ಚಿತ್ರನೋಟ -2019: ಕ್ಷೇತ್ರ ಮಹಿಮೆ- ಬೆಲ್‌ ಸೌಂಡ್‌ ಜೋರು

ಹೊಸಬರ ಕಮಾಲು ಸ್ಟಾರ್‌ಗಳಿಗೆ ಸವಾಲು; ಕಳೆದ ವರ್ಷಕ್ಕಿಂತ ಬಿಡುಗಡೆ ಸಂಖ್ಯೆ ಇಳಿಕೆ 220 +

Team Udayavani, Dec 13, 2019, 6:15 AM IST

ಅಂತೂ ಇಂತೂ ಇನ್ನು ಎರಡು ವಾರ ಕಳೆದರೆ 2019 ಪೂರ್ಣಗೊಳ್ಳಲಿದೆ. ಚಿತ್ರರಂಗ ಕೂಡ ಎಂದಿಗಿಂತ ಗರಿಗೆದರಿ ನಿಂತಿದೆ. ಈ ವರ್ಷ ಇಟ್ಟುಕೊಂಡ ಕೆಲವು ನಿರೀಕ್ಷೆ ಸುಳ್ಳಾದರೆ, ಇನ್ನೂ ಕೆಲವು ಸಮಾಧಾನ ತಂದಿದ್ದೊಂದೇ ಸಾರ್ಥಕ. ಕಳೆದ ವರ್ಷ 235 ಪ್ಲಸ್‌ ಕನ್ನಡ ಚಿತ್ರಗಳು ಬಿಡುಗಡೆಯಾಗುವ ಮೂಲಕ ಸ್ಯಾಂಡಲ್‌ವುಡ್‌ ಹೊಸ ಭಾಷ್ಯ ಬರೆದಿತ್ತು. ಈ ವರ್ಷದ ಡಿಸೆಂಬರ್‌ 12 ರವರೆಗೆ “ಒಡೆಯ’ ಚಿತ್ರ ಸೇರಿದಂತೆ ಬಿಡುಗಡೆಯಾಗುವ ಕನ್ನಡ ಚಿತ್ರಗಳ ಲೆಕ್ಕ ಹಾಕಿದರೆ 200 ಪ್ಲಸ್‌ ಚಿತ್ರಗಳು ಕಾಣಸಿಗುತ್ತವೆ. ಈ ವರ್ಷ ಪೂರ್ಣಗೊಳ್ಳಲು ಇನ್ನೂ ಎರಡು ವಾರಗಳು ಬಾಕಿ ಉಳಿದಿವೆ. ಅಲ್ಲಿಗೆ, ಕಡಿಮೆ ಅಂದರೂ 10 ಪ್ಲಸ್‌ ಚಿತ್ರಗಳು ಬಿಡುಗೆಯಾಗಬಹುದು. ಅವುಗಳನ್ನೂ ಲೆಕ್ಕಕ್ಕೆ ಸೇರಿಸಿಕೊಂಡರೆ, ಈ ವರ್ಷ ಚಿತ್ರಗಳ ಬಿಡುಗಡೆ ಸಂಖ್ಯೆ 215 ಪ್ಲಸ್‌ ಆಗುವ ಸಾಧ್ಯತೆ ಇದೆ. ಇವುಗಳ ನಡುವೆ ಪ್ರಾದೇಶಿಕ ಭಾಷೆಯ ತುಳು, ಕೊಂಕಣಿ, ಕೊಡವ, ಬಂಜಾರ ಭಾಷೆಯ ಚಿತ್ರಗಳೂ ಬಿಡುಗಡೆಯಾಗಿವೆ. ಈ ಪೈಕಿ ಒಂದಷ್ಟು ಚಿತ್ರಗಳು ಯಾವುದೇ ಪ್ರಚಾರದ ಅಬ್ಬರವಿಲ್ಲದೇ, ಮುಖ್ಯವಾಹಿನಿಗೆ ಬಾರದೇ ಬಿಡುಗಡೆಯಾಗಿರುವ ಸಾಧ್ಯತೆಯೂ ಇದೆ. ಹಾಗಾಗಿ, ಬಿಡುಗಡೆ ಚಿತ್ರಗಳ ಲೆಕ್ಕದಲ್ಲಿ ಒಂದೆರೆಡು ಸಂಖ್ಯೆ ಹೆಚ್ಚಿರಬಹುದು, ಕಮ್ಮಿ ಇರಬಹುದು. ಇಲ್ಲಿವರೆಗೆ ಬಿಡುಗಡೆಯಾಗಿರುವ ಸಿನಿಮಾಗಳನ್ನು ಗಮನಿಸಿ ಹೇಳುವುದಾದರೆ ವರ್ಷಾಂತ್ಯಕ್ಕೆ 220 ಪ್ಲಸ್‌ ಚಿತ್ರಗಳಷ್ಟೇ ಬಿಡುಗಡೆಯಾಗಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕನ್ನಡ ಚಿತ್ರಗಳ ಬಿಡುಗಡೆಯ ಸಂಖ್ಯೆ ಪ್ರಮಾಣ ಕಡಿಮೆ.

