ವ್ಯಾಪ್ತಿ ಚಿಕ್ಕದು ಸ್ಪರ್ಧೆ ದೊಡ್ಡದು


Team Udayavani, Mar 30, 2018, 8:15 AM IST

31.jpg

ಕಳೆದ ವಾರ ತುಳು ಚಿತ್ರರಂಗದಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ಒಂದೇ ದಿನ ಎರಡು ತುಳು ಚಿತ್ರಗಳು ಬಿಡುಗಡೆಯಾಗಿವೆ ಒಂದೇ ದಿನ ಎರಡು ಸಿನಿಮಾ ಬಿಡುಗಡೆ ಮಾಡೋದು ತಪ್ಪಾ ಎಂದು ನೀವು ಕೇಳಬಹುದು. ಖಂಡಿತಾ ತಪ್ಪಲ್ಲ. ಆದರೆ, ತುಳು ಚಿತ್ರರಂಗದ ವ್ಯಾಪ್ತಿ, ವಿಸ್ತೀರ್ಣವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ…

ಚಿತ್ರಮಂದಿರದ ಸಮಸ್ಯೆ, ಒಂದೇ ವಾರ ಹಲವು ಚಿತ್ರಗಳ ಬಿಡುಗಡೆ, ಅದರಲ್ಲಿ ಯಾವ್ದುನ್ನು ನೋಡಬೇಕೆಂಬ ಪ್ರೇಕ್ಷಕನ ಗೊಂದಲ … ಇವೆಲ್ಲಾ ಬರೀ ಕನ್ನಡ ಚಿತ್ರರಂಗದ ಸಮಸ್ಯೆ ಅಲ್ಲ. ಈಗ ಈ ಸಮಸ್ಯೆ ತುಳು ಚಿತ್ರರಂಗಕ್ಕೂ ಶಿಫ್ಟ್ ಆಗಿದೆ. ತುಳು ಚಿತ್ರರಂಗದಲ್ಲಿ ಕೆಲವು ವರ್ಷಗಳಿಂದ ಚಟುವಟಿಕೆಗಳು ಗರಿಗೆದರಿವೆ, ಹಲವು ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೀಗೆ ಚಿತ್ರರಂಗ ಕ್ರಮೇಣ ಬೆಳೆಯುತ್ತಿದ್ದಂತೆಲ್ಲಾ, ಸಮಸ್ಯೆಗಳು ಆವರಿಸಿಕೊಳ್ಳುತ್ತಿವೆ. ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಚಿತ್ರಮಂದಿರಕ್ಕಾಗಿ,
ಬಿಡುಗಡೆಯ ದಿನಾಂಕಕ್ಕಾಗಿ ಸ್ಪರ್ಧೆ ಏರ್ಪಟ್ಟಿದೆ. ಅದಕ್ಕೆ ಸರಿಯಾಗಿ ಕರಾವಳಿ ಪ್ರದೇಶದಲ್ಲಿ ಕಳೆದ ವಾರ ಮೊದಲ ಬಾರಿಗೆ ಎರಡು ತುಳು ಚಿತ್ರಗಳು ಬಿಡುಗಡೆಯಾಗಿವೆ. ಸ್ಪರ್ಧೆ ಇರಬೇಕು ನಿಜ. ಯಾರಿಗಾದರೂ ಲಾಭವಾಗುವಂತಹ ಅಥವಾ ಚಿತ್ರರಂಗದ ಏಳಿಗೆಗೆ ಪೂರಕವಾಗುವ ಸ್ಪರ್ಧೆಯಾದರೆ ಅದು ಒಳ್ಳೆಯದೇ. ಆದರೆ, ಈ ಸ್ಪರ್ಧೆಯಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿದೆಯೇ ಹೊರತು ಲಾಭವಂತೂ ಅಲ್ಲ. ಮೊದಲೇ ಹೇಳಿ ದಂತೆ ತುಳು ಚಿತ್ರರಂಗ ಈಗಷ್ಟೇ ಬೆಳೆಯುತ್ತಿರುವ ಚಿತ್ರರಂಗ. ಅದರ ವ್ಯಾಪ್ತಿ ಚಿಕ್ಕದು.

