ಕನ್ನಡದ ಪ್ರೀತಿಗೆ ತಮಿಳಿನ ಹೆಸರು


Team Udayavani, Apr 21, 2017, 12:37 PM IST

21-SUCHI-3.jpg

ಈಗಾಗಲೇ “ಕಾದಲ್‌’ ಎಂಬ ಸಿನಿಮಾವೊಂದು ಸದ್ದಿಲ್ಲದೆಯೇ ಶುರುವಾಗಿ, ಚಿತ್ರೀಕರಣವನ್ನೂ ಪೂರ್ಣಗೊಳಿಸಿ ಇದೀಗ ಪ್ರೇಕ್ಷಕರ ಎದುರು ಬರಲು ಸಿದ್ದವಾಗಿದೆ. ಮೊದಲ ಹಂತವಾಗಿ ಚಿತ್ರದ ಆಡಿಯೋ ಸಿಡಿಯನ್ನು ಹೊರತಂದಿದೆ ಚಿತ್ರತಂಡ. ಇಲ್ಲಿ “ಕಾದಲ್‌’ ಅನ್ನೋದು ಯಾವ ಪದ ಎಂಬ ಗೊಂದಲ ಉಂಟಾಗಬಹುದು. ಆ ಗೊಂದಲ ವಾಣಿಜ್ಯ ಮಂಡಳಿಯಲ್ಲೂ ಇತ್ತು. ಶೀರ್ಷಿಕೆ ನೋಂದಣಿ ಮಾಡಿಸಲು ಹೋದ ನಿರ್ದೇಶಕರಿಗೆ “ಕಾದಲ್‌’ ಕನ್ನಡ ಪದವಲ್ಲ ಎಂಬ ಬಗ್ಗೆ ತಕರಾರು ಇತ್ತು. ಕೊನೆಗೆ ನಿರ್ದೇಶಕರು, ಇದು ನಿಘಂಟುವಿನಲ್ಲಿ “ಕಾದಲ್‌’ ಪದ ಇರುವ ಬಗ್ಗೆ ವಿವರಿಸಿದಾಗಲಷ್ಟೇ ಶೀರ್ಷಿಕೆ ಪಕ್ಕಾ ಆಗಿದೆ. ಆಮೇಲೆ ಸಿನಿಮಾ ಶುರುವಾಗಿ, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.

ಮುರಳಿ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ “ಮುಮ್ತಾಜ್‌’ ಚಿತ್ರ ಮಾಡಿದ್ದ ಮುರಳಿ ಈ ಸಿನಿಮಾ ಮೂಲಕ ಮುಮ್ತಾಜ್‌ ಮುರಳಿಯಾಗಿದ್ದಾರೆ. ಇದೊಂದು ಅಪ್ಪಟ ಪ್ರೇಮಕಥೆ ಎಂಬುದು ನಿರ್ದೇಶಕರ ಮಾತು. “ಸಹಾಯಕ ನಿರ್ದೇಶಕನೊಬ್ಬ ತನಗೆ ಗೊತ್ತಿಲ್ಲದೆಯೇ ಕ್ಯಾನ್ಸರ್‌ ಪೀಡಿತ ಹುಡುಗಿಯನ್ನು ಪ್ರೀತಿ ಮಾಡುತ್ತಾನೆ. ಆ ವಿಷಯ ಗೊತ್ತಾದಾಗ, ಅವನು ನಿರ್ದೇಶಕನಾಗುತ್ತಾನೋ ಅಥವಾ ತನ್ನ ಪ್ರೀತಿ ಉಳಿಸಿಕೊಳ್ಳಲು ಹೋರಾಡಿ, ಸಫ‌ಲನಾಗುತ್ತಾನೋ ಎಂಬುದೇ ಕಥೆಯ ಒನ್‌ಲೈನ್‌’ ಎನ್ನುತ್ತಾರೆ ನಿರ್ದೇಶಕ ಮುರಳಿ.

