ಅಪ್ಪಾವ್ರ ಶಕ್ತಿ; ಅಮ್ಮಾವ್ರ ಮಮತೆ


Team Udayavani, Nov 24, 2017, 11:48 AM IST

Raja-Simha_(211).jpg

ಅನಿರುದ್ಧ್ ಮೊದಲ ಬಾರಿಗೆ ಆ್ಯಕ್ಷನ್‌ ಇಮೇಜ್‌ನಲ್ಲಿ ಕಾಣಿಸಿಕೊಂಡಿರುವ “ರಾಜಾಸಿಂಹ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ನಟ ಯಶ್‌ ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದರು. ಚಿತ್ರದ ಟ್ರೇಲರ್‌ ಹಾಗೂ ಹಾಡುಗಳ ಝಲಕ್‌ ಅನ್ನು ಅಂದು ಪ್ರದರ್ಶಿಸಲಾಯಿತು. ಸಹಜವಾಗಿಯೇ ಅನಿರುದ್ಧ್ ಎಕ್ಸೆ„ಟ್‌ ಆಗಿದ್ದರು. ಅದಕ್ಕೆ ಮುಖ್ಯವಾಗಿ ಎರಡು ಕಾರಣ.

ಮೊದಲನೇಯದಾಗಿ ಈ ಚಿತ್ರದಲ್ಲಿ ವಿಷ್ಣುವರ್ಧನ್‌ ಅವರ “ಸಿಂಹಾದ್ರಿಯ ಸಿಂಹ’ ಚಿತ್ರದ ನರಸಿಂಹೇಗೌಡ ಪಾತ್ರ ಇಲ್ಲಿ ಮುಂದುವರಿದಿದ್ದು ಒಂದಾದರೆ, ಮೊದಲ ಬಾರಿಗೆ ಆ್ಯಕ್ಷನ್‌ ಸಿನಿಮಾ ಮಾಡಿದ್ದು ಮತ್ತೂಂದು. “ಇವತ್ತು ಈ ಸಿನಿಮಾ ಆಗಿದೆ ಎಂದರೆ ಅದಕ್ಕೆ ಕಾರಣ ಅಪ್ಪಾವ್ರ (ವಿಷ್ಣುವರ್ಧನ್‌) ಶಕ್ತಿ. ಚಿತ್ರೀಕರಣ ಮಧ್ಯೆ ಸಾಕಷ್ಟು ಸಮಸ್ಯೆಗಳು ಎದುರಾದಾಗ ಅಪ್ಪಾವ್ರನ್ನ ನೆನೆಸಿಕೊಂಡೆವು. ಎಲ್ಲವೂ ಸುಲಭವಾಗಿ ಬಗೆಹರಿಯಿತು.

ಚಿತ್ರದಲ್ಲಿ  ಅಂಬರೀಶ್‌ ಅವರು ಕೂಡಾ ಕೇಳಿದ ಕೂಡಲೇ ಒಪ್ಪಿಕೊಂಡು ಬಂದು ನಟಿಸಿದರು. ಚಿತ್ರಕ್ಕೆ ಸಾಧು ಕೋಕಿಲ ಹಿನ್ನೆಲೆ ಸಂಗೀತ ನೀಡಬೇಕೆಂಬುದು ನಮ್ಮ ಆಸೆಯಾಗಿತ್ತು. ಅದರಂತೆ ಸಾಧುಕೋಕಿಲ ಕೂಡಾ ಒಪ್ಪಿಕೊಂಡರು. ಚಿತ್ರದಲ್ಲಿನ ತಾಯಿಯ ಪಾತ್ರವನ್ನು ಅಮ್ಮಾವ್ರ (ಭಾರತಿ ವಿಷ್ಣುವರ್ಧನ್‌) ಮಾಡಿದ್ದಾರೆ. ಅವರು ನನಗಾಗಿ ಮಾಡಿಲ್ಲ. ಪಾತ್ರ ಚೆನ್ನಾಗಿತ್ತೆಂಬ ಕಾರಣಕ್ಕೆ ನಟಿಸಿದ್ದಾರೆ’ ಎಂದರು ಅನಿರುದ್ಧ್.

ಮೊದಲ ಬಾರಿಗೆ ಆ್ಯಕ್ಷನ್‌ಚ ಸಿನಿಮಾವಾದ್ದರಿಂದ ಸ್ವಲ್ಪ ಭಯವಿತ್ತಂತೆ. ಆದರೆ, ಇಡೀ ತಂಡದ ಶ್ರಮದಿಂದ ಸಿನಿಮಾ ಚೆನ್ನಾಗಿ ಬಂದಿದೆ. ಆ್ಯಕ್ಷನ್‌ ದೃಶ್ಯಗಳು ಕೂಡಾ ಅದ್ಭುತವಾಗಿ ಮೂಡಿಬಂದಿವೆ’ ಎನ್ನುವುದು ಅನಿರುದ್ಧ್ ಮಾತು. “ಸಾಹಸ ಸಿಂಹ’ ಚಿತ್ರದ ಸಮಯದಲ್ಲಿ ವಿಷ್ಣುವರ್ಧನ್‌ ಅವರು ಆ ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಶ್ರಮ ಹಾಕಿದ್ದನ್ನು ನೋಡಿದ ಭಾರತಿ ವಿಷ್ಣುವರ್ಧನ್‌ ಅವರಿಗೆ ಈಗ ಅನಿರುದ್ಧ್ ಕೂಡಾ ಅದೇ ರೀತಿ “ರಾಜಾ ಸಿಂಹ’ ಚಿತ್ರದಲ್ಲಿ ಶ್ರಮ ಹಾಕಿ,

ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದನ್ನು ನೋಡಿದರಂತೆ. ಚಿತ್ರವನ್ನು ಸಿ.ಡಿ. ಬಸಪ್ಪ ಅವರು ನಿರ್ಮಿಸಿದ್ದಾರೆ. ಅವರ ಪ್ರಕಾರ, ಈ ಚಿತ್ರ ವಿಷ್ಣುವರ್ಧನ್‌ ಅಭಿಮಾನಿಗಳ ಸಂಗಮವಂತೆ. ಇನ್ನು, “ರಾಜಾ ಸಿಂಹ’ ಆ್ಯಕ್ಷನ್‌ ಸಿನಿಮಾ ಎಂದಾಗ ಮೊದಲು ಭಯವಾಯಿತಂತೆ. ಆದರೆ, ಅನಿರುದ್ಧ್ ಅವರ ಎನರ್ಜಿ ಹಾಗೂ ಅವರು ಸಿನಿಮಾವನ್ನು ಪ್ರೀತಿಸುವುದನ್ನು ನೋಡಿ ಭಯ ದೂರವಾಯಿತಂತೆ.

ಚಿತ್ರವನ್ನು ರವಿರಾಮ್‌ ನಿರ್ದೇಶಿಸಿದ್ದಾರೆ. “ಸಾಧಾರಣ ಸಿನಿಮಾ ಮಾಡಲು ಹೋಗಿ ಒಂದು ಅದ್ಭುತ ಸಿನಿಮಾ ಮಾಡಿದ್ದೇನೆ’ ಎನ್ನುವುದು ಅವರ ಮಾತು. ಉಳಿದಂತೆ ಚಿತ್ರದಲ್ಲಿ ನಟಿಸಿದ ಸಂಜನಾ, ಚಿತ್ರಕ್ಕೆ ಹಾಡು ಬರೆದ ಕವಿರಾಜ್‌ ಸೇರಿದಂತೆ ಅನೇಕರು ತಮ್ಮ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.