ಸಿತಾರ ನುಡಿಸುವ ಹುಡುಗಿಯ ಕಥೆ


Team Udayavani, Oct 13, 2017, 7:55 AM IST

sitara.jpg

ಈ ಹಿಂದೆ “ಶುಕ್ಲಾಂಬರಧರಂ’ ಎಂಬ ಸಿನಿಮಾ ಬಂದಿದ್ದು ನೆನಪಿರಬಹುದು. ಆ ಚಿತ್ರ ನಿರ್ದೇಶಿಸಿದ್ದ ಮಸ್ತಾನ್‌ ಈಗ ಮತ್ತೂಂದು ಚಿತ್ರ ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ಈ ವಾರ ಆ ಚಿತ್ರವನ್ನು ಪ್ರೇಕ್ಷಕರ ಎದುರು ತರಲು ಅಣಿಯಾಗಿದ್ದಾರೆ. ಹೌದು, ತುಂಬಾ ಗ್ಯಾಪ್‌ ಬಳಿಕ ಮಸ್ತಾನ್‌ “ಸಿತಾರ’ ಎಂಬ ಚಿತ್ರ ಮಾಡಿದ್ದಾರೆ. ಇದು ಈಗಿನ ಚಿತ್ರವಂತೂ ಆಲ್ಲ, ಶುರುವಾಗಿ ಐದು ವರ್ಷ ಕಳೆದಿದೆ. ತಡವಾಗಲು ಹಲವು ಕಾರಣಗಳಿವೆ. ಆದರೂ, ಒಂದೊಳ್ಳೆಯ ಚಿತ್ರ ಮಾಡಿರುವ ಖುಷಿಯಲ್ಲೇ, ನಿರ್ದೇಶಕ ಮಸ್ತಾನ್‌ “ಸಿತಾರ’ ಕುರಿತು ಹೇಳುತ್ತಾ ಹೋದರು.

“ಈ ಸಿನಿಮಾದ ಕಥೆ ಶುರುವಾಗೋದೇ, ದ್ವಿತಿಯಾರ್ಧದಿಂದ. ಚಿತ್ರದ ಶೀರ್ಷಿಕೆ ಹೇಳುವಂತೆ ಇದೊಂದು ಫ್ಯಾಮಿಲಿ ಕಥೆ. ಇಲ್ಲಿ ನಾಯಕಿ ಸಿತಾರ ನುಡಿಸುತ್ತಾಳೆ. ಅವಳ ಹೆಸರು ಕೂಡ ಸಿತಾರ. ಇಲ್ಲೊಂದು ಹೊಸ ಪ್ರಯತ್ನ ಮಾಡಿದ್ದೇನೆ. ಹಿಂದೆ ಬಂದ ಚಿತ್ರಗಳಲ್ಲಿ ಅತ್ತೆ ಮನೆಗೆ ಹೋದಾಗ ಸೊಸೆಗೆ ಹಿಂಸೆ ಕೊಡುವ ಚಿತ್ರಣ ಇರುತ್ತಿತ್ತು. ಆದರೆ, ಇಲ್ಲಿ ತನ್ನ ಮನೆಯಲ್ಲೇ ನಾಯಕಿ ಎಷ್ಟೊಂದು ಸ್ಟ್ರಗಲ್‌ ಮಾಡ್ತಾಳೆ ಅನ್ನುವ ಕಥೆ ಇದೆ. ನಾಯಕಿ ಎಷ್ಟು ತೊಂದರೆಗೆ ಒಳಪಡುತ್ತಾಳೆ. ಆಕೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾಳೆ ಅನ್ನೋದೇ ಕಥೆ. ಇದು ಹಿಂದಿನ ಕಾಲದ ಕಥೆ ಎನಿಸಿದರೂ, ಈಗಿನ ಕಾಲಕ್ಕೆ ಸಲ್ಲುವ ಚಿತ್ರವಂತೂ ಹೌದು’ ಎಂದು ಗಟ್ಟಿಯಾಗಿ ಹೇಳುತ್ತಾರೆ ಮಸ್ತಾನ್‌.

ಇನ್ನು, ನೇಹಾ ಪಾಟೀಲ್‌ಗೆ ಇದು ಮೊದಲ ಚಿತ್ರವಂತೆ. ಅವರು ಇಂಡಸ್ಟ್ರಿಗೆ ಬರೋಕೆ ಈ ಸಿನಿಮಾನೇ ಕಾರಣವಂತೆ. “ಐದು ವರ್ಷಗಳ ಹಿಂದೆ ಶುರುವಾದ ಚಿತ್ರ ಈಗ ರಿಲೀಸ್‌ಗೆ ರೆಡಿಯಾಗುತ್ತಿದೆ. ನನ್ನ ಕೆರಿಯರ್‌ ಶುರುವಾಗೋಕೆ “ಸಿತಾರ’ ಕಾರಣ. ನಿರ್ದೇಶಕರು ನನ್ನ ಮನೆಗೆ ಬಂದು ಕಥೆ ಹೇಳಿ, ಒಂದು ಡೈಲಾಗ್‌ ಕೊಟ್ಟು, ಅದನ್ನು ಹೇಳುವಂತೆ ಸೂಚಿಸಿದ್ದರು. ನಾನು ಡೈಲಾಗ್‌ ಹೇಳುವುದನ್ನು ವಿಡೀಯೋ ಕೂಡ ಮಾಡಿದ್ದರು. ಅಂದೇ ನನ್ನನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರು. ಆದರೆ, ಚಿತ್ರದ ನಿರ್ಮಾಪಕರು ನಿಧನರಾದರು. ಸಿನಿಮಾ ಆಗುತ್ತೋ, ಇಲ್ಲವೋ ಅಂದುಕೊಂಡಾಗ, ಡಾ.ವಿಜಯ್‌ ಅವರು ಬಂದು ಸಿನಿಮಾ ಪೂರ್ಣಗೊಳಿಸಿದ್ದಾರೆ. ಇಲ್ಲಿ ಎಲ್ಲರ ಸಹಕಾರದಿಂದ ಒಳ್ಳೆಯ ನಟನೆ ಮಾಡಲು ಸಾಧ್ಯವಾಗಿದೆ. ನಾನಿಲ್ಲಿ ಹಳ್ಳಿಯೊಂದರ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸಿಟಿಗೆ ಹೋಗಿ ಪುನಃ ಹಳ್ಳಿಗೆ ಬಂದು ಏನೆಲ್ಲಾ ಮಾಡ್ತಾಳೆ ಅನ್ನೋದು ಕಥೆ. ಇನ್ನು, ಸಿತಾರ ನುಡಿಸೋಕೆ ಬರಲ್ಲ. ಆದರೆ, ಹೇಗೆ ಹಿಡಿದುಕೊಳ್ಳಬೇಕು ಅಂತ ಹಿರಿಯ ನಟ ದತ್ತಣ್ಣ ಸಲಹೆ ಕೊಟ್ಟಿದ್ದರು’ ಅಂತ ನೆನಪಿಸಿಕೊಂಡರು ನೇಹಾ ಪಾಟೀಲ್‌.

ನಟಿ ನೀತು ಇಲ್ಲಿ ಅತಿಥಿ ಪಾತ್ರಮಾಡಿದ್ದಾರಂತೆ. ಅವರಿಲ್ಲಿ ಎನ್‌ಆರ್‌ಐ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಕೆರಿಯರ್‌ನಲ್ಲಿ ರೊಮ್ಯಾಂಟಿಕ್‌ ಹಾಡುಗಳು ಕಮ್ಮಿಯಂತೆ. ಆದರೆ, ಇಲ್ಲೊಂದು ಆ ರೀತಿಯ ಹಾಡು ಇರುವುದಕ್ಕೆ ಖುಷಿ ಇದೆ. ಒಳ್ಳೆಯ ಸಮಯದಲ್ಲೇ ಚಿತ್ರ ತೆರೆಗೆ ಬರುತ್ತಿದೆ. ನಿಮ್ಮೆಲ್ಲರ ಸಹಕಾರ ಇರಲಿ ಅಂದರು’ ನೀತು.

ನಿರ್ಮಾಪಕ ಡಾ.ವಿಜಯ್‌ ಅವರು ಒಳ್ಳೆಯ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಮಾಧ್ಯಮದವರ ಸಹಕಾರ ಬೇಕು ಅಂದರು. ಸಂಗೀತ ನಿರ್ದೇಶಕ ಚಂದ್ರಕಾಂತ್‌ ಅವರು ಐದು ಹಾಡುಗಳಿಗೆ ಸಂಗೀತ ನೀಡಿದ್ದಾರಂತೆ. ಸಂಕ್ರಾಂತಿ ಕುರಿತ ಒಂದು ಹಾಡು ಇಲ್ಲಿದೆ. ಮಿಕ್ಕಂತೆ ಎಲ್ಲಾ ಬಗೆಯ ಹಾಡುಗಳಿಗೂ ಜಾಗ ಕಲ್ಪಿಸಲಾಗಿದೆ ಎಂದರು ಚಂದ್ರಕಾಂತ್‌. ಈ ಚಿತ್ರದಲ್ಲಿ ಡಾ.ಮಹರ್ಷಿ ಆನಂದ ಗುರೂಜಿ ಕೂಡ ಒಂದು ಪಾತ್ರ ನಿರ್ವಹಿಸಿದ್ದಾರಂತೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.