ಹುಟ್ಟು ದರಿದ್ರವಾದ್ರೂ ಸಾವು ಚರಿತ್ರೆ ಆಗಿರಬೇಕು

ಗೋದ್ರಾ ಸಂದೇಶ

Team Udayavani, Jan 24, 2020, 5:39 AM IST

kaa-19

ಗುಜರಾತ್‌ ರಾಜ್ಯದ “ಗೋದ್ರಾ’ದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಭಾರೀ ಹಿಂಸಾಚಾರ ಅನೇಕರಿಗೆ ನೆನಪಿರಬಹುದು. ಈಗಲೂ “ಗೋದ್ರಾ’ ಘಟನೆ ಆಗಾಗ್ಗೆ ರಾಜಕೀಯ ವಲಯದಲ್ಲಿ ಒಂದಷ್ಟು ಸುದ್ದಿಗೆ ಕಾರಣವಾಗುತ್ತಲೇ ಇರುತ್ತದೆ. ಈಗ ಇದೇ “ಗೋದ್ರಾ’ದ ಬಗ್ಗೆ ಸ್ಯಾಂಡಲ್‌ವುಡ್‌ನ‌ಲ್ಲೂ ಒಂದಷ್ಟು ಸುದ್ದಿಯಾಗುತ್ತಿದೆ. ಅಂದಹಾಗೆ, “ಗೋದ್ರಾ’ಕ್ಕೂ ಗಾಂಧಿನಗರಕ್ಕೂ ಏನು ಸಂಬಂಧ ಅನ್ನೋದನ್ನ ಕೇಳ್ಳೋದಕ್ಕೂ ಮುನ್ನ, ನಾವೇ ಹೇಳ್ತೀವಿ ಕೇಳಿ.

“ಗೋದ್ರಾ’ ಎನ್ನುವ ಟೈಟಲ್‌ ಇಟ್ಟುಕೊಂಡು ಹೊಸ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ನಟ ನೀನಾಸಂ ಸತೀಶ್‌ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಟೀಸರ್‌ ಹೊರಬಂದಿದೆ. “ಕಾಶ್ಮೀರ, ಗೋದ್ರಾ ಮತ್ತು ಅಯೋಧ್ಯೆ ಸಮಸ್ಯೆಗಳು ಈ ದೇಶದಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ಸೂಕ್ಷ್ಮ ವಿಷಯಗಳು. ಆದರೆ, ಇದರ ಹಿಂದೆ ನೂರಾರು ಮುಖಗಳು ಇದೆ. ಕೆಲವರಿಗೆ ಈ ವಿಷಯದಲ್ಲಿ ವಾಸ್ತವವೇನು? ಏನು ನಡೆಯುತ್ತಿದೆ ಎಂಬ ಅರಿವಿದ್ದರೆ, ಇನ್ನು ಕೆಲವರಿಗೆ ಅದರ ಹಿಂದಿರುವ ಸತ್ಯದ ಅರಿವಿಲ್ಲ. ಇಂಥ ನೂರಾರು ಮುಖಗಳಲ್ಲಿ ನಮ್ಮ ಚಿತ್ರದ ಟೈಟಲ್‌ ಕೂಡ ಒಂದಾಗಿದೆ. ಇಲ್ಲಿ ನಕ್ಸಲ್‌ ವಾದ, ಪ್ರಸಕ್ತ ರಾಜಕಾರಣ, ಗಾಂಧಿವಾದ, ಬಂಡಾಯ, ಕ್ರಾಂತಿ ಹೀಗೆ ಹತ್ತಾರು ವಿಷಯಗಳ ಚರ್ಚೆಯಿದೆ. ಇವೆಲ್ಲದಕ್ಕೂ ಪೂರಕವೆನ್ನುವಂತೆ ಕೆಲ ನೈಜ ಘಟನೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ನಾವು ಹೇಳುತ್ತಿರುವ ಸಬ್ಜೆಕ್ಟ್ಗೆ ಸೂಕ್ತವೆನ್ನುವ ಕಾರಣಕ್ಕೆ “ಗೋದ್ರಾ’ ಅಂಥ ಟೈಟಲ್‌ ಇಟ್ಟಿದ್ದೇವೆ’ ಎಂದು ಟೈಟಲ್‌ ಬಗ್ಗೆ ಸಮಜಾ­ಯಿಷಿ ಕೊಡು­ತ್ತದೆ ಚಿತ್ರತಂಡ.

“ಭೂಮಿ ಮೇಲೆ ಹಲವರು ದರಿದ್ರರಾಗಿ ಹುಟ್ಟುತ್ತಾರೆ. ನಂತರ ಅವರ ಸಾವು ಚರಿತ್ರೆಯಾಗುತ್ತದೆ. ಈ ಚಿತ್ರದಲ್ಲಿ ನನ್ನದೂ ಅದೇ ರೀತಿ ಸಾಗುವ ಪಾತ್ರ’ ಎಂದು “ಗೋದ್ರಾ’ ಚಿತ್ರದ ತಮ್ಮ ಪಾತ್ರದ ಬಗ್ಗೆ ವಿವರಣೆ ಕೊಡುತ್ತಾರೆ ನಾಯಕ ನಟ ನೀನಾಸಂ ಸತೀಶ್‌. ಕೆಲ ಸಮಯದಿಂದ ಕನ್ನಡ ಚಿತ್ರಗಳಲ್ಲಿ ಅಪರೂಪವಾಗಿದ್ದ ನಟಿ ಶ್ರದ್ದಾ ಶ್ರೀನಾಥ್‌ ಇಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ವಸಿಷ್ಠ ಸಿಂಹ, ರಕ್ಷಾ, ಅಚ್ಯುತ ರಾವ್‌, ಬಲರಾಜವಾಡಿ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಹಿಂದೆ “ಸವಾರಿ’, “ಚಂಬಲ್‌’ ಮೊದಲಾದ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಕೆ.ಎಸ್‌ ನಂದೀಶ್‌ ಚೊಚ್ಚಲ ಬಾರಿಗೆ “ಗೋದ್ರಾ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ದೃಶ್ಯಗಳಿಗೆ ಬೇಕಾಗಿರುವ ಬೇಸಿಗೆ, ಮಳೆಗಾಲ, ತುಂಬಿ ಹರಿಯುವ ನದಿ, ಹೀಗೆ ಹತ್ತಾರು ಅಂಶಗಳು ಅವಶ್ಯಕತೆಯಿದ್ದರಿಂದ, ಇವೆಲ್ಲಾಕ್ಕೂ ಕಾದು ಚಿತ್ರೀಕರಣ ಮುಗಿಸಿರುವುದರಿಂದ ಚಿತ್ರ ಸುಮಾರು ಎರಡು ವರ್ಷ ಸಮಯ ತೆಗೆದುಕೊಂಡಿದೆಯಂತೆ. “ಜಾಕೋಬ್‌ ಫಿಲಂಸ್‌’ ಮತ್ತು “ಲೀಡರ್‌ ಫಿಲಂಸ್‌ ಪೊ›ಡಕ್ಷನ್ಸ್‌’ ಬ್ಯಾನರ್‌ನಲ್ಲಿ ಜಂಟಿಯಾಗಿ “ಗೋದ್ರಾ’ ಚಿತ್ರ ನಿರ್ಮಾಣವಾಗಿದೆ. ಸದ್ಯ ಟೀಸರ್‌ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಮಾರ್ಚ್‌ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.