ಸೋತು ಗೆದ್ದ ಕೃಷ್ಣ! ಪರಿಶ್ರಮಕ್ಕೆ ಸಿಕ್ಕ ಫ‌ಲ

Team Udayavani, Feb 14, 2020, 5:30 AM IST

“ನನಗೊಂದು ನಂಬಿಕೆ ಇತ್ತು. ಈ ಚಿತ್ರ ಗೆದ್ದೇ ಗೆಲ್ಲುತ್ತೆ ಅಂತ. ಅದೀಗ ನಿಜವಾಗಿದೆ…’

– ಹೀಗೆ ಹೇಳಿ ಹಾಗೊಂದು ಸ್ಮೈಲ್ ಕೊಟ್ಟರು ನಿರ್ದೇಶಕ ಕಮ್‌ ನಟ “ಡಾರ್ಲಿಂಗ್‌’ ಕೃಷ್ಣ. ಅವರು ಹೇಳಿದ್ದು, “ಲವ್‌ ಮಾಕ್ಟೇಲ್‌’ ಯಶಸ್ಸಿನ ಬಗ್ಗೆ. ಹೌದು, ಈ ಚಿತ್ರ ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಅಷ್ಟೇ ಅಲ್ಲ, ಮೊದಲ ವಾರದ ಐದು ದಿನ ಗಳಿಕೆಯೇ ಇಲ್ಲದೆ 130 ಚಿತ್ರಮಂದಿರಗಳಲ್ಲಿದ್ದ ಚಿತ್ರ ಕೇವಲ ಒಂದೇ ಚಿತ್ರಮಂದಿರಕ್ಕೆ ಬಂದು ನಿಂತಿತ್ತು. ಅಲ್ಲಿಂದ ಶುರುವಾದ ಸಿನಿಮಾ ಪ್ರದರ್ಶನ ಮೂರು ದಿನದಲ್ಲಿ 14 ಮಾಲ್‌ಗ‌ಳಲ್ಲೂ ಹೌಸ್‌ಫ‌ುಲ್‌ ಪ್ರದರ್ಶನ ಕಂಡಿದ್ದು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ. ಆ ಸಂಭ್ರಮ ಹಂಚಿಕೊಳ್ಳಲೆಂದೇ ಕೃಷ್ಣ ಟೀಮ್‌ ಜೊತೆ ಬಂದಿದ್ದರು.

“ನಾನು ಮತ್ತು ಮಿಲನಾ ಇಬ್ಬರೇ ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬಗ್ಗೆ ಚರ್ಚಿಸಿ, ಎಲ್ಲಾ ವಿಭಾಗದ ಕೆಲಸವನ್ನೂ ಮಾಡಿ, ಏನಾದರೂ ಸರಿ ಗೆಲ್ಲಬೇಕು ಅಂತ ಸಿನಿಮಾ ಮಾಡಿದ್ದಕ್ಕೂ ಈಗ ಸಾರ್ಥಕವಾಗಿದೆ. ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತು. ನಾನು ಗೆದ್ದೆ ಅಂತ ಖುಷಿ ಆದೆ.

ಆದರೆ, ಸಂಜೆ ಹೊತ್ತಿಗೆ ಕಲೆಕ್ಷನ್‌ ಡಲ್‌ ಅಂತ ಸುದ್ದಿ ಬಂತು. ಚೆನ್ನಾಗಿದೆ ಎಂಬ ಮಾತು ಕೇಳಿ ಖುಷಿಪಡಲೋ, ಗಳಿಕೆ ಇಲ್ಲ ಅಂತ ಬೇಸರ ಪಡಲೋ ಗೊತ್ತಾಗಲಿಲ್ಲ. ಮಿಲನಾ ಅವರಲ್ಲಿ ಒದ್ದಾಟ ಕಾಣುತ್ತಿತ್ತು. ಇನ್ನು ಯಾವ ರೀತಿ ಸಿನಿಮಾ ಕೊಡಬೇಕೋ ಎನಿಸಿತು. ಆದರೂ, ಎಲ್ಲೋ ಒಂದು ಕಡೆ ನಂಬಿಕೆ ಇತ್ತು. ಗುರುವಾರ ಒಂದು ಚಿತ್ರಮಂದಿರ ಬಿಟ್ಟು ಎಲ್ಲಾ ಚಿತ್ರಮಂದಿರದಿಂದಲೂ ಚಿತ್ರ ತೆಗೆಯಲಾಯಿತು. ಶಾರದಾ ಚಿತ್ರಮಂದಿರದಿಂದಲೇ ಚಿತ್ರ ಗೆಲ್ಲುತ್ತೆ ನೋಡ್ತಾ ಇರಿ ಅಂತ ಪಾಸಿಟಿವ್‌ ಆಗಿ ಹೇಳಿದ್ದೆ. ಜನ ಬಂದರು ಹೌಸ್‌ಫ‌ುಲ್‌ ಆಯ್ತು. ಪ್ರದರ್ಶನಗಳು ಹೆಚ್ಚಾದವು.