ಈ ಸಿನಿಮಾವನ್ನು ಎಸ್‌.ಸುರೇಶ್‌ ನಿರ್ಮಿಸಿದ್ದಾರೆ. ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಹೊಸ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಅಡಿಷನ್‌ಗೆ ಹೋಗಿದ್ದ ಎಸ್‌.ಸುರೇಶ್‌ ಅವರ ನಟನೆಯ ಕನಸು ನನಸಾಗಲಿಲ್ಲವಂತೆ. ಎಸ್‌.ಐ.ಟಿ ಕಾಲೇಜಿನಲ್ಲಿ ಪ್ರೊಫೆಸರ್‌ ಆಗಿರುವ ಸುರೇಶ್‌, ಆ ಕನಸನ್ನು ಮಗನ ಮೂಲಕ ನನಸು ಮಾಡಲು ಹೊರಟಿದ್ದಾರೆ. ಮಗನನ್ನು ನಾಯಕನನ್ನಾಗಿಸಿ, ಖುಷಿಯಿಂದ “ಕಾದಲ್‌’ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ ಅವರು.

ಇನ್ನು, ಸಿವಿಲ್‌ ಎಂಜನಿಯರ್‌ ಆಗಿರುವ ತುಮಕೂರಿನ ಆಕಾಶ್‌ ಈ ಚಿತ್ರದ ಹೀರೋ. ಅವರಿಗೆ ಇದು ಮೊದಲ ಸಿನಿಮಾ. ಇನ್ನು, ಇವರಿಗೆ ಮೈಸೂರಿನ ರಂಗಭೂಮಿ ನಟಿ ಧರಣಿ ನಾಯಕಿಯಾಗಿದ್ದಾರೆ. ಇವರಿಗೆ ಇದು ನಾಲ್ಕನೆ ಚಿತ್ರ. ಚಿತ್ರದಲ್ಲಿ ಸುಧಾಕರ್‌, ಮಂಜುನಾಥ್‌, ಕುಮಾರಿ ಭಾವನ ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಇಲ್ಲಿ ಕಾಣಿಸಿಕೊಳ್ಳುತ್ತಿವೆ. ಸಹೋದರ ಪವನ್‌ ಬರೆದಿರುವ ಗೀತೆಗೆ ಪ್ರವೀಣ್‌ ಸಂಗೀತ ನೀಡದ್ದಾರೆ. ಪದ್ಮಪ್ರಸಾದ್‌ ಜೈನ್‌ ಕೂಡ ಒಂದು ಗೀತೆ ರಚಿಸಿದ್ದಾರೆ. ಹರಿಕೃಷ್ಣ ಅವರ ನೃತ್ಯ ನಿರ್ದೇಶನವಿದೆ. ಅಲ್ಟಿಮೇಟ್‌ ಶಿವು ಅವರ ಸಾಹಸವಿದೆ. ಪೂರ್ಣ ಚಂದ್ರ ಭಕಾಟೆ ಕ್ಯಾಮೆರಾ ಹಿಡಿದರೆ, ಕಾರ್ತಿಕ್‌ ಸಂಕಲನ ಮಾಡಿದ್ದಾರೆ.

ಅಂದಹಾಗೆ, ಅಜೇಯ್‌ ರಾವ್‌ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. ಸಿ ಮ್ಯೂಸಿಕ್‌ ಕಂಪನಿಯ ಈ ಚಿತ್ರದ ಹಾಡುಗಳನ್ನು ಹೊರ ತಂದಿದೆ. ಜೂನ್‌ನಲ್ಲಿ  ಚಿತ್ರ ರಿಲೀಸ್‌ ಮಾಡಲು ನಿರ್ಮಾಪಕರು ತಯಾರಿ ನಡೆಸಿದ್ದಾರೆ.

ಟಾಪ್ ನ್ಯೂಸ್

ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಎರಡನೇ ಪಟ್ಟಿ ರಿಲೀಸ್

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಎರಡನೇ ಪಟ್ಟಿ ರಿಲೀಸ್

ball tampering

ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಮತ್ತೋರ್ವ ಕ್ರಿಕೆಟಿಗ: ನಾಲ್ಕು ಪಂದ್ಯಗಳ ನಿಷೇಧ ಶಿಕ್ಷೆ!

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹೃದಯಾಘಾತಗೊಂಡು ಎಎಸ್ಐ ಸಾವು

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ, ಯಾರೂ ಸೇರಲ್ಲ:ಸಿಎಂ ಬೊಮ್ಮಾಯಿ

ಸಿದ್ದು-ಡಿಕೆಶಿ ತಿಕ್ಕಾಟದಿಂದ ಹಲವರು ಕಾಂಗ್ರೆಸ್ ಬಿಡುತ್ತಾರೆ,ಯಾರೂ ಸೇರಲ್ಲ: ಸಿಎಂ ಬೊಮ್ಮಾಯಿ

vಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

Woke Up To Personal Message From PM Narendra Modi”: Chris Gayle

ಕ್ರಿಸ್ ಗೇಲ್ ಗೆ ಸಂದೇಶ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ: ಯುನಿವರ್ಸಲ್ ಬಾಸ್ ಹೇಳಿದ್ದೇನು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

totapuri

ಜ.24ರಂದು ಜಗ್ಗೇಶ್ ನಟನೆಯ ತೋತಾಪುರಿ ಆಡಿಯೋ ಟೀಸರ್‌ ಬಿಡುಗಡೆ

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

ಸಿನಿಮಾ ನಟಿಯರ ಕಿರುತೆರೆ ನಂಟು: ಸೀರಿಯಲ್‌ ನಲ್ಲಿ ಹೊಸ ಮಿಂಚು

No sankranthi Excitement in Kannada film industry

ಮಂಕಾದ ಸಿನಿ ಸಂಕ್ರಾಂತಿ: ಮುಹೂರ್ತ, ಸಿನ್ಮಾ ರಿಲೀಸ್‌ ಮಾಡಲು ಉತ್ಸಾಹವಿಲ್ಲ…

shivanna

ಬೈರಾಗಿ ಮಾತು ಮತ್ತು ಶಕ್ತಿಧಾಮದ ಕನಸು…: ಶಿವಣ್ಣ ಜೊತೆ ಚಿಟ್‌ಚಾಟ್‌

shivanna

ಸ್ಟೈಲಿಶ್‌ ಲುಕ್‌ನಲ್ಲಿ ಶಿವಣ್ಣ: “ಬೈರಾಗಿ’ ಗೆಟಪ್‌ಗೆ ಫ್ಯಾನ್ಸ್‌ ಫಿದಾ

MUST WATCH

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

udayavani youtube

ಗಣರಾಜ್ಯ ದಿನದ ಮೆರವಣಿಗೆ 2022

udayavani youtube

೭೩ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾರಾಜಿಸಿದ ಕರ್ನಾಟಕದ ಸ್ತಬ್ಧಚಿತ್ರ

udayavani youtube

ಕಾಂಗ್ರೆಸ್ ಕೊಳೆತು ನಾರುತ್ತಿರುವ ಮಾವಿನ ಹಣ್ಣು : ಈಶ್ವರಪ್ಪ ಲೇವಡಿ

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

ಹೊಸ ಸೇರ್ಪಡೆ

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹತ್ತು ಹಲವು ಸಮಸ್ಯೆ

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹತ್ತು ಹಲವು ಸಮಸ್ಯೆ

ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

ಕರಾವಳಿಯಲ್ಲಿ ಜಾನುವಾರುಗಳಿಗೆ ಬೈಹುಲ್ಲು ಕೊರತೆ

ಕರಾವಳಿಯಲ್ಲಿ ಜಾನುವಾರುಗಳಿಗೆ ಬೈಹುಲ್ಲು ಕೊರತೆ

27kalla

ಕಳ್ಳಿಲಿಂಗಸುಗೂರು-ಮುದಗಲ್‌ ರಸ್ತೆ ನಿರ್ಮಾಣಕ್ಕೆ ರೈತರ ವಿರೋಧ

26road

ರಸ್ತೆ ಕಾಮಗಾರಿ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.