ಧನಜಂಯ್ “ಉತ್ತರಕಾಂಡ’ಕ್ಕೆ ರಮ್ಯಾ ನಾಯಕಿಯಂತೆ..?
Team Udayavani, Nov 4, 2022, 12:12 PM IST
ಧನಂಜಯ್ “ಉತ್ತರಕಾಂಡ’ಕ್ಕೆ ರಮ್ಯಾ ನಾಯಕಿಯಂತೆ… – ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ. ಹಾಗಂತ ಈ ಬಗ್ಗೆ ಚಿತ್ರತಂಡ ವಾಗಲೀ, ರಮ್ಯಾ ಆಗಲೀ ಅಧಿಕೃತವಾಗಿ ಘೋಷಿಸಿಕೊಂಡಿಲ್ಲ. ಆದರೆ, ಸಿನಿಪ್ರಿಯರು ಕಂಡುಕೊಂಡಂತೆ “ಉತ್ತರಕಾಂಡ’ ಚಿತ್ರದ ಮೂಲಕ ನಟಿ ರಮ್ಯಾ ನಾಯಕಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರಂತೆ.
ಈಗಾಗಲೇ ರಮ್ಯಾ ನಿರ್ಮಾಪಕಿಯಾಗಿ “ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ನಿರ್ಮಾಣ ಮಾಡು ತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರದಲ್ಲಿ ರಮ್ಯಾ ನಟಿಸಲು ಕೂಡಾ ಒಪ್ಪಿಕೊಂಡಿದ್ದರು.
ಆದರೆ, ಕೊನೆಯ ಕ್ಷಣದಲ್ಲಿ ರಮ್ಯಾ ಆ ಚಿತ್ರದ ನಟನೆಯಿಂದ ಹೊರಬಂದು, ಕೇವಲ ನಿರ್ಮಾಪಕಿಯಾಗಿಯಷ್ಟೇ ಇರುವುದಾಗಿ ಹೇಳಿಕೊಂಡಿದ್ದರು. ರಮ್ಯಾ ಆ ಚಿತ್ರದ ನಾಯಕಿ ಸ್ಥಾನದಿಂದ ಹೊರಬರಲು “ಉತ್ತರಕಾಂಡ’ ಚಿತ್ರ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರೆ ಒಳ್ಳೆಯದು ಎಂಬ ಆಪ್ತರ ಸಲಹೆ ಮೇರೆಗೆ ರಮ್ಯಾ “ಸ್ವಾತಿ ಮುತ್ತಿ’ನಿಂದ ಹೊರಬಂದಿದ್ದಾರೆಂಬ ಮಾತೂ ಕೇಳಿಬರುತ್ತಿದೆ. ಜೊತೆಗೆ “ಉತ್ತರಕಾಂಡ’ ಚಿತ್ರಕ್ಕಾಗಿ ರಮ್ಯಾ ಸಖತ್ ಸ್ಲಿಮ್ ಕೂಡಾ ಆಗುತ್ತಿದ್ದಾರಂತೆ.
ಇನ್ನು, ಧನಂಜಯ್ ನಟನೆಯ “ಹೆಡ್‌ಬುಷ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ನಲ್ಲೂ ರಮ್ಯಾ ಕಾಣಿಸಿಕೊಂಡಿರೋದು “ಉತ್ತರಕಾಂಡ’ ನಾಯಕಿ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಇದನ್ನೂ ಓದಿ:ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿ ತಡೆದು ದಂಡ ಕಟ್ಟಿಸಿಕೊಂಡರು!
ಈ ಚಿತ್ರವನ್ನು ಕೆ.ಆರ್.ಜಿ.ಸ್ಟುಡಿಯೋಸ್ ನಿರ್ಮಿಸುತ್ತಿದ್ದು, ರೋಹಿತ್ ಪದಕಿ ನಿರ್ದೇಶನವಿದೆ. ಮನುಷ್ಯನ ಮನಸ್ಸಿನ ಒಳಗಿನ ಖೇದಗಳನ್ನು, ಗೊಂದಲಗಳನ್ನು, ತಳಮಳಗಳನ್ನು ಬಹಳ ಸುಂದರವಾಗಿ ಕಥೆಯ ರೂಪದಲ್ಲಿ ರೋಹಿತ್ ಅವರು ಹೆಣೆದಿದ್ದಾರೆ. ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಸ್ವಾಮಿ ಅವರು ಛಾಯಾಗ್ರಾಹಕರಾಗಿದ್ದಾರೆ. ಚಿತ್ರ ನ.06ರಂದು ಸೆಟ್ಟೇರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ
ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ
ಮೋದಿ ಸರಕಾರ 9 ವರ್ಷಗಳಲ್ಲಿ ಏನು ಕಡಿದು ಗುಡ್ಡೆ ಹಾಕಿದೆ: ನಲಪಾಡ್ ಪ್ರಶ್ನೆ
ಅಂದು ಮೋದಿ ಉಪನಾಮ ಟೀಕೆ…; ಇಂದು ಖುಷ್ಬು ಟ್ವೀಟ್ ವೈರಲ್
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