Udayavni Special

ಟ್ರೈಲರ್ ನಲ್ಲಿ ಝಳಪಿಸಿದ ಬಿಚ್ಚುಗತ್ತಿ

ಐತಿಹಾಸಿಕ ಚಿತ್ರ ತೆರೆಗೆ ಸಿದ್ಧ

Team Udayavani, Feb 21, 2020, 5:55 AM IST

chitra-16

ಹಿರಿಯ ಸಾಹಿತಿ ಡಾ.ಬಿ.ಎಲ್‌.ವೇಣು ಅವರ ಐತಿಹಾಸಿಕ ಕಾದಂಬರಿ “ದಳವಾಯಿ ಮುದ್ದಣ’ ಈಗ ದೃಶ್ಯರೂಪ ಪಡೆದುಕೊಂಡಿದೆ. “ದಳವಾಯಿ ಮುದ್ದಣ್ಣ’ ಕಾದಂಬರಿ ಈಗ ಚಲನಚಿತ್ರಕ್ಕೆ ರೂಪಾಂತರಗೊಂಡು, “ಬಿಚ್ಚುಗತ್ತಿ’ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಸದ್ಯ ಈ ಚಿತ್ರದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಿತ್ರದ ಟೀಸರ್‌ ಅದ್ಧೂರಿಯಾಗಿ ಹೊರಬಂದಿದೆ.

ಕಲಾವಿದರುಗಳಾದ ಧನಂಜಯ್‌, ವಿಕ್ಕಿ, ವೈಭವ್‌, ಸಚ್ಚಿನ್‌, ಶ್ರೀಲೀಲಾ, ಅಪೂರ್ವ, ನಿರ್ದೇಶಕರುಗಳಾದ ಎ.ಪಿ.ಅರ್ಜುನ್‌, ವಾಸು, ಸಹನಾ ಮೂರ್ತಿ, ನವೀನ್‌ ರೆಡ್ಡಿ, ಸಿಂಪಲ್‌ ಸುನಿ, ನಿರ್ಮಾಪಕರಾ ಸುಪ್ರೀತ್‌, ಜಾಗ್ವಾರ್‌ ಮನೋಹರ್‌ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸಮಾರಂಭದಲ್ಲಿ ಹಾಜರಿದ್ದು, ಚಿತ್ರದ ಟೀಸರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ಚಿತ್ರದ ಸಂಗೀತ ನಿರ್ದೇಶಕ ಹಂಸಲೇಖಾ, “ಐತಿಹಾಸಿಕ ಚಿತ್ರ ಮಾಡುವುದು ಅಷ್ಟು ಸುಲಭವಲ್ಲ. ಮೊದಲು ಇದನ್ನು ನಾನೇ ಮಾಡಬೇಕಾಗಿತ್ತು. ಆದರೆ ನನ್ನ ಬಜೆಟ್‌ಗೆ ತಕ್ಕಂತೆ ನಿರ್ಮಾಪಕರು ಸಿದ್ಧರಿರಲಿಲ್ಲ. ಆನಂತರ ನಿರ್ದೇಶಕ ಸಂತುಗೆ ಒಳ್ಳೆ ಚಿತ್ರ ಕೊಡಿಸುತ್ತೇನೆಂದು ಮಾತು ಕೊಟ್ಟಿದ್ದೆ. ಅದರಂತೆ ಅವರಿಗೆ ಜವಾಬ್ದಾರಿ ವಹಿಸಲಾಯಿತು. ಅದನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ರಾಜವರ್ಧನ್‌ ಭವಿಷ್ಯದ ನಟನಾಗಲಿದ್ದಾರೆ. ಬುದ್ಧಿ ಉಪಯೋಗಿಸಿ ಒಳ್ಳೆಯ ಸಿನಿಮಾಗಳಲ್ಲಿ ನಟಿಸಬೇಕು. ಯಾವುದೇ ಕಾರಣಕ್ಕೂ ನಿರ್ದೇಶಕ, ನಿರ್ಮಾಪಕರಿಗೆ ಹೊರೆಯಾಗಬಾರದು. ದೇಸಿಯ ಸಂಗೀತದಲ್ಲಿ ಬಂದಿರುವ ಹಾಡು ಚೆನ್ನಾಗಿದೆ. ಕರ್ನಾಟಕದಲ್ಲಿ ಇನ್ನೂ ಅನೇಕ ಸಾಧಕರು, ಪಾಳೇಗಾರರ ಕಥೆಗಳು ಇದೆ. ಈಗಿನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ, ಇಂಥ ಚಿತ್ರಗಳನ್ನು ಮಾಡಬಹುದೆಂದು’ ಎಂದು ಹೇಳಿದರು.

