Udayavni Special

ಶೂಟಿಂಗ್‌ನತ್ತ ಸ್ಟಾರ್ಸ್

ನೋಡುವಷ್ಟು ನೋಡ್ಬುಟ್ಟು ಚಿತ್ರೀಕರಣಕ್ಕೆ ಹೊರಟೇಬಿಟ್ರು!

Team Udayavani, Sep 25, 2020, 8:04 PM IST

sUCHITRA-TDY-1

ಸಾಂದರ್ಭಿಕ ಚಿತ್ರ

ಸಿನಿಮಾ ಕ್ಷೇತ್ರದಲ್ಲಿ ಸ್ಟಾರ್ ಎಂಟ್ರಿಯಾದರೆ ಅದರ ಖದರ್ರೇ ಬೇರೆ. ಈಗ ಸ್ಟಾರ್ ಎಂಟ್ರಿಯಾಗಿದೆ. ಒಬ್ಬೊಬ್ಬರೇ ಅಖಾಡಕ್ಕೆ ಇಳಿಯುತ್ತಿದ್ದಾರೆ. ಅಷ್ಟಕ್ಕೂಯಾವ ಅಖಾಡ ಎಂದು ನೀವು ಕೇಳಬಹುದು. ಕೋವಿಡ್ ಲಾಕ್‌ಡೌನ್‌ನಿಂದ ಸ್ಥಗಿತವಾಗಿದ್ದ ಚಿತ್ರೀಕರಣ ಈಗ ಮತ್ತೆ ಆರಂಭವಾಗಿದೆ. ಆದರೆ, ಆರಂಭದಲ್ಲಿ ಚಿತ್ರೀಕರಣಕ್ಕೆ ಹೊರಟಿದ್ದು ಮಾತ್ರ ಹೊಸಬರು. ಆದರೆ, ಈಗ ಸ್ಟಾರ್ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ. ನೋಡುವಷ್ಟು ನೋಡಿ ಬಿಟ್ಟು ಸೆಟ್‌ಗೆ ಎಂಟ್ರಿಕೊಡುತ್ತಿದ್ದಾರೆ. ಬಹುತೇಕ ಎಲ್ಲಾ ಸ್ಟಾರ್‌ಗಳು ತಮ್ಮ ಸಿನಿಮಾಗಳ ಚಿತ್ರೀಕರಣದತ್ತ ಮುಖಮಾಡುತ್ತಿದ್ದಾರೆ…

ಕೋವಿಡ್ ಲಾಕ್‌ ಡೌನ್‌ ನಿಯಮಗಳು ಸಡಿಲವಾಗುತ್ತಿದ್ದಂತೆ, ನಿಧಾನವಾಗಿ ಚಿತ್ರತಂಡಗಳು ಚಿತ್ರೀಕರಣದತ್ತ ಮುಖ ಮಾಡುತ್ತಿವೆ. ಅದರಲ್ಲೂ ಅರ್ಧಕ್ಕೆ ಶೂಟಿಂಗ್‌ ನಿಲ್ಲಿಸಿದ್ದ ಬಹುತೇಕ ಹೊಸಬರ ಚಿತ್ರತಂಡಗಳು ಆರ್ಥಿಕ ಹೊರೆ ಅನುಭವಿಸುತ್ತಿದ್ದು, ಆದಷ್ಟು ಬೇಗ ಚಿತ್ರೀಕರಣ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಎದುರಿಸುತ್ತಿವೆ. ಹೀಗಾಗಿ ಅರ್ಧಕ್ಕೆ ನಿಂತ ಚಿತ್ರೀಕರಣ ಎಷ್ಟು ಬೇಗ ಪೂರ್ಣವಾಗುತ್ತದೆಯೋ, ಅಷ್ಟು ಸೇಫ್ ಎನ್ನುವ ಲೆಕ್ಕಚಾರ ಹೊಸಬರದ್ದು.

ಇನ್ನು ಲಾಕ್‌ಡೌನ್‌ ಸಡಿಲವಾಗುತ್ತಿದ್ದಂತೆ ಸ್ಟಾರ್‌ ನಟರ ಪೈಕಿ ಮೊದಲು ಶೂಟಿಂಗ್‌ಗೆ ಇಳಿದವರು ನಟ ಸುದೀಪ್‌. ಭರ್ಜರಿಯಾಗಿ ನಡೆಯುತ್ತಿದ್ದ ಸುದೀಪ್‌ ಅವರ ಬಹುನಿರೀಕ್ಷಿತ “ಫ್ಯಾಂಟಮ್‌’ ಚಿತ್ರ ಕೋವಿಡ್ ದಿಂದ ಅರ್ಧಕ್ಕೆ ಬ್ರೇಕ್‌ ತೆಗೆದುಕೊಂಡಿತ್ತು. ಲಾಕ್‌ಡೌನ್‌ ವೇಳೆಯಲ್ಲೂ “ಫ್ಯಾಂಟಮ್‌’ನ ಪ್ಲಾನಿಂಗ್‌, ತೆರೆಮರೆಯ ಕೆಲಸಗಳಲ್ಲಿ ನಿರತವಾಗಿದ್ದ ಸುದೀಪ್‌ ಆ್ಯಂಡ್‌ಟೀಮ್‌, ಲಾಕ್‌ ಡೌನ್‌ ಸಡಿಲವಾಗುತ್ತಿದ್ದಂತೆ ಶೂಟಿಂಗ್‌ಗಾಗಿ ಹೈದರಾಬಾದ್‌ನತ್ತ ಮುಖ ಮಾಡಿತ್ತು. ಆನಂತರ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌, ದುನಿಯಾ ವಿಜಯ್‌, ಹೀಗೆ ಒಬ್ಬೊಬ್ಬರಾಗಿ ಸ್ಟಾರ್‌ ನಟರು ಚಿತ್ರೀಕರಣದತ್ತ ಮುಖ ಮಾಡುತ್ತಿದ್ದಾರೆ.

ಯುವರತ್ನ ಶೂಟಿಂಗ್‌ನಲ್ಲಿ ಪುನೀತ್‌ ರಾಜಕುಮಾರ್‌ : ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ’ ಚಿತ್ರದ ಚಿತ್ರೀಕರಣ ಲಾಕ್‌ಡೌನ್‌ ಬಳಿಕ ಶರವೇಗ ಪಡೆದುಕೊಂಡಿದೆ. ಲಾಕ್‌ಡೌನ್‌ಗೂ ಮೊದಲು ಚಿತ್ರದ ಬಹುತೇಕ ಟಾಕಿ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ್ದ “ಯುವರತ್ನ’ ಚಿತ್ರತಂಡ, ಈಗ ಬಾಕಿ ಉಳಿಸಿಕೊಂಡಿರುವ ಚಿತ್ರದ ಹಾಡಿನ ಭಾಗಗಳ ಚಿತ್ರೀಕರಣದಲ್ಲಿ ನಿರತವಾಗಿದೆ. ಇತ್ತೀಚೆಗಷ್ಟೇ “ಯುವರತ್ನ’ ಚಿತ್ರದ ಟೈಟಲ್‌ ಸಾಂಗ್ ಅನ್ನು ಚಿತ್ರತಂಡ, ಅದ್ಧೂರಿಯಾಗಿ ಚಿತ್ರೀಕರಿಸಿ ಕೊಂಡಿದೆ.

ಭರದಿಂದ ಸಾಗಿದ ಶ್ರೀಮುರಳಿ ಮದಗಜ : ನಟ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ “ಮದಗಜ’ ಚಿತ್ರದ ಆರಂಭದ ಚಿತ್ರೀಕರಣವನ್ನು ಚಿತ್ರತಂಡಕಾಶಿ ಸೇರಿದಂತೆ ಉತ್ತರ ಭಾರತದ ಹಲವುಕಡೆಗಳಲ್ಲಿ ನಡೆಸಿದೆ. ಅದಾದ ಬಳಿಕ ಲಾಕ್‌ಡೌನ್‌ನಿಂದಾಗಿ ಚಿತ್ರೀಕರಣದಿಂದ ಬ್ರೇಕ್‌ ತೆಗೆದುಕೊಂಡಿದ್ದ ಚಿತ್ರತಂಡ, ಈಗ ಮತ್ತೆ “ಮದಗಜ’ನ ಚಿತ್ರೀಕರಣ ಶುರು ಮಾಡಿದೆ. ಸದ್ಯ ಮೈಸೂರು ಸುತ್ತಮುತ್ತ “ಮದಗಜ’ ಚಿತ್ರೀಕರಣ ನಡೆಯುತ್ತಿದ್ದು, ಶ್ರೀಮುರಳಿ, ನಟಿ ಆಶಿಕಾ ರಂಗನಾಥ್‌ ಸೇರಿದಂತೆ ಅನೇಕಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಭಜರಂಗಿ-2 ನತ್ತ ಶಿವಣ್ಣ : ನಟ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅಭಿನಯದ ಮುಂಬರುವ ಚಿತ್ರ “ಭಜರಂಗಿ-2′ ಚಿತ್ರೀಕರಣ ಕೂಡ ಕೋವಿಡ್ ಕಾರಣದಿಂದ ಅರ್ಧಕ್ಕೆ ನಿಂತುಕೊಂಡಿತ್ತು. ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆ ಮಾಡಿದ್ದ ಚಿತ್ರತಂಡ, ಚಿತ್ರದ ಬಾಕಿಯಿರುವ ಹಾಡುಗಳು ಮತ್ತುಕೆಲ ದೃಶ್ಯಗಳ ಚಿತ್ರೀಕರಣಕ್ಕೆ ಮುಂದಾಗಿದೆ

