ಅಮೆರಿಕಾದಲ್ಲಿ ಶರಣ್‌ ರಾಜಕೀಯ !

ಹಳೇ ಅಧ್ಯಕ್ಷನ ಹೊಸ ಅವತಾರ

Team Udayavani, Jul 26, 2019, 5:00 AM IST

m-17

ಸಾಹಿತ್ಯ ಮತ್ತು ಸಂಭಾಷಣೆ ಬರೆಯುತ್ತಲೇ ನಿರ್ದೇಶನಕ್ಕಿಳಿದವರ ಸಂಖ್ಯೆಗೇನೂ ಕನ್ನಡದಲ್ಲಿ ಕಮ್ಮಿ ಇಲ್ಲ. ಈಗಾಗಲೇ ಬೆರಳೆಣಿಕೆಯಷ್ಟು ಮಂದಿ ಯಶಸ್ವಿ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಆ ಸಾಲಿಗೆ ಈಗ ಯೋಗಾನಂದ್‌ ಮುದ್ದಾನ್‌ ಕೂಡ ಹೊಸ ಸೇರ್ಪಡೆ. ಯೋಗಾನಂದ್‌ ಯಶಸ್ವಿ ಚಿತ್ರಗಳಿಗೆ ಸಂಭಾಷಣೆ ಬರೆದವರು. ಇದುವರೆಗೆ ಸುಮಾರು ಹದಿಮೂರಕ್ಕು ಹೆಚ್ಚು ಚಿತ್ರಗಳಿಗೆ ಮಾತುಗಳನ್ನು ಪೋಣಿಸಿರುವ ಯೋಗಾನಂದ್‌, “ಬಿರುಗಾಳಿ’ ಮೂಲಕ ಸಂಭಾಷಣೆಗಾರರಾಗಿ ಗುರುತಿಸಿಕೊಂಡರು. ಅದಕ್ಕೂ ಮುನ್ನ “ಆಪ್ತಮಿತ್ರ’ ಚಿತ್ರದ ಕೆಲ ಸೀನ್‌ಗಳಿಗೂ ಸಂಭಾಷಣೆ ಬರೆದಿದ್ದರು. ಆ ಬಳಿಕ “ತುಘಲಕ್‌’,”ಚಾರುಲತಾ’,”ಚಿಂಗಾರಿ’, “ವಜ್ರಕಾಯ’,”ಭಜರಂಗಿ’,”ಮುಕುಂದ ಮುರಾರಿ’,”ಚೌಕ’, “ಕಲಾಕಾರ್‌’, “ಟೈಗರ್‌’ ಮತ್ತು “ವಿಐಪಿ’ ಚಿತ್ರಗಳಿಗೆ ಇವರ ಮಾತುಗಳಿವೆ. ಈಗ ಶರಣ್‌ ಅಭಿನಯದ “ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರವನ್ನು ನಿರ್ದೇಶಿಸಿದ್ದು, ಆ ಚಿತ್ರ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ.

“ಅಧ್ಯಕ್ಷ ‘ ಕನ್ನಡದಲ್ಲಿ ಹಿಟ್‌ ಆಗಿರುವ ಚಿತ್ರ. ಆ “ಅಧ್ಯಕ್ಷ’ ಚಿತ್ರಕ್ಕೂ ಈಗ ಯೋಗಾನಂದ್‌ ಮಾಡುತ್ತಿರುವ “ಅಧ್ಯಕ್ಷ ಇನ್‌ ಅಮೆರಿಕಾ’ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಅಂದಹಾಗೆ, ಇದು ರಿಮೇಕ್‌ ಚಿತ್ರನಾ? ಅದಕ್ಕೆ ಉತ್ತರಿಸುವ ನಿರ್ದೇಶಕ ಯೋಗಾನಂದ್‌ ಮುದ್ದಾನ್‌, “ಮಲಯಾಳಂ ಭಾಷೆಯಲ್ಲಿ ಬಂದ “ಟು ಸ್ಟೇಟ್‌’ ಚಿತ್ರದ ಎಳೆ ಇಟ್ಟುಕೊಂಡು, ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರ ಮಾಡಿದ್ದೇವೆ. ಇನ್ನು, ಇಲ್ಲೂ ಹಾಸ್ಯ ಪ್ರಧಾನವಾಗಿರಲಿದೆ. ಇಲ್ಲಿ ಶರಣ್‌ ಅವರ ಜೊತೆಯಲ್ಲಿ ಚಿಕ್ಕಣ್ಣ ಬದಲು ಹಾಸ್ಯ ನಟ ಶಿವರಾಜ್‌ ಕೆ.ಆರ್‌.ಪೇಟೆ ನಟಿಸಿದ್ದಾರೆ. ಶೇ.70 ರಷ್ಟು ಅಮೆರಿಕಾದಲ್ಲಿ ಚಿತ್ರೀಕರಿಸಿದ್ದು ಮರೆಯದ ಅನುಭವ. ಇನ್ನು, ಕಥೆ ವಿಷಯಕ್ಕೆ ಬರುವುದಾದರೆ, ಚಿತ್ರದ ನಾಯಕ ಅಧ್ಯಕ್ಷ ನಂತರ ಅಮೆರಿಕಾಕ್ಕೆ ಹೋಗಿ ಏನೆಲ್ಲಾ ಮಾಡುತ್ತಾರೆ ಅನ್ನೋದೇ ಹೈಲೈಟ್‌. ಇಡೀ ಚಿತ್ರದಲ್ಲಿ ಮನರಂಜನೆಯೇ ಪ್ರಧಾನವಾಗಿದೆ. ಎಂದಿನ ಶರಣ್‌ ಪುನಃ ಇಲ್ಲಿ ನೋಡುಗರನ್ನು ರಂಜಿಸಲಿದ್ದಾರೆ. ಶರಣ್‌ ಜೊತೆ ಕಾಣುವ ಪ್ರತಿ ಪಾತ್ರದಲ್ಲೂ ಹಾಸ್ಯ ಹಾಸುಹೊಕ್ಕಾಗಿದೆ. ಇದೊಂದು ಕಂಪ್ಲೀಟ್‌ ಪವರ್‌ ಪ್ಯಾಕ್‌ ಕಾಮಿಡಿ ಚಿತ್ರ. ಇಲ್ಲಿ ಹಳ್ಳಿಯ ಸೊಗಡಿದೆ. ಅಮೆರಿಕಾದ ಸೊಬಗೂ ಇದೆ. ಮಂಡ್ಯದ ಪಕ್ಕಾ ಲೋಕಲ್‌ ರಾಜಕೀಯವಿದೆ. ಅಮೆರಿಕಾದ ಲೈಫ್ಸ್ಟೈಲ್‌ ಕೂಡ ಇದೆ. ಇಡೀ ಚಿತ್ರ ಕಾಮಿಡಿಯ ಮೂಲಕವೇ ಸಾಗುತ್ತದೆ’ಎಂದು ವಿವರಿಸುತ್ತಾರೆ ನಿರ್ದೇಶಕ ಯೋಗಾನಂದ್‌ ಮುದ್ದಾನ್‌.

ಅಮೆರಿಕಾದಲ್ಲಿ ಅಧ್ಯಕ್ಷರ ಕಾರುಬಾರು ಇದೆ ಅಂದಮೇಲೆ ಇದು ಸಣ್ಣ ಬಜೆಟ್‌ನ ಚಿತ್ರವಂತೂ ಅಲ್ಲ, ದೊಡ್ಡ ಬಜೆಟ್‌ನಲ್ಲೇ ಚಿತ್ರ ತಯಾರಾಗಿದ್ದು, ಚಿತ್ರವನ್ನು ವಿಶ್ವ ಪ್ರಸಾದ್‌ ನಿರ್ಮಾಣ ಮಾಡಿದ್ದಾರೆ. ಇವರಿಗೆ ವಿವೇಕ್‌ , ವಿಜಯಾ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಚಿತ್ರದಲ್ಲಿ ಹರಿಕೃಷ್ಣ ಅವರ ಸಂಗೀತವಿದ್ದು, ಚಿತ್ರಕ್ಕೆ ಡಾ.ವಿ ನಾಗೇಂದ್ರ ಪ್ರಸಾದ್‌, ಕವಿರಾಜ್‌, ಯೋಗರಾಜ್‌ ಭಟ್‌, ಚೇತನ್‌ ಗೀತೆ ರಚಿಸಿದ್ದಾರೆ. ಚಿತ್ರದಲ್ಲಿ ರಾಗಿಣಿ, ರಂಗಾಯಣ ರಘು, ಅವಿನಾಶ್‌, ಚಿತ್ರಾಶೆಣೈ, ಸಾಧುಕೋಕಿಲ ಸುಂದರ್‌ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದ್ದು, ಹಿರಿಯ ನಿರ್ಮಾಪಕ ಶೈಲೇಂದ್ರಬಾಬು ಅವರು ವಿತರಣೆ ಹಕ್ಕು ಪಡೆದಿದ್ದಾರೆ.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.