ಡಿಸೆಂಬರ್ ಮೊದಲ ವಾರ ಸಂಜು ಬಾಬಾ ಎಂಟ್ರಿ
ಕೊನೆಯ ಹಂತದ ಚಿತ್ರೀಕರಣದತ್ತ ಕೆಜಿಎಫ್-2
Team Udayavani, Nov 27, 2020, 1:47 PM IST
“ಕೆಜಿಎಫ್-2′ ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅಭಿನಯಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರದಲ್ಲಿ ಒಂದಷ್ಟು ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಂಜು ಬಾಬಾ, ಬಳಿಕ ಅನಾರೋಗ್ಯದ ಕಾರಣದಿಂದ ಕೆಲಕಾಲ ಶೂಟಿಂಗ್‌ನಿಂದ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಸಂಜಯ್ ದತ್ ಆರೋಗ್ಯ ಕೊಂಚ ಮಟ್ಟಿಗೆ ಸುಧಾರಿಸಿರುವುದರಿಂದ, “ಕೆಜಿಎಫ್-2′ ಚಿತ್ರದಲ್ಲಿ ಬಾಕಿಯಿರುವ ತಮ್ಮ ಭಾಗದ ಚಿತ್ರೀಕರಣಕ್ಕೆ ಸಂಜಯ್ ದತ್ ಮತ್ತೆ ಬರುತ್ತಿದ್ದಾರೆ
ಎನ್ನಲಾಗಿದೆ. ಇದೇ ಡಿ. 6 ರಿಂದ “ಕೆಜಿಎಫ್-2′ ಚಿತ್ರದಲ್ಲಿ ಸಂಜಯ್ ದತ್ ಅವರ ಭಾಗವನ್ನು ಚಿತ್ರೀಕರಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದ್ದು, ಹೈದರಾಬಾದ್‌ನಲ್ಲಿ ಈ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ. ಈ ನಡುವೆಯೇ “ಕೆಜಿಎಫ್’ ಚಿತ್ರತಂಡ ಬಾಕಿ ಉಳಿದ ದೃಶ್ಯಗಳನ್ನು ಮಂಗಳೂರು, ಮಲ್ಪೆ ಸುತ್ತಮುತ್ತ ಸೆರೆಹಿಡಿದಿದೆ. ಇನ್ನು ಬಾಲಿವುಡ್ ನಟಿ ರವೀನಾ ಟಂಡನ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದು, ಈಗಾಗಲೇ ಅವರ ಫಸ್ಟ್‌ಲುಕ್ ಬಿಡುಗಡೆಯಾಗಿದೆ.
ಇದನ್ನೂ ಓದಿ :ತೆರೆಮೇಲೆ ಬರಲಿದ ಭೂಗತ ದೊರೆ ಮುತ್ತಪ್ಪ ರೈ ರಿಯಲ್ ಲೈಫ್ ಕಹಾನಿ.
1999ರಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ಉಪೇಂದ್ರ ಚಿತ್ರದಲ್ಲಿ ರವೀನಾ ಟಂಡನ್ ಅಭಿನಯಿಸಿದ್ದರು. ಇದೇ ರವೀನಾ ಅವರ ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾವಾಗಿದೆ. ಅದಾದ ಬಳಿಕ ಸುಮಾರು 20 ವರ್ಷಗಳ ನಂತರ ರವೀನಾ ಟಂಡನ್ ಮತ್ತೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. “ಕೆಜಿಎಫ್-1′ ಚಿತ್ರವನ್ನು ಬಾಲಿವುಡ್‌ನಲ್ಲಿ ರವೀನಾ ಟಂಡನ್ ಪತಿ ಅನಿಲ್ ತಡಾನಿ ವಿತರಣೆ ಮಾಡಿದ್ದರು. ಇನ್ನು ಸ್ವತಃ ರವೀನಾಕೂಡ ಆ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444