Udayavni Special

ಪ್ರೀತಿಯ “ಕಿರಣ’ದ “ಹಿತಾ’ನುಭವ 


Team Udayavani, Feb 15, 2019, 12:30 AM IST

30.jpg

ತೆರೆಮೇಲೆ ಜೋಡಿಗಳಾಗಿ ನಟಿಸಿ, ಜನಮನ ಗೆದ್ದವರು ನಿಜಜೀವನದಲ್ಲೂ ಜೋಡಿಗಳಾದ ಉದಾಹರಣೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿಗುತ್ತದೆ. ಪ್ರತಿವರ್ಷ ಇಂತಹ ಆಫ್ ಸ್ಕ್ರೀನ್‌ ಜೋಡಿಗಳ ಪಟ್ಟಿಗೆ ಒಂದಷ್ಟು ಹೆಸರುಗಳು ಸೇರ್ಪಡೆಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ಆ ಪಟ್ಟಿಗೆ ಸೇರ್ಪಡೆಯಾಗುತ್ತಿರುವ ಹೆಸರು ಕಿರಣ್‌ ಶ್ರೀನಿವಾಸ್‌ ಮತ್ತು ನಟಿ ಹಿತಾ ಚಂದ್ರಶೇಖರ್‌ ಅವರದ್ದು.  ಈಗಷ್ಟೇ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳುತ್ತಿರುವ ಹಿತಾ ಚಂದ್ರಶೇಖರ್‌ ಸದ್ಯ ಲವ್‌ಮೂಡ್‌ನ‌ಲ್ಲಿದ್ದಾರೆ, ಸದ್ಯ ಪ್ರಣಯ ಪಕ್ಷಿಗಳಾಗಿ ಹಾರಾಡುತ್ತಿರುವ ಕಿರಣ್‌-ಹಿತಾ ನಿನ್ನೆಯಷ್ಟೇ ಮುಂಬೈನಲ್ಲಿ ಪ್ರೇಮಿಗಳ ದಿನವನ್ನು ಕಲರ್‌ಫ‌ುಲ್‌ ಆಗಿ ಆಚರಿಸಿದ್ದಾರೆ ಕೂಡಾ. ಇದೇ ಸಂದರ್ಭದಲ್ಲಿ ಹಿತಾ ತಮ್ಮ ಪ್ರೇಮ್‌ ಕಹಾನಿಯನ್ನು ಸುಚಿತ್ರಾ ಜೊತೆ ಬಿಚ್ಚಿಟ್ಟಿದ್ದಾರೆ …

 “ನನ್ನ ಮನಸ್ಸಿನಲ್ಲಿರುವುದನ್ನು ನಾನು ಹೇಳಿದ್ದೇನೆ. ನೀನು ಬೇಕಾದ್ರೆ ಸ್ವಲ್ಪ ಟೈಮ್‌ ತೆಗೆದುಕೊಂಡು, ನಿನ್ನ ನಿರ್ಧಾರ ತಿಳಿಸು. ನಿನ್ನ ನಿರ್ಧಾರಕ್ಕಾಗಿ ಕಾಯುತ್ತಿರುತ್ತೇನೆ …’ 
– ಕಿರಣ್‌ ಹೀಗೆ ನೇರವಾಗಿ ಬಂದು ಹಿತಾ ಅವರಲ್ಲಿ ಹೇಳಿ, ಒಂದು ಸ್ಟೈಲ್‌ ಕೊಟ್ಟು ಹೊರಡುತ್ತಾರೆ. ಅಲ್ಲಿಂದ ಹಿತಾ ಅವರಲ್ಲಿ ಸಣ್ಣದೊಂದು ಚಡಪಡಿಕೆ. ಅದು ಪ್ರತಿಯೊಬ್ಬ ಪ್ರೇಮಿಯೊಳಗೂ ಆಗುವಂತಹ ಚಡಪಡಿಕೆ. ಮೊದಲೇ ಕಿರಣ್‌ ಬಗ್ಗೆ ಚೆನ್ನಾಗಿ ತಿಳಿದಿದ್ದ, ಚಿತ್ರೀಕರಣದ ವೇಳೆ ಜೊತೆಯಾಗಿ ಸಮಯ ಕಳೆದಿದ್ದ ಹಿತಾಗೂ ಕಿರಣ್‌ ಬಗ್ಗೆ ಒಳ್ಳೆಯ ಸ್ನೇಹವಿತ್ತು. ಒಂದಷ್ಟು ಯೋಚಿಸಿದ ಹಿತಾ, ಕಿರಣ್‌ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ಆ ಮೂಲಕ ಸ್ಯಾಂಡಲ್‌ವುಡ್‌ನ‌ಲ್ಲಿ ಹೊಸ ಲವ್‌ಸ್ಟೋರಿಯೊಂದು ಶುರುವಾದಂತಾಗಿದೆ. 

ತಮ್ಮ ಪ್ರೀತಿಯ ಬಗ್ಗೆ ಹೇಳುವ ಹಿತಾ ಚಂದ್ರಶೇಖರ್‌, “ನಾನು ಮೊದಲಿನಿಂದಲೂ ಕಿರಣ್‌ ಅವರನ್ನು ನೋಡುತ್ತ ಬಂದಿದ್ದೆ. ಅವರೊಬ್ಬ ಒಳ್ಳೆಯ ಕಲಾವಿದ ಅನ್ನೋದು ನನಗೆ ಗೊತ್ತಿತ್ತು. ಅದನ್ನು ಬಿಟ್ಟರೆ, ಅವರ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ನಮ್ಮಿಬ್ಬರಿಗೂ ಪರಿಚಯ ಕೂಡ ಇರಲಿಲ್ಲ. ಆದ್ರೆ ಒಂಥರಾ ಬಣ್ಣಗಳು ಚಿತ್ರದಲ್ಲಿ ಇಬ್ಬರೂ ಒಟ್ಟಿಗೇ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ಮತ್ತು ಕಿರಣ್‌ ಒಬ್ಬರನ್ನೊಬ್ಬರು ಮೊದಲು ನೋಡಿದ್ದು, ಒಂಥರಾ ಬಣ್ಣಗಳು ಸಿನಿಮಾದ ರೀಡಿಂಗ್‌ ಸಮಯದಲ್ಲಿ. ಆಗ ಇಬ್ಬರಿಗೂ ಪರಿಚಯವಾಯಿತು. ಅಲ್ಲಿಂದ ನಮ್ಮಿಬ್ಬರ ನಡುವೆ ಒಡನಾಟ ಬೆಳೆಯಿತು. ಅಭಿನಯದ ನಂಟು ನಮ್ಮಿಬ್ಬರನ್ನೂ ಬೆಸೆಯುವಂತೆ ಮಾಡಿತು’ ಎನ್ನುತ್ತಾರೆ. 

“ಒಂಥರಾ ಬಣ್ಣಗಳು’ ಸಿನಿಮಾದಲ್ಲಿ ಪರಿಚಯವಾದ ಕಿರಣ್‌-ಹಿತಾ ಆ ಸಿನಿಮಾ ಮುಗಿಯುವುದರೊಳಗೆ ಒಳ್ಳೆಯ ಸ್ನೇಹಿತರಾದರು. ಒಂದಷ್ಟು ಹರಟೆ, ಮಾತುಕತೆ, ಕಿಚಾಯಿಸುವುದು, ತರಲೆ-ತುಂಟಾಟಗಳು ನಡೆದಿರುವಂತೆಯೇ ಒಮ್ಮೆ ಕಿರಣ್‌ ಇದ್ದಕ್ಕಿದ್ದಂತೆ ಹಿತಾ ಮುಂದೆ ಲವ್‌ ಪ್ರಪೋಸಲ್‌ ಇಟ್ಟರಂತೆ! “ನನ್ನ ಮನಸ್ಸಿನಲ್ಲಿರುವುದನ್ನು ನಾನು ಹೇಳಿದ್ದೇನೆ. ನೀನು ಬೇಕಾದ್ರೆ ಸ್ವಲ್ಪ ಟೈಮ್‌ ತೆಗೆದುಕೊಂಡು, ನಿನ್ನ ನಿರ್ಧಾರ ತಿಳಿಸು. ನಿನ್ನ ನಿರ್ಧಾರಕ್ಕಾಗಿ ಕಾಯುತ್ತಿರುತ್ತೇನೆ’ ಎಂದು ಕಿರಣ್‌ ಹೇಳಿದರಂತೆ. 

ಇನ್ನು ಕಿರಣ್‌ ಶ್ರೀನಿವಾಸ್‌ ಅವರನ್ನು ಚಿತ್ರರಂಗದಲ್ಲಿ ಹತ್ತಿರದಿಂದ ನೋಡಿದ್ದ ಹಿತಾ ಚಂದ್ರಶೇಖರ್‌ ಕುಟುಂಬದವರಿಗೆ ಅವರ ಬಗ್ಗೆ ಉತ್ತಮ ಅಭಿಪ್ರಾಯವಿತ್ತು. ಇನ್ನು ಹಿತಾ ಚಂದ್ರಶೇಖರ್‌ ಕುಟುಂಬದ ಬಗ್ಗೆ ಕಿರಣ್‌ ಅವರ ಕುಟುಂಬಕ್ಕೂ ಗೊತ್ತಿದ್ದ ಕಾರಣ ಇಬ್ಬರ ಪ್ರೀತಿಗೂ ಎರಡೂ ಮನೆಯವರಿಂದಲೂ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. “ಮೊದಲು ಮನೆಯಲ್ಲಿ ನಮ್ಮ ಪ್ರೀತಿಯ ವಿಚಾರವನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಭಯವಿತ್ತು. ಆದ್ರೆ ಎರಡು ಕುಟುಂಬದವರಿಗೂ ವಿಷಯ ತಿಳಿಸಿದಾಗ ಅವರು ಕೂಡ ಸಂತೋಷದಿಂದ ಒಪ್ಪಿಕೊಂಡಿ¨ªಾರೆ’ ಎನ್ನುತ್ತಾರೆ ಹಿತಾ. ಎರಡು ಕುಟುಂಬದವರ ನಡುವೆ ಉತ್ತಮ ಒಡನಾಟವಿದ್ದು, ಅಲ್ಲದೆ ಮನೆಯವರು ಕೂಡ ಈ ಜೋಡಿಯ ಕಂಕಣಕ್ಕೆ ಶುಭ ಮುಹೂರ್ತ ನೋಡುತ್ತಿದ್ದಾರೆ. ಇದೇ ಮಾರ್ಚ್‌ ವೇಳೆಗೆ ಕಿರಣ್‌-ಹಿತಾ ನಿಶ್ಚಿತಾರ್ಥ ನಡೆಯಲಿದ್ದು, ಇದೇ ನವೆಂಬರ್‌ ವೇಳೆಗೆ ಕಿರಣ್‌-ಹಿತಾ ಜೋಡಿ ಹಸೆಮಣೆ ಏರಲಿದೆ. 

ಈ ಜೋಡಿಯ ಪ್ರೀತಿ ಜಗಜ್ಜಾಹೀರು ಆಗಿದ್ದು ನಟಿ ಸೋನು ಗೌಡರಿಂದ. ಸೋನು ಗೌಡ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದ ಪೋಸ್ಟ್‌ನಿಂದ ಇಬ್ಬರು ಮುಚ್ಚಿಟ್ಟಿದ್ದ ವಿಷಯ ಬಹಿರಂಗವಾಗಿದೆ. “ನಾನು ಮತ್ತು ಕಿರಣ್‌ ಪ್ರೀತಿಸುತ್ತಿರುವ ವಿಷಯ ನಮ್ಮಿಬ್ಬರ ಮನೆಯವರು ಮತ್ತು ನಮ್ಮ ತೀರಾ ಆಪ್ತ ಸ್ನೇಹಿತರಿಗಷೇ ಗೊತ್ತಿತ್ತು. ನಮ್ಮ ಮದುವೆಯ ವಿಚಾರವನ್ನು ನಿಶ್ಚಿತಾರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿಯೇ ಎರಡು ಕುಟುಂಬದವ ಸಮ್ಮುಖದಲ್ಲಿ ಎಲ್ಲರಿಗೂ ಅಧಿಕೃತವಾಗಿ ಹೇಳಬೇಕು ಎಂದುಕೊಂಡಿ¨ªೆವು. ಆದರೆ ಅದಕ್ಕೂ ಮುಂಚೆಯೇ ನನ್ನ ಮತ್ತು ಕಿರಣ್‌ ಕ್ಲೋಸ್‌ ಫ್ರೆಂಡ್‌ ಸೋನು ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದ ಪೋಸ್ಟ್‌ ಒಂದು, ನಾವಿಬ್ಬರೂ ಮದುವೆ ಆಗುತ್ತಿದ್ದೇವೆ ಎಂಬ ವಿಷಯವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಜಗಜ್ಜಾಹೀರು ಮಾಡಿತು. ಸರ್‌ಪ್ರೈಸ್‌ ಆಗಿ ಗೊತ್ತಾಗಬೇಕಾದ ವಿಷಯ ಸ್ವಲ್ಪ ಬೇಗನೆ ಗೊತ್ತಾಯಿತು. ಆದರೆ ಅದರ ಬಗ್ಗೆ ಬೇಜಾರಿಲ್ಲ’ ಎನ್ನುತ್ತಾರೆ ಹಿತಾ. 

ಇನ್ನು ಕಿರಣ್‌ – ಹಿತಾ ಜೋಡಿ ಈ ಬಾರಿ ಪ್ರೇಮಿಗಳ ದಿನವನ್ನು ಮುಂಬೈನಲ್ಲಿ ಆಚರಿಸಿದ್ದಾರೆ. ಈ ಬಗ್ಗೆ ಮಾತನಾಡುವ ಹಿತಾ, “ಇದೇ ಮೊದಲ ಬಾರಿಗೆ ನನ್ನನ್ನು ಪ್ರೀತಿಸುವ ಹುಡುಗನ ಜೊತೆ ವೆಲೆಂಟೈನ್‌ ಡೇ ಆಚರಿಸಿದ್ದೇನೆ. ಈ ವೆಲೆಂಟೈನ್‌ ಡೇ ನಮ್ಮಿಬ್ಬರ ಜೀವನದಲ್ಲಿ ಎಂದಿಗೂ ಮರೆಯಲಾರದಂಥದ್ದು. ತುಂಬಾ ಸ್ಪೆಷಲ್‌ ಆಗಿ ನಾವಿಬ್ಬರೇ ವೆಲೆಂಟೈನ್‌ ಡೇ ಸೆಲೆಬ್ರೇಷನ್‌ ಮಾಡಿದೆವು’ ಎಂದು ನಗೆಬೀರುತ್ತಾರೆ ಹಿತಾ. 
 
ನಟ ಕಿರಣ್‌ ಶ್ರೀನಿವಾಸ್‌ ಮತ್ತು ಸಿಹಿಕಹಿ ಚಂದ್ರು ಪುತ್ರಿ, ನಟಿ ಹಿತಾ ಚಂದ್ರಶೇಖರ್‌ ಇಬ್ಬರೂ ಮೂಲತಃ ಕಲಾಸಕ್ತ ಹಿನ್ನೆಲೆಯ ಕುಟುಂಬದಿಂದ ಬಂದವರು. ಕಿರಣ್‌ ಶ್ರೀನಿವಾಸ್‌ ಹಿಂದಿ ಕಿರುತೆರೆಯ ಮೂಲಕ ಬಣ್ಣ ಲೋಕಕ್ಕೆ ಕಾಲಿಟ್ಟ ನಟ. ಆನಂತರ ಹಾಗೇ ಸುಮ್ಮನೆ ಚಿತ್ರದಲ್ಲಿ ಅಭಿನಯಿಸುವ ಮೂಲಕ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾದರು. ಇನ್ನೂ ಹಿತಾ ಚಂದ್ರಶೇಖರ್‌ ಅವರದ್ದು ಮೊದಲಿನಿಂದಲೂ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದ ಕುಟುಂಬವಾದರೂ, 2016ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಡ್ಯಾನ್ಸಿಂಗ್‌ ಸ್ಟಾರ್‌’ ಸೀಸನ್‌ 3 ಕಾರ್ಯಕ್ರಮದ ಮೂಲಕ ಹಿತಾ ಕಿರುತೆರೆಗೆ ಪದಾರ್ಪಣೆ ಮಾಡಿದರು. ಬಳಿಕ “1/4 ಕೆ.ಜಿ ಪ್ರೀತಿ’ ಚಿತ್ರದ ಮೂಲಕ ನಾಯಕ ನಟಿಯಾಗಿ ಚಂದನವನಕ್ಕೂ ಪರಿಚಯವಾದರು.  

ಟಾಪ್ ನ್ಯೂಸ್

ಇಂದಿನಿಂದ ಶಿಕ್ಷಕರ ಕಪ್ಪುಪಟ್ಟಿ ಪ್ರತಿಭಟನೆ; ಶಾಲೆ, ತರಗತಿ ಬಹಿಷ್ಕಾರದ ಎಚ್ಚರಿಕೆ

ಇಂದಿನಿಂದ ಶಿಕ್ಷಕರ ಕಪ್ಪುಪಟ್ಟಿ ಪ್ರತಿಭಟನೆ; ಶಾಲೆ, ತರಗತಿ ಬಹಿಷ್ಕಾರದ ಎಚ್ಚರಿಕೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಪೋ ಕಲ್ಪಿತಂ

ಸೆನ್ಸಾರ್‌ ಪಾಸಾದ ‘ಕಪೋ ಕಲ್ಪಿತಂ’

ಡಿಜಿಟಲ್‌ ಲೋಕದ ಸುತ್ತ ‘ಗ್ರೇ ಗೇಮ್ಸ್‌’ ಶುರು

ಡಿಜಿಟಲ್‌ ಲೋಕದ ಸುತ್ತ ‘ಗ್ರೇ ಗೇಮ್ಸ್‌’ ಶುರು

dhanya ramkumar

‘ಶೋ ಪೀಸ್‌ ಆಗಲಾರೆ’: ರಾಜ್‌ ಮೊಮ್ಮಗಳು ಧನ್ಯಾ ಉತ್ತರಿಸಿದ 5 ಪ್ರಶ್ನೆಗಳು

ಸಕ್ಸಸ್‌ ಮೀಟ್‌ ಸಂಭ್ರಮ ತಂದ ಭರವಸೆ

ಸಕ್ಸಸ್‌ ಮೀಟ್‌ ಸಂಭ್ರಮ ತಂದ ಭರವಸೆ: ಸಕ್ಸಸ್‌ ರೇಟ್‌ ಹೆಚ್ಚಾಗೋ ನಿರೀಕ್ಷೆ

ಈ ವಾರ ತೆರೆ ಕಾಣಲಿದೆ ನಾಲ್ಕು ಚಿತ್ರಗಳು

ಈ ವಾರ ತೆರೆ ಕಾಣಲಿದೆ ನಾಲ್ಕು ಚಿತ್ರಗಳು

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಇಂದಿನಿಂದ ಶಿಕ್ಷಕರ ಕಪ್ಪುಪಟ್ಟಿ ಪ್ರತಿಭಟನೆ; ಶಾಲೆ, ತರಗತಿ ಬಹಿಷ್ಕಾರದ ಎಚ್ಚರಿಕೆ

ಇಂದಿನಿಂದ ಶಿಕ್ಷಕರ ಕಪ್ಪುಪಟ್ಟಿ ಪ್ರತಿಭಟನೆ; ಶಾಲೆ, ತರಗತಿ ಬಹಿಷ್ಕಾರದ ಎಚ್ಚರಿಕೆ

ಆಸ್ಟ್ರೇಲಿಯದ ವೇಗಿ ಜೇಮ್ಸ್‌ ಪ್ಯಾಟಿನ್ಸನ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ

ಆಸ್ಟ್ರೇಲಿಯದ ವೇಗಿ ಜೇಮ್ಸ್‌ ಪ್ಯಾಟಿನ್ಸನ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.