅಂತ ಅವನೂ ಕೋಕೋ ಆಟಕ್ಕೆ ಸೇರಿಕೊಳ್ಳುತ್ತಾನೆ. ಆದರೆ, ಅವನ ಕಳಪೆ ಆಟ ಪ್ರದರ್ಶನದಿಂದ ಆ ಕೋಕೋ ಆಟದಿಂದ ಹೊರಬರುತ್ತಾನೆ. ಆಮೇಲೆ ಏನಾಗುತ್ತೆ ಎಂಬುದು ಕಥೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.

ನಿರ್ದೇಶಕರ ಸಂಬಂಧಿಗಳಾದ ನಾಗರಾಜು, ರಾಜು ಬಾಲಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಅವರಿಗೆ ಚಿತ್ರ ಗೆಲ್ಲುತ್ತೆ ಎಂಬ ವಿಶ್ವಾಸ. ಅದಕ್ಕೆ ಕಾರಣ, ಕಥೆ ಮತ್ತು ಈಗಾಗಲೇ ಗೆದ್ದಿರುವ ಹಾಡುಗಳು. ಇಲ್ಲಿ ಪ್ರೀತಿ ಮಾಡೋಕೆ ವಯಸ್ಸು ಮುಖ್ಯವಲ್ಲ, ಮನಸ್ಸು ಮುಖ್ಯ ಎಂಬ ಸಂದೇಶದ ಜೊತೆಗೆ ಒಂದಷ್ಟು ಅರಿವು ಮೂಡಿಸುವ ವಿಷಯಗಳಿವೆ ಎಂಬುದು ನಿರ್ಮಾಪಕರ ಮಾತು.

ನಾಯಕ ಅಮಿತ್‌ಗೆ ಹೀರೋ ಆಗ್ತಿನಿ ಎಂಬ ಯಾವ ನಂಬಿಕೆಯೂ ಇರಲಿಲ್ಲವಂತೆ. ಆಕಸ್ಮಿಕವಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟ ಬಗ್ಗೆ ಹೇಳಿಕೊಂಡ ಅಮಿತ್‌, “ನನಗೆ ನಿರ್ದೇಶಕರೇ ಎಲ್ಲವನ್ನೂ ಕಲಿಸಿಕೊಟ್ಟು, ಹೀರೋ ಮಾಡಿದ್ದಾರೆ. ಚಿತ್ರದಲ್ಲಿ ನಟಿಸುವಾಗ ನನ್ನ ಶಾಲೆ ದಿನಗಳು ನೆನಪಾದವು’ ಎಂದು ತಮ್ಮ ಹಳೆಯ ನೆನಪು ಮೆಲುಕು ಹಾಕಿದರು ಅಮಿತ್‌.

ಇನ್ನು, ಚಿತ್ರದಲ್ಲಿ “ಮಾರಿ ಮುತ್ತು’ ಖ್ಯಾತಿಯ ಸರೋಜಮ್ಮನ ಮೊಮ್ಮಗಳು ಜಯಶ್ರೀ ಆರಾಧ್ಯ ನಾಯಕಿ. ಹೈಸ್ಕೂಲ್‌ ಓದುವ ಹುಡುಗರ ಕ್ರಷ್‌ ಇತ್ಯಾದಿ ಕುರಿತ ಕಥೆಯಲ್ಲಿ ಮಜ ಅಂಶಗಳಿವೆ. ನಾನಿಲ್ಲಿ ತುಂಬ ಮುಗ್ಧ ಹುಡುಗಿಯಾಗಿ ನಟಿಸಿದ್ದೇನೆ’ ಎಂಬುದು ಜಯಶ್ರೀ ಆರಾಧ್ಯ ಮಾತು.

ಇನ್ನು, ಸುಶ್ಮಿತಾ ಅವರಿಗೂ ಇಲ್ಲಿ ನಾಯಕಿ ಪಾತ್ರ ಸಿಕ್ಕಿದೆ. ಇಲ್ಲಿ ಇಬ್ಬರು ಹುಡುಗಿಯರ ಹೆಸರು ಶಶಿಕಲಾ ಎಂಬುದಾಗಿದೆ. ಆ ಪೈಕಿ ಹೀರೋ ಯಾರನ್ನು ಇಷ್ಟಪಡ್ತಾನೆ ಎಂಬುದೇ ಕಥೆ’ ಎಂದರು ಸುಶ್ಮಿತಾ. ಡಿಂಗ್ರಿ ನರೇಶ್‌ ಅವರಿಗಿಲ್ಲಿ ಹಾಸ್ಯ ಪಾತ್ರ ಸಿಕ್ಕಿದೆಯಂತೆ. ಉಳಿದಂತೆ ಚಿತ್ರದಲ್ಲಿ ವಿಕ್ರಾಂತ್‌, ಕಾವ್ಯಾ ಡಾ. ರಮಾಮಣಿ ನಟಿಸಿದ್ದಾರೆ. ಶ್ರೀಮಾನ್‌ ಗಂಧರ್ವ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

riga-1

ಮನಮೋಹಕ ಪ್ರವಾಸಿ ತಾಣ: ಚಿಕ್ಕದಾದರೂ ಚೊಕ್ಕದಾದ ದೇಶ ರೀಗಾ ಲಾಟ್ಟಿಯಾ !

ಸಾಲಭಾದೆ ತಾಳಲಾರದೆ ನೊಂದ ರೈತ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ

ಸಾಲಭಾದೆ ತಾಳಲಾರದೆ ನೊಂದ ರೈತ ತನ್ನ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ

ಮಂಡ್ಯ ಕೋವಿಡ್ ಸೋಂಕಿಗೆ ಓರ್ವ ಸಾವು, 274 ಹೊಸ ಪ್ರಕರಣ ದೃಢ, 64 ಮಂದಿ ಗುಣಮುಖ

ಮಂಡ್ಯ ಕೋವಿಡ್ ಸೋಂಕಿಗೆ ಓರ್ವ ಸಾವು, 274 ಹೊಸ ಪ್ರಕರಣ ದೃಢ, 64 ಮಂದಿ ಗುಣಮುಖ

ವಿಜಯಪುರ ಬಾರಿ ಮಳೆಗೆ ಮನೆ ಕುಸಿದು ಬಾಲಕಿ ಸಾವು: ಕೃಷ್ಣಾ ನದಿಯಲ್ಲಿ ತೇಲಿಬಂತು ವ್ಯಕ್ತಿಯ ಶವ

ವಿಜಯಪುರ ಭಾರಿ ಮಳೆಗೆ ಮನೆ ಕುಸಿದು ಬಾಲಕಿ ಸಾವು: ಕೃಷ್ಣಾ ನದಿಯಲ್ಲಿ ತೇಲಿಬಂತು ವ್ಯಕ್ತಿಯ ಶವ

pravasa

ಮಾಗಡಿ ಕೆರೆಯಲ್ಲಿ ದೇಶ-ವಿದೇಶದ ಹಕ್ಕಿಗಳ ಕಲರವ: ಕಣ್ಮನ ಸೆಳೆಯುವ ಪ್ರಶಾಂತ ವಾತಾವರಣ

lead

ಚಳಿಗಾಲದ ಪ್ರವಾಸಕ್ಕೆ ಯೋಜನೆ ಹಾಕಿಕೊಳ್ಳುತ್ತಿದ್ದೀರಾ? ರಾಜ್ಯದ ಅತ್ಯುನ್ನತ ಸ್ಥಳಗಳು ಇಲ್ಲಿವೆ

ಸಂಜು ಸ್ಯಾಮ್ಸನ್ ಗೆ ಭಾರತೀಯ ತಂಡದಲ್ಲಿ ಆಡಲು ಅವಕಾಶ ಸಿಗುವುದಿಲ್ಲ ಎಂದರೆ ಆಶ್ಚರ್ಯ: ವಾರ್ನೆ

ಸಂಜು ಸ್ಯಾಮ್ಸನ್ ಗೆ ಭಾರತೀಯ ತಂಡದಲ್ಲಿ ಆಡಲು ಅವಕಾಶ ಸಿಗುವುದಿಲ್ಲ ಎಂದರೆ ಆಶ್ಚರ್ಯ: ವಾರ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎವಿಡೆನ್ಸ್‌ ಜೊತೆಬಂದವರು..

ಎವಿಡೆನ್ಸ್‌ ಜೊತೆಬಂದವರು..

suchitra-tdy-5

ರೈಡ್‌ಗೆ ಗಣೇಶ್‌ ರೆಡಿ..

ಓಲ್ಡ್‌ ಮಾಂಕ್‌ ನಲ್ಲಿ ಶ್ರೀನಿ ಬಿಝಿ

ಓಲ್ಡ್‌ ಮಾಂಕ್‌ ನಲ್ಲಿ ಶ್ರೀನಿ ಬಿಝಿ

ಹೊಸ ಜೋಶ್‌ನಲ್ಲಿ ಕಾವ್ಯಾ ಎಂಟ್ರಿ

ಹೊಸ ಜೋಶ್‌ನಲ್ಲಿ ಕಾವ್ಯಾ ಎಂಟ್ರಿ

sUCHITRA-TDY-1

ಶೂಟಿಂಗ್‌ನತ್ತ ಸ್ಟಾರ್ಸ್

MUST WATCH

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyamಹೊಸ ಸೇರ್ಪಡೆ

ಉಪ ವಿಭಾಗ ಮಟ್ಟದಲ್ಲಿ ಕುಂದು ಕೊರತೆ ಸಭೆ

ಉಪ ವಿಭಾಗ ಮಟ್ಟದಲ್ಲಿ ಕುಂದು ಕೊರತೆ ಸಭೆ

riga-1

ಮನಮೋಹಕ ಪ್ರವಾಸಿ ತಾಣ: ಚಿಕ್ಕದಾದರೂ ಚೊಕ್ಕದಾದ ದೇಶ ರೀಗಾ ಲಾಟ್ಟಿಯಾ !

ಸಾಲಭಾದೆ ತಾಳಲಾರದೆ ನೊಂದ ರೈತ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ

ಸಾಲಭಾದೆ ತಾಳಲಾರದೆ ನೊಂದ ರೈತ ತನ್ನ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ

Coormagada

ವಿಶ್ವ ಪ್ರವಾಸೋದ್ಯಮ ದಿನ: ನಿಮ್ಮ ಚಳಿಗಾಲದ ಪ್ರವಾಸದಲ್ಲಿ ಈ ಸ್ಥಳಗಳು ನಿಮ್ಮ ಪಟ್ಟಿಯಲ್ಲಿರಲಿ

vp-tdy-2

ಅರ್ಹರಿಗೆ ಸಾಲ ನೀಡಲು ಬ್ಯಾಂಕ್‌ಗೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.