ತನಿಖೆ ಪ್ರಗತಿಯಲ್ಲಿದೆ…

ಕೊಲೆಗಾರನ ಥ್ರಿಲ್ಲರ್‌ ಸ್ಟೋರಿ

Team Udayavani, Aug 30, 2019, 5:30 AM IST

ಕನ್ನಡದಲ್ಲಿ ‘ತನಿಖೆ’ ಎಂಬ ಸಿನಿಮಾವೊಂದು ಬಂದಿರೋದು ನಿಮಗೆ ಗೊತ್ತಿರಬಹುದು. ಈಗ ಅದೇ ಹೆಸರಿನಲ್ಲಿ ಮತ್ತೂಂದು ಸಿನಿಮಾ ಬರುತ್ತಿದೆ. ಹಾಗಂತ ಹಳೆಯ ‘ತನಿಖೆ’ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕನಕಪುರದಲ್ಲಿ ಎಂಬತ್ತು ವರ್ಷಗಳ ಹಿಂದೆ ನಡೆದ ಘಟನೆಯನ್ನಾಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ.

ಈ ಚಿತ್ರವನ್ನು ಜಿ.ಎಸ್‌.ಕಲಿಗೌಡ ನಿರ್ದೇಶಿ­ಸುತ್ತಿದ್ದಾರೆ. ಜೊತೆಗೆ ನಿರ್ಮಾಣದಲ್ಲೂ ಕೈ ಜೋಡಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ಕೆಟ್ಟ ವ್ಯಕ್ತಿಯೊಬ್ಬ ಎಲ್ಲರನ್ನೂ ಸಾಯಿಸುತ್ತಾ ಕೊನೆಗೆ ಸನ್ಮಾರ್ಗಕ್ಕೆ ಬಂದು ಕಾಡಿಗೆ ಹೋಗುತ್ತಾನೆ. ಈ ಕೇಸ್‌ನ ಬೆನ್ನು ಬಿದ್ದ ಪೊಲೀಸರು ಆತನನ್ನು ಮನವೊಲಿಸಿ ಕರೆತರುತ್ತಾರೆ. 20 ಕೊಲೆಗಳನ್ನು ಮಾಡಿರುವ ಆತ ಯಾರು, ಆತನ ಹಿನ್ನೆಲೆ ಏನು ಎಂಬ ಅಂಶದೊಂದಿಗೆ ಈ ಚಿತ್ರ ಸಾಗುತ್ತದೆ ಎನ್ನುತ್ತಾರೆ.

ಚಿತ್ರದಲ್ಲಿ ಆರ್‌.ಡಿ.ಅನಿಲ್ ನಾಯಕರಾಗಿ ನಟಿಸುತ್ತಿದ್ದಾರೆ. ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಬಿಕ್‌, ಸಂತೋಷ್‌ ಜಯಕುಮಾರ್‌, ಚಂದನಾ, ಮುನಿರಾಜು ಸೇರಿದಂತೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಮೈಸೂರು, ಪಾಂಡವಪುರ, ಕನಕಪುರ, ರಾಮನಗರ, ಚನ್ನಪಟ್ಟಣ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಚಿತ್ರಕ್ಕೆ ಕ್ರಿಸ್ಟೋಫ‌ರ್‌ ಲೀ ಸಂಗೀತವಿದೆ. ಶ್ಯಾಮ್‌ ಸಿಂಧನೂರು ಛಾಯಾಗ್ರಹಣ, ಅಲ್ಟಿಮೇಟ್ ಶಿವು ಸಾಹಸ ಚಿತ್ರಕ್ಕಿದೆ.ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಶಸ್ವಿಯಾಗಿ ನೂರು ಚಿತ್ರಗಳಲ್ಲಿ ಅಭಿನಯಿಸಿ, ಶತಕದ ಸಂಭ್ರಮದಲ್ಲಿರುವ ನಟ ರಮೇಶ್‌ ಅರವಿಂದ್‌, ಈ ವಾರ 101ನೇ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ....

  • ನಾನು ಎಲ್ಲಾ ಬಿಟ್ಟು, ಈ ರಂಗಕ್ಕೆ ಬಂದಿದ್ದೇ ಏನೋ ಮಾಡಬೇಕು ಅಂತ. ಚಾಲೆಂಜ್‌ ತೆಗೆದುಕೊಳ್ಳದಿದ್ದರೆ ಹೇಗೆ? ಕಂಫ‌ರ್ಟ್‌ ಜೋನ್‌ ಬಿಟ್ಟು ಬೇರೆ ಮಾಡಬೇಕು ಅಂದಾಗ,...

  • ಈಗಂತೂ ಮೊಬೈಲ್‌ನದ್ದೇ ಸುದ್ದಿ. ಯಾರ ಕೈ ನೋಡಿದರೂ ಮೊಬೈಲ್‌ ಇದ್ದೇ ಇರುತ್ತೆ. ಅದರಲ್ಲೂ ವಾಟ್ಸಾಪ್‌, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಟ್ವಿಟ್ಟರ್‌...ಹೀಗೆ ಒಂದಾ...

  • ಪ್ರೇಮ್‌ ನಿರ್ದೇಶನದ "ಏಕಲವ್ಯ' ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ದೊಡ್ಡ ಗ್ಯಾಪ್‌ನ ಬಳಿಕ ಲವ್‌ಸ್ಟೋರಿ ಮಾಡುತ್ತಿರುವ ಪ್ರೇಮ್‌, ಈ ಬಾರಿ ಸಖತ್‌ ಬೋಲ್ಡ್‌ ಕಥೆಯನ್ನೇ...

  • ಹಿರಿಯ ಸಾಹಿತಿ ಡಾ.ಬಿ.ಎಲ್‌.ವೇಣು ಅವರ ಐತಿಹಾಸಿಕ ಕಾದಂಬರಿ "ದಳವಾಯಿ ಮುದ್ದಣ' ಈಗ ದೃಶ್ಯರೂಪ ಪಡೆದುಕೊಂಡಿದೆ. "ದಳವಾಯಿ ಮುದ್ದಣ್ಣ' ಕಾದಂಬರಿ ಈಗ ಚಲನಚಿತ್ರಕ್ಕೆ...

ಹೊಸ ಸೇರ್ಪಡೆ