ರುಕ್ಕು 25 ನಾಟೌಟ್‌!

Team Udayavani, May 11, 2018, 7:20 AM IST

16.jpg

ಹಾಕಿದ ಹಣ ಬಂದಿಲ್ಲ,  ಜನ ಚಿತ್ರ ನೋಡೋದು ಬಿಟ್ಟಿಲ್ಲ ವಾರಕ್ಕೆ ಐದಾರು ಚಿತ್ರಗಳು ಬರುತ್ತವೆ. ಒಂದೇ ವಾರಕ್ಕೇ ಚಿತ್ರಮಂದಿರದಿಂದ ಹೋಗುತ್ತವೆ. ಹೊಸಬರ ಚಿತ್ರಗಳಂತೂ ಚಿತ್ರಮಂದಿರದಲ್ಲಿ ನಿಲ್ಲುವುದೇ ವಿರಳ. ಆ ಸಾಲಿನಲ್ಲಿ “ರುಕ್ಕು’ ಯಶಸ್ವಿ 25 ದಿನ ಪೂರೈಸಿದೆ ಎಂಬುದೇ ಈ ವಾರದ ವಿಶೇಷ. ಹೌದು, ಬಸವರಾಜ್‌ ಬಳ್ಳಾರಿ ನಿರ್ದೇಶನದ “ರುಕ್ಕು’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಇಂದಿಗೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಖುಷಿ ಹಂಚಿಕೊಳ್ಳಲೆಂದೇ ತಮ್ಮ ತಂಡದೊಂದಿಗೆ ಪತ್ರಕರ್ತರ ಮುಂದೆ ಕುಳಿತಿದ್ದರು ನಿರ್ದೇಶಕ ಬಸವರಾಜ್‌ ಬಳ್ಳಾರಿ.

ಮೊದಲು ಮಾತು ಶುರು ಮಾಡಿದ ನಿರ್ದೇಶಕರು ಹೇಳಿದ್ದಿಷ್ಟು. “ಕಷ್ಟಪಟ್ಟು ಮಾಡಿದ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ನಿರೀಕ್ಷೆಯಷ್ಟು ಗಳಿಕೆ ಆಗಿಲ್ಲ. ಚಿತ್ರಮಂದಿರದ ಬಾಡಿಗೆ ಆಗುತ್ತಿದೆ. ಹಾಗಾಗಿ ಚಿತ್ರಮಂದಿರದವರೇ, “ಚಿತ್ರದ ರಿಪೋರ್ಟ್‌ ಚೆನ್ನಾಗಿದೆ, ಇನ್ನೂ ಇರಲಿ’ ಅಂದಿದ್ದಕ್ಕೆ ಬಿಟ್ಟಿದ್ದೇವೆ. ಚುನಾವಣೆ ಹಿನ್ನೆಲೆಯಲ್ಲಿ ಜನ ಬರುತ್ತಿಲ್ಲ. ಒಳ್ಳೆಯ ಚಿತ್ರ ಅವರು ತಪ್ಪದೆ ನೋಡಬೇಕು. ಹಾಗಾಗಿ, ಇನ್ನೂ ಚಿತ್ರಮಂದಿರದಲ್ಲಿದೆ. ಚುನಾವಣೆ ಬಳಿಕವಾದರೂ ನೋಡಿ, ನಮ್ಮನ್ನು ಇನ್ನಷ್ಟು ಪ್ರೋತ್ಸಾಹಿಸಬೇಕು. ಮೂವಿಲ್ಯಾಂಡ್‌ನ‌ಲ್ಲಿ ಸಿನಿಮಾ ಇದೆ. ಉತ್ತರ ಕರ್ನಾಟಕದಲ್ಲೂ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ’ ಅಂದರು ಅವರು.

ಚಿತ್ರಕ್ಕೆ ನಿರ್ಮಾಣ ಮಾಡುವುದರ ಜೊತೆಗೆ ನಟಿಸಿರುವ ಶ್ರೇಯಸ್‌ ಅವರಿಗೆ ಒಳ್ಳೆಯ ಕಥೆಯ ಚಿತ್ರ ಮಾಡಬೇಕೆಂಬ ಆಸೆ ಇತ್ತಂತೆ. ಕೊನೆಗೆ ಅವರೇ ಒಂದು ಕಥೆ ಹಿಡಿದು ನಿರ್ದೇಶಕರ ಬಳಿ ಹೋಗಿ ಈ ಚಿತ್ರ ಮಾಡಿದ್ದಾರೆ. “ನನಗೆ ಹಾಕಿದ ಹಣ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಒಳ್ಳೆಯ ಚಿತ್ರ ಮಾಡಿರುವ ಖುಷಿ ಇದೆ. ಒಂದುಕಾಲು ಕೋಟಿ ಖರ್ಚು ಮಾಡಿದ್ದೇನೆ. ಈವರೆಗೆ 25 ಲಕ್ಷ ಬಂದಿರಬಹುದಷ್ಟೇ. ಎಲ್ಲರ ಪ್ರೋತ್ಸಾಹದಿಂದ ಈ ಚಿತ್ರ ಆಗಿದೆ. ನಮ್ಮಂತಹ ಹೊಸಬರಿಗೆ ಜನರೇ ಕೈ ಹಿಡಿಯಬೇಕು. ಈಗಾಗಲೇ ಸಿನಿಮಾ ಕುರಿತು ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಚಿತ್ರವಿನ್ನೂ ಚಿತ್ರಮಂದಿರದಲ್ಲಿದೆ. ಜನರು ನೋಡಿ, ಆಶೀರ್ವದಿಸಬೇಕು’ ಅಂದರು ಅವರು.

ಚಿತ್ರಕ್ಕೆ ಸತೀಶ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎ.ಟಿ. ರವೀಶ್‌ ಅವರು ಚಿತ್ರಕ್ಕೆ ಹಾಡುಗಳನ್ನು ಕೊಟ್ಟಿದ್ದಾರೆ. ಇವರಿಬ್ಬರಿಗೂ ಜನರ ಸ್ವೀಕರಿಸಿರುವುದು ಸಂತಸ ತಂದಿದೆಯಂತೆ. ಹೊಸಬರ ಚಿತ್ರಕ್ಕೆ ಜನ ಸ್ಪಂದಿಸಿದ್ದಾರೆ. ಚುನಾವಣೆ ಬಳಿಕ ಈ ಚಿತ್ರಕ್ಕೆ ಮತ್ತಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತೆ ಎಂಬ ಲೆಕ್ಕಾಚಾರ ಅವರದು. ಛಾಯಾಗ್ರಾಹಕ ರೇಣುಕುಮಾರ್‌ ಅವರು ಕಥೆ ಕೇಳಿದಾಗ, ಇದರಲ್ಲಿ ಒಳ್ಳೆಯ ಸಂದೇಶವಿದೆ. ಎಮೋಷನ್ಸ್‌ ಜನರಿಗೆ ಇಷ್ಟವಾಗುತ್ತೆ ಅಂತ ಹೇಳಿದ್ದರಂತೆ. ಅದೇ ಇಲ್ಲಿ ಹೆಚ್ಚು ವರ್ಕೌಟ್‌ ಆಗಿದೆ ಎಂಬುದು ರೇಣುಕುಮಾರ್‌ ಮಾತು. ಎಲ್ಲರೂ “ರುಕ್ಕು’ ಕುರಿತು ಖುಷಿ ಹಂಚಿಕೊಳ್ಳುವ ಹೊತ್ತಿಗೆ ಸಮಯ ಮೀರಿತ್ತು. ಆ ಮಾತುಕತೆಗೂ ಬ್ರೇಕ್‌ ಬಿತ್ತು.

ಟಾಪ್ ನ್ಯೂಸ್

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

Param-Bir-Singh

ಐಪಿಎಸ್‌ ಅಧಿಕಾರಿ ಪರಂಬೀರ್‌ ಸಿಂಗ್‌ ವಿರುದ್ಧ ಶಿಸ್ತಿನ ಕ್ರಮ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

akshi

ನೇತ್ರದಾನದ ಮಹತ್ವಸಾರುವ ಚಿತ್ರ :  ಡಿ.3ಕ್ಕೆ ಅಕ್ಷಿ ತೆರೆಗೆ

shivaji surathkal 2

ಡಿಸೆಂಬರ್‌ನಿಂದ ಶಿವಾಜಿ ಸುರತ್ಕಲ್‌ 2 ಶುರು

jhjhgfd

ಜಮಾಲಿಗುಡ್ಡದಲ್ಲಿ ಧನಂಜಯ್‌-ಅದಿತಿ ಪ್ರಭುದೇವ

ಅಪ್ಪು ಸ್ಮರಣೆಯೊಂದಿಗೆ ‘ಬನಾರಸ್‌’ ಪ್ರಚಾರ ಕಾರ್ಯಕ್ಕೆ ಚಾಲನೆ

ಅಪ್ಪು ಸ್ಮರಣೆಯೊಂದಿಗೆ ‘ಬನಾರಸ್‌’ ಪ್ರಚಾರ ಕಾರ್ಯಕ್ಕೆ ಚಾಲನೆ

ನನಗೆ ತೃಪ್ತಿ ಕೊಟ್ಟ ಸಿನಿಮಾವಿದು: 100 ಬಗ್ಗೆ ರಮೇಶ್‌ ವಿಶ್ವಾಸ

ನನಗೆ ತೃಪ್ತಿ ಕೊಟ್ಟ ಸಿನಿಮಾವಿದು: 100 ಬಗ್ಗೆ ರಮೇಶ್‌ ವಿಶ್ವಾಸ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಟೀಮ್‌ ಇಂಡಿಯಾದ ಓಪನರ್‌ ಕೆ.ಎಲ್‌. ರಾಹುಲ್‌ ತುಳು ಕಮೆಂಟ್‌

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಕೊಚ್ಚಿ ಏರ್‌ಪೋರ್ಟಲ್ಲಿ ಶಬರಿಮಲೆ ದೇಗುಲ ಸಹಾಯಕೇಂದ್ರ

ಕೊಚ್ಚಿ ಏರ್ ಪೋರ್ಟ್ ನಲ್ಲಿ ಶಬರಿಮಲೆ ದೇಗುಲದ ಸಹಾಯಕೇಂದ್ರ

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

ಎನ್‌ಸಿಸಿ ಮುಖಂಡ,ಸಚಿವ ನವಾಬ್‌ ಮಲಿಕ್‌ಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.