ಅರೆಬೆಂದ ಹುಡುಗರ ಕಥೆ

ಅಪರಿಪೂರ್ಣತೆಯ ಸುತ್ತ ಪರಿಪೂರ್ಣ ಸಿನ್ಮಾ

Team Udayavani, Jan 17, 2020, 5:55 AM IST

ನೀವೇನಾದರೂ ಮೊಟ್ಟೆ ಪ್ರಿಯರೋ, ಆಮ್ಲೆಟ್‌ ಪ್ರಿಯರೋ ಆಗಿದ್ದರೆ, ಖಂಡಿತ “ಹಾಫ್ ಬಾಯಿಲ್ಡ್‌’ ಅನ್ನೋ ಪದದ ಬಗ್ಗೆ ಕೇಳಿರುತ್ತೀರಿ ಅಥವಾ ಮೊಟ್ಟೆಯನ್ನು ಅರ್ಧ ಬೇಯಿಸಿ ಅದರ ರುಚಿಗೊಂದಷ್ಟು ಉಪ್ಪು-ಖಾರ ಬೆರೆಸಿ “ಹಾಫ್ ಬಾಯಿಲ್ಡ್‌’ ಅಂಥ ಬಾಯಿ ಚಪ್ಪರಿಸುವವರನ್ನಾದರೂ ನೋಡಿರುತ್ತೀರಿ. ಈಗ ಯಾಕೆ “ಹಾಫ್ ಬಾಯಿಲ್ಡ್‌’ ಬಗ್ಗೆ ಮಾತು ಅಂತೀರಾ? ಅದಕ್ಕೊಂದಿಷ್ಟು ಕಾರಣವಿದೆ. ಇಲ್ಲೊಂದು ಹೊಸಬರ ತಂಡ ಈಗ ಇದೇ ಹೆಸರಿನಲ್ಲಿ, “ನಾವೆಲ್ರೂ ಹಾಫ್ ಬಾಯಿಲ್ಡ್‌’ ಅನ್ನೋ ಚಿತ್ರವನ್ನು ತೆರೆಯ ಮೇಲೆ ತರಲು ಹೊರಟಿದೆ.

ಅಂದಹಾಗೆ, “ನಾವೆಲ್ರೂ ಹಾಫ್ ಬಾಯಿಲ್ಡ್‌’ ಅಂಥ ಚಿತ್ರಕ್ಕೆ ಹೆಸರಿಡೋದಕ್ಕೂ ಬಲವಾದ ಕಾರಣವಿದೆ­ಯಂತೆ. “ಈಗಿನ ಕಾಲದ ಹುಡುಗರು ಯಾವುದನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಯಾವುದರಲ್ಲೂ ಪರಿಣಿತರಾಗಿರುವುದಿಲ್ಲ. ಯಾವುದರಲ್ಲೂ ಪರಿಪೂರ್ಣರಾಗಿರುವುದಿಲ್ಲ. ಹಿಡಿದ ಕೆಲಸವನ್ನು ಸಂಪೂರ್ಣವಾಗಿ ಮುಗಿಸುವುದಿಲ್ಲ. ಎಲ್ಲವನ್ನು ಅರ್ಧಂಬರ್ಧ ತಿಳಿದುಕೊಂಡಿರುತ್ತಾರೆ. ಎಲ್ಲವನ್ನೂ ಅರ್ಧಂಬರ್ಧ ಮಾಡುತ್ತಾರೆ. ಇಂಥ ಹುಡುಗರ ಜೀವನದ ಸುತ್ತ ಈ ಚಿತ್ರದ ಕಥೆ ನಡೆಯುವುದರಿಂದ, ಚಿತ್ರಕ್ಕೆ “ನಾವೆಲ್ರೂ ಹಾಫ್ ಬಾಯಿಲ್ಡ್‌’ ಅಂಥ ಹೆಸರಿಡಲಾಗಿದೆ’ ಎಂಬುದು ಚಿತ್ರದ ಟೈಟಲ್‌ ಕುರಿತು ಚಿತ್ರತಂಡದ ವಿವರಣೆ.

ಈಗಾಗಲೇ ಸದ್ದಿಲ್ಲದೆ ತನ್ನ ಕೆಲಸಗಳನ್ನು ಪೂರ್ಣಗೊಳಿಸಿರುವ “ನಾವೆಲ್ರೂ ಹಾಫ್ ಬಾಯಿಲ್ಡ್‌’ ಚಿತ್ರತಂಡ ಇದೇ ಜ. 24ಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ. ಸದ್ಯ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದಿತ್ತು. ಚಿತ್ರಕ್ಕೆ ಶಿವರಾಜ್‌ ಬಿ, ವೆಂಕಟಾಚಲ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕರು, “ಇಂದಿನ ಯುವಕರು ಜೀವನವನ್ನು ಹೇಗೆ ಅರ್ಥ ಮಾಡಿಕೊಂಡಿರುತ್ತಾರೆ. ನಮ್ಮ ಯುವಕರಿಗೆ ಹೇಳ್ಳೋರು, ಕೇಳ್ಳೋರು, ತಿಧ್ದೋರು ಇಲ್ಲದಿ­ದ್ದರೆ ಅವರ ಜೀವನದಲ್ಲಿ ಏನೆಲ್ಲ ಆಗಬಹುದು ಅನ್ನೋದನ್ನ ನಾಲ್ಕು ಹುಡು­ಗರನ್ನು ಇಟ್ಟುಕೊಂಡು ಈ ಚಿತ್ರದಲ್ಲಿ ಹೇಳಿದ್ದೇವೆ’ ಎಂದು ಚಿತ್ರದ ಕಥೆಯ ಎಳೆ ಬಿಚ್ಚಿಟ್ಟರು.

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ನಾವೆಲ್ರೂ ಹಾಫ್ ಬಾಯಿಲ್ಡ್‌’ ಚಿತ್ರ­ದಲ್ಲಿ ಸುನೀಲ್‌ ಕುಮಾರ್‌, ದೀಪಕ್‌, ಹಂಪೇಶ್‌, ಮಂಜುನಾಥ್‌ ನಾಯಕರಾಗಿ, ಮಾತಂಗಿ ಪ್ರಸನ್‌, ವಿನ್ಯಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ತಬಲನಾಣಿ, ದೇವದಾಸ್‌ ಕಾಪಿಕಾಡ್‌, ಪವನ್‌ ಕುಮಾರ್‌, ಅನಂತ್‌ ಇತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ರಮೇಶ್‌ ಕುಶಂಧರ್‌ ರೆಡ್ಡಿ ಕ್ಯಾಮರಾ ಹಿಡಿದರೆ, ಅದೇ ಚಿತ್ರಕ್ಕೆ ನೃತ್ಯ ನಿರ್ದೇಶಿಸಿದ್ದ ಪ್ರೇಮ್‌ ರಕ್ಷಿತ್‌ ಈ ಚಿತ್ರದ ಹಾಡಿಗೆ ಕೋರಿಯೋಗ್ರಾಫಿ ಮಾಡಿದ್ದಾರೆ. ಚಿತ್ರಕ್ಕೆ ನಾಗೇಂದ್ರ ಕೆ. ಉಜ್ಜನಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಿಜಯ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಬಹದ್ದೂರ್‌ ಚೇತನ್‌ ಸಾಹಿತ್ಯವಿದ್ದು, ತಬಲನಾಣಿ ಸಂಭಾಷಣೆಯಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಏನ್‌ ಸಖತ್‌ ಗುರು ಅವ್ನು....' - ಸಿನಿಮಾ ನೋಡಿ ಹೊರಬಂದವರು ಹೀಗೆ ಹೇಳಬೇಕು. ಅಂಥದ್ದೊಂದು ಸಿನಿಮಾ ಕಟ್ಟಿಕೊಡುವ ನಿಟ್ಟಿನಲ್ಲೇ ಕೆಲಸ ಮಾಡುತ್ತಿದ್ದೇನೆ. ಹೀಗೆ ಹೇಳುತ್ತಾ...

  • ಎರಡು ಹಾಡುಗಳನ್ನು ಫಾರಿನ್‌ನಲ್ಲಿಪ್ಲ್ಯಾನ್‌ ಮಾಡಿದ್ದೇವೆ... | ಚಿತ್ರದ ಮುಕ್ಕಾಲು ಭಾಗ ವಿದೇಶದಲ್ಲೇ ನಡೆಯಲಿದೆ.. | ವಿದೇಶದಲ್ಲಿ ಯಾರೂ ಮಾಡದ ಲೊಕೇಶನ್‌ನಲ್ಲಿ...

  • "ಟಗರು' ಚಿತ್ರದ "ಡಾಲಿ' ಪಾತ್ರದ ಮೂಲಕ ಅಬ್ಬರಿಸಿದ "ಡಾಲಿ' ಅಂದಿನಿಂದ ಇಂದಿನವರೆಗೆ ತಿರುಗಿ ನೋಡಿಲ್ಲ. ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ....

  • "ಸಿನಿಮಾ ಅಂದ್ರೆ ಅದು ಒಬ್ಬರಿಂದ ಆಗುವ ಕೆಲಸವಲ್ಲ. ಅಲ್ಲಿ ಹತ್ತಾರು ಜನರಿಸುತ್ತಾರೆ. ನೂರಾರು ಯೋಚನೆಗಳಿರುತ್ತವೆ. ಸಾವಿರಾರು ಚರ್ಚೆಗಳಾಗುತ್ತವೆ. ಅವೆಲ್ಲವೂ...

  • ಬಿಗ್‌ಬಾಸ್‌ ವಿನ್ನರ್‌ ಆಗಿ ಹೊರಬಂದ ಮೇಲೆ ಹತ್ತಾರು ಸಿನಿಮಾಗಳ ಆಫ‌ರ್ ಬರುತ್ತಿರು ವುದೇನೋ ನಿಜ. ಈಗಲೂ ನನಗೆ ಬರುವ ಸಿನಿಮಾ ಆಫ‌ರ್‌ಗಳ ಕಥೆ ಕೇಳುತ್ತೇನೆ. ಒಳ್ಳೆಯ...

ಹೊಸ ಸೇರ್ಪಡೆ