ಹಳ್ಳಿ ಸುತ್ತಲಿರುವ ಹೊಸಬರು

Team Udayavani, Mar 8, 2019, 12:30 AM IST

ಸಾಮಾನ್ಯವಾಗಿ ಹಿರಿಯರನ್ನು, ಪ್ರತಿಷ್ಠಿತ ವ್ಯಕ್ತಿಗಳನ್ನು ಗೌರವ ಸೂಚಕವಾಗಿ “ಸನ್ಮಾನ್ಯ ‘ಎಂಬ ಪದದಿಂದ ಸಂಬೋಧಿಸುವುದನ್ನು ಕೇಳಿದ್ದೇವೆ. ಕೆಲವೊಮ್ಮೆ ಇದೇ “ಸನ್ಮಾನ್ಯ’ ಎಂಬ ಪದ ಹಲವರ ಕಾಲೆಳೆಯಲೂ ಬಳಕೆಯಾಗುವು­ದುಂಟು. ಈಗೇಕೆ “ಸನ್ಮಾನ್ಯ’ನ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಕನ್ನಡದಲ್ಲಿ “ಸನ್ಮಾನ್ಯ’ ಎಂಬ ಅಪ್ಪಟ ಕನ್ನಡ ಶೀರ್ಷಿಕೆಯನ್ನು ಇಟ್ಟುಕೊಂಡ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿದೆ. 

ನಟ ಪ್ರಜ್ವಲ್‌ ದೇವರಾಜ್‌ “ಸನ್ಮಾನ್ಯ’ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಹಿಂದೆ “ಸ್ಟೈಲ್‌ ರಾಜ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ಹರೀಶ್‌ “ಸನ್ಮಾನ್ಯ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದೇ ವೇಳೆ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ನಿರ್ದೇಶಕ ಹರೀಶ್‌, “ಇದೊಂದು ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದೆ. ಹಳ್ಳಿಯಲ್ಲಿ ಪ್ರತಿದಿನ ನಡೆಯುವ ಸಾಮಾನ್ಯ ಘಟನೆಗಳ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ. ಹಳ್ಳಿಯಲ್ಲಿ ಯಾವಾಗಲೂ ಕಿರಿಕ್‌ ಮಾಡಿಕೊಂಡಿರುವ ಒರಟ ಹುಡುಗನೊಬ್ಬನ ಕಥೆ ಚಿತ್ರದಲ್ಲಿದೆ. ಅವನು ಎದುರಿಗೆ ಬಂದರೆ ಎಲ್ಲರೂ “ಸನ್ಮಾನ್ಯ’ ಎಂದು ಗೌರವದಿಂದ ಮಾತನಾಡಿಸುತ್ತಾರೆ. ಅವನು ಹೋದರೆ, ಅವನ ಹಿಂದೆ ಅವನಿಗೆ ಹಿಡಿಶಾಪ ಹಾಕುತ್ತಾರೆ. ಇಡೀ ಚಿತ್ರವನ್ನು ಕಾಮಿಡಿ, ಆ್ಯಕ್ಷನ್‌ ಶೈಲಿಯಲ್ಲಿ ತೆರೆಮೇಲೆ ತರುತ್ತಿದ್ದೇವೆ. ಜೊತೆಗೆ ಕಮರ್ಷಿಯಲ್‌ ಚಿತ್ರದಲ್ಲಿ ಇರಬೇಕಾದ ಎಲ್ಲಾ ಅಂಶಗಳೂ ಚಿತ್ರದಲ್ಲಿ ಇರಲಿವೆ’ ಎಂದರು. 

ಈ ಚಿತ್ರದ ಮೂಲಕ ನವನಟ ಉತ್ಸವ್‌ ನಾಯಕ ನಟರಾಗಿ ಪರಿಚಯವಾಗುತ್ತಿದ್ದಾರೆ. ಉಳಿದಂತೆ ಬುಲೆಟ್‌ ಪ್ರಕಾಶ್‌, ಶೋಭರಾಜ್‌, ಹರಿ, ಅಚ್ಯುತ ಕುಮಾರ್‌, ತುಳಸಿ ಶಿವಮಣಿ, ಅಮಿತ್‌, ಸಂಜು ಬಸಯ್ಯ, ಮಾಸ್ಟರ್‌ ಹೇಮಂತ್‌, ಉಮೇಶ್‌ ಪುಂಗ, ಗಡ್ಡಪ್ಪ ಮೊದಲಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಚಿತ್ರದ ನಾಯಕಿಯ ಹುಡುಕಾಟದಲ್ಲಿರುವ ಚಿತ್ರತಂಡ, ಇದೇ ತಿಂಗಳಾಂತ್ಯಕ್ಕೆ “ಸನ್ಮಾನ್ಯ’ನ ಶೂಟಿಂಗ್‌ ಅರಂಭಿಸಲು ಪ್ಲಾನ್‌ ಮಾಡಿಕೊಂಡಿದೆ. 

“ಸನ್ಮಾನ್ಯ’ ಚಿತ್ರಕ್ಕೆ ಎಸ್‌.ಎ ಚಂದ್ರಶೇಖರ್‌, ಜ್ಞಾನೇಂದ್ರ ಕುಮಾರ್‌, ದಯಾನಂದ್‌ ಮತ್ತು ಎಂ. ನಾಗರಾಜ್‌ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಕುಣಿಗಲ್‌, ಹುಲಿಯೂರು ದುರ್ಗ, ಟಿ. ನರಸೀಪುರ, ಮಡಿಕೇರಿ, ಮಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಎ.ಟಿ ರವೀಶ್‌, ಸುರೇಶ್‌ ಚಂದ್‌, ಶ್ರೀಧರ್‌ ಕಶ್ಯಪ್‌, ಸನ್ನಿ ಮಾಧವನ್‌ ಚಿತ್ರದ ತಲಾ ಒಂದೊಂದು ಹಾಡನ್ನು ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಎಂ.ಬಿ ಅಳ್ಳಿಕಟ್ಟಿ ಛಾಯಾಗ್ರಹಣವಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ....' -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌...

  • ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ....

  • ರಮೇಶ್‌ ಅರವಿಂದ್‌ ನಾಯಕಾಗಿರುವ "ಶಿವಾಜಿ ಸುರತ್ಕಲ್‌' ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್‌ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ...

  • ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ "ಶಿವ' ಎನ್ನುವ ಚಿತ್ರವೂ...

  • ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು...

ಹೊಸ ಸೇರ್ಪಡೆ