ಮಾಲ್‌ಗ‌ಳಲ್ಲೂ ಕಾಡಿ ಬೇಡಿ ಒಂದು ಶೋ ಪಡೆದೆ. ಅಲ್ಲೂ ಹೌಸ್‌ಫ‌ುಲ್‌ ಆಯ್ತು. ಕೊನೆಗೆ ಎಲ್ಲಾ ಮಾಲ್‌ಗ‌ಳಲ್ಲೂ ಶೋ ಹೌಸ್‌ಫ‌ುಲ್‌ ಕಂಡವು. ನನ್ನ ಜರ್ನಿಯಲ್ಲಿ 14 ಶೋ ಹೌಸ್‌ಫ‌ುಲ್‌ ಪ್ರದರ್ಶನ ಕಂಡಿದ್ದು ಹೆಮ್ಮೆ ಎನಿಸುತ್ತಿದೆ.

ಎಷ್ಟೋ ಜನ ಗಂಡ ಹೆಂಡತಿ ಜಗಳ ಮಾಡಿಕೊಂಡರೆ, “ಲವ್‌ ಮಾಕ್ಟೇಲ್‌’ ನೋಡಿ ಸರಿ ಹೋಗ್ತಿàರಾ ಅಂತಿದ್ದಾರೆ. ಇನ್ನು, ಶೈನ್‌ಶೆಟ್ಟಿ ಸಿನಿಮಾ ನೋಡಿ, “ನನಗೆ ಚಿತ್ರದೊಳಗಿರುವ ನಿಧಿ ಥರ ಹೆಂಡ್ತಿ ಸಿಗಬೇಕು’ ಅಂದಿದ್ದಾರೆ. ಸದ್ಯಕ್ಕೆ ಚಿತ್ರ ಚೆನ್ನಾಗಿ ಹೋಗುತ್ತಿದೆ. ಕನ್ನಡಿಗರಿಗೆ ಧನ್ಯವಾದ’ ಎಂದರು ಕೃಷ್ಣ.

ಮಿಲನಾ ನಾಗರಾಜ್‌ ಕೂಡ ಖುಷಿಯಲ್ಲಿದ್ದರು. “ಒಳ್ಳೆಯ ಚಿತ್ರಕ್ಕೆ ಬೆಂಬಲವೇ ಇಲ್ಲವಲ್ಲ ಅಂತ ಬೇಸರವಿತ್ತು. ಅದಕ್ಕೆ ಸರಿಯಾಗಿ ಚಿತ್ರಮಂದಿರಗಳಿಂದಲೂ ಚಿತ್ರ ಹೋಗುತ್ತಿದೆ ಎಂಬ ಫೀಲ್‌ ಇತ್ತು. ಆದರೂ, ಕೃಷ್ಣ ನಂಬಿಕೆ ಕಳೆದುಕೊಳ್ಳಲಿಲ್ಲ. ಒಂದು ಚಿತ್ರಮಂದಿರದಿಂದಲೇ ಚಿತ್ರ ಗೆಲ್ಲುತ್ತೆ ನೋಡು ಅಂದರು. ಅದು ಹಾಗೆಯೇ ಆಗಿದೆ. ಇಷ್ಟಕ್ಕೆಲ್ಲಾ ಕನ್ನಡಿಗರು, ಮಾಧ್ಯಮ, ಪತ್ರಕರ್ತರು ಕಾರಣ’ ಎಂದರು ಮಿಲನಾ.

