ಸಾಫ್ಟ್ವೇರ್‌ ಇಂಜಿನಿಯರ್‌ಗಳ ಆವಾಹಯಾಮಿ


Team Udayavani, Dec 22, 2017, 6:00 AM IST

avahayami.jpg

ಒಂದು ಕಿರುಚಿತ್ರ ಸಿನಿಮಾಗೆ ಸ್ಪೂರ್ತಿಯಾಗುತ್ತೆ ಅನ್ನುವುದು ಎಲ್ಲರಿಗೂ ಗೊತ್ತು. ಅಂಥದ್ದೊಂದು ಕಿರುಚಿತ್ರ ಮಾಡಿ, ಅದರ ಪ್ರೇರಣೆಯಿಂದ ಹೀಗೊಂದು ಸಾಫ್ಟ್ವೇರ್‌ ಇಂಜಿನಿಯರ್ ತಂಡ ಸೇರಿಕೊಂಡು “ಆವಾಹಯಾಮಿ’ ಎಂಬ ಚಿತ್ರ ಮಾಡಿದೆ. ಸಂಗೀತ ನಿರ್ದೇಶಕ ಗೌತಮ್‌ ಶ್ರೀವತ್ಸ ಹೊರತುಪಡಿಸಿದರೆ, ಉಳಿದೆಲ್ಲರಿಗೂ ಇದು ಮೊದಲ ಅನುಭವ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ, ಒಂದಷ್ಟು ಮಾಹಿತಿ ಹಂಚಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು ನಿರ್ದೇಶಕ ಗಿರೀಶ್‌ ಕುಮಾರ್‌.

“ಶೀರ್ಷಿಕೆ ಕೇಳಿದಾಕ್ಷಣ, ಇದೊಂದು ಹಾರರ್‌ ಚಿತ್ರ ಅನ್ನೋದು ಗೊತ್ತಾಗುತ್ತೆ. ಕನ್ನಡದಲ್ಲಿ ಸಾಕಷ್ಟು ಹಾರರ್‌ ಚಿತ್ರಗಳು ಬಂದಿವೆ. ಅವೆಲ್ಲಕ್ಕಿಂತ ಸ್ವಲ್ಪ ಹೊಸ ಪ್ರಯತ್ನದ ಮೂಲಕ ಇಲ್ಲಿ ಹೇಳುವ ಮತ್ತು ತೋರಿಸುವ ಪ್ರಯತ್ನ ಮಾಡಿದ್ದೇವೆ. ಸಾಮಾನ್ಯವಾಗಿ ಹಾರರ್‌ ಚಿತ್ರಗಳಲ್ಲಿ ಗ್ರಾಫಿಕ್ಸ್‌ ಬಳಕೆ ಹೆಚ್ಚು. ಅದರೊಂದಿಗೆ ಇಲ್ಲಿ ನೈಜತೆಗೆ ಒತ್ತು ಕೊಡಲಾಗಿದೆ. ಇಲ್ಲಿ ಹಾರರ್‌ನೊಂದಿಗೆ ಹೆಣ್ಣು ಭ್ರೂಣ ಹತ್ಯೆ ಕುರಿತು ಒಂದು ಸಂದೇಶವೂ ಇದೆ. ಒಂದು ತಪ್ಪು ಮಾಡಿದಾಗ, ಆನಂತರ ಪಡುವ ಪಶ್ಚಾತ್ತಾಪ ಚಿತ್ರದ ಹೈಲೈಟ್‌. ಆ ತಪ್ಪಿನ ಅರಿವು ಏನೆಂಬುದು ಸಿನಿಮಾದೊಳಗಿನ ಸಾರ’ ಎನ್ನುತ್ತಾರೆ ನಿರ್ದೇಶಕರು.

ವಿಜಯ್‌ರಾಜ್‌ ಚಿತ್ರದ ಹೀರೋ. ಅವರೇ ಹೇಳುವಂತೆ, “ಇಲ್ಲಿ ನಾನು ಹೀರೋ ಅಲ್ಲ. ಕಥೆಯೇ ಹೀರೋ. ಎಲ್ಲರೂ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ. ನನಗೆ ಇಲ್ಲಿ ಸಾಕಷ್ಟು ಕಲಿಯೋಕೂ ಅವಕಾಶ ಸಿಕ್ಕಿದೆ’ ಎನ್ನುತ್ತಾರೆ ವಿಜಯ್‌ರಾಜ್‌. ಇನ್ನು, ಅಕ್ಷತಾ ಕೂಡ ಸಾಫ್ಟ್ವೇರ್‌ ಇಂಜಿನಿಯರ್‌. “ಟೆಕ್ನಿಕಲಿ ಸ್ಟ್ರಾಂಗ್‌ ಇರುವ ವಿಷಯ ಇಲ್ಲಿತ್ತು. ಎಲ್ಲರೂ ಎಂಜಿನಿಯರ್ ಇದ್ದುದರಿಂದ ಅದಿಲ್ಲಿ ಸಾಧ್ಯವಾಗಿದೆ. ಈಗ ಸಿನಿಮಾ ಟ್ರೇಲರ್‌ ನೋಡಿದಾಗಲೇ ಖುಷಿಯಾಗುತ್ತಿದೆ. ಹೊಸಬರು ಇಷ್ಟೊಂದು ಚೆನ್ನಾಗಿ ಮಾಡಿದ್ದೇವಾ ಅನಿಸುತ್ತಿದೆ’ ಅಂದರು ಅಕ್ಷತಾ.

ಹಿನ್ನೆಲೆ ಸಂಗೀತ ನೀಡಿರುವ ಗೌತಮ್‌ ಶ್ರೀವತ್ಸ, “ಹೊಸಬರ ಹೊಸ ಪ್ರಯತ್ನವಿದು. ಇಲ್ಲಿ ಗಿರೀಶ್‌ ಮತ್ತು ತಂಡ ಸಾಕಷ್ಟು ಶ್ರಮಪಟ್ಟು ಸಿನಿಮಾ ಮಾಡಿದೆ. ಇಲ್ಲಿ ಹಣಕಾಸು ಒಂದೇ ಮುಖ್ಯ ಆಗೋದಿಲ್ಲ. ಎಲ್ಲರು ರಾತ್ರಿ-ಹಗಲು ಕೆಲಸ ಮಾಡಿದ್ದಾರೆ. ಇಲ್ಲಿ ಒಂದೇ ಹಾಡು ಇದೆ. ಹಿನ್ನೆಲೆ ಸಂಗೀತ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಲಿದೆ’ ಅಂದರು ಗೌತಮ್‌ ಶ್ರೀವತ್ಸ.

ಕ್ಯಾಮೆರಾಮೆನ್‌ ಕಿರಣ್‌ ಕೆ.ನಾಯರ್‌ ಅವರು, ತಮಿಳಿನ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರುವ ಕಿರಣ್‌, ಈ ಕೆಲಸ ಮಾಡುವಾಗ, ರಜೆ ಹೆಚ್ಚು ಹಾಕಿದರಂತೆ. ಕೊನೆಗೆ ಅವರ ಕೆಲಸವೇ ಹೋಯ್ತಂತೆ. ಆದರೆ, ಅವರಿಗೆ ಸಿನಿಮಾ ಮೇಲೆ ಪ್ರೀತಿ ಇದ್ದುದರಿಂದ ಚೆನ್ನಾಗಿ ಕೆಲಸ ಮಾಡುವ ಆಸೆಯಿಂದ ಹೊಸ ಲೈಟಿಂಗ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರಂತೆ.

ಟಾಪ್ ನ್ಯೂಸ್

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

ಟಾಟಾ ಸಫಾರಿ ಎಸ್‌ಯುವಿಯ ಡಾರ್ಕ್‌ ಎಡಿಶನ್‌ ಜ.17ರಂದು ಬಿಡುಗಡೆ

ಟಾಟಾ ಸಫಾರಿ ಎಸ್‌ಯುವಿಯ ಡಾರ್ಕ್‌ ಎಡಿಶನ್‌ ಜ.17ರಂದು ಬಿಡುಗಡೆ

29 ಹುಲಿಗಳಿಗೆ ಜನ್ಮನೀಡಿ, 17 ವರ್ಷದಷ್ಟು ದೀರ್ಘಾವಧಿ ಬದುಕಿದ ಮಹಾಮಾತೆ ನಿಧನ

29 ಹುಲಿಗಳಿಗೆ ಜನ್ಮನೀಡಿ, 17 ವರ್ಷದಷ್ಟು ದೀರ್ಘಾವಧಿ ಬದುಕಿದ ಮಹಾಮಾತೆ ನಿಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

No sankranthi Excitement in Kannada film industry

ಮಂಕಾದ ಸಿನಿ ಸಂಕ್ರಾಂತಿ: ಮುಹೂರ್ತ, ಸಿನ್ಮಾ ರಿಲೀಸ್‌ ಮಾಡಲು ಉತ್ಸಾಹವಿಲ್ಲ…

shivanna

ಬೈರಾಗಿ ಮಾತು ಮತ್ತು ಶಕ್ತಿಧಾಮದ ಕನಸು…: ಶಿವಣ್ಣ ಜೊತೆ ಚಿಟ್‌ಚಾಟ್‌

shivanna

ಸ್ಟೈಲಿಶ್‌ ಲುಕ್‌ನಲ್ಲಿ ಶಿವಣ್ಣ: “ಬೈರಾಗಿ’ ಗೆಟಪ್‌ಗೆ ಫ್ಯಾನ್ಸ್‌ ಫಿದಾ

vikrant rona

ವಿಕ್ರಾಂತ್‌ ರೋಣನಿಗೆ ಓಟಿಟಿಯಿಂದ ಭರ್ಜರಿ ಆಫ‌ರ್‌:OTTಯಲ್ಲೇ ರಿಲೀಸ್ ಆಗುತ್ತಾ ಕಿಚ್ಚನ ಚಿತ್ರ

ಮತ್ತೆ ಮೌನ,ಮುಂದುವರಿದ ಆತಂಕ! ರಿಲೀಸ್‌ ಡೇಟ್ಸ್‌ ಅನೌನ್ಸ್‌ ಮಾಡಿದ್ದ ಸಿನಿಮಾಗಳು ಮುಂದಕ್ಕೆ..

ಮತ್ತೆ ಮೌನ,ಮುಂದುವರಿದ ಆತಂಕ! ರಿಲೀಸ್‌ ಡೇಟ್ಸ್‌ ಅನೌನ್ಸ್‌ ಮಾಡಿದ್ದ ಸಿನಿಮಾಗಳು ಮುಂದಕ್ಕೆ..

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ತರಯರುತಗ್ದಸ

ಸಿದ್ದರಾಮೇಶ್ವರರ ತತ್ವ ಪಾಲನೆಯಿಂದ ಆಪತ್ತು ದೂರ

ಉಉಹಜಗದ

ಶ್ರೀಚನ್ನ ಬಸವಸ್ವಾಮಿ  ಜೋಡು ರಥೋತ್ಸವ ಸರಳ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

rತಯಿಕಜಹತಯಹ

ಅತಿಥಿ ಉಪನ್ಯಾಸಕರ ಸೇವಾ ವಿಲೀನತೆಯಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.