ಹೀಗಿರುವಾಗಲೇ ವಾರಕ್ಕೆರಡು ಸಿನಿಮಾ ಬಿಡುಗಡೆ ಮಾಡುವ ಹಠಕ್ಕೆ ಅಲ್ಲಿನ ನಿರ್ಮಾಪಕರು ಬಿದ್ದಿದ್ದಾರೆ. ಬಿಡುಗಡೆಯಾದ 
“ಅಪ್ಪೆ ಟೀಚರ್‌’ ಹಾಗೂ “ತೊಟ್ಟಿಲ್‌’ ಚಿತ್ರಗಳ ಪೈಕಿ ಎರಡೂ ಚಿತ್ರಗಳಿಗೆ ಹೇಳಿಕೊಳ್ಳು ವಂತಹ ಲಾಭವೇನು ಆಗಿಲ್ಲ. ಒಂದೇ ದಿನ
ಎರಡು ಸಿನಿಮಾ ಬಿಡುಗಡೆ ಮಾಡೋದು ತಪ್ಪಾ ಎಂದು ನೀವು ಕೇಳಬಹುದು. ಖಂಡಿತಾ ತಪ್ಪಲ್ಲ  ಆದರೆ, ತುಳು ಚಿತ್ರರಂಗದ ವ್ಯಾಪ್ತಿ, ವಿಸ್ತೀರ್ಣವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಮಂಗಳೂರು, ಉಡುಪಿ, ಬೆಳ್ತಂಗಡಿ, ಮೂಡಬಿದಿರೆ, ಕಾರ್ಕಳ, ಮಣಿಪಾಲ… ಹೀಗೆ ಕೆಲವೇ ಕೆಲವು ಕಡೆ ತುಳು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದು
ಸುತ್ತು ತಿರುಗಿ ಬಂದರೂ ನಿಮಗೆ 10 ರಿಂದ 13 ಚಿತ್ರಮಂದಿರಗಳಷ್ಟೇ ಸಿಗುತ್ತವೆ. ಈ 13 ಚಿತ್ರಮಂದಿರಗಳು ಕೇವಲ ತುಳು ಸಿನಿಮಾಗಳನ್ನೇ ಹಾಕುತ್ತವೇ ಎಂದಲ್ಲ.

ಕನ್ನಡ ಸೇರಿದಂತೆ ಇತರ ಭಾಷೆಯ ಚಿತ್ರಗಳು ಇಲ್ಲಿ ಪ್ರದರ್ಶನ ಕಾಣುತ್ತವೆ. ಅದರ ಮಧ್ಯೆ ತುಳು ಸಿನಿಮಾ. ಹೀಗಿರುವಾಗ  ರಕ್ಕೆರಡು
ಚಿತ್ರಗಳು ಸ್ಪರ್ಧೆ ಯಲ್ಲಿ ಬಂದರೆ ಸರಿಯಾಗಿ ಚಿತ್ರಮಂದಿರಗಳು ಯಾವ ಸಿನಿ ಮಾಕ್ಕೆ ಸಿಗುತ್ತವೆ ಹೇಳಿ. ಜೊತೆಗೆ ತುಳು ಸಿನಿಮಾ
ನೋಡುವ ಪ್ರೇಕ್ಷಕರು ಕೂಡಾ ಈಗಷ್ಟೇ ತುಳು ಸಿನಿಮಾಗಳಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಏಕಾಏಕಿ ಎರಡು ಸಿನಿಮಾಗಳು ಬಂದರೆ ಯಾವುದನ್ನು ನೋಡೋದು, ಯಾವುದನ್ನು ಬಿಡೋದು ಎಂಬ ಗೊಂದಲ ಸಹಜವಾಗಿ ಪ್ರೇಕ್ಷಕನಿಗೆ ಎದುರಾಗೋದು ಸಹಜ.

