ಶಿವು ಮಾತಿಗೆ ಸಿಗದವರೇ ಪಾರು


Team Udayavani, Dec 22, 2017, 6:30 AM IST

Shivu-Paru_(106).jpg

ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಆಗಾಗ ಹಾಸ್ಯ ಸುಳಿದಾಡೋದು ಸಹಜ. ಅದರಲ್ಲೂ ಪತ್ರಕರ್ತರ ಪ್ರಶ್ನೆಗಳಿಗೆ ಕೆಲ ಚಿತ್ರತಂಡ ಗಲಿಬಿಲಿ ಆಗೋದು ಅಷ್ಟೇ ಸಹಜ. ಆದರೆ, ಬಹಳಷ್ಟು ಗಂಭೀರ ಪ್ರಶ್ನೆಗಳಿಂದಾಗಿ  ಅನೇಕ ಚಿತ್ರತಂಡದವರು ಒಂದಷ್ಟು ಗೊಂದಲಕ್ಕೀಡಾಗುವುದೂ ಉಂಟು. ಇಂತಹ ಅದೆಷ್ಟೋ ಸಂದರ್ಭಗಳು ಬಂದು ಹೋದರೂ, ಅವ್ಯಾವೂ ನೆನಪಲ್ಲುಳಿಯೋದು ಕಷ್ಟ. ಆದರೆ, ಇತ್ತೀಚೆಗೆ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಗದೇ ಇದ್ದ ಪತ್ರಕರ್ತರೇ ಇರಲಿಲ್ಲ. ಅದೊಂದು ಪತ್ರಿಕಾಗೋಷ್ಠಿಯೋ, ಹಾಸ್ಯಗೋಷ್ಠಿಯೋ ಎಂಬಂತಿತ್ತು. ಅಷ್ಟೊಂದು ಮಜಬೂತೆನಿಸುವ ಪ್ರಶ್ನೆಗಳು ಅದಕ್ಕೆ ತಕ್ಕ ಉತ್ತರಗಳು ಆ ಗೋಷ್ಠಿಯನ್ನು ನಗೆಗಡಲಲ್ಲಿಟ್ಟಿದ್ದು ಸುಳ್ಳಲ್ಲ.

ಅಂದಹಾಗೆ, ಅದು “ಶಿವು-ಪಾರು’ ಚಿತ್ರದ ಮೊದಲ ಪತ್ರಿಕಾಗೋಷ್ಠಿ. ಅದರ ಹೈಲೈಟ್‌ ಅಮೆರಿಕ ಸುರೇಶ್‌. ಚಿತ್ರಕ್ಕೆ ಹಣ ಹಾಕಿದ್ದು, ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಸಂಗೀತ ನೀಡಿದ್ದಲ್ಲದೆ, ನಿರ್ದೇಶನವನ್ನೂ ಮಾಡುವ ಮೂಲಕ ಸಕಲಕಲಾವಲ್ಲಭ ಎನಿಸಿಕೊಂಡವರು. ಇದಷ್ಟೇ ಅಲ್ಲ, ತೆರೆಯ ಮೇಲೆ ಅವರೇ ಹೀರೋ. ಚಿತ್ರವನ್ನು ಪೂರ್ಣಗೊಳಿಸಿ, ಇದೀಗ ಪ್ರೇಕ್ಷಕರ ಮುಂದೆ ತರೋಕೆ ಅಣಿಯಾಗಿದ್ದಾರೆ ನಿರ್ದೇಶಕರು.

ಎಲ್ಲಾ ಸರಿ, ಪತ್ರಕರ್ತರು ಅಷ್ಟೊಂದು ನಕ್ಕಿದ್ದುಂಟಾ ಅನ್ನೋ ಪ್ರಶ್ನೆ ಎದುರಾಗಬಹುದು. ಅದಕ್ಕೆ ನಿರ್ದೇಶಕರಿಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರ ಉತ್ತರವನ್ನೊಮ್ಮೆ ಆಲಿಸಿದರೆ, ನಗು ಮೂಡಿದರಲ್ಲಿ ಅರ್ಥವಿದೆ ಅಂತ ಗೊತ್ತಾಗುತ್ತೆ.

– ನಿಮ್ಮ ಚಿತ್ರಕ್ಕೆ ಎಷ್ಟು ಖರ್ಚಾಗಿದೆ?
ನನ್ನ ಸಂಭಾವನೆಯೇ ಮೂರು ಕೋಟಿ ಅಂದುಕೊಳ್ಳಿ. ಇನ್ನು ಚಿತ್ರಕ್ಕೆಷ್ಟಾಗಿರಬಹುದು? ಇಲ್ಲಿ ಹೆಚ್ಚು ಖರ್ಚಾಗಿದ್ದು ಗ್ಲಿಸರಿನ್‌ಗೆ!

– ಅಷ್ಟೊಂದು ಅಳಿಸುತ್ತೀರಾ?
ನಾಯಕಿ ಸಿಕ್ಕಾಪಟ್ಟೆ ಅಳ್ತಾರೆ.ಅವರಷ್ಟೇ ಅಲ್ಲ, ಅವರೊಂದಿಗೆ ಸುಮಾರು 50 ಜನ ಜೂನಿಯರ್ ಕೂಡ ಅಳ್ತಾರೆ. ಅದಕ್ಕೆ ಅಷ್ಟೊಂದು ಗ್ಲಿಸರಿನ್‌ ತರಿಸಿಕೊಟ್ಟೆ.

– ಹಾಗಾದರೆ, ನೋಡೋರು ಅತ್ತು ಹೊರಬರ್ತಾರೆ ಅನ್ನಿ?
ಅಳದೇ ಇದ್ದವರಿಗೆ ಬಹುಮಾನವಿದೆ.

– ಮೊದಲರ್ಧದಲ್ಲಿ ಅಳ್ತಾರಾ, ದ್ವಿತಿಯಾರ್ಧದಲ್ಲಿ ಅಳ್ತಾರಾ, ಅಥವಾ ಸಿನ್ಮಾ ಮುಗಿದ್ಮೇಲೆ ಅಳ್ತಾರಾ?
ಇಡೀ ಸಿನ್ಮಾ ಅಳ್ತಾನೇ ಇರ್ತಾರೆ.

– ಚಿತ್ರದ ಬಗ್ಗೆ ಇಷ್ಟೊಂದು ಕರಪತ್ರ ಕೊಟ್ಟಿದ್ದೀರಿ. ಯಾಕೆ?
ನಿಮ್ಮನೇಲಿರೋರಿಗೆ, ನಿಮ್ಮ ಕಚೇರಿಯಲ್ಲಿರೋರಿಗೆ ಅದನ್ನೆಲ್ಲಾ ಹಂಚಿಬಿಡಿ.

– ಚಿತ್ರದಲ್ಲಿ ತುಂಬಾ ವಿಶೇಷ ಅನ್ನೋದೇನಿದೆ?
ಇಲ್ಲಿ 60 ದಿನ ಹನಿಮೂನ್‌ ಮಾಡೋದಿದೆ. ಅದಕ್ಕೆ ಸಿನ್ಮಾದಲ್ಲಿ ಉತ್ತರ ಸಿಗಲಿದೆ.

– ಇದು ಯಾವ ಜಾನರ್‌ನ ಸಿನಿಮಾ?
ಜನ್ಮಜನ್ಮಾಂತರದ ಕಥೆಯದ್ದು

– ಜನ್ಮಾಂತರದ ಕಥೆ ಹೊಸದೇನಲ್ವಲ್ಲಾ? ಯಾಕೆ ನೋಡ್ಬೇಕು?
ನೋಡ್ಲೆàಬೇಕು. ಸಾಯೋಕೆ ಮುಂಚೆ ಎಲ್ಲರೂ ಒಂದ್ಸಲ ನೋಡ್ಬೇಕು. ನೀವೂ ಕೂಡ…
ಹೀಗೆ ಇನ್ನೂ ಅನೇಕ ಪ್ರಶ್ನೆಗಳಿಗೆ ಒಂದಷ್ಟೂ ಬೇಸರಿಸಿಕೊಳ್ಳದೆ ನಗ್ತಾನೇ ಉತ್ತರಿಸುತ್ತ ಹೋದರು ಅಮೆರಿಕ ಸುರೇಶ್‌. ಹೊಸಕೋಟೆ ತಾಲೂಕಿನ ಹಳ್ಳಿಯೊಂದರ ಹೈದ ಕಳೆದ ಎರಡು ದಶಕಗಳ ಕಾಲ ಅಮೆರಿಕದಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿದವರು. ಸಿನ್ಮಾ ಸಂಬಂಧಿಸಿದಂತೆ ಹತ್ತು ವರ್ಷ ಕಾಲ ಅಲ್ಲೇ ಕುಳಿತು ಒಂದಷ್ಟು ಅವಲೋಕನ ಮಾಡಿ, ಅವರೊಂದು ಕಥೆ ಹೆಣೆದು, ಏನಾದರೊಂದು ಮಾಡಬೇಕು ಅಂತ ಇಲ್ಲಿಗೆ ಬಂದು “ಶಿವು-ಪಾರು’ ಸಿನಿಮಾ ಮಾಡಿದ್ದಾರೆ.

ರೋಮಿಯೋ-ಜ್ಯೂಲಿಯಟ್‌, ಲೈಲಾ- ಮಜು°, “ಪಾರು-ದೇವದಾಸ್‌’ಗಿಂತ ಕಮ್ಮಿ ಇಲ್ಲದಂತಹ ರೊಮ್ಯಾಂಟಿಕ್‌ ಲವ್‌ಸ್ಟೋರಿ ಹೆಣೆದಿದ್ದಾರಂತೆ. ಇದು ಜನ್ಮಜನ್ಮಾಂತರದ ಕಥೆ. ಶಿವ ಪಾರ್ವತಿ ಮಾನವ ಜನ್ಮ ತಾಳಿ ಭೂಮಿಗಿಳಿದು ಏನೆಲ್ಲಾ ಮಾಡ್ತಾರೆ ಅನ್ನೋ ಕಥೆ ಮೇಲೆ ಚಿತ್ರ ಸಾಗಲಿದೆ. ಆರು ಹಾಡುಗಳಿವೆ. ಚಿತ್ರಕ್ಕೆ ದಿಶಾ ಪೂವಯ್ಯ ನಾಯಕಿ. ಅವರಿಲ್ಲಿ ಪಾರು ಪಾತ್ರ ಮಾಡಿದ್ದಾರೆ. ಎರಡು ಶೇಡ್‌ ಇರುವಂತಹ ಪಾತ್ರವಂತೆ. ಉಳಿದಂತೆ ಇಲ್ಲಿ ರಮೇಶ್‌ಭಟ್‌, ಹೊನ್ನವಳ್ಳಿ ಕೃಷ್ಣ, ಚಿತ್ರಾ ಶೆಣೈ, ಸುಂದರ್‌, ವಿಶ್ವ, ಕ್ರಿಷಿ ಇತರರು ನಟಿಸಿದ್ದಾರೆ.

– ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.