ನಿರ್ಮಾಪಕ ನಾಗಪ್ಪ ಅವರು, “ನಾವೀಗ ಸೋತು ಗೆದ್ದಿದ್ದೇವೆ. ಒಳ್ಳೆಯ ಸಿನಿಮಾಗೆ ಜನ ಕೈ ಬಿಡಲ್ಲ ಎಂಬುದು ಸಾಬೀತಾಗಿದೆ ಎಂದರು. ಯುವ ನಟ ಅಭಿಲಾಶ್‌, ಈ ಚಿತ್ರದ ಮೂಲಕ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಕನ್ನಡಿಗರಿಗೆ ಸಲಾಂ ಎಂದರು. ಕ್ರೇಜಿಮೈಂಡ್‌ ಶ್ರೀ ಕೂಡ ಗೆಲುವಿನ ಸಂಭ್ರಮ ಹಂಚಿಕೊಂಡರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ....' -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌...

  • ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ....

  • ರಮೇಶ್‌ ಅರವಿಂದ್‌ ನಾಯಕಾಗಿರುವ "ಶಿವಾಜಿ ಸುರತ್ಕಲ್‌' ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್‌ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ...

  • ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ "ಶಿವ' ಎನ್ನುವ ಚಿತ್ರವೂ...

  • ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು...

ಹೊಸ ಸೇರ್ಪಡೆ

  • ಬಿಸಿಲಿನಿಂದ ರಕ್ಷಣೆ ಪಡೆಯಲಷ್ಟೇ ಸನ್‌ಗ್ಲಾಸಸ್‌ ಧರಿಸುವ ಕಾಲ ಇದಲ್ಲ. ನೀವು ಧರಿಸುವ ಕೂಲಿಂಗ್‌ ಗ್ಲಾಸ್‌ ಕಣ್ಣನ್ನಷ್ಟೇ ಅಲ್ಲ, ನಿಮ್ಮ ಸ್ಟೈಲ್‌ ಅನ್ನೂ "ಕೂಲ್‌'...

  • ಮಹಾನಗರ: ರಾಜ್ಯ ಸರಕಾರವು ನೂತನವಾಗಿ ಜಾರಿಗೆ ತಂದ ನಂಬರ್‌ ಪ್ಲೇಟ್‌ ಮಾದರಿ ನಗರದಲ್ಲಿ ಇನ್ನೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ವಾಹನಗಳ ನಂಬರ್‌ ಪ್ಲೇಟ್‌ನಲ್ಲಿ...

  • ತಾವು ಯಾವುದರಲ್ಲಿ ಡಿಗ್ರಿ ಮಾಡಿದ್ದೇವೋ ಅದಕ್ಕೆ ತಕ್ಕಂತೆ ಕೆಲಸ ಸಿಗಬೇಕೆಂದು ಕಾದು ಕುಳಿತುಕೊಳ್ಳುವ ಕಾಲ ಅಲ್ಲ ಇದು. ಇವತ್ತು ಪದವಿ, ಸ್ನಾತಕೋತ್ತರ ಪದವಿಗಳು...

  • ಆಗೆಲ್ಲಾ ಈಗಿನಂತೆ ನಿಶ್ಚಿತಾರ್ಥಕ್ಕೆ ನೂರಾರು ಜನರು ಬರುತ್ತಿರಲಿಲ್ಲ. ಮುಖ್ಯವಾದ ಏಳೆಂಟು ಜನರು ಬಂದು, ಹುಡುಗಿಗೆ ಉಂಗುರ ತೊಡಿಸಿ, ಹರಿವಾಣ ವಿನಿಮಯ ಮಾಡುತ್ತಿದ್ದರು....

  • ಮಂಗಳೂರು: ರಾಜ್ಯದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಸಾಲ ಪಡೆದು 2020 ಜ. 31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಮೇಲಿನ...