Udayavni Special

ರಾಜ-ರಾಧೆಯ ತ್ರಿವೇಣಿ ಸಂಗಮ


Team Udayavani, May 11, 2018, 7:20 AM IST

12.jpg

“ತ್ರಿವೇಣಿ ಅಂದರೆ ನನಗೇನೋ ಒಂದು ಸೆಂಟಿಮೆಂಟ್‌. ಆ ತ್ರಿವೇಣಿಗೋಸ್ಕರವೇ ನಾನು ಇಷ್ಟು ದಿನ ಕಾದಿದ್ದೆ. ಕೊನೆಗೂ ತ್ರಿವೇಣಿ ಸಿಕ್ಕಾಯ್ತು…’
– ಹೀಗೆ ಹೇಳಿ ಹಾಗೊಂದು ನಗೆ ಬೀರಿದರು ನಿರ್ಮಾಪಕ ಎಚ್‌.ಎಲ್‌.ಎನ್‌. ರಾಜ್‌. ಅವರೇಕೆ ತ್ರಿವೇಣಿ ಹೆಸರು ಹೇಳುತ್ತಿದ್ದಾರೆ. ಅಷ್ಟಕ್ಕೂ ಯಾರು ಆ ತ್ರಿವೇಣಿ ಅನ್ನೋ ಪ್ರಶ್ನೆ ಎದುರಾಗಬಹುದು. ಆ ತ್ರಿವೇಣಿ ಬೇರಾರೂ ಅಲ್ಲ, ಮೆಜೆಸ್ಟಿಕ್‌ನಲ್ಲಿರುವ ಚಿತ್ರಮಂದಿರದ ಹೆಸರು. ಅಷ್ಟಕ್ಕೂ ‘ತ್ರಿವೇಣಿ’ ಬಗ್ಗೆ ಅಷ್ಟೊಂದು ಪೀಠಿಕೆ ಯಾಕೆಂದರೆ, ಆ ಚಿತ್ರಮಂದಿರದಲ್ಲಿ ವಿಜಯ್‌ ರಾಘವೇಂದ್ರ ಅವರ “ನಿನಗಾಗಿ’ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಈಗ “ರಾಜ ಲವ್ಸ್‌ ರಾಧೆ’ ಚಿತ್ರದಲ್ಲೂ ವಿಜಯ್‌ ರಾಘವೇಂದ್ರ ಹೀರೋ. ಈ ಚಿತ್ರ ಕೂಡ “ತ್ರಿವೇಣಿ’ ಚಿತ್ರಮಂದಿರದಲ್ಲೇ ಬಿಡುಗಡೆಯಾಗಬೇಕು ಎಂಬ ಉದ್ದೇಶ ಅವರದು. ಹಾಗಾಗಿ, ಮೇ 18 ರಂದು ತ್ರಿವೇಣಿಯಲ್ಲೇ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡರು ಎಚ್‌.ಎಲ್‌.ಎನ್‌.ರಾಜ್‌.

“ಈ ಹಿಂದೆ ಚಿತ್ರ ಮಾಡಿ ಸೋಲು ಕಂಡೆ. ಈಗ ಮಾಡಿದ ಚಿತ್ರವನ್ನು ಎಚ್ಚರದಿಂದ ಮಾಡಿದ್ದೇನೆ. ಕಥೆ ಆಯ್ಕೆ, ಪಾತ್ರಗಳ ಆಯ್ಕೆಯಿಂದ ಹಿಡಿದು, ಪ್ರತಿಯೊಂದರಲ್ಲೂ ಎಚ್ಚರ ವಹಿಸಿದ್ದರಿಂದ “ರಾಜ ಲವ್ಸ್‌ ರಾಧೆ’ ಅಚ್ಚುಕಟ್ಟಾಗಿ ಮೂಡಿಬಂದಿದೆ. ಮನರಂಜನೆಗೆ ಏನೆಲ್ಲಾ ಇರಬೇಕೋ ಎಲ್ಲವೂ ಇಲ್ಲಿದೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ಮಜ ಎನಿಸುವಷ್ಟು ಕಂಟೆಂಟ್‌ ಇಲ್ಲಿದೆ. ಎಕ್ಸಾಂ, ಚುನಾಣವೆಯಲ್ಲಿ ತಲೆಬಿಸಿ ಮಾಡಿಕೊಂಡವರಿಗೆ ರಿಫ್ರೆಶ್‌ ಆಗಲು ಮನರಂಜನೆ ಮಾಧ್ಯಮ ಸಿನಿಮಾ. ಹಾಗಾಗಿ “ರಾಜ ಲವ್ಸ್‌ ರಾಧೆ’ ನೋಡಲು ಬಂದವರಿಗೆ ಮೋಸ ಆಗಲ್ಲ. ಸುಮಾರು 150 ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎಂದು ವಿವರ ಕೊಟ್ಟರು.

ನಿರ್ದೇಶಕ ರಾಜಶೇಖರ್‌ಗೆ ಇದು ಎರಡನೇ ಚಿತ್ರ. ಕಥೆ ಮಾಡಿಕೊಂಡು ನಿರ್ಮಾಪಕರನ್ನು ಹುಡುಕುವ ವೇಳೆ ಸಿಕ್ಕಿದ್ದು ಎಚ್‌.ಎಲ್‌.ಎನ್‌.ರಾಜ್‌ ಅವರಂತೆ. “ಕೆಲಸವಿಲ್ಲದೆ, ವರ್ಷಗಟ್ಟಲೆ ಮನೆಯಲ್ಲಿದ್ದಾಗ, ಈ ಕಥೆ ಬರೆದು, ಪಕ್ಕಾ ಮಾಡಿಕೊಂಡಿದ್ದೆ. ನಿರ್ಮಾಪಕರು ಕಥೆ ಕೇಳಿ ಒಳ್ಳೆಯ ಅವಕಾಶ ಕೊಟ್ಟಿದ್ದಾರೆ. ಇದೊಂದು ಲವ್‌ಸ್ಟೋರಿ ಇರುವ ಚಿತ್ರ. ಹಾಸ್ಯಕ್ಕಂತೂ ಕೊರತೆ ಇಲ್ಲ. ಚಿತ್ರದಲ್ಲಿ ಕಾಮಿಡಿ ಕಲಾವಿದರ ದಂಡೇ ಇದೆ. ಮುಖ್ಯವಾಗಿ ವಿಜಯ್‌ ರಾಘವೇಂದ್ರ ಅವರು ಪಾತ್ರಕ್ಕೆ ಸರಿಹೊಂದಿದ್ದಾರೆ. ಅವರಲ್ಲಿ ನಗಿಸುವ ಗುಣವಿದೆ. ರವಿಶಂಕರ್‌ ಇಲ್ಲಿ ಎಲ್ಲರಿಗೂ ಇಷ್ಟವಾಗುತ್ತಾರೆ. ಅಂಥದ್ದೊಂದು ಪಾತ್ರ ಅವರಿಗೆ ಸಿಕ್ಕಿದೆ. ಪ್ರತಿಯೊಬ್ಬರ ಸಹಕಾರದಿಂದ “ರಾಜ ಮತ್ತು ರಾಧೆ’ ಚೆನ್ನಾಗಿ ಕಾಣುತ್ತಾರೆ. ನಿಮ್ಮ ಪ್ರೋತ್ಸಾಹ ಬೇಕೆಂದರು’ ರಾಜಶೇಖರ್‌.

ವಿಜಯ ರಾಘವೇಂದ್ರ ಅವರಿಲ್ಲಿ ಗ್ಯಾರೇಜ್‌ ಮೆಕಾನಿಕ್‌ ಪಾತ್ರ ನಿರ್ವಹಿಸಿದ್ದಾರಂತೆ. ಅವರ ಪ್ರಕಾರ, “ಒಂದು ನಗಿಸುವ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ. ಹಾಸ್ಯ ಕಲಾವಿದರ ದಂಡೇ ಇಲ್ಲಿದೆ. ಮುಖ್ಯವಾಗಿ ಇಲ್ಲಿ ಕಥೆ, ಪಾತ್ರ ಮತ್ತು ಹಾಡುಗಳು ಚೆನ್ನಾಗಿವೆ. ಸಿಂಪಲ್‌ ಕಥೆಯನ್ನು ಅಷ್ಟೇ ಶ್ರೀಮಂತ ಚಿತ್ರವನ್ನಾಗಿಸಿದ್ದಾರೆ’ ಎಂದರು ವಿಜಯ್‌ ರಾಘವೇಂದ್ರ.

ನಾಯಕಿ ರಾಧಿಕಾ ಪ್ರೀತಿ, ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರನ್ನು ಹೊಗಳಿದರು. ಸೆಟ್‌ನಲ್ಲಿ ಹೀರೋ ಕೊಟ್ಟ ಸಲಹೆಗಳನ್ನು ಮೆಲುಕು ಹಾಕಿದರು. ಸಂಗೀತ ನಿರ್ದೇಶಕ ವೀರ್‌ಸಮರ್ಥ್,  ಐದು ವಿವಿಧ ಹಾಡುಗಳನ್ನು ಕೊಟ್ಟಿದ್ದನ್ನು ಹೇಳಿಕೊಂಡರು. ಎಲ್ಲಾ ಹಾಡುಗಳನ್ನೂ ಚೆನ್ನಾಗಿಯೇ ಸೆರೆಹಿಡಿಯಲಾಗಿದೆ ಎಂದರು ಅವರು. ಚಿತ್ರದಲ್ಲಿ ನಟಿಸಿರುವ “ಮಜಾ ಟಾಕೀಸ್‌’ ಖ್ಯಾತಿಯ ಪವನ್‌ಕುಮಾರ್‌, ಡ್ಯಾನಿ ಕುಟ್ಟಪ್ಪ, ನಿರಂಜನ್‌ ದಾವಣಗೆರೆ ಪಾತ್ರದ ಕುರಿತು ಹೇಳಿಕೊಂಡರು. ಛಾಯಾಗ್ರಾಹಕ ಕೆ.ಎಚ್‌. ಚಿದಾನಂದ್‌ ಚಿತ್ರದ ಸೊಬಗನ್ನು ಹೊಗಳಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

punjab-delhin

ಐಪಿಎಲ್ 2020: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಭಾರಿ ಮಳೆಗೆ ಭದ್ರಾವತಿಯ ಹೊಸ ಸೇತುವೆ ಮುಳುಗಡೆ: ವಾಹನ ಸಂಚಾರ ಬಂದ್

ಭಾರಿ ಮಳೆಗೆ ಭದ್ರಾವತಿಯ ಹೊಸ ಸೇತುವೆ ಮುಳುಗಡೆ: ವಾಹನ ಸಂಚಾರ ಬಂದ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಿಯಲ್‌ಸ್ಟಾರ್‌ ಉಪ್ಪಿಗೆ ಬರ್ತ್‌ಡೇ ಸಂಭ್ರಮ : ಕೈಯಲ್ಲಿವೆ ಸಾಲು ಸಾಲು ಸಿನಿಮಾ

ರಿಯಲ್‌ಸ್ಟಾರ್‌ ಉಪ್ಪಿಗೆ ಬರ್ತ್‌ಡೇ ಸಂಭ್ರಮ : ಕೈಯಲ್ಲಿವೆ ಸಾಲು ಸಾಲು ಸಿನಿಮಾ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ಭ್ರಮೆಯಲ್ಲಿ ಹೊಸಬರು

ಭ್ರಮೆಯಲ್ಲಿ ಹೊಸಬರು

suchitra-tdy-5

ಎಂಟ್ರಿಗೆ ರೆಡಿಯಾದ ‌ಟಿಪ್ಪುವರ್ಧನ್‌

ಹೀರೋ ಆಗಿಬಿಟ್ರಲ್ಲಾ ರಿಷಭ್‌!

ಹೀರೋ ಆಗಿಬಿಟ್ರಲ್ಲಾ ರಿಷಭ್‌!

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

ಬೀದರ್ ನಲ್ಲಿ 77 ಕೋವಿಡ್ ಪಾಸಿಟಿವ್ ಕೇಸ್ ಪತ್ತೆ! ಸೋಂಕಿತರ ಸಂಖ್ಯೆ 5823ಕ್ಕೆ ಏರಿಕೆ

ಬೀದರ್ ನಲ್ಲಿ 77 ಕೋವಿಡ್ ಪಾಸಿಟಿವ್ ಕೇಸ್ ಪತ್ತೆ! ಸೋಂಕಿತರ ಸಂಖ್ಯೆ 5823ಕ್ಕೆ ಏರಿಕೆ

ಕರಿನಂಜನಪುರ ರಸ್ತೆಗೆ ಮಾಜಿ ಶಾಸಕ ಸಿ.ಗುರುಸ್ವಾಮಿ ಹೆಸರಿಡಲು ಗುಂಡ್ಲುಪೇಟೆ ಶಾಸಕ ಸಲಹೆ

ಕರಿನಂಜನಪುರ ರಸ್ತೆಗೆ ಮಾಜಿ ಶಾಸಕ ಸಿ.ಗುರುಸ್ವಾಮಿ ಹೆಸರಿಡಲು ಗುಂಡ್ಲುಪೇಟೆ ಶಾಸಕ ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.