ರಾಧೆ ಪುರಾಣ

ನೋಡ ನೋಡುತಾ ಕಾಡುವ ಕಥೆ...

Team Udayavani, Jul 19, 2019, 5:00 AM IST

ಸಂತು ನಂತರ ಮತ್ತೆ ಬರುತ್ತಿರುವುದಕ್ಕೆ ಎಕ್ಸೆ„ಟ್‌ ಆಗಿದ್ದೇನೆ….

-“ಸಂತು ಸ್ಟ್ರೈಟ್‌ ಫಾರ್ವರ್ಡ್‌’ ಚಿತ್ರದ ನಂತರ ನಟಿ ರಾಧಿಕಾ ಪಂಡಿತ್‌ ಮತ್ತೆ ಬಿಗ್‌ ಸ್ಕ್ರೀನ್‌ ಮೇಲೆ ಬರುತ್ತಿರುವುದರಿಂದ “ಆದಿಲಕ್ಷ್ಮಿ ಪುರಾಣ’ದ ಮೇಲೆ ರಾಧಿಕಾ ಪಂಡಿತ್‌ ಅವರಿಗೂ ಸಾಕಷ್ಟು ನಿರೀಕ್ಷೆ ಇದೆ. ಚಿತ್ರ ಇಂದು ತೆರೆಕಾಣುತ್ತಿದೆ. ಈ ಬಗ್ಗೆ ಮಾತನಾಡುವ ರಾಧಿಕಾ, “ಸುಮಾರು ಎರಡೂವರೆ ವರ್ಷಗಳ ನಂತರ, ಮದುವೆ ಆದ ಮೇಲೆ ನನ್ನ ಚಿತ್ರ ಬರುತ್ತಿರುವುದರಿಂದ, ಆಡಿಯನ್ಸ್‌, ಫ್ರೆಂಡ್ಸ್‌-ಹಿತೈಷಿಗಳು ಎಲ್ಲರಿಗೂ ಚಿತ್ರದ ಮೇಲೆ ಒಂದಷ್ಟು ಕುತೂಹಲವಿದೆ. ಎಲ್ಲರೂ ಕೂಡ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಇಂಥ ಮಾತುಗಳನ್ನ ಕೇಳುತ್ತಿದ್ದಂತೆ, ನಾನೂ ಕೂಡ ಈ ಚಿತ್ರದ ಮೇಲೆ ಸಾಕಷ್ಟು ಎಕ್ಸೆ„ಟ್‌ ಆಗಿದ್ದೇನೆ. ಇಂಥದ್ದೊಂದು ಸಬೆjಕ್ಟ್ ಚಿತ್ರ ಮಾಡಿದ್ದಕ್ಕೆ ಖುಷಿ ಇದೆ. ಇನ್ನು ಜನ ಹೇಗೆ ಸ್ವೀಕರಿಸುತ್ತಾರೋ ನೋಡೋಣ…’ ಎನ್ನುತ್ತಾರೆ.

“ಆದಿಲಕ್ಷ್ಮಿಪುರಾಣ’ ಚಿತ್ರವನ್ನು ಒಪ್ಪಿ ಕೊಳ್ಳಲು ಮುಖ್ಯ ಕಾರಣ ಅದರ ಸಬೆjಕ್ಟ್ ಅಂತೆ. ಈ ಬಗ್ಗೆ ಮಾತನಾಡುವ ರಾಧಿಕಾ, “ಮದುವೆಯಾದ ನಂತರ ನನಗೆ ಮ್ಯಾಚ್‌ ಆಗುವಂಥ ಸಬೆjಕ್ಟ್ ಅನ್ನೋ ಕಾರಣಕ್ಕೆ ಈ ಚಿತ್ರವನ್ನು ಒಪ್ಪಿಕೊಂಡಿಲ್ಲ. ನನ್ನ ಸಿನಿಮಾ ಕೆರಿಯರ್‌ನಲ್ಲಿ ಯಾವಾಗ ಈ ಚಿತ್ರದ ಆಫ‌ರ್‌ ಬಂದಿದ್ದರೂ, ಅದನ್ನ ಒಪ್ಪಿಕೊಳ್ಳುತ್ತಿದ್ದೆ. ಕಾರಣ ಅದರಲ್ಲಿರುವ ಕಥೆ ಮತ್ತು ನನ್ನ ಪಾತ್ರಕ್ಕೆ ಇರುವ ಇಂಪಾರ್ಟೆನ್ಸ್‌. ಹಾಗಂತ “ಆದಿಲಕ್ಷ್ಮಿಪುರಾಣ’ ಚಿತ್ರದಲ್ಲಿ ಆಹಾ… ಓಹೋ ಅನ್ನುವಂತ ಕಥೆಯೇನೂ ಇಲ್ಲ. ಆದ್ರೆ ನಮ್ಮ ನಡುವೆಯೇ ನಡೆಯುವ, ನಮ್ಮ ನಡುವೆಯೇ ಇರುವಂಥ, ಕಥೆ-ಪಾತ್ರ ಈ ಚಿತ್ರದಲ್ಲಿ ಇರುವುದರಿಂದ ನನಗೆ ಇಷ್ಟವಾಯ್ತು. ಸಿಂಪಲ್‌ ಕಥೆಯಾದ್ರೂ, ನೋಡುವವರಿಗೆ ಕಾಡುವಂಥ ಕ್ಯಾರೆಕ್ಟರ್‌ ಅದು. ಹಾಗಾಗಿ ಈ ಚಿತ್ರ ಮಾಡುವಂತಾಯ್ತು’ ಎನ್ನುತ್ತಾರೆ.

ಇನ್ನು ಎರಡೂವರೆ ವರ್ಷದ ನಂತರ ಆಡಿಯನ್ಸ್‌ ಮುಂದೆ ಬರುತ್ತಿರುವುದರಿಂದ, ರಾಧಿಕಾ ಪಂಡಿತ್‌ ಅವರ ಚಿತ್ರದಲ್ಲಿ ಏನೇನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ ಉತ್ತರಿಸುವ ರಾಧಿಕಾ, “ಇದು ಸಿಂಪಲ್‌ ಕಥೆ ಆದ್ರೂ ರಿಯಾಲಿಸ್ಟಿಕ್‌ ಕಥೆ. ಚಿತ್ರದಲ್ಲಿ ಬರುವ ಎಲ್ಲಾ ಕ್ಯಾರೆಕ್ಟರ್ ಹಾಗೇ ಇದೆ. ಇನ್ನು ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಲಕ್ಷ್ಮೀ ಅಂತ. ಚಿಕ್ಕ ವಯಸ್ಸಿನಿಂದಲೂ ನಾನು ದಪ್ಪ ಇದ್ದೀನೇನೊ ಅನ್ನೋ ಕಾಂಪ್ಲೆಕ್ಸ್‌ ಇಟ್ಟುಕೊಂಡು ಬೆಳೆದಿರುವಂಥ ಹುಡ್ಗಿ. ಇದಕ್ಕೆ ಸರಿಯಾಗಿ ಎಲ್ರೂ ಅವಳನ್ನ ಲಡ್ಡು, ಲಡ್ಡು ಲಕ್ಷ್ಮೀ, ಸೋಡಾಬುಡ್ಡಿ ಅಂಥ ಅಡ್ಡ ಹೆಸರಿನಿಂದ ಕರೆಯುತ್ತಿರುತ್ತಾರೆ. ಮನೆಯಲ್ಲಿ ತಮಾಷೆ ಮಾಡಿಕೊಂಡು ಇರುವಂಥ ಹುಡ್ಗಿ. ಇದ್ರಲ್ಲಿ ಒಂದು ಲವ್‌ಸ್ಟೋರಿ ಇದೆ, ಇಡೀ ಚಿತ್ರ ಕಾಮಿಕ್‌ ಆಗಿ ಸಾಗುತ್ತದೆ’ ಎನ್ನುತ್ತಾರೆ ರಾಧಿಕಾ.

ಮದುವೆಯ ಬಳಿಕ ಇಷ್ಟವಾದ ಮೊದಲ ಕಥೆ
ಮದುವೆಯಾದ ನಂತರ ರಾಧಿಕಾ ಪಂಡಿತ್‌ ಸುಮಾರು ಆರು ತಿಂಗಳು ಚಿತ್ರರಂಗದ ಎಲ್ಲಾ ಕೆಲಸ ಕಾರ್ಯಗಳಿಂದ ಗ್ಯಾಪ್‌ ತೆಗೆದುಕೊಂಡಿದ್ದರು. ಈ ವೇಳೆ ಕೆಲವೊಂದು ಕಥೆಗಳು ರಾಧಿಕಾ ಅವರನ್ನು ಹುಡುಕಿಕೊಂಡು ಬಂದಿದ್ದವು. ಅದರಲ್ಲಿ ಒಂದು ಕಥೆಯೇ “ಆದಿಲಕ್ಷ್ಮಿಪುರಾಣ’ವಂತೆ. ಇದರ ಬಗ್ಗೆ ಮಾತನಾಡುವ ರಾಧಿಕಾ, “ಮದುವೆಯ ನಂತರ ಕೇಳಿದ ಮೂರು-ನಾಲ್ಕು ಕಥೆಗಳಲ್ಲಿ, ಈ ಕಥೆ ನನಗೆ ಇಷ್ಟವಾಯ್ತು. ರಾಕ್‌ಲೈನ್‌ ವೆಂಕಟೇಶ್‌ ಅವರ ಕಡೆಯಿಂದ ಈ ಆಫ‌ರ್‌ ಬಂತು. ನಂತರ ನಿರ್ದೇಶಕಿ ಪ್ರಿಯಾ ಬಂದು ಕಥೆ ಹೇಳಿದ್ರು. ಯಶ್‌ ಅವರಿಗೂ ಈ ಕಥೆ ಇಷ್ಟವಾಯ್ತು. ನಂತರ ಇದನ್ನ ಮಾಡೋಣ ಅನ್ನೋ ನಿರ್ಧಾರಕ್ಕೆ ಬಂದೆ. ನಾನು ಮಾಡುವ ಯಾವುದೇ ಚಿತ್ರಕ್ಕಾದರೂ, ಒಂದಷ್ಟು ಪ್ರಿಪರೇಷನ್ಸ್‌, ಹೋಮ್‌ವರ್ಕ್‌ ಅಂತ ಮಾಡಿಕೊಳ್ಳುತ್ತೇನೆ’ ಎನ್ನುತ್ತಾ ಮಾತು ಮುಗಿಸಿದರು ರಾಧಿಕಾ.

ಜಿ.ಎಸ್‌.ಕಾರ್ತಿಕ ಸುಧನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಈಗಾಗಲೇ ಸಾಫ್ಟ್ವೇರ್‌ ಕ್ಷೇತ್ರದಿಂದ ಸಾಕಷ್ಟು ಮಂದಿ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಆ ಸಾಲಿಗೆ "ಧೀರನ್‌' ಚಿತ್ರದ ನಿರ್ದೇಶಕ ಕಮ್‌ ನಾಯಕ ಕೂಡ ಹೊಸದಾಗಿ...

  • ಸಾಮಾನ್ಯವಾಗಿ ಸ್ಟಾರ್‌ ನಟರ ಚಿತ್ರಗಳು ಅಂದಾಕ್ಷಣ, ಅಲ್ಲಿ ಸ್ಟಾರ್‌ ನಟಿಯರು ಕಾಣಿಸಿ­ಕೊಳ್ಳುವುದು ಸಹಜ. ಕನ್ನಡ ಮಾತ್ರವಲ್ಲ, ಪರಭಾಷೆ ಚಿತ್ರರಂಗದಲ್ಲೂ ಇದು...

  • ಟ್ರೇಲರ್‌, ಹಾಡು, ಸ್ಟಿಲ್‌ಗ‌ಳಿಂದ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದ "ಪೈಲ್ವಾನ್‌' ಚಿತ್ರ ಸೆ.12ರಂದು ತೆರೆಕಂಡಿದೆ. "ಹೆಬ್ಬುಲಿ' ಚಿತ್ರದ ನಂತರ ಕೃಷ್ಣ...

  • "ಗಿರಿಗಿಟ್‌' ಎಂಬ ತುಳು ಸಿನಿಮಾವೊಂದು ಬಿಡುಗಡೆಯಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಆಗಸ್ಟ್‌ 23 ರಂದು ತೆರೆಕಂಡಿದ್ದ ಈ ಚಿತ್ರ ಈಗ ಚಿತ್ರತಂಡ ಮೊಗದಲ್ಲಿ...

  • "ಇದು ನನ್ನ ಆಕಸ್ಮಿಕ ಎಂಟ್ರಿ. ಈ ಅವಕಾಶ, ಎನರ್ಜಿ ಎಲ್ಲವೂ ನನ್ನ ಅಣ್ಣನಿಂದಲೇ ಬಂದಿದೆ. ಈ ಎಲ್ಲಾ ಕ್ರೆಡಿಟ್‌ ನನ್ನ ಅಣ್ಣನಿಗೇ ಸಲ್ಲಬೇಕು ...' - ಹೀಗೆ ಹೇಳಿದ್ದು ಯುವ...

ಹೊಸ ಸೇರ್ಪಡೆ

  • ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕು ವಡ್ಡು ಗ್ರಾಮದಲ್