ಥಿಯೇಟರ್‌ ಆರಂಭ? ಲೆಕ್ಕಾಚಾರ ಶುರು


Team Udayavani, Jun 12, 2020, 4:45 AM IST

theatre-start

ಒಂದೆಡೆ ಕೋವಿಡ್‌ 19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೆ, ಮತ್ತೂಂದೆಡೆ ಸರ್ಕಾರ ನಿಧಾನವಾಗಿ ಲಾಕ್‌ ಡೌನ್‌ ಸಡಿಲಗೊಳಿಸಲು ಮುಂದಾಗುತ್ತಿದೆ. ಇನ್ನು ಎಲ್ಲ ಲಾಕ್‌ ಡೌನ್‌ಗಳೂ ತೆರೆಯುತ್ತಿದ್ದಂತೆ,  ಚಿತ್ರರಂಗದ ಚಟುವಟಿಕೆಗಳಿಗೆ ಬಿದ್ದಿದ್ದ ಬ್ರೇಕ್‌ ಕೂಡ ತೆರವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಈಗಾಗಲೇ ಕಿರುತೆರೆಯ ಚಟುವಟಿಕೆಗಳು ಶುರುವಾಗಿರುವು ದರಿಂದ, ಚಿತ್ರರಂಗದ ಚಟುವಟಿಕೆಗಳೂ ಶೀಘ್ರ ದಲ್ಲಿಯೇ ಶುರುವಾಗಬಹುದು  ಎಂಬ ನಿರೀಕ್ಷೆ ಚಿತ್ರರಂಗದ ಮಂದಿಯಲ್ಲಿದೆ.

ಅಲ್ಲದೆ ಜುಲೈ ತಿಂಗಳ ಮೊದಲ ವಾರದಲ್ಲಿಚಿತ್ರಮಂದಿರಗಳ ಓಪನ್ಗೆ ಮತ್ತು ಚಿತ್ರೀಕರಣಕ್ಕೆ ಅನುಮತಿ ನೀಡಬಹುದು  ಎಂಬ ಮಾತೂ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ,  ಸದ್ಯ ಕನ್ನಡದಲ್ಲಿ ಈಗಾಗಲೇ ರೆಡಿಯಾಗಿ ರುವ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳ ಪೈಕಿ ಯಾವುದು ಮೊದಲು ಬಿಡು ಗಡೆಯಾಗುತ್ತದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ, ಚಿತ್ರ ರಂಗದಲ್ಲಿ ಹೆಚ್ಚಾಗಿಯೇ ಇದೆ.  ಸದ್ಯ “ಸಲಗ’, ರಾಬರ್ಟ್‌’, “ಪೊಗರು’, “ಕೋಟಿಗೊಬ್ಬ 3′ ರಿಲೀಸ್‌ಗೆ ರೆಡಿ ಇದ್ದು, “ಯುವರತ್ನ’, “ಕೆಜಿಎಫ್ ಚಾಪ್ಟರ್‌ 2′ ಚಿತ್ರಗಳ ಕೊನೆ ಹಂತದ ಕೆಲಸಗಳು ಬಾಕಿ ಇವೆ.

ಇದೇ ವೇಳೆ ಈ ಸ್ಟಾರ್‌ ನಟರ ಚಿತ್ರಗಳ ನಿರ್ಮಾಪಕರು ಇತ್ತೀಚೆಗೆ ಸಭೆ ನಡೆಸಿ ಬಿಡುಗಡೆಯ ಬಗ್ಗೆ ಒಂದಷ್ಟು ಚರ್ಚಿಸಿದ್ದಾರೆ ಎನ್ನಲಾಗಿದೆ. ಕೋವಿಡ್‌ 19 ಲಾಕ್‌ ಡೌನ್‌ ಬಳಿಕ ಥಿಯೇಟರ್‌ ತೆರೆದಾಗ ಸಿನಿಮಾ ರಿಲೀಸ್‌ ಮಾಡುವ ರೀತಿ, ಪ್ರಚಾರ, ಪ್ರೇಕ್ಷಕರನ್ನು ಥಿಯೇಟರ್‌ ಕಡೆಗೆ ಸೆಳೆಯುವ ಬಗೆ ಮೊದಲಾದ  ವಿಷಯಗಳ ಬಗ್ಗೆ ನಿರ್ಮಾಪಕರು ಚರ್ಚಿಸಿ ದ್ದಾರೆ ಎನ್ನಲಾಗಿದೆ. ಚಿತ್ರರಂಗದ ಮೂಲಗಳ ಮಾಹಿತಿ ಪ್ರಕಾರ,  ಸದ್ಯ ಕನ್ನಡದ ಆರು ಸ್ಟಾರ್ಸ್‌ಗಳ ಚಿತ್ರಗಳು ಬಿಡು ಗಡೆಗೆ ರೆಡಿ ಇದ್ದು ಇವನ್ನು ಒಂದರ ಹಿಂದೊಂದರಂತೆ, ಸರದಿ ಯಲ್ಲಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿದೆ.

ನಿರ್ಮಾಪಕರಾದ ಗಂಗಾಧರ್‌, ಕೆ. ಪಿ ಶ್ರೀಕಾಂತ್‌, ಜಾಕ್‌ ಮಂಜು, ಉಮಾಪತಿ ಶ್ರೀನಿವಾಸಗೌಡ, ಕಾರ್ತಿಕ್‌ ಗೌಡ, ಯೋಗಿ ಜಿ ರಾಜ, ಜಯಣ್ಣ, ಸೂರಪ್ಪ ಬಾಬು ಮೊದಲಾದವರು  ಈಗಾಗಲೇ 2 ಬಾರಿ ಸಭೆ ನಡೆಸಿ, ಸದ್ಯ ಚಿತ್ರರಂಗದ ಆಗುಹೋಗು ಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಚಿತ್ರರಂಗದ ಮೂಲಗಳ ಮಾಹಿತಿ ಪ್ರಕಾರ ಚಿತ್ರಮಂದಿರಗಳು ತೆರೆದ ಮೇಲೆ ಮೊದಲು ಚಿತ್ರ ಬಿಡುಗಡೆ ಮಾಡುವವರಾರು, ಒಂದು  ಚಿತ್ರಕ್ಕೂ ಮತ್ತೂಂದು ಚಿತ್ರದ ರಿಲೀಸ್‌ಗೂ ಮಧ್ಯೆ ಗ್ಯಾಪ್‌  ಕೊಡುವ ಮತ್ತು ಈ ನಡುವೆ ಬೇರೆ ಬೇರೆ ಚಿತ್ರಗಳನ್ನು ಬಿಡುಗಡೆ ಮಾಡು ವವರಿಗೂ ಅನುಕೂಲ ಮಾಡಿಕೊಡುವುದು ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಒಟ್ಟೊಟ್ಟಿಗೆ ಸ್ಟಾರ್‌ಗಳ ಚಿತ್ರಗಳನ್ನು ಬಿಡುಗಡೆ ಮಾಡುವ  ಬದಲಿಗೆ ಸಮಯ ನೊಡಿಕೊಂಡು ಮಾಡಬೇಕು. ಎಷ್ಟು ದಿನಗಳ ಗ್ಯಾಪ್‌ ಕೊಡಬೇಕು ಎಂಬೆಲ್ಲ ವಿಷಯಗಳು ಈ ಸಭೆಯಲ್ಲಿ ಚರ್ಚೆಯಾಗಿವೆ. ಇನ್ನು, ಸೆನ್ಸಾರ್‌ ಆಗಿರುವ ರಿಲೀಸ್‌ಗೆ ರೆಡಿ ಇರುವ ಸುಮಾರು 60ಕ್ಕೂ ಹೆಚ್ಚಿನ ಚಿತ್ರಗಳಿದ್ದು,  ಅವರೇನಾದರೂ ಚಿತ್ರಮಂದಿರಗಳು ಓಪನ್‌ ಆದ ತಕ್ಷಣ ರಿಲೀಸ್‌ ಮಾಡುತ್ತೇವೆ ಅಂದರೆ ಅವರಿಗೂ ಚಿತ್ರಮಂದಿರಗಳಲ್ಲಿ ಅನುವು ಮಾಡಿಕೊಡಲಾಗವುದು ಎಂದು ಹಿರಿಯ ನಿರ್ಮಾಪಕರೊಬ್ಬರು ಹೇಳುತ್ತಾರೆ.

ಟಾಪ್ ನ್ಯೂಸ್

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.