ಧನ್ವೀರ್-ಶ್ರೀಲೀಲಾ ಮಸ್ತ್ ಸ್ಟೆಪ್ಸ್: ‘ಬೈ ಟು ಲವ್’ ಚಿತ್ರದ ಹಾಡು ಇಂದು ರಿಲೀಸ್
Team Udayavani, Oct 29, 2021, 10:41 AM IST
“ಬಜಾರ್’ ಖ್ಯಾತಿಯ ಹೀರೋ ಧನ್ವೀರ್ ಮತ್ತು ಶ್ರೀಲೀಲಾ ಅಭಿನಯದ “ಬೈ ಟು ಲವ್’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸದ್ಯ “ಬೈ ಟು ಲವ್’ ಸಿನಿಮಾದ ಪ್ರೀ-ಪ್ರೊಡಕ್ಷನ್ ಅಂತಿಮ ಹಂತದ ಕೆಲಸದಲ್ಲಿರುವ ಚಿತ್ರತಂಡ ಈಗಾಗಲೇ ಪೋಸ್ಟರ್, ಟೀಸರ್ ಬಿಡುಗಡೆ ಮಾಡಿ ಸಿನಿಪ್ರಿಯರನ್ನು ಸೆಳೆಯುವ ಪ್ರಯತ್ನ ಮಾಡಿದೆ.
ಇದರ ನಡುವೆಯೇ ಚಿತ್ರತಂಡ ಇಂದು (ಅ. 29) ಚಿತ್ರದ “ಐ ಹೇಟ್ ಲವ್’ ಎಂಬ ಹಾಡನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ.
ಇನ್ನು “ಬೈ ಟು ಲವ್’ ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಇಂದು ಬಿಡುಗಡೆಯಾಗಲಿರುವ “ಐ ಹೇಟ್ ಲವ್’ ಹಾಡಿನಲ್ಲಿ ನಾಯಕ ಧನ್ವೀರ್ ಮತ್ತು ನಾಯಕಿ ಶ್ರೀಲೀಲಾ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ “ಬೈ ಟು ಲವ್’ ಸಿನಿಮಾಕ್ಕೆ ಸಾಥ್ ಕೊಡುತ್ತಿದ್ದು, ಚಿತ್ರದ ಮೊದಲ ಹಾಡನ್ನು ರಕ್ಷಿತ್ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ.
ಇದನ್ನೂ ಓದಿ:‘ಲವ್ ಯು ರಚ್ಚು’ ಹಾಡಿಗೆ ‘ಸಿದ್ಧ್ ಶ್ರೀರಾಮ್’ ಧ್ವನಿ
ಅಂದಹಾಗೆ, ಲವ್ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಕಥಾಹಂದರ ಹೊಂದಿರುವ “ಬೈ ಟು ಲವ್’ ಚಿತ್ರ “ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರಕ್ಕೆ ಹರಿ ಸಂತೋಷ್ ನಿರ್ದೇಶನವಿದೆ.
ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ, ಯೋಗಾನಂದ್ ಸಂಭಾಷಣೆ ಈ ಚಿತ್ರಕ್ಕಿದೆ. ಸದ್ಯ “ಬೈ ಟು ಲವ್’ ಚಿತ್ರದ ಪ್ರಮೋಶನ್ಸ್ ಕೆಲಸಗಳನ್ನು ಶುರು ಮಾಡಿರುವ ಚಿತ್ರತಂಡ ಇದೇ ನವೆಂಬರ್ ಅಂತ್ಯಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್