ಮೂರು ವಾರಕ್ಕೊಂದು ಸಿನಿಮಾ: ತುಳು ಚಿತ್ರರಂಗದಲ್ಲಿನ ನಿರ್ಮಾಪಕರ ಸಂಘ ಬಿಡುಗಡೆಯನ್ನು ನಿಯಂತ್ರಿಸಲು ನಿಯಮವೊಂದು ಮಾಡಿತ್ತು. ಒಂದು ಸಿನಿಮಾ ಬಿಡುಗಡೆಯಾಗಿ ಮೂರು ವಾರ, ಯಾವುದೇ ಸಿನಿಮಾಗಳು ಬಿಡುಗಡೆಯಾಗಬಾರದು. ಬಿಡುಗಡೆಯಾದ ಸಿನಿಮಾ ಹಿಟ್‌ ಆಗಲಿ, ಫ್ಲಾಪ್‌ ಆಗಲಿ ಮೂರು ವಾರ ಬಿಟ್ಟೇ ಬರಬೇಕೆಂಬ ನಿಯಮ ರೂಪಿಸಿತ್ತು. ಒಂದೆರಡು ವರ್ಷದಿಂದ
ಅದರಂತೆ ನಡೆದುಕೊಂಡು ಬಂತು ಕೂಡಾ. ಆದರೆ, ಈ ನಿಯಮ ಕೇವಲ ಸಂಘದಲ್ಲಿ ಸದಸ್ಯರಾದವರಿಗೆ ಮಾತ್ರ ಅನ್ವಯವಾಗುತ್ತಿತ್ತು. ಸದಸ್ಯರಲ್ಲದವರು ಈ ನಿಯಮಕ್ಕೆ ತಲೆ¸ ಬಾಗಬೇಕಾಗಿರಲಿಲ್ಲ. ಇದೇ ಕಾರಣದಿಂದ ಈ ವಾರ ಎರಡು ಸಿನಿಮಾ
ಬಿಡುಗಡೆಯಾಗಿದೆ. ಜೊತೆಗೆ ಸಣ್ಣ ಮುನಿಸು, “ಇದು ಬೇಕಿತ್ತಾ’ ಎಂಬ ಮಾತುಗಳು ಕೇಳಿಬಂದಿವೆ. ಅದೇ ಕಾರಣದಿಂದ ತುಳು
ಚಿತ್ರ ನಿರ್ಮಿಸುವ ಎಲ್ಲರನ್ನು ಸಂಘ ದ ಸದಸ್ಯರನ್ನಾಗಿಸಲು ಸಂಘ ತೀರ್ಮಾನಿಸಿದೆ. 

ಈ ಬಗ್ಗೆ ಮಾತನಾಡುವ ತುಳು ಸಿನಿ ಮಾ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ್‌, “ಒಂದು ಸಿನಿಮಾ 
ಬಿಡುಗಡೆಯಾಗಿ ಮೂರು ವಾರ ಯಾವುದೇ ಸಿನಿಮಾ ಬಿಡುಗಡೆಯಾಗಬಾರದು ಎಂಬ ನಿಯಮ ಮಾಡಿದ್ದೇವೆ. ಆದರೆ, ಸಂಘದ ಸದಸ್ಯರಲ್ಲದವರಿಗೆ ಈ ನಿಯಮ ಅನ್ವಯವಾಗದ ಕಾರಣ, ಕಳೆದ ವಾರ ಎರಡು ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆಯಾಗಿವೆ ಮತ್ತು ಇಬ್ಬರಿಗೂ ಅದರಿಂದ ತೊಂದರೆಯಾಗಿದೆ. ಮುಂದೆ ಎಲ್ಲರನ್ನೂ ಒಟ್ಟು ಸೇರಿಸಿ, ತುಳು ಚಿತ್ರರಂಗದ ಒಳಿತಿಗೆ ಶ್ರಮಿಸಬೇಕಿದೆ’ ಎನ್ನುತ್ತಾರೆ ರಾಜೇಶ್‌. ಇದೇ ವೇಳೆ ತುಳು ಸಿನಿಮಾಗಳಿಗೆ ಥಿಯೇಟರ್‌ ಸಮಸ್ಯೆ ಇರುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. “ಮುಖ್ಯವಾಗಿ ತುಳು ಸಿನಿಮಾಗಳಿಗೆ ಚಿತ್ರಮಂದಿರದ ಸಮಸ್ಯೆ ಇದೆ. ಈಗ ಸಿಗೋದು 10 ರಿಂದ 13 ಚಿತ್ರಮಂದಿರಗಳು. ಸುಬ್ರಮಣ್ಯ, ಮೂಲ್ಕಿ, ಸುಳ್ಯ, ಕಟಪಾಡಿ … ಹೀಗೆ ಅನೇಕ ಕಡೆ ಚಿತ್ರಮಂದಿರಗಳಿಲ್ಲ. ಈ ಹಿಂದೆ ವಿಡಿಯೋ ಥಿಯೇಟರ್‌ ಇದ್ದಂತೆ ಸರ್ಕಾರ ಮಿನಿ ಚಿತ್ರಮಂದಿರ ಮಾಡಲು ಅನುಮತಿ ಕೊಟ್ಟರೆ ನಾವೇ ಚಿತ್ರಮಂದಿರ ಮಾಡಿಕೊಂಡು, ತುಳು ಸಿನಿಮಾಗಳನ್ನು ಇನ್ನೂ ಹೆಚ್ಚು ಜನಕ್ಕೆ ತಲುಪಿಸುತ್ತೇವೆ’ ಎನ್ನುವುದು ರಾಜೇಶ್‌ ಮಾತು.

ಟ್ರೆಂಡ್‌ ಬದಲಾಗಬೇಕಿದೆ: ತುಳು ಚಿತ್ರರಂಗದ ಮೂಲ ಬೇರು ಇರೋದು ತುಳು ರಂಗಭೂಮಿಯಲ್ಲಿ. ಅಲ್ಲಿಂದ ಪ್ರೇರೇಪಿತಗೊಂಡೇ ಬಹುತೇಕ ಸಿನಿಮಾಗಳು ಬರುತ್ತಿವೆ. ಹಾಗಾಗಿಯೇ ತುಳು ಸಿನಿಮಾ ಎಂದರೆ ಅದೊಂದು ಕಾಮಿಡಿ ಹಿನ್ನೆಲೆಯ ಸಿನಿಮಾ
ಎಂಬಂತಾಗಿದೆ. ಅದಕ್ಕೆ ಸರಿಯಾಗಿ ಇತ್ತೀಚಿನ ಐದಾರು ವರ್ಷಗಳಲ್ಲಿ ಬಂದ ಬಹುತೇಕ ಸಿನಿಮಾಗಳು ಕಾಮಿಡಿ ಜಾನರ್‌ನಲ್ಲೇ ಗುರುತಿಸಿಕೊಂಡಿವೆ. ಆರಂಭದಲ್ಲಿ ಸಿಕ್ಕ ಯಶಸ್ಸು ಈಗ ಕಡಿಮೆಯಾಗುತ್ತಿದೆ. ಪರಿಣಾಮ ನೋಡಿದ್ದನ್ನೇ ನೋಡಿ ಪ್ರೇಕ್ಷಕನಿಗೆ ಬೋರ್‌
ಆಗಿರೋದು. ಅದೇ ಕಾರಣದಿಂದ ತುಳು ಸಿನಿಮಾಗಳು ತಮ್ಮ ಟ್ರೆಂಡ್‌ ಬದಲಿಸಬೇಕಿದೆ ಎಂಬ ಮಾತುಗಳು ಈಗ ತುಳು ಚಿತ್ರರಂಗದಲ್ಲೇ ಕೇಳಿಬರುತ್ತಿವೆ. ಹೊಸ ಹೊಸ ಜಾನರ್‌ ಅನ್ನು ಪ್ರಯತ್ನಿಸುವ ಮೂಲಕ ತುಳು ಪ್ರೇಕ್ಷಕರ ಮೈಂಡ್‌ಸೆಟ್‌ ಮಾಡುವ ಅನಿವಾರ್ಯತೆ ಕೂಡಾ ಇದೆ ಎಂಬುದು ಈಗಿನ ಕೆಲವು ಯುವ ನಿರ್ದೇಶಕರ ಮಾತು. ಹಾಗಂತ ಹೊಸ ಜಾನರ್‌ನ ಸಿನಿಮಾಗಳು ತುಳುವಿನಲ್ಲಿ ಬರಲೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತಾ ಬಂದಿದೆ. ಆದರೆ, ಅದನ್ನು ಪ್ರೇಕ್ಷಕ ಸ್ವೀಕರಿಸಿಲ್ಲ. ಕಾರಣ,
ಪ್ರೇಕ್ಷಕನ ಮೈಂಡ್‌ಸೆಟ್‌. “ತುಳು ಚಿತ್ರರಂಗದ ಟ್ರೆಂಡ್‌ ಬದಲಾಗಬೇಕಿದೆ. ಇನ್ನೊಂದೆರಡು ವರ್ಷದಲ್ಲಿ ಬದಲಾಗುತ್ತದೆ ಎಂಬ ವಿಶ್ವಾಸವೂ ಇದೆ. ಬೇರೆ ಜಾನರ್‌ಗೆ ಸೇರಿದ ಸಿನಿಮಾವೊಂದು ದೊಡ್ಡ ಮಟ್ಟದಲ್ಲಿ ಗೆಲುವು ಕಂಡರೆ ಸಹಜವಾಗಿಯೇ ಟ್ರೆಂಡ್‌
ಹಾಗೂ ಮೈಂಡ್‌ಸೆಟ್‌ ಬದಲಾಗುತ್ತದೆ. ಈ ಹಿಂದೆ ಬಂದ ಕೆಲವು ಹೊಸ ಬಗೆಯ ಸಿನಿಮಾಗಳನ್ನು ಪ್ರೇಕ್ಷಕ ಸ್ವೀಕರಿಸಿದ್ದರೆ ಇಷ್ಟೊತ್ತಿಗೆ ತುಳು ಚಿತ್ರರಂಗದ ಟ್ರೆಂಡ್‌ ಬದಲಾಗುತ್ತಿತ್ತು. ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ಐದಾರು ಹಿಟ್‌ ಸಿನಿಮಾಗಳು ಬಂದಂತೆ ಇಲ್ಲಿ ವರ್ಷಕ್ಕೆ ಎರಡು ಸಿನಿಮಾವಾದರೂ ದೊಡ್ಡ ಮಟ್ಟದಲ್ಲಿ ಗೆದ್ದರೆ ತುಳು ಚಿತ್ರರಂಗದ ಸ್ವರೂಪ ಬದಲಾಗುತ್ತದೆ. ಈಗಾಗಲೇ ಹೊಸ ಚಿಂತನೆಯೊಂದಿಗೆ ಯುವ ನಿರ್ದೇಶಕರು, ನಾಯಕ ನಟರು ಬರುತ್ತಿದ್ದಾರೆ.’ ಎನ್ನುವುದು ರಾಜೇಶ್‌ ಬ್ರಹ್ಮಾವರ್‌ ಮಾತು.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.