ಕನ್ನಡ ಶಾಲೆ ಉಳಿಸಿ

Team Udayavani, Aug 24, 2018, 6:00 AM IST

ರಿಷಭ್‌ ಶೆಟ್ಟಿ ನಿರ್ದೇಶನದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು -ಕೊಡುಗೆ ರಾಮಣ್ಣ ರೈ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಹಿಟ್‌ ಆಗಿದ್ದು, ಅದೇ ಖುಷಿಯಲ್ಲಿ ಚಿತ್ರತಂಡ ತೇಲಾಡುತ್ತಿದೆ.

ಜೊತೆಗೆ ಬಿಡುಗಡೆಯಾಗುತ್ತಿರುವ ಟೆನ್ಶನ್‌. ಸ್ವಲ್ಪ ಖುಷಿ, ಸ್ವಲ್ಪ ಟೆನ್ಶನ್‌ನೊಂದಿಗೆ ಚಿತ್ರತಂಡದವರು ಮಾಧ್ಯಮದವರಿಗೆ ಮುಖಾಮುಖೀಯಾಯಿತು.

ಅಂದು ಅನಂತ್‌ ನಾಗ್‌, ಪ್ರಮೋದ್‌ ಶೆಟ್ಟಿ, ನಿರ್ದೇಶಕ ರಿಷಭ್‌ ಶೆಟ್ಟಿ, ಸಂಭಾಷಣೆ ಬರೆದಿರುವ ರಾಜ್‌ ಬಿ ಶೆಟ್ಟಿ, ಸಂಗೀತ ಸಂಯೋಜಿಸಿರುವ ವಾಸುಕಿ ವೈಭವ್‌ ಮುಂತಾದವರು ಚಿತ್ರದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅನಂತ್‌ ನಾಗ್‌ ಅವರು ಮಾತನಾಡಿ, “ಈ ಚಿತ್ರದಲ್ಲಿ ಕನ್ನಡದ ಮೇಲಿನ ಪ್ರೀತಿ, ಕಳಕಳಿ ಮತ್ತು ಅಭಿಮಾನ ಇದೆ. ಈ ಚಿತ್ರವು ಗಂಭೀರವಾದ ವಿಷಯವೊಂದನ್ನು ಚರ್ಚಿಸುತ್ತದೆ. ಅದರ ಜೊತೆಗೆ ಹಾಸ್ಯಮಯ ಸನ್ನಿವೇಶಗಳು ಈ ಚಿತ್ರದಲ್ಲಿವೆ. ರಿಷಭ್‌ ಸಾಕಷ್ಟು ಪರಿಶ್ರಮ ಹಾಕಿ ಈ ಚಿತ್ರವನ್ನು ಮಾಡಿದ್ದಾರೆ. ಇನ್ನು ಈ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ’ಎಂದು ಅನಂತ್‌ ನಾಗ್‌ ಹೇಳಿದರು.

ಕೊಡಗಿನಲ್ಲಿ ಪ್ರವಾಹವಾಗುತ್ತಿರುವ ಈ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವುದು ಮನಸ್ಸಿಗೆ ಕಷ್ಟವಾಗುತ್ತಿದ್ದರೂ,
ಬಿಡುಗಡೆ ಮಾಡುವ ಅನಿವಾರ್ಯತೆ ಇದೆ ಎಂದರು. ಅದರ ಜೊತೆಗೆ ನಿರಾಶ್ರಿತರಿಗೆ ಸಾಧ್ಯ ವಾದಷ್ಟು ಸಹಾಯ
ಮಾಡುವುದಾಗಿಯೂ ಹೇಳಿಕೊಂಡರು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮುಂತಾದ ಕಡೆ 85ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ.

ಈ ಚಿತ್ರದ ಹಿನ್ನೆಲೆ ಮತ್ತು ಪರಿಸರ ವಿಭಿನ್ನವಾಗಿದೆ’ ಎಂದು ಹೇಳಿಕೊಂಡರು. ವಾಸುಕಿ ವೈಭವ್‌ಗೆ ತಾನು ಸಂಯೋಜಿಸಿದ ಹಾಡುಗಳು ಯಶಸ್ವಿಯಾಗಿರುವುದರ ಬಗ್ಗೆ ಬಹಳ ಖುಷಿ ಇದೆ. ಇನ್ನು ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡುವ ಅವರು, ಕ್ಲೈಮ್ಯಾಕ್ಸ್‌ ಬಗ್ಗೆ ಥ್ರಿಲ್‌ ಆಗಿದ್ದಾರೆ. ಇನ್ನು ರಾಜ್‌ ಬಿ. ಶೆಟ್ಟಿ ಮಾತನಾಡಿ ಕನ್ನಡ ಭಾಷೆ ಯಾಕೆ ಮುಖ್ಯ ಎಂಬುದನ್ನು ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

 • ಕನ್ನಡದಲ್ಲಿ ತಾಯಿ-ಮಗಳ ಸಂಬಂಧ ಕುರಿತು ಅನೇಕ ಚಿತ್ರಗಳು ಬಂದಿವೆ. ಆ ಸಾಲಿಗೆ "ಡಾಟರ್‌ ಆಫ್ ಪಾರ್ವತಮ್ಮ' ಹೊಸ ಸೇರ್ಪಡೆ. ಹಾಗಂತ, ಇದು ರೆಗ್ಯುಲರ್‌ ಪ್ಯಾಟ್ರನ್‌...

 • ಖ್ಯಾತ ಸಾಹಿತಿ ಟಿ.ಪಿ ಕೈಲಾಸಂ ಅವರ "ಟೊಳ್ಳು-ಗಟ್ಟಿ' ನಾಟಕವನ್ನು ಅನೇಕರು ನೋಡಿರಬಹುದು, ಓದಿರಬಹುದು. ಟಿ.ಪಿ ಕೈಲಾಸಂ ಅವರ ಜನಪ್ರಿಯ ಕೃತಿಗಳಲ್ಲಿ ಒಂದಾಗಿರುವ "ಟೊಳ್ಳು-ಗಟ್ಟಿ'...

 • ಹೀರೋ ಆಗಬೇಕೆಂದು ಬಂದವರು ವಿಲನ್‌ ಆಗುತ್ತಾರೆ, ಸಂಗೀತ ನಿರ್ದೇಶಕನಾಗಬೇಕೆಂದು ಕನಸು ಕಂಡವರು ಹೀರೋ ಆಗುತ್ತಾರೆ. ಈಗ ವಿಚಾರ ಯಾಕೆ ಅಂತೀರಾ, ಅದಕ್ಕೆ ಕಾರಣ "ಹಫ್ತಾ'...

 • ಚಂದನವನದಲ್ಲಿ ಕಳೆದ ಕೆಲ ದಿನಗಳಿಂದ ತನ್ನ ಹಾಡುಗಳು ಮತ್ತು ಟ್ರೇಲರ್‌ ಮೂಲಕ ಸಾಕಷ್ಟು ಸದ್ದು ಮಾಡುತ್ತಿರುವ ಹೊಸ ಪ್ರತಿಭೆಗಳ "ರತ್ನಮಂಜರಿ' ಚಿತ್ರ ತೆರೆಗೆ ಬರೋದಕ್ಕೆ...

 • ಚಿತ್ರರಂಗವನ್ನು ಗಮನಿಸಿದರೆ, ನಾಯಕಿ ಪ್ರಧಾನ ಚಿತ್ರಗಳ ಸಂಖ್ಯೆ ಕಡಿಮೆ. ನಾಯಕಿ ಪ್ರಧಾನ ಚಿತ್ರಗಳಿಗೆ ಪ್ರೋತ್ಸಾಹವೂ ಕಡಿಮೆ. ಆದರೆ, ಹರಿಪ್ರಿಯಾಗೆ ಅವಕಾಶ ಸಿಕ್ಕಿದೆ....

ಹೊಸ ಸೇರ್ಪಡೆ

 • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

 • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

 • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

 • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...

 • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

 • ಕುಂದಾಪುರ: ಮಳೆ ನೀರಿಂಗಿಸುವ ಮೂಲಕ ನೀರನ್ನು ಕಾದಿಟ್ಟು ಕೊಳ್ಳಿ. ಪ್ರತಿಯೊಬ್ಬರೂ ನೀರುಳಿ ಸುವ ನಿಟ್ಟಿನಲ್ಲಿ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ. ನೀರು ಎಂದರೆ...