ತೇಜ್ ಮೊಗದಲ್ಲಿ ರಿವೈಂಡ್ ನಗು
Team Udayavani, Jul 16, 2021, 11:36 AM IST
ನಟ ತೇಜ್ ಅಭಿನಯದ “ರಿವೈಂಡ್’ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವಾಗಲೇ, ಥಿಯೇಟರ್, ಮಲ್ಟಿಪ್ಲೆಕ್ಸ್ ಮುಚ್ಚುವ ನಿರ್ಧಾರ ಮಾಡಿತು. ಚಿತ್ರ ಥಿಯೇಟರ್ಗಳಲ್ಲಿ ನಿಧಾನವಾಗಿ ಮುನ್ನಡೆಯುತ್ತಿರುವಾಗಲೇ, ಎದುರಾದ ಲಾಕ್ಡೌನ್ ಸಹಜವಾಗಿಯೇ ಚಿತ್ರತಂಡದ ನೋವಿಗೆ ಕಾರಣವಾಗಿತ್ತು. ಒಂದೊಳ್ಳೆ ಚಿತ್ರವನ್ನು ಸರಿಯಾಗಿ ಪ್ರೇಕ್ಷಕರಿಗೆ ತಲುಪಿಸಲು ಸಾಧ್ಯವಾಗಲಿಲ್ಲ ಎಂಬ ಬೇಸರದ ನಡುವೆಯೇ, ಇದೀಗ ಚಿತ್ರತಂಡ “ರಿವೈಂಡ್’ ಚಿತ್ರವನ್ನು ಮತ್ತೂಮ್ಮೆ ಪ್ರೇಕ್ಷಕರ ಮುಂದೆ ತಂದಿದ್ದಾರೆ.
ಐಎಂಡಿಬಿಯಲ್ಲಿ 9.5 ರೇಟಿಂಗ್ ಪಡೆದುಕೊಂಡಿರುವ “ರಿವೈಂಡ್ ಶೀಘ್ರದಲ್ಲಿಯೇ ಬುಕ್ ಮೈ ಶೋ ಫ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮಿಂಗ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಂದಹಾಗೆ, ಕನ್ನಡದಲ್ಲಿ ಇದೇ ಮೊದಲ ಬಾರಿಗೆ “ಬುಕ್ ಮೈ ಶೋ’ನಲ್ಲಿ ಸ್ಟ್ರೀಮಿಂಗ್ ಆಗಿರುವ ಚಿತ್ರ ಎಂಬ ಹೆಗ್ಗಳಿಗೆ “ರಿವೈಂಡ್’ ಚಿತ್ರಕ್ಕಿದೆ.
ಈ ಬಗ್ಗೆ ಮಾತನಾಡುವ “ರಿವೈಂಡ್’ ಚಿತ್ರದ ನಟ ಕಂ ನಿರ್ದೇಶಕ ತೇಜ್, “ಥಿಯೇಟರ್ನಲ್ಲಿ ಒಂದೊಳ್ಳೆ ಸಿನಿಮಾವನ್ನು ಸರಿಯಾಗಿ ಆಡಿಯನ್ಸ್ಗೆ ತಲುಪಿಸಲಾಗಲಿಲ್ಲ ಎಂಬ ಬೇಸರವಿತ್ತು. ಸದ್ಯದ ಮಟ್ಟಿಗೆ ಮತ್ತೆ ಥಿಯೇಟರ್ಗಳು ಯಾವಾಗ ತೆರೆಯುತ್ತವೆ ಎಂಬ ಸ್ಪಷ್ಟತೆಯಿಲ್ಲ. ಹೀಗಾಗಿ ಪರ್ಯಾಯ ಮಾರ್ಗದ ಮೂಲಕ ನಮ್ಮ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಚಿತ್ರವನ್ನು ಸೌದಿ ಹಾಗೂ ಅರಬ್ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಲಿದ್ದೇವೆ’ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