ದೂರದ ಮಾತು

ಏನಾಗಲಿ ಮುಂದೆ ಸಾಗು ನೀ

Team Udayavani, Feb 7, 2020, 7:03 AM IST

ಇತ್ತೀಚೆಗಷ್ಟೆ ನಟ ಯಶ್‌ ಕೈಯಲ್ಲಿ ಬಿಡುಗಡೆಯಾಗಿದ್ದ “ಸಾಗುತ ದೂರ, ದೂರ’ ಚಿತ್ರದ ಟ್ರೇಲರ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಇದೀಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಅಂತಿಮ ಹಂತದ ತಯಾರಿಯಲ್ಲಿದ್ದು, ಪ್ರಚಾರ ಕಾರ್ಯದ ಭಾಗವಾಗಿ ಚಿತ್ರತಂಡ ಚಿತ್ರದ ಆಡಿಯೋವನ್ನು ಹೊರತಂದಿದೆ. ನಟಿ ರಾಗಿಣಿ ದ್ವಿವೇದಿ, ಲಹರಿ ವೇಲು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ಸಾಗುತ ದೂರ, ದೂರ’ ಚಿತ್ರದ ಹಾಡುಗಳನ್ನು ಹೊರತಂದರು.

ಇದೇ ವೇಳೆ ಮಾತನಾಡಿದ ನಟಿ ರಾಗಿಣಿ, “ಸಿನಿಮಾದ ಟೈಟಲ್‌ ಕೇಳ್ಳೋದಕ್ಕೆ ಚೆನ್ನಾಗಿದೆ. ಟೀಸರ್‌, ಟ್ರೇಲರ್‌ಗಳನ್ನು ನೋಡಿದಾಗ ಸಿನಿಮಾದಲ್ಲಿ ಬೇರೆ ಏನೂ ವಿಷಯವಿದೆ ಅನ್ನೋ ಕುತೂಹಲ ಮೂಡುತ್ತದೆ. ಸಿನಿಮಾದ ಟೀಸರ್‌, ಟ್ರೇಲರ್‌ಗಳಲ್ಲಿ ಕಾಣುವ ಪಾತ್ರಗಳಲ್ಲಿ ಎಲ್ಲರೂ ಚೆನ್ನಾಗಿ ಕಾಣುತ್ತಿದ್ದಾರೆ. ಸಿನಿಮಾಕ್ಕೆ ಮತ್ತು ಅದರಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಹಿಂದೆ “ಜಾತ್ರೆ’ ಚಿತ್ರವನ್ನು ನಿರ್ದೇಶಿಸಿದ್ದ ರವಿತೇಜ “ಸಾಗುತ ದೂರ, ದೂರ…’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ರವಿತೇಜ, “ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು, ಶ್ರಮಪಟ್ಟು ಈ ಸಿನಿಮಾವನ್ನು ಮಾಡಿದ್ದೇವೆ. ತಾಯಿಯ ಸಂಬಂಧ ಮತ್ತು ಭಾವನೆಗಳೇ ಈ ಸಿನಿಮಾದ ಜೀವಾಳ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂಥ ಸಂಗತಿಗಳು ಸಿನಿಮಾದಲ್ಲಿರುವುದರಿಂದ, ಎಲ್ಲ ವರ್ಗದ ಆಡಿಯನ್ಸ್‌ಗೂ ಸಿನಿಮಾ ಇಷ್ಟವಾಗಲಿದೆ. ಚಿತ್ರದ ಪ್ರತಿ ಸನ್ನಿವೇಶಗಳನ್ನು ನೈಜವಾಗಿ ತೆರೆಮೇಲೆ ತಂದಿದ್ದೇವೆ’ ಎಂದು ಚಿತ್ರದ ಕಥಾಹಂದರ ಮತ್ತು ತಮ್ಮ ಚಿತ್ರ ಸಾಗಿಬಂದ ರೀತಿಯನ್ನು ತೆರೆದಿಟ್ಟರು. ಕಾರ್ಯಕ್ರಮದಲ್ಲಿ ಹಾಜರಿದ್ದ ಚಿತ್ರದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಚಿತ್ರದ ಬಗ್ಗೆ ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಂಡರು.

“ಖುಷಿ ಕನಸು ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ದಿವ್ಯಾ ಪೂಜಾರಿ, ಅಮಿತ ಪೂಜಾರಿ ನಿರ್ಮಿಸಿರುವ “ಸಾಗುತ ದೂರ, ದೂರ…’ ಚಿತ್ರದಲ್ಲಿ ಅಪೇಕ್ಷಾ ಪುರೋಹಿತ್‌, ಜಾಹ್ನವಿ ಜ್ಯೊತಿ, ಮಹೇಶ, ದೀಕ್ಷಿತ್‌ ಶೆಟ್ಟಿ, ಉಷಾ ಭಂಡಾರಿ, ಆರತಿ, ಭರತ, ರಜಿನಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿಕಾಂತ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಚಿಕ್ಕಮಗಳೂರು, ಬೆಂಗಳೂರು ಮೊದಲಾದ ಕಡೆಗಳ ಚಿತ್ರೀಕರಣ ನಡೆಸಲಾಗಿರುವ “ಸಾಗುತ ದೂರ, ದೂರ…’ ಚಿತ್ರ ಇದೇ ಫೆಬ್ರವರಿ 14ರಂದು ತೆರೆಗೆ ಬರುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ....' -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌...

  • ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ....

  • ರಮೇಶ್‌ ಅರವಿಂದ್‌ ನಾಯಕಾಗಿರುವ "ಶಿವಾಜಿ ಸುರತ್ಕಲ್‌' ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್‌ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ...

  • ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ "ಶಿವ' ಎನ್ನುವ ಚಿತ್ರವೂ...

  • ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು...

ಹೊಸ ಸೇರ್ಪಡೆ

  • ಕುಂಬಳಕಾಯಿಯಲ್ಲಿ ಸಿಹಿಕುಂಬಳ, ಬೂದು ಕುಂಬಳ ಎಂಬ ಎರಡು ವಿಧಗಳಿವೆ. ಅದರಲ್ಲಿ ಚೀನಿಕಾಯಿ ಎಂದು ಕರೆಯಲ್ಪಡುವ ಸಿಹಿಗುಂಬಳವನ್ನು ತರಕಾರಿಯಾಗಷ್ಟೇ ಅಲ್ಲದೆ, ಮನೆ...

  • ಏಕಾದಶಿ, ಸಂಕಷ್ಟಹರ ಚತುರ್ಥಿ, ಅಂತ ದೇವರ ಹೆಸರಿನಲ್ಲಿ ಉಪವಾಸ ಮಾಡುವವರಿದ್ದಾರೆ. ಹಾಗೆ ತಿಂಗಳಿಗೊಮ್ಮೆ ಉಪವಾಸ ಮಾಡುವುದು ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಹಾಗೆಯೇ,...

  • ಹಿಂದಿನ ಕಾಲದಲ್ಲಿ ಮೆಹಂದಿ ಗಿಡವನ್ನು ಅರೆದು ಬಹುತೇಕ ಎಲ್ಲ ಸಂದರ್ಭದಲ್ಲಿಯೂ ಒಂದೇ ಡಿಸೈನ್‌ ಮಾಡುತ್ತಿದ್ದರಂತೆ. ಆದರೆ ಕಾಲಕ್ರಮೇಣ ಮೆಹೆಂದಿ ಕೊನ್‌ ಪರಿಕಲ್ಪನೆ...

  • ಮಜೂರು - ಮಲ್ಲಾರು ಅವಳಿ ಗ್ರಾಮಗಳ ಕಾರ್ಯ ವ್ಯಾಪ್ತಿಯ ಹೈನುಗಾರರ ಬೆಳವಣಿಗೆಯ ಉದ್ದೇಶವನ್ನು ಇಟ್ಟುಕೊಂಡು ದ. ಕ. ಹಾಲು ಒಕ್ಕೂಟದ ಅಧೀನದಲ್ಲಿ 1989 ಮೇ 5ರಂದು ಮಜೂರು...

  • ಗುಣಮಟ್ಟದ ಹಾಲು, ಗರಿಷ್ಠ ಕೃತಕ ಗರ್ಭಧಾರಣೆ, ಹೆಚ್ಚು ಹಾಲು ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿ, ಅವಿಭಜಿತ ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಮಂಗಳೂರಿನಿಂದ...