ಮಲ್ಲಿಗೆ ಪರಿಮಳಕ್ಕೆ ವೆಂಕಟೇಶ್‌ ಫಿದಾ

Team Udayavani, Apr 7, 2017, 3:45 AM IST

Manasu-Mallige-(8).jpg

“ಕನ್ನಡದಲ್ಲಿ “ಮನಸು ಮಲ್ಲಿಗೆ’ ಆಯ್ತು. ಇಷ್ಟರಲ್ಲೇ ತೆಲುಗು ಮತ್ತು ತಮಿಳು ಭಾಷೆಯಲ್ಲೂ ಚಿತ್ರ ನಿರ್ಮಿಸುವ ತಯಾರಿ ನಡೆಯಲಿದೆ…’

– ಹೀಗೆ ಹೇಳುತ್ತಾ ಹೋದರು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌. ಮರಾಠಿಯ ಸೂಪರ್‌ ಹಿಟ್‌ “ಸೈರಾತ್‌’ ಚಿತ್ರ, ಕನ್ನಡದಲ್ಲಿ “ಮನುಸು ಮಲ್ಲಿಗೆ’ಯಾಗಿ ಬಿಡುಗಡೆಯಾಗಿದೆ. ಬಿಡುಗಡೆ ದಿನವೇ ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿದೆ. ಆ ಖುಷಿಗೆ ತಮ್ಮ ಚಿತ್ರತಂಡದ ಜತೆ ಪತ್ರಕರ್ತರೊಂದಿಗೆ ಮಾತುಕತೆ ನಡೆಸಿದರು ರಾಕ್‌ಲೈನ್‌ ವೆಂಕಟೇಶ್‌.

“ನಾನು “ಸೈರಾತ್‌’ ಚಿತ್ರ ನೋಡಿದಾಗ, ಅದರಲ್ಲಿ ಹೆತ್ತವರಿಗೆ, ಪ್ರೀತಿಸುವವರಿಗೆ, ಎಲ್ಲಾ ವರ್ಗದವರಿಗೂ ಒಂದೊಳ್ಳೆಯ ಸಂದೇಶ ಇದೆ ಅನಿಸಿತು. ತಕ್ಷಣವೇ ಆ ಚಿತ್ರದ ಹಕ್ಕು ಕೇಳಲು ಹೋದಾಗ, ಆ ಸಿನಿಮಾ ನಿರ್ಮಾಪಕ ಆಕಾಶ್‌ ಚಾವ್ಲಾ ಅವರು, ನಿಮ್ಮೊಂದಿಗೆ ನಾವೂ ನಿರ್ಮಾಣದಲ್ಲಿ ಸೇರಿಕೊಳ್ಳುತ್ತೇವೆ ಅಂತ “ಮನಸು ಮಲ್ಲಿಗೆ’ ನಿರ್ಮಾಣದಲ್ಲಿ ಸಾಥ್‌ ಕೊಟ್ಟರು. ಅಷ್ಟೇ ಅಲ್ಲ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲೂ ಜತೆಗೂಡಿಯೇ “ಸೈರಾತ್‌’ ರಿಮೇಕ್‌ ಮಾಡುತ್ತೇವೆ. ಈಗ ಸದ್ಯಕ್ಕೆ ತೆಲುಗು, ತಮಿಳಿನಲ್ಲಿ ಸಿನಿಮಾ ನಿರ್ಮಾಣ ಮಾಡುವ ಯೋಚನೆ ಇದೆ. ಆದರೆ, ಅಲ್ಲಿ ಆ ಭಾಷೆಯ ಚಿತ್ರಕ್ಕೆ ನಿರ್ದೇಶಕರ್ಯಾರು, ನಾಯಕ,ನಾಯಕಿ ಯಾರಿರುತ್ತಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ’ ಎಂದಷ್ಟೇ ಹೇಳಿದರು ರಾಕ್‌ಲೈನ್‌ ವೆಂಕಟೇಶ್‌. ನಿರ್ದೇಶಕ ಎಸ್‌. ನಾರಾಯಣ್‌ ಅವರಿಗೂ “ಮನಸು’ ಖುಷಿ ಕೊಟ್ಟಿದೆಯಂತೆ.

