ಟಗರು ಶಿವ Speaking


Team Udayavani, Mar 9, 2018, 4:45 PM IST

Tagaru_(124).jpg

“ನಾವು ಚಿತ್ರ ನೋಡಿದಾಗ, ಅಲ್ಲಿ ಶಿವರಾಜಕುಮಾರ್‌ ಕಾಣಲಿಲ್ಲ. ಒಬ್ಬ ಕಾಪ್‌ ಕಂಡ …’ ಹಾಗಂತ ಹಲವು ಅಭಿಮಾನಿಗಳು, ಶಿವರಾಜಕುಮಾರ್‌ ಬಳಿ ಹೇಳಿಕೊಂಡರಂತೆ. ತಮಗೆ ಸಿಕ್ಕೆ ಅದ್ಭುತ ಕಾಂಪ್ಲಿಮೆಂಟ್‌ ಅದೇ ಎನ್ನುತ್ತಾರೆ ಶಿವರಾಜಕುಮಾರ್‌. “ಟಗರು’ ಹವಾ ಜೋರಾಗಿರುತ್ತದೆ ಎಂದು ಬಿಡುಗಡೆಯ ಮುಂಚೆಯೇ ಅವರಿಗೆ ಪಕ್ಕಾ ಆಗಿದ್ದರೂ, ಅದೂ ಈ ಲೆವೆಲ್‌ಗೆ ಹೋಗಬಹುದು ಎಂದು ಗೊತ್ತಿರಲಿಲ್ಲವಂತೆ.

“ನಾನು ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಚಿತ್ರ ನೋಡಿದೆ. ದ್ವಿತೀಯಾರ್ಧ ಬಹಳ ಚೆನ್ನಾಗಿದೆ. ನಿರೂಪಣೆ ಬಹಳ ಚೆನ್ನಾಗಿ ಮಾಡಿದ್ದಾರೆ ಸೂರಿ. Confuse or Convince ಅಂತಾರಲ್ಲ. ಅವರು ಎರಡೂ ಮಾಡಿದ್ದಾರೆ. ಮೊದಲು Confuse ಮಾಡಿ, ನಂತರ Convince ಮಾಡಿದ್ದಾರೆ. ನನಗೆ ಭಾವನಾ ಮತ್ತು ದೇವರಾಜ್‌ ಅವರ ಎಪಿಸೋಡ್‌ಗಳು ಬಹಳ ಖುಷಿಯಾಯಿತು. ಎಲ್ಲೂ ಎಳೆಯದೆ, ಎಷ್ಟು ಬೇಕೋ ಅಷ್ಟು ಚೆನ್ನಾಗಿ ಮಾಡಿದ್ದಾರೆ’ ಎಂದು ಸೂರಿಗೆ ಶಹಬ್ಭಾಸ್‌ಗಿರಿ ನೀಡುತ್ತಾರೆ ಶಿವರಾಜಕುಮಾರ್‌.

ಇನ್ನು ಬೇರೆ ಪಾತ್ರಗಳನ್ನು ಜನ ಗುರುತಿಸುತ್ತಿರುವ ಬಗ್ಗೆಯೂ ಅವರಿಗೆ ಖುಷಿ ಇದೆಯಂತೆ. “ಡಾಲಿ ಪಾತ್ರ ಯಾವಾಗಲೂ ನನ್ನ ಮನಸ್ಸಿನಲ್ಲಿತ್ತು. ಆ ಪಾತ್ರಕ್ಕೂ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಜನ ಆ ಪಾತ್ರದ ಬಗ್ಗೆ ಮಾತಾಡುತ್ತಿರೋದು ಬಹಳ ಖುಷಿ ಆಗುತ್ತೆ. ಬರೀ ಅದೊಂದೇ ಅಲ್ಲ, ಸಣ್ಣ ಪಾತ್ರಗಳ ಬಗ್ಗೆಯೂ ಜನ ಮಾತಾಡುತ್ತಿದ್ದಾರೆ. ಚಿಟ್ಟೆ, ಕಾಕ್ರೋಚ್‌, ಸರೋಜ ಪಾತ್ರಗಳ ಬಗ್ಗೆ ಜನ ಖುಷಿಪಟ್ಟಿದ್ದಾರೆ. “ಓಂ’ನಲ್ಲೂ ಇದೇ ತರಹ ಆಗಿತ್ತು. ಹರೀಶ್‌ ರೈ, ದಿಲೀಪ್‌ ಮುಂತಾದವರಿಗೂ ಒಳ್ಳೆಯ ಗುರುತು ಸಿಕ್ಕಿತ್ತು.

“ಜೋಗಿ’ಯಲ್ಲೂ ಬಿಡ್ಡ ಪಾತ್ರ ಹಿಟ್‌ ಆಗಿತ್ತು. ಈಗ ಪುನಃ “ಟಗರು’ ಚಿತ್ರದಲ್ಲೂ ಹಾಗಾಗುತ್ತಿದೆ’ ಎನ್ನುತ್ತಾರೆ ಶಿವರಾಜಕುಮಾರ್‌. ಶಿವರಾಜಕುಮಾರ್‌ ಅವರಿಗೆ ಒಂದು ಹಂತದಲ್ಲಿ ಭಯವೂ ಆಗಿತ್ತಂತೆ. “ಈ ತರಹ ನಿರೂಪಣೆ ಸ್ವಲ್ಪ ರಿಸ್ಕಿ ಅನಿಸಿದ್ದು ಹೌದು. ಹಾಡುಗಳು ಹಿಟ್‌ ಆಗಿ ಚಿತ್ರದ ಬಗ್ಗೆ ಒಂದು ಲೆವೆಲ್‌ ನಿರೀಕ್ಷೆ ಇತ್ತು. ಹೀಗಿರುವಾಗ, ಸ್ವಲ್ಪ ಮಿಸ್‌ ಆದರೂ ಕಷ್ಟ. ಚಿತ್ರ ನೋಡಿದ ಜನ, ಏನು ಹೀಗೆ ಮಾಡಿºಟ್ರಾ ಅಂತ ಮಾತಾಡಿಕೊಳ್ಳಬಾರದು.

ಹಾಗಾಗಿ ಸ್ವಲ್ಪ ಭಯ ಇತ್ತು. ಆದರೆ, ಚಿತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿನ  ನನ್ನ ವರ್ತನೆ, ಕೊಬ್ಬು, ಸಂಭಾಷಣೆ ಎಲ್ಲದರ ಬಗ್ಗೆ ಖುಷಿಪಟ್ಟಿದ್ದಾರೆ. ಅದರಲ್ಲೂ ಮಂಜು ಬರೆದ ಸಂಭಾಷಣೆಗಳು ಚೆನ್ನಾಗಿವೆ. “ರೈಲಿನೊಳಗೆ ನೀನು ಹೋದರೆ ಅದು ಜರ್ನಿ, ಅದೇ ನಿನ್ನ ಮೇಲೆ ರೈಲು ಹೋದರೆ ಅದು ಲಾಸ್ಟ್‌ ಜರ್ನಿ …’ ಎನ್ನುವ ಮಾತುಗಳನ್ನು ಜನ ಖುಷಿಡುತ್ತಿದ್ದಾರೆ’ ಎನ್ನುತ್ತಾರೆ ಶಿವರಾಜಕುಮಾರ್‌.

ಇನ್ನು “ಕಡ್ಡಿಪುಡಿ’ ಸೂರಿಗೂ, “ಟಗರು’ ಸೂರಿಗೂ ಏನು ವ್ಯತ್ಯಾಸ ಕಂಡಿರಿ ಎಂದರೆ, “ಮೇಕಿಂಗ್‌ ವೈಸ್‌ ಬಹಳ ರಿಚ್‌ ಆಗಿ ಮಾಡಿದ್ದಾರೆ. ಎರಡೂ ಚಿತ್ರಗಳಲ್ಲಿನ ಇನ್ನೊಂದು ವಿಷಯ ಎಂದರೆ, ಇಲ್ಲಿ ನಾಯಕ ಮತ್ತು ವಿಲನ್‌ ಇಬ್ಬರಿಗೂ ಹೃದಯ ಇದೆ ಮತ್ತು ಅವರಿಬ್ಬರೂ ತಮ್ಮ ಮನಸ್ಸು ಹೇಳಿದ ಮಾತುಗಳನ್ನು ಕೇಳುತ್ತಾರೆ.

ಇನ್ನೂ ಒಂದು ವಿಶೇಷತೆ ಎಂದರೆ, ಇಲ್ಲಿ ನಾಯಕ ಪೊಲೀಸ್‌ ಆಗಿದ್ದುಕೊಂಡು ಅಂಡರ್‌ವರ್ಲ್ಡ್ನ ಮಟ್ಟಹಾಕಿದರೆ,  “ಕಡ್ಡಿಪುಡಿ’ಯಲ್ಲಿ ನಾಯಕ ಅಂಡರ್‌ವರ್ಲ್ಡ್ನಲ್ಲಿದ್ದುಕೊಂಡೇ ರೌಡಿಗಳನ್ನು ಮಟ್ಟಹಾಕುವ ಪ್ರಯತ್ನ ಮಾಡುತ್ತಾನೆ. “ಕಡ್ಡಿಪುಡಿ’ ಚಿತ್ರವನ್ನು ಸೂರಿ ಹೇಗೆ ರೂಪಿಸಿದ್ದರೋ, ಅದಕ್ಕೆ ಉಲ್ಟಾ ಆಗಿ ಈ ಚಿತ್ರ ಮಾಡಿದ್ದಾರೆ. ಬಹಳ ಚೆನ್ನಾಗಿ ಇಡೀ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ’ ಎಂದು ಮೆಚ್ಚಿಕೊಳ್ಳುತ್ತಾರೆ ಶಿವರಾಜಕುಮಾರ್‌.

* ಚೇತನ್ ನಾಡಿಗೇರ್

ಟಾಪ್ ನ್ಯೂಸ್

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

1-asdas

Art of Living ಸಾಂಸ್ಕೃತಿಕ ಉತ್ಸವಕ್ಕೆ ಭಾವೈಕ್ಯದ ಸಮಾರೋಪ

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

court

Bhagavad Gita ಮೇಲೆ ಯಾರದ್ದೂ ಹಕ್ಕು ಸ್ವಾಮ್ಯ ಇಲ್ಲ: ದಿಲ್ಲಿ ಹೈಕೋರ್ಟ್‌

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

Noise ಪ್ರೊ ಎಸ್‌ಇ ಟಿಡಬ್ಲ್ಯುಎಸ್‌; ಒಮ್ಮೆ ಚಾರ್ಜ್‌ ಮಾಡಿದರೆ 45 ಗಂಟೆಗಳ ಕಾಲ ಕಾರ್ಯ

Noise ಪ್ರೊ ಎಸ್‌ಇ ಟಿಡಬ್ಲ್ಯುಎಸ್‌; ಒಮ್ಮೆ ಚಾರ್ಜ್‌ ಮಾಡಿದರೆ 45 ಗಂಟೆಗಳ ಕಾಲ ಕಾರ್ಯ

Belthangady ಕಾರಿಗೆ ಟೆಂಪೋ ಢಿಕ್ಕಿ: ಚಾಲಕನಿಗೆ ಹಲ್ಲೆ

Belthangady ಕಾರಿಗೆ ಟೆಂಪೋ ಢಿಕ್ಕಿ: ಚಾಲಕನಿಗೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

garadi

Sandalwood: ‘ಗರಡಿ’ ಮನೆಯಲ್ಲಿ ಪಾಟೀಲ್ ಖದರ್; ನ.10ಕ್ಕೆ ರಿಲೀಸ್

Totapuri 2 ಜಗ್ಗೇಶ್-ಡಾಲಿ ಜೊತೆಯಾಟ; ಸೆ.28ರಿಂದ ತೋತಾಪುರಿ ರುಚಿ

Totapuri 2 ಜಗ್ಗೇಶ್-ಡಾಲಿ ಜೊತೆಯಾಟ; ಸೆ.28ರಿಂದ ತೋತಾಪುರಿ ರುಚಿ

Sandalwood; ಈ ವಾರ ಏಳು ಚಿತ್ರಗಳು ತೆರೆಗೆ

Sandalwood; ಈ ವಾರ ಏಳು ಚಿತ್ರಗಳು ತೆರೆಗೆ

Vijay Eshwar; ತೆರೆ ಹಿಂದಿನ ಹೀರೋ: ಗೀತೆ ರಚನೆಕಾರ ವಿಜಯ್‌ ಈಶ್ವರ್‌

Vijay Eshwar; ತೆರೆ ಹಿಂದಿನ ಹೀರೋ: ಗೀತೆ ರಚನೆಕಾರ ವಿಜಯ್‌ ಈಶ್ವರ್‌

Vinod Prabhakar; ‘ರುಕ್ಕೋ ರುಕ್ಕೋ ರೋಮಿಯೋ…’ ಫೈಟರ್ ಹಾಡು ಬಂತು

Vinod Prabhakar; ‘ರುಕ್ಕೋ ರುಕ್ಕೋ ರೋಮಿಯೋ…’ ಫೈಟರ್ ಹಾಡು ಬಂತು

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

army

China border : ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ ಕಣ್ಗಾವಲಿಗೆ ತಂಡ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

Belthangady ಕಡಿರುದ್ಯಾವರದಲ್ಲಿ ಮತ್ತೆ ಕಾಡಾನೆ ದಾಳಿ

Belthangady ಕಡಿರುದ್ಯಾವರದಲ್ಲಿ ಮತ್ತೆ ಕಾಡಾನೆ ದಾಳಿ

Panemangalore Bridge ಬಿ.ಸಿ. ರೋಡ್‌ನ‌ಲ್ಲಿ ತಾಸು ಕಾಲ ಟ್ರಾಫಿಕ್‌ ಜಾಮ್‌

Panemangalore Bridge ಬಿ.ಸಿ. ರೋಡ್‌ನ‌ಲ್ಲಿ ತಾಸು ಕಾಲ ಟ್ರಾಫಿಕ್‌ ಜಾಮ್‌

1-asdas

Art of Living ಸಾಂಸ್ಕೃತಿಕ ಉತ್ಸವಕ್ಕೆ ಭಾವೈಕ್ಯದ ಸಮಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.