2018, ಕನ್ನಡ ಚಿತ್ರರಂಗದ ಪಾಲಿಗೆ ದಾಖಲೆಯ ವರ್ಷವಷ್ಟೇ ಅಲ್ಲ, ಮಹತ್ವದ ವರ್ಷವೂ ಆಗಿತ್ತು. ಈ ವರ್ಷ ರಿಲೀಸ್‌ ಚಿತ್ರಗಳ ಸಂಖ್ಯೆ ಕಮ್ಮಿ. ಇನ್ನು, ಈ ವರ್ಷ ಹೇಗಿತ್ತು ಎಂದು ವಿಶ್ಲೇಷಿಸುವುದು ತುಸು ಕಷ್ಟ. ಅದಕ್ಕೆ ಎರಡು ಸಂಪೂರ್ಣ ಸಂಚಿಕೆಯೂ ಸಾಲದು. ಅಂದಹಾಗೆ, ಆ ವಿಶ್ಲೇಷಣೆಯ ಮೊದಲ ಹಂತವಾಗಿ ಇಂದಿನವರೆಗೆ ಬಿಡುಗಡೆಯಾದ ಕನ್ನಡ, ಕೊಡವ, ಕೊಂಕಣಿ, ತುಳು ಭಾಷೆ ಚಿತ್ರಗಳ ಪಟ್ಟಿ ಇಲ್ಲಿದೆ. ಅದರಲ್ಲೂ ಮೆಚ್ಚುಗೆ ಪಡೆದ ಚಿತ್ರ, ನಿರೀಕ್ಷೆಗೆ ನಿಲುಕದ ಚಿತ್ರಗಳು, ಪ್ರಯೋಗಾತ್ಮಕ, ಕಲಾತ್ಮಕ ಚಿತ್ರಗಳು, ಮಕ್ಕಳ ಸಿನಿಮಾ, ಹಾರರ್‌ ಚಿತ್ರಗಳು… ಹೀಗೆ ಒಂದೊಂದು ಪಟ್ಟಿ ವಿಂಗಡಿಸಿ, ಅಲ್ಲಿ ಚಿತ್ರಗಳ ಹೆಸರನ್ನು ನಮೂದಿಸಲಾಗಿದೆ. ಇದು ಸದ್ಯಕ್ಕೆ ಸಿಕ್ಕಿರುವ ಮಾಹಿತಿಯಷ್ಟೇ. ಇದೇ ಅಂತಿಮವೂ ಅಲ್ಲ. ಇನ್ನೂ ಒಂದಷ್ಟು ಚಿತ್ರಗಳು ಬಿಡುಗಡೆಯಾಗಬೇಕಿದೆ. ಈಗಾಗಲೇ ಅದೆಷ್ಟೋ ಚಿತ್ರಗಳು ಸದ್ದಿಲ್ಲದೆ ರಿಲೀಸ್‌ ಆಗಿದ್ದೂ ಇದೆ. ಕಣ್ತಪ್ಪಿ ಬಿಡುಗಡೆಗೊಂಡ ಚಿತ್ರಗಳನ್ನಿಲ್ಲಿ ಲೆಕ್ಕ ಹಾಕಿಲ್ಲ. ಅಂತಹ ಚಿತ್ರ ಬಿಡುಗಡೆ ಪಟ್ಟಿಯಲ್ಲಿ ದಾಖಲಾಗಿಲ್ಲ.

ವಿಶೇಷವಾಗಿ ಇಲ್ಲೊಂದು ಅಂಶ ಗಮನಿಸಬೇಕು. ಈ ಬಾರಿ ಬೆರಳೆಣಿಕೆ ಸ್ಟಾರ್ಗಳ ಅಬ್ಬರ ಜೋರಾಗಿತ್ತು. ಅವರ ಜೊತೆಯಲ್ಲಿ ಹೊಸಬರ ಸಂಖ್ಯೆ ಕಮ್ಮಿ ಏನಿರಲಿಲ್ಲ. ದೊಡ್ಡ ಮಟ್ಟದ ಯಶಸ್ಸು ಪಡೆಯದಿದ್ದರೂ ಸಣ್ಣದ್ದೊಂದು ನಗುವಿನಲ್ಲಿ ಹೊಸಬರೂ ಇದ್ದಾರೆ. ಇಲ್ಲಿ ಕೊಟ್ಟಿರುವ “ನಿರೀಕ್ಷೆಗೆ ನಿಲುಕದ ಚಿತ್ರಗಳು’ ಪಟ್ಟಿಯಲ್ಲಿ ಚಿತ್ರಗಳು ಹಣ ಮಾಡಿರಬಹುದು, ಹೆಸರು ಮಾಡದೇ ಇರಬಹುದು, ಇನ್ನು ಹೆಸರು ಮಾಡಿದ್ದರೂ, ಹಣ ಮಾಡಲು ವಿಫ‌ಲವಾದ ಹಾಗೂ ತಕ್ಕಮಟ್ಟಿಗೆ ನಿರ್ಮಾಪಕರಿಗೆ ನೆಮ್ಮದಿ ತಂದ ಸಿನಿಮಾಗಳನ್ನಷ್ಟೇ ಹೆಸರಿಸಲಾಗಿದೆ. ಅದನ್ನು ಹೆಚ್ಚಾ ಅಲ್ಲ, ಕಮ್ಮಿಯೂ ಅಲ್ಲ ಅಂತ ಪರಿಗಣಿಸಬೇಕಷ್ಟೆ. ಅಂತಹ 2019 ರ “ಚಿತ್ರನೋಟ’ ಇಲ್ಲಿದೆ.

ಯಶಸ್ವಿ ಚಿತ್ರ
|ಬೆಲ್‌ ಬಾಟಮ್‌ ಯಜಮಾನ ಐ ಲವ್‌ ಯು
ಕುರುಕ್ಷೇತ್ರ

ಮೆಚ್ಚುಗೆ
ಪೈಲ್ವಾನ್‌
ಚಂಬಲ್‌
ಪ್ರೀಮಿಯರ್‌ ಪದ್ಮಿನಿ
ಕಾಳಿದಾಸ ಕನ್ನಡ ಮೇಷ್ಟ್ರು
ಗೀತಾ
ಕಥಾ ಸಂಗಮ
ಮಿಸ್ಸಿಂಗ್‌ ಬಾಯ್‌
ದಶರಥ
ರಂಗನಾಯಕಿ
ಕೆಮಿಸ್ಟ್ರಿ ಆಫ್ ಕರಿಯಪ್ಪ

ಹೊಸ ಪ್ರಯೋಗ
ಬೀರ್‌ಬಲ್‌
ಕವಲುದಾರಿ
ನನ್ನ ಪ್ರಕಾರ
ಅಳಿದು ಉಳಿದವರು
ಕಥಾಸಂಗಮ
ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು
ಮಹಿರ
ದೇವರು ಬೇಕಾಗಿದ್ದಾರೆ
ಗಂಟುಮೂಟೆ
ಬಬ್ರೂ
ಐ-1
ಪಂಚತಂತ್ರ

ನಿರೀಕ್ಷೆಗೆ ನಿಲುಕದ ಚಿತ್ರಗಳು
ಅಮರ್‌
ನಟ ಸಾರ್ವಭೌಮ
ಸೀತಾರಾಮ ಕಲ್ಯಾಣ
ರುಸ್ತುಂ
ಭರಾಟೆ
ಉದ^ರ್ಷ
ಗೀತಾ
ಆಯುಷ್ಮಾನ್‌ ಭವ

ನಾಯಕಿ ಪ್ರಧಾನ ಚಿತ್ರಗಳು
ಅನುಷ್ಕಾ
ದೇವಕಿ
ಡಾಟರ್‌ ಆಫ್ ಪಾರ್ವತಮ್ಮ
ರಂಗನಾಯಕಿ
ಸೂಜಿದಾರ

ಮಕ್ಕಳ ಚಿತ್ರಗಳು
ಪುಟಾಣಿ ಪವರ್‌
ಜಕಣಾಚಾರಿ ತಮ್ಮ ಶುಕ್ಲಾಚಾರಿ
ಭಾಗ್ಯಶ್ರೀ
ಗಿರ್ಮಿಟ್‌
ಜ್ಞಾನಂ

ಹಾರರ್‌- ಥ್ರಿಲ್ಲರ್‌
ಅನುಕ್ತ
ಉದ್ಘರ್ಷ
ನೈಟ್‌ ಔಟ್‌
ಅನುಷ್ಕಾ
ಕಮರೊಟ್ಟು ಚೆಕ್‌ಪೋಸ್ಟ್‌
ರತ್ನಮಂಜರಿ
ವಜ್ರಮುಖೀ
ಗಿಮಿಕ್‌
ಕಲ್ಪನಾ ವಿಲಾಸಿ
ಮೂರ್ಕಲ್‌ ಎಸ್ಟೇಟ್‌
ಆ ದೃಶ್ಯ
ಮನೆ ಮಾರಾಟಕ್ಕಿದೆ
ದಮಯಂತಿ

ತುಳು ಸಿನಿಮಾಗಳು
ಪುಂಡಿ ಪಣವು
ದೇಯಿ ಬೈದೆತಿ
ಕಂಬಳಬೆಟ್ಟು ಭಟ್ರೆನ ಮಗಳ್‌
ಕಟಪಾಡಿ ಕಟ್ಟಪ್ಪ
ಗೋಲ್‌ಮಾಲ್‌
ಆಯೆ ಏರ್‌
ಬೆಲ್ಚಪ್ಪ
ಗಿರಿಗೀಟ್‌
ಜಬರ್‌ದಸ್ತ್ ಶಂಕರ
ಆಟಿಡೊಂಜಿ ದಿನ

ಡಿಸೆಂಬರ್‌ ನಿರೀಕ್ಷೆ
ಕನ್ನಡ ಚಿತ್ರರಂಗಕ್ಕೂ ಡಿಸೆಂಬರ್‌ಗೂ ಅವಿನಾಭಾವ ಸಂಬಂಧವಿದೆ. ಡಿಸೆಂಬರ್‌ ಕೊನೆಯಲ್ಲಿ ಬಿಡುಗಡೆಯಾಗುವ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ದೊಡ್ಡ ಹಿಟ್‌ ತಂದುಕೊಡುತ್ತವೆ ಎಂಬ ನಂಬಿಕೆ ಇದೆ. ಅದಕ್ಕೆ ಪೂರಕವಾಗಿ ಡಿಸೆಂಬರ್‌ ಕೊನೆಯಲ್ಲಿ ಬಿಡುಗಡೆಯಾದ ಚಿತ್ರಗಳು ದೊಡ್ಡ ಹಿಟ್‌ ಆದ ಸಾಕ್ಷಿಗಳೂ ಇವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾದ “ಕೆಜಿಎಫ್’ ದೊಡ್ಡ ಯಶಸ್ಸು ಕಂಡಿತು. ಈ ವರ್ಷದ ಡಿಸೆಂಬರ್‌ ಕೂಡಾ ಮತ್ತೂಂದು ನಿರೀಕ್ಷೆಗೆ ಕಾರಣವಾಗಿದೆ. ಅದು “ಅವನೇ ಶ್ರೀಮನ್ನಾರಾಯಣ’ ಸಿನಿಮಾ ಮೂಲಕ. ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಸಿನಿಮಾ ಪ್ಯಾನ್‌ ಇಂಡಿಯಾ ಆಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರ ಡಿಸೆಂಬರ್‌ 27 ರಂದು ತೆರೆಕಾಣುತ್ತಿದ್ದು, ಈ ಸಿನಿಮಾ ಮೇಲೆ ಇಡೀ ಚಿತ್ರರಂಗ, ಸಿನಿಪ್ರೇಮಿಗಳು ನಿರೀಕ್ಷೆ ಇಟ್ಟಿದ್ದಾರೆ.

ಪೈಲ್ವಾನ್‌ಗೆ ಪೈರಸಿ ಕಾಟ
ಸುದೀಪ್‌ ನಾಯಕರಾಗಿರುವ “ಪೈಲ್ವಾನ್‌’ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಅದಕ್ಕೆ ಪೈರಸಿ ಕಾಟ ಆರಂಭವಾದ ಪರಿಣಾಮ, ಚಿತ್ರಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿದ್ದು ಸುಳ್ಳಲ್ಲ. ಗೆಲುವಿನ ಓಟದಲ್ಲಿದ್ದ ಚಿತ್ರಕ್ಕೆ ಪೈರಸಿ ಇನ್ನಿಲ್ಲದಂತೆ ಕಾಡಿತು.

ಕಳೆದ ವರ್ಷಕ್ಕೆ ಹೋಲಿಸಿದ್ರೆ, ಈ ವರ್ಷ ನಮ್ಮ ಇಂಡಸ್ಟ್ರಿ ಇನ್ನೂ ಒಂದು ಮಟ್ಟಕ್ಕೆ ಮೇಲೇರಿದೆ. ಇಷ್ಟು ವರ್ಷ ಬೇರೆ ಭಾಷೆಯ ಸಿನಿಮಾಗಳು ಹೆಚ್ಚಾಗಿ ನಮ್ಮ ಭಾಷೆಗೆ ರಿಮೇಕ್‌ ಅಗ್ತಿದ್ದವು. ಆದ್ರೆ ಈ ವರ್ಷ ನಮ್ಮ ಸಿನಿಮಾಗಳೇ ಹೆಚ್ಚಾಗಿ ಬೇರೆ ಭಾಷೆಗೆ ರಿಮೇಕ್‌ ಆಗುತ್ತಿವೆ. ಹೊಸ ಹೀರೋ-ಹೀರೋಯಿನ್ಸ್‌, ಡೈರೆಕ್ಟರ್, ಪ್ರೊಡ್ನೂಸರ್ ಬರುತ್ತಿರುವುದರಿಂದ ಒಂದಷ್ಟು ಹೊಸ ಪ್ರಯೋಗಗಳಾಗುತ್ತಿವೆ. ಇದರಿಂದಾಗಿ, ನನಗೂ ಕೂಡ ಈ ವರ್ಷ ಏಳು ವಿಭಿನ್ನ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಇಂಡಸ್ಟ್ರಿ ಯಾವತ್ತೂ ನಿಂತ ನೀರಾಗಬಾರದು. ಅದು ಚಲಿಸುತ್ತಲೇ ಇರಬೇಕು. ಇದೊಂದು ಕೊನೆಯಿಲ್ಲದ ಪ್ರಕ್ರಿಯೆ. ಆದ್ರೆ ಇತ್ತೀಚೆಗೆ ಒಳ್ಳೆಯ ಸಿನಿಮಾಗಳಿಗೂ ಥಿಯೇಟರ್‌ ಸಮಸ್ಯೆ ಎದುರಾಗ್ತಿದೆ. ಆದಷ್ಟು ಕರ್ನಾಟಕದ ಥಿಯೇಟರ್‌ಗಳಲ್ಲಿ ಕನ್ನಡ ಸಿನಿಮಾಗಳಿಗೆ ಹೆಚ್ಚು ಪ್ರಾಮುಖ್ಯತೆ ಸಿಕ್ಕರೆ ಈ ಸಮಸ್ಯೆ ಕಡಿಮೆಯಾಗಬಹುದು.
– ಹರಿಪ್ರಿಯಾ, ನಟಿ

ಈ ವರ್ಷ ಕನ್ನಡ ಚಿತ್ರರಂಗದಲ್ಲಿ ತುಂಬಾ ಒಳ್ಳೆಯ ಪ್ರಯತ್ನವಾಗಿದೆ. ಕಳೆದ ಬಾರಿಗೆ ಹೋಲಿಸಿದ್ರೆ ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಒಳ್ಳೆಯ ಸಿನಿಮಾಗಳು ಬಂದಿವೆ. ಹೊಸ ಹೊಸ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಎಲ್ಲರೂ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದಾರೆ. ಆದರೆ ದುರಾದೃಷ್ಟವಶಾತ್‌ ಅಂಥ ಬಹುತೇಕ ಸಿನಿಮಾಗಳು ಥಿಯೇಟರ್‌ನಲ್ಲಿ ಉಳಿಯುತ್ತಿಲ್ಲ. ನಮ್ಮಲ್ಲಿ ಅಸಂಘಟಿತವಾಗಿ, ರೀತಿ-ನೀತಿ ಇಲ್ಲದೆ ಸಿನಿಮಾ ಮಾಡ್ತಿರೋದೆ ಇದಕ್ಕೆಲ್ಲ ಕಾರಣ. ಇದರಿಂದ ಅನೇಕ ಒಳ್ಳೆಯ ಸಿನಿಮಾಗಳು ಸೋಲುತ್ತಿವೆ. ಹೀಗಾಗಿ ಒಂದು ಸಿನಿಮಾ ಮಾಡಿದ ಶೇಕಡಾ 90ರಷ್ಟು ಹೊಸ ನಿರ್ಮಾಪಕರು ಎರಡನೇ ಸಿನಿಮಾ ಮಾಡೋದಕ್ಕೆ ಮುಂದೆ ಬರುತ್ತಿಲ್ಲ. ಇದು ಉದ್ಯಮದ ವೈಫ‌ಲ್ಯ. ಒಳ್ಳೆಯ ಸಿನಿಮಾಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇಂಡಸ್ಟ್ರಿ ಮೇಲಿದೆ.
– ಕವಿರಾಜ್‌, ಚಿತ್ರ ಸಾಹಿತಿ ಮತ್ತು ನಿರ್ದೇಶಕ

ಇತ್ತೀಚೆಗೆ ರೆಗ್ಯುಲರ್‌ ಜಾನರ್‌ ಸಿನಿಮಾಗಳು ಕಡಿಮೆಯಾಗಿ, ಹೊಸ ಅಲೆಯ ಸಿನಿಮಾಗಳು ಹೆಚ್ಚಾಗುತ್ತಿವೆ. ವಾರಕ್ಕೆ ಏಳೆಂಟು ಸಿನಿಮಾಗಳು ರಿಲೀಸ್‌ ಆದ್ರೂ, ಅದರಲ್ಲಿ ನಾಲ್ಕು-ಐದು ಬೇರೆಯ ಥರದ ಕಲ್ಟ್ ಸಿನಿಮಾಗಳೇ ಇರುತ್ತವೆ. ಚಿತ್ರರಂಗಕ್ಕೆ ಹೊಸದಾಗಿ ಬರುತ್ತಿರುವವರು ಹೊಸದಾಗಿ ಯೋಚಿಸುತ್ತಿದ್ದಾರೆ. ಸುಶಿಕ್ಷಿತರು, ಬುದ್ದಿವಂತರು ಹೆಚ್ಚಾಗಿ ಬರುತ್ತಿದ್ದಾರೆ. ಚಿತ್ರರಂಗದ ಮಟ್ಟಿಗೆ ಇದು ಒಳ್ಳೆಯ ಬೆಳವಣಿಗೆ. ನನ್ನ ಪ್ರಕಾರ ಇದೇ ಟ್ರೆಂಡ್‌ ಇನ್ನೂ ನಾಲ್ಕು-ಐದು ವರ್ಷ ಮುಂದುವರೆದರೆ, ಕನ್ನಡ ಚಿತ್ರೋದ್ಯಮದ ಚಿತ್ರಣವೇ ಸಂಪೂರ್ಣ ಬದಲಾಗಲಿದೆ. ಆದರೆ ಥಿಯೇಟರ್‌ ಸಮಸ್ಯೆ, ಮೊದಲಾದ ಕಾರಣಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಆಡಿಯನ್ಸ್‌ನ ಸಿನಿಮಾದ ಕಡೆಗೆ ಸೆಳೆಯಲು ಆಗುತ್ತಿಲ್ಲ. ಇದಕ್ಕೆ ದಾರಿಯನ್ನು ಕಂಡುಕೊಂಡರೆ, ಮುಂದೆ ಇನ್ನಷ್ಟು ಪ್ರತಿಭಾವಂತರು, ಹೊಸ ಥರದ ಸಿನಿಮಾಗಳು ಖಂಡಿತ ಬರುತ್ತವೆ.
– ಪ್ರವೀಣ್‌ ತೇಜ್‌, ನಾಯಕ ನಟ

ಸಿನಿಮಾ ಇಂಡಸ್ಟ್ರಿ ಅಂದ ಮೇಲೆ ಅಲ್ಲಿ ಕ್ಲಾಸ್‌, ಮಾಸ್‌ ಹೀಗೆ ಎಲ್ಲ ಥರದ ಸಿನಿಮಾಗಳೂ ಬರಬೇಕು. ಆವಾಗಲೇ ಇಂಡಸ್ಟ್ರಿ ಬ್ಯಾಲೆನ್ಸ್‌ ಆಗಿ ಇರೋದಕ್ಕೆ ಸಾಧ್ಯ. ಈ ವರ್ಷ ಇಂಥದ್ದೊಂದು ಬ್ಯಾಲೆನ್ಸ್‌ ಆಗಿದೆ. ಸ್ಟಾರ್‌ಗಳ ಮಾಸ್‌ ಸಿನಿಮಾಗಳು, ಹೊಸಬರ ಕ್ಲಾಸ್‌ ಸಿನಿಮಾಗಳೂ ಎರಡೂ ಥರದ ಸಿನಿಮಾಗಳೂ ಬಂದಿವೆ. ಚಿತ್ರರಂಗದ ಮಟ್ಟಿಗೆ ಇದು ಒಳ್ಳೆಯ ಬೆಳವಣಿಗೆ. ಕಲೆಕ್ಷನ್‌, ಮಾರ್ಕೇಟ್‌ ದೃಷ್ಟಿಯಲ್ಲಿ ಕಮರ್ಷಿಯಲ್‌ ಸಿನಿಮಾಗಳು ಇರಬೇಕು, ಆಡಿಯನ್ಸ್‌ ಅಭಿರುಚಿಗೆ ತಕ್ಕಂತೆ ಪರ್ಯಾಯ ಸಿನಿಮಾಗಳೂ ಬರಬೇಕು. ಆದ್ರೆ ದುರಂತ ಅಂದ್ರೆ, ಪ್ರೇಕ್ಷಕರಿಗೆ ಆಯ್ಕೆಗೂ ಹೆಚ್ಚು ಸಿನಿಮಾಗಳನ್ನು ಕೊಡುತ್ತಿದ್ದೇವೆ. ವಾರಕ್ಕೆ ಒಂಬತ್ತು-ಹತ್ತು ಸಿನಿಮಾಗಳು ರಿಲೀಸ್‌ ಆಗ್ತಿರುವುದರಿಂದ, ಯಾವುದನ್ನು ನೋಡಬೇಕು ಯಾವುದನ್ನು ಬಿಡಬೇಕು ಅಂತ ಪ್ರೇಕ್ಷಕರಿಗೆ ಗೊತ್ತಾಗದೆ, ಗೊಂದಲವಾಗ್ತಿದೆ. ಇಷ್ಟೊಂದು ಸಿನಿಮಾಗಳು ಬಂದ್ರೂ, ಕಳೆದ ವರ್ಷದಂತೆ ಈ ವರ್ಷ ಕೂಡ ಹಿಟ್‌ ಸಿನಿಮಾಗಳ ಸಂಖ್ಯೆ ತುಂಬ ಕಡಿಮೆ ಅನ್ನೋದು ಬೇಸರದ ಸಂಗತಿ.
– ರಿಷಭ್‌ ಶೆಟ್ಟಿ, ನಟ ಕಂ ನಿರ್ದೇಶಕ

ನವೆಂಬರ್‌ ದಾಖಲೆ
ಈ ವರ್ಷದ ವಿಶೇಷವೆಂದರೆ, ನವೆಂಬರ್‌ನಲ್ಲಿ ದಾಖಲೆಯ ಚಿತ್ರಗಳು ಬಿಡುಗಡೆಯಾಗಿದ್ದು. ಹೌದು, ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಅತೀ ಉತ್ಸಾಹದಿಂದಲೇ ನಾ ಮುಂದು, ತಾ ಮುಂದು ಅಂತ ಬಂದ ಚಿತ್ರಗಳಿಗೆ ಲೆಕ್ಕವಿಲ್ಲ. ಹಾಗೆ ನೋಡಿ ಲೆಕ್ಕ ಹಾಕಿದರೆ, ನವೆಂಬರ್‌ನಲ್ಲಿ 34ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುವ ಮೂಲಕ ಹೊಸ ದಾಖಲೆ ಬರೆದಿವೆ. ಆದರೆ, ಯಶಸ್ಸಿನ ಲೆಕ್ಕ ಮಾತ್ರ ಸೊನ್ನೆ. ಉಳಿದಂತೆ ಮಾರ್ಚ್‌ನಲ್ಲಿ 27 ಚಿತ್ರಗಳು ತೆರೆಗೆ ಬಂದಿವೆ. ಮೇ ತಿಂಗಳಲ್ಲಿ 22 ಚಿತ್ರಗಳು ಬಿಡುಗಡೆಯಾಗಿವೆ. ಉಳಿದಂತೆ ಪ್ರತಿ ತಿಂಗಳ 12 ರಿಂದ 18 ಚಿತ್ರಗಳವರೆಗೂ ಬಿಡುಗಡೆಯಾಗಿವೆ.

ಜನವರಿ (11)
ಆಡುವ ಗೊಂಬೆ, ಬೆಸ್ಟ್‌ ಫ್ರೆಂಡ್ಸ್‌, ಫಾರ್ಚೂನರ್‌, ಪ್ರಸ್ತಾ, ಗಿಣಿ ಹೇಳಿದ ಕಥೆ, ಲಂಬೋದರ, ಬೀರ್‌ಬಲ್‌ ಟ್ರಯಾಲಜಿ, ಲಾಕ್‌, ಮಿಸ್ಡ್ ಕಾಲ್‌, ಸೀತಾರಾಮ ಕಲ್ಯಾಣ, ಸಪ್ಲಿಮೆಂಟರಿ

ಫೆಬ್ರವರಿ (16)
ಅನುಕ್ತ, ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು, ಭೂತಕಾಲ, ಬಜಾರ್‌, ಮಟಾಶ್‌, ತ್ರಯೋದಶ, ನಟಸಾರ್ವಭೌಮ, ಸರ್ವಜ್ಞ ಮತ್ತೂಮ್ಮೆ ಹುಟ್ಟಿ ಬಾ, ಬೆಲ್‌ ಬಾಟಮ್‌, ಕೆಮಿಸ್ಟ್ರಿ ಆಫ್ ಕರಿಯಪ್ಪ, ಗಹನ, ಚಂಬಲ್‌, ಕದ್ದುಮುಚ್ಚಿ, ಕಳ್‌ಬೆಟ್ಟದ ದರೋಡೆಕೋರರು, ಸ್ಟ್ರೈಕರ್‌, ಯಾರಿಗೆ ಯಾರುಂಟು

ಮಾರ್ಚ್‌ (27)
ಯಜಮಾನ, ಅಮ್ಮನ ಮನೆ, ಗೋಸಿ ಗ್ಯಾಂಗ್‌, ಇಬ್ಬರು ಬಿ ಟೆಕ್‌ ಸ್ಟೂಡೆಂಟ್ಸ್‌, ಮದ್ವೆ, ಒಂದ್‌ ಕಥೆ ಹೇಳಾ, ಅರಬ್ಬಿ ಕಡಲ ತೀರದಲ್ಲಿ, ಡಿಕೆ ಬೋಸ್‌, ಫೇಸ್‌ ಟು ಫೇಸ್‌, ಗಿರ್‌ಗಿಟ್ಲೆ, ನಾನು ನಮ್‌ ಹುಡ್ಗಿ ಖರ್ಚಿಗೊಂದ್‌ ಮಾಫಿಯಾ, ಅಡಚಣೆಗಾಗಿ ಕ್ಷಮಿಸಿ, ಬದ್ರಿ ವರ್ಸಸ್‌ ಮಧುಮತಿ, ಚಾಣಾಕ್ಷ, ಮಿಸ್ಸಿಂಗ್‌ ಬಾಯ್‌, ಉದ^ರ್ಷ, ಧರ್ಮಪುರ, ಗಂಧದ ಕುಡಿ, ಹನಿಗಳು ಏನನೋ ಹೇಳಲು ಹೊರಟಿವೆ, ಲಂಡನ್‌ನಲ್ಲಿ ಲಂಬೋದರ, ಪಂಚತಂತ್ರ, ರಣರಣಕ, ರವಿ ಹಿಸ್ಟರಿ, ರಗಡ್‌, ಯದ ಯದಾಹೀ ಧರ್ಮಸ್ಯ, ರಾಜಣ್ಣನ ಮಗ, ಅಥರ್ವಣ ಪ್ರತ್ಯಂಗೀರ

ಏಪ್ರಿಲ್‌ (13)
ಗೌಡ್ರು ಸೈಕಲ್‌, ಕವಚ, ಜೈ ಕೇಸರಿ ನಂದನ, ಕವಲುದಾರಿ, ನೈಟ್‌ ಔಟ್‌, ವಿರೂಪ, ಪಡ್ಡೆಹುಲಿ, ಪಯಣಿಗರು, ಪುನರ್ವಸು ನಕ್ಷತ್ರ ಮಿಥುನ ರಾಶಿ, ತ್ರಯಂಬಕಂ, ಜನುಮದ ಸ್ನೇಹಿತರು, ಪ್ರೀಮಿಯರ್‌ ಪದ್ಮಿನಿ, ಮಹಾಕಾವ್ಯ

ಮೇ (22)
99, ಗರ, ಲೋಫ‌ರ್, ಒಂಭತ್ತನೇ ಅದ್ಭುತ, ಅನುಷ್ಕಾ, ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ, ಖನನ, ಸೂಜಿದಾರ, ತ್ರಯ, ಹೌಲಾ ಹೌಲಾ, ಕಾರ್ಮೋಡ ಸರಿದು, ರತ್ನಮಂಜರಿ, ಮೂಕವಿಸ್ಮಿತ, ದಿಗ½ಯಂ, ಪುಟಾಣಿ ಪವರ್‌, ರೇಸ್‌, ವೀಕೆಂಡ್‌, ಅಮರ್‌, ಕಮರೊಟ್ಟು ಚೆಕ್‌ಪೋಸ್ಟ್‌, ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ, ಸುವರ್ಣ ಸುಂದರಿ, ಡಾಟರ್‌ ಆಫ್ ಪಾರ್ವತಮ್ಮ

ಜೂನ್‌ (11)
ಕೀರ್ತಿಗೊಬ್ಬ-2, ಮಜ್ಜಿಗೆ ಹುಳಿ, ಹ್ಯಾಂಗೋವರ್‌, ಐ ಲವ್‌ ಯು, ವಿಜಯಾಧಿತ್ಯ, ಹಫ್ತಾ, ಕೃಷ್ಣ ಗಾರ್ಮೆಂಟ್ಸ್‌, ಸಾರ್ವಜನಿಕರಲ್ಲಿ ವಿನಂತಿ, ಒನ್‌ ವೇ, ರುಸ್ತುಂ, ಸಮಯದ ಹಿಂದೆ ಸವಾರಿ

ಜುಲೈ (17)
ದೇವಕಿ, ಧೀರ ಕನ್ನಡಿಗ, ಒಂಟಿ, ಚಿತ್ರಕಥಾ, ಫ‌ುಲ್‌ ಟೈಟ್‌ ಪ್ಯಾತೆ, ಇಂತಿ ನಿಮ್ಮ ಭೈರ, ಆಪರೇಷನ್‌ ನಕ್ಷತ್ರ, ಯಾನ, 10ನೇ ತರಗತಿ, ಆದಿಲಕ್ಷ್ಮೀ ಪುರಾಣ, ಡಿಚಿR ಡಿಸೈನ್‌, ಮಳೆ ಬಿಲ್ಲು, ಸಿಂಗ, ದಶರಥ, ಜರ್ಕ್‌, ಮಹಿರ, ನಂದನವನದೋಳ್‌

ಆಗಸ್ಟ್‌ (18)
ಬೆಕ್ಕಿಗೊಂದು ಮೂಗುತಿ, ಭಾನು ವೆಡ್ಸ್‌ ಭೂಮಿ, ವಜ್ರಮುಖೀ, ಏಕತೆ, ಕೆಂಪೇಗೌಡ-2, ಕುರುಕ್ಷೇತ್ರ, ಗಿಮಿಕ್‌, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಒನ್‌ ಲವ್‌ ಟೂ ಸ್ಟೋರಿ, ಮನಸಿನಾಟ, ಫ್ಯಾನ್‌, ನನ್ನ ಪ್ರಕಾರ, ರಾಂಧವ, ಉಡುಂಬ, ವಿಜಯರಥ, ಪುಣ್ಯಾತಿYತ್ತಿರು, ಕಲ್ಪನಾ ವಿಲಾಸಿ, ಮರ್ಡರ್‌ -2

ಸೆಪ್ಟೆಂಬರ್‌ (10)
ವಿಷ್ಣು ಸರ್ಕಲ್‌, ಪೈಲ್ವಾನ್‌, ಬಾರೋ ಬಾರೋ ಗೆಳೆಯ, ಮೂರನೇ ಕಣ್ಣು, ತ್ರಿಪುರ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಗೀತಾ, ಕಿಸ್‌, ನವರಾತ್ರಿ, ಸೂಪರ್‌ ಹೀರೋ

ಅಕ್ಟೋಬರ್‌ (14)
ಅಧ್ಯಕ್ಷ ಇನ್‌ ಅಮೆರಿಕಾ, ಪ್ರೇಮಾಸುರ, ದೇವರು ಬೇಕಾಗಿದ್ದಾರೆ, ಎಲ್ಲಿದ್ದೆ ಇಲ್ಲಿ ತನಕ, ಜ್ಞಾನಂ, ಇಂಜೆಕ್ಟ್ 0.7, ಲುಂಗಿ, ಸಿದ್ದಿ ಸೀರೆ, ವೃತ್ರ, ಭರಾಟೆ, ಗಂಟುಮೂಟೆ, ಸವರ್ಣದೀರ್ಘ‌ ಸಂಧಿ, ಅಂದವಾದ, ಮೂರ್ಕಲ್‌ ಎಸ್ಟೇಟ್‌

ನವೆಂಬರ್‌ (34)
ಸಿ++, ದಂಡುಪಾಳ್ಯ-4, ರಂಗನಾಯಕಿ, ಸ್ಟಾರ್‌ ಕನ್ನಡಿಗ, ಆ ದೃಶ್ಯ, ಈಶ ಮಹೇಶ, ಗಿರ್ಮಿಟ್‌, ಕಪಟ ನಾಟಕ ಪಾತ್ರಧಾರಿ, ಪಾಪಿ ಚಿರಾಯು, ರಣಭೂಮಿ, ಆಯುಷ್ಮಾನ್‌ ಭವ, ಮನೆ ಮಾರಾಟಕ್ಕಿದೆ, ರಿಲ್ಯಾಕ್ಸ್‌ ಸತ್ಯ, ರಾಜಪಥ, ನಮ್‌ ಗಣಿ ಬಿ.ಕಾಂ ಪಾಸ್‌, ಕಾಳಿದಾಸ ಕನ್ನಡ ಮೇಷ್ಟ್ರು, ಕನ್ನಡ್‌ ಗೊತ್ತಿಲ್ಲ, ರಣಹೇಡಿ, ಭಾಗ್ಯಶ್ರೀ, ಅಲೆಕ್ಸ್‌, ಪ್ರೀತಿ ಇರಬಾರದೇ, ನ್ಯೂರಾನ್‌, ಮನರೂಪ, ಮುಂದಿನ ನಿಲ್ದಾಣ, ಬ್ರಹ್ಮಚಾರಿ, ರಾಜಲಕ್ಷ್ಮೀ, ದಮಯಂತಿ, ಮೂಕಜ್ಜಿಯ ಕನಸುಗಳು, ಕಿರು ಮಿನ್ಕಣಜ, ಮಾರ್ಗರೆಟ್‌, ರಿವೀಲ್‌, ನಾನೇ ರಾಜ, ಅಣ್ಣನಿಗೆ ತಕ್ಕ ತಮ್ಮ,

ಡಿಸೆಂಬರ್‌:(7+)
ಕಥಾ ಸಂಗಮ, 19 ಏಜ್‌ ನಾನ್ಸೆನ್ಸ್‌, ಅಳಿದು ಉಳಿದವರು, ಬಬ್ರೂ, ಹಗಲು ಕನಸು, ಐ-1, ಒಡೆಯ,

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