ಒಂದು ಯಶಸ್ವಿ ಸಿನಿಮಾವನ್ನು ಕನ್ನಡಕ್ಕೆ ತಂದು, ಯಶಸ್ಸುಗೊಳಿಸುವುದು ಸುಲಭವಲ್ಲ. ಅದರಲ್ಲೂ ಮೂಲ ಚಿತ್ರದ ಅವಧಿ ಜಾಸ್ತಿ ಇತ್ತು. ಕನ್ನಡದಲ್ಲಿ ಸಾಕಷ್ಟು ಕಡಿಮೆಗೊಳಿಸಿ ಮಾಡಲಾಗಿದೆ. ಇನ್ನು, ಈ ಚಿತ್ರ ನನ್ನ ಪಾಲಿಗೆ ಬಂದಾಗ, ನಾನು ಮೊದಲು ರಾಕ್‌ಲೈನ್‌ ಅವರಿಗೆ ನಾನು ಕೇಳುವ ಎರಡನ್ನು ನೀವು ಕೊಡಲೇಬೇಕು ಅಂದೆ. ಆಗ ಅವರು ನಾನು ಯಾವತ್ತು ಕೊಟ್ಟಿಲ್ಲ ಹೇಳಿ ಅಂದ್ರು. ಕೊನೆಗೆ ನಿಮಗೇನು ಬೇಕು ಅಂತ ಹೇಳಿ, ಅಂದಾಗ, ನಾನು ಮೂಲ ಸಿನಿಮಾದ ನಾಯಕಿ ರಿಂಕು ರಾಜಗುರು ಮತ್ತು ಸಂಗೀತ ನಿರ್ದೇಶಕ ಅಜಯ್‌ ಅತುಲ್‌ ಅವರೇ ಬೇಕು ಅಂದೆ. ತಕ್ಷಣವೇ ಎಲ್ಲವನ್ನೂ ಕೊಟ್ಟರು. ದೊಡ್ಡ ಯಶಸ್ವಿ ಸಿನಿಮಾ ಮಾಡುತ್ತಿದ್ದರಿಂದ ಜವಾಬ್ದಾರಿ ಹೆಚ್ಚಿತ್ತು. ಈಗ ಸಾರ್ಥಕ ಎನಿಸಿದೆ’ ಎಂದರು ನಾರಾಯಣ್‌. ನಾಯಕ ನಿಶಾಂತ್‌ಗೆ ಒಳ್ಳೇ ಸಿನಿಮಾದಲ್ಲಿ ಹೀರೋ ಆಗಿದ್ದಕ್ಕೆ ಸಿಕ್ಕಾಪಟ್ಟೆ ಖುಷಿಯಾಗಿದೆಯಂತೆ. ಕನ್ನಡಿಗರು ನಮ್ಮ ಹೊಸ ಪ್ರಯತ್ನವನ್ನು ಒಪ್ಪಿದ್ದನ್ನು ಎಂದಿಗೂ ಮರೆಯುವುದಿಲ್ಲ ಅಂತ ನಿಶಾಂತ್‌ ಹೇಳಿದರೆ, ನಾಯಕಿ ರಿಂಕು ರಾಜಗುರುಗೆ ಮೊದಲು ಕನ್ನಡ ಕಷ್ಟ ಎನಿಸಿತಂತೆ. ಆ ಬಳಿಕ ಭಾಷೆ ಸುಲಭವಾಗಿದ್ದಕ್ಕೆ ಸಿನಿಮಾದಲ್ಲಿ ಚೆನ್ನಾಗಿ ನಟಿಸಲು ಸಾಧ್ಯವಾಯಿತಂತೆ. ಛಾಯಾಗ್ರಾಹಕ ಮನೋಹರ್‌ ಜೋಶಿ, ನಿರ್ಮಾಪಕ ಆಕಾಶ್‌ ಚಾವ್ಲಾ ಅವರು “ಮನಸು ಮಲ್ಲಿಗೆ’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕುರಿತು ಮಾತನಾಡಿ ದರು.

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.