 ಪೊಗರು ಸೆಟ್‌ಗೆ ಧ್ರುವ : ನಟ ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರದ ಬಾಕಿಯಿರುವ ದೃಶ್ಯಗಳ ಚಿತ್ರೀಕರಣ ಕೂಡ ಚಿತ್ರತಂಡ ಮತ್ತೆ ಶುರು ಮಾಡಿದೆ. ಈಗಾಗಲೇ “ಪೊಗರು’ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿ ಚಿತ್ರದ ಪ್ರಮೋಶನ್‌ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಈಗ ಬಾಕಿಯಿರುವ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿ ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುÊ ಯೋಚನೆಯಲ್ಲಿದೆ.

ಶೂಟಿಂಗ್‌ನಲ್ಲಿ ಬ್ಯುಸಿಯಾದ ಉಪ್ಪಿ  : ನಟ ಕಂ ನಿರ್ದೇಶಕ ರಿಯಲ್‌ ಸ್ಟಾರ್‌ ಉಪೇಂದ್ರಕೂಡ ಸದ್ಯ ಒಂದರ ಹಿಂದೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಉಪೇಂದ್ರ ಅಭಿನಯದ “ತ್ರಿಶೂಲ’ ಮತ್ತು “ಕಬj’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಉಪ್ಪಿ ಈ ಎರಡೂ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೆಜಿಎಫ್-2ನಲ್ಲಿ ರಾಕಿಂಗ್‌ ಸ್ಟಾರ್‌ಯಶ್‌ : ನಟ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ “ಕೆಜಿಎಫ್-2′ ಚಿತ್ರದ ಚಿತ್ರೀಕರಣ ಕೂಡಕೊರೊನಾದಿಂದ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಲಾಕ್‌ಡೌನ್‌ ಬಳಿಕ ಮತ್ತೆ “ಕೆಜಿಎಫ್-2′ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿರುವ ಚಿತ್ರತಂಡ, ಭರದಿಂದ ಚಿತ್ರದ ಬಾಕಿಯಿರುವ ಚಿತ್ರೀಕರಣ ನಡೆಸುತ್ತಿದೆ.

ಉಳಿದಂತೆ ನಟ ಕಂ ನಿರ್ದೇಶಕ ರಕ್ಷಿತ್‌ ಶೆಟ್ಟಿ “ಚಾರ್ಲಿ’ ಚಿತ್ರದಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೂಬ್ಬ ನಟ ಕಂ ನಿರ್ದೇಶಕ ರಿಷಭ್‌ ಶೆಟ್ಟಿ ಸದ್ಯ “ಹರಿಕಥೆ ಅಲ್ಲಾ ಗಿರಿಕಥೆ’ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗುಜರಾತ್: 17 ಎಕರೆ ವಿಸ್ತಾರವುಳ್ಳ “ಆರೋಗ್ಯ ವನ” ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಗುಜರಾತ್: 17 ಎಕರೆ ವಿಸ್ತಾರವುಳ್ಳ “ಆರೋಗ್ಯ ವನ” ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 36 ಮಂದಿ ಸಾಧಕರು, 4 ಸಂಸ್ಥೆಗಳಿಗೆ ಪ್ರಶಸ್ತಿ

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 36 ಮಂದಿ ಸಾಧಕರು, 4 ಸಂಸ್ಥೆಗಳಿಗೆ ಪ್ರಶಸ್ತಿ

ಭಾರತ:ಕೋವಿಡ್19 ಪ್ರಕರಣ 80 ಲಕ್ಷಕ್ಕೆ ಏರಿಕೆ, ಸಾವಿನ ಸಂಖ್ಯೆ 1.2ಲಕ್ಷ:ಶೇ.90ರಷ್ಟು ಚೇತರಿಕೆ

ಭಾರತ:ಕೋವಿಡ್19 ಪ್ರಕರಣ 80 ಲಕ್ಷಕ್ಕೆ ಏರಿಕೆ, ಸಾವಿನ ಸಂಖ್ಯೆ 1.2ಲಕ್ಷ:ಶೇ.90ರಷ್ಟು ಚೇತರಿಕೆ

ಕುಲ್ಗಾಂ: ಮೂವರು ಬಿಜೆಪಿ ಮುಖಂಡರ ಹತ್ಯೆ ಹಿಂದೆ ಲಷ್ಕರ್ ಎ ತೊಯ್ಬಾ ಸಂಘಟನೆ ಕೈವಾಡ: IGP

ಕುಲ್ಗಾಂ: ಮೂವರು ಬಿಜೆಪಿ ಮುಖಂಡರ ಹತ್ಯೆ ಹಿಂದೆ ಲಷ್ಕರ್ ಎ ತೊಯ್ಬಾ ಸಂಘಟನೆ ಕೈವಾಡ: IGP

ಕಾಪು: ಕಸದ ಜೊತೆಗೆ ಸಿಕ್ಕದ ಚಿನ್ನವನ್ನು ಮರಳಿಸಿ, ಪ್ರಾಮಾಣಿತೆ ಮೆರೆದ ಪೌರಕಾರ್ಮಿಕರು

ಕಾಪು: ಕಸದ ಜೊತೆಗೆ ಸಿಕ್ಕಿದ ಚಿನ್ನವನ್ನು ಮರಳಿಸಿ, ಪ್ರಾಮಾಣಿತೆ ಮೆರೆದ ಪೌರಕಾರ್ಮಿಕರು

ಮದಲೂರು ಕೆರೆ ತುಂಬಿಸಿ ಆರು ತಿಂಗಳೊಳಗೆ ಉದ್ಘಾಟನೆ ಮಾಡುತ್ತೇನೆ: ಬಿ ಎಸ್ ಯಡಿಯೂರಪ್ಪ

ಆರು ತಿಂಗಳೊಳಗೆ ಮದಲೂರು ಕೆರೆ ತುಂಬಿಸಿ ನಾನೇ ಉದ್ಘಾಟನೆ ಮಾಡುತ್ತೇನೆ: ಬಿ ಎಸ್ ಯಡಿಯೂರಪ್ಪ

ಈತ ಸಮಕಾಲೀನ ಕ್ರಿಕೆಟಿನ ಅತ್ಯಂತ ಪ್ರತಿಭಾನ್ವಿತ ಆಟಗಾರ: ಯುವ ಆಟಗಾರನ ಮೆಚ್ಚಿದ ಧೋನಿ

ಈತ ಸಮಕಾಲೀನ ಕ್ರಿಕೆಟಿನ ಅತ್ಯಂತ ಪ್ರತಿಭಾನ್ವಿತ ಆಟಗಾರ: ಯುವ ಆಟಗಾರನ ಮೆಚ್ಚಿದ ಧೋನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SUCHITRA-TDY-10

ಎಸ್‌.ನಾರಾಯಣ್‌ ಪುತ್ರ ಈಗ ನಿರ್ದೇಶಕ : ನವಮಿ ಮೂಲಕ ಎಂಟ್ರಿ

ನಿರ್ಮಾಣದತ್ತ ವಸಿಷ್ಠ ಸಿಂಹ

ನಿರ್ಮಾಣದತ್ತ ವಸಿಷ್ಠ ಸಿಂಹ

ರೀ-ರಿಲೀಸ್‌ ಆಗ್ತಿದೆ ರಂಗಿತರಂಗ, ಜಂಟಲ್‌ಮೆನ್‌

ರೀ-ರಿಲೀಸ್‌ ಆಗ್ತಿದೆ ರಂಗಿತರಂಗ, ಜಂಟಲ್‌ಮೆನ್‌

ಒಂದು ಅತ್ಯುತ್ತಮ ಸಿನಿಮಾ!

ಒಂದು ಅತ್ಯುತ್ತಮ ಸಿನಿಮಾ!

suchitra-tdy-6

ದಿಗಂತ್‌ ಖಾತೆಯಲ್ಲಿ ಹಣವಿಲ್ಲ…

MUST WATCH

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

ಹೊಸ ಸೇರ್ಪಡೆ

ಗುಜರಾತ್: 17 ಎಕರೆ ವಿಸ್ತಾರವುಳ್ಳ “ಆರೋಗ್ಯ ವನ” ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಗುಜರಾತ್: 17 ಎಕರೆ ವಿಸ್ತಾರವುಳ್ಳ “ಆರೋಗ್ಯ ವನ” ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಕುಸಿಯುತ್ತದೆ ದ್ವಾರಸಮುದ್ರ ಕೆರೆ ಏರಿ

ಕುಸಿಯುತ್ತದೆ ದ್ವಾರಸಮುದ್ರ ಕೆರೆ ಏರಿ

ಮಹಾರಾಷ್ಟ್ರದ ಗಡಿವರೆಗೆ ಕನ್ನಡ ಪಾದಯಾತ್ರೆ

ಮಹಾರಾಷ್ಟ್ರದ ಗಡಿವರೆಗೆ ಕನ್ನಡ ಪಾದಯಾತ್ರೆ

mandya-tdy-1

ವಲಸಿಗರ ಕೈಹಿಡಿದ ನರೇಗಾ

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 36 ಮಂದಿ ಸಾಧಕರು, 4 ಸಂಸ್ಥೆಗಳಿಗೆ ಪ್ರಶಸ್ತಿ

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 36 ಮಂದಿ ಸಾಧಕರು, 4 ಸಂಸ್ಥೆಗಳಿಗೆ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.