ನಾಯಕ ನಟ ರಾಜವರ್ಧನ್‌ ತಂದೆ, ಹಿರಿಯ ಹಾಸ್ಯ ನಟ ಡಿಂಗ್ರಿ ನಾಗರಾಜ್‌ ಮಾತನಾಡಿ, “ಸುಮಾರು 45 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯನಾಗಿ, 560 ಚಿತ್ರಗಳಲ್ಲಿ ನಟಿಸಿದ್ದೇನೆ. ಎಲ್ಲರ ಸಹಕಾರ- ಪ್ರೋತ್ಸಾಹದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದೇನೆ. ಈಗ ನನ್ನ ಮಗ ರಾಜವರ್ಧನ್‌ ಸ್ವ ಪ್ರತಿಭೆಯಿಂದ ಇಲ್ಲಿಯವರೆಗೂ ಬಂದಿದ್ದಾನೆ. ನನಗೆ ನೀಡಿದ ಸಹಕಾರವನ್ನು ಇವನಿಗೂ ಕೊಡಬೇಕೆಂದು’ ಪ್ರೇಕ್ಷಕರಲ್ಲಿ ಕೋರಿದರು.

“ಬಿಚ್ಚುಗತ್ತಿ’ ಚಿತ್ರದಲ್ಲಿ ಭರಮಣ್ಣ ನಾಯಕನಾಗಿ ನಟ ರಾಜವರ್ಧನ್‌, ಸಿದ್ದಾಂಬೆಯಾಗಿ ನಟಿ ಹರಿಪ್ರಿಯಾ “ಬಾಹುಬಲಿ’ ಖ್ಯಾತಿಯ ಪ್ರಭಾಕರ್‌ ದಳವಾಯಿ ಮುದ್ದಣ್ಣನಾಗಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶರತ್‌ ಲೋಹಿತಾಶ್ವ, ಶ್ರೀನಿವಾಸ ಮೂರ್ತಿ, ಸ್ಪಶಾì ರೇಖಾ, ಡಿಂಗ್ರಿ ನಾಗರಾಜ್‌, ಕಲ್ಯಾಣಿ, ಪ್ರಕಾಶ್‌ ಹೆಗ್ಗೊಡು, ರಮೇಶ್‌ ಪಂಡಿತ್‌, ಸುನೇತ್ರಾ ಪಂಡಿತ್‌, ಉಗ್ರಂ ರವಿ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹಿರಿಯ ಸಾಹಿತಿ ಡಾ.ಬಿ.ಎಲ್‌.ವೇಣು ಅವರೇ “ದಳವಾಯಿ ಮುದ್ದಣ’ ಕಾದಂಬರಿಯನ್ನು ಚಿತ್ರರೂಪಕ್ಕೆ ರೂಪಾಂತರಿಸಿದ್ದು, “ಬಿಚ್ಚುಗತ್ತಿ’ ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಈ ಹಿಂದೆ “ಅಲೆಮಾರಿ’, “ಕಾಲೇಜ್‌ ಕುಮಾರ್‌’ ಮೊದಲಾದ ಪಕ್ಕಾ ಔಟ್‌ ಆ್ಯಂಡ್‌ ಔಟ್‌ ಕಮರ್ಶಿಯಲ್‌ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಹರಿ ಸಂತೋಷ್‌ ಮೊದಲ ಬಾರಿಗೆ ಇಂಥದ್ದೊಂದು ಐತಿಹಾಸಿಕ ಕಥಾಹಂದರದ ಚಿತ್ರಕ್ಕೆ ಆಕ್ಷನ್‌-ಕಟ್‌ ಹೇಳಿದ್ದಾರೆ. “ಓಂ ಸಾಯಿ ಕೃಷ್ಣ ಪೊ›ಡಕ್ಷನ್ಸ್‌’ ಬ್ಯಾನರ್‌ ಮೂಲಕ ನಿರ್ಮಾಣವಾಗಿರುವ “ಬಿಚ್ಚುಗತ್ತಿ’ ಮಾರ್ಚ್‌ ಕೊನೆಯೊಳಗೆ ತೆರೆ ಕಾಣುವ ಸಾಧ್ಯತೆ ಇದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡದಲ್ಲೂ ತೆರೆಕಾಣಲಿದೆ ಆರ್‌ಆರ್‌ಆರ್‌

ಕನ್ನಡದಲ್ಲೂ ತೆರೆಕಾಣಲಿದೆ ಆರ್‌ಆರ್‌ಆರ್‌

suchitra-tdy-9

ಮನರೂಪ ಚಿತ್ರಕ್ಕೆಪ್ರಶಸ್ತಿ ಖುಷಿ

ಲಾಕ್‌ ಕೇ ಬಾದ್‌… ಸಲಗ ಗ್ರ್ಯಾಂಡ್‌ ರಿಲೀಸ್‌

ಲಾಕ್‌ ಕೇ ಬಾದ್‌… ಸಲಗ ಗ್ರ್ಯಾಂಡ್‌ ರಿಲೀಸ್‌

suchitra-tdy-07

ಡೈರೆಕ್ಟರ್ ಸ್ಪೆಷಲ್‌! : ನಿರ್ದೇಶಕರ ಹೊಸ ಯೋಚನೆಗಳೇನು ಗೊತ್ತಾ?

suchitra-tdy-6

ಮೀನಾ ಬಜಾರ್‌ ನಿರ್ದೇಶಕರ ಕಾಫಿ ಬ್ರೇಕ್‌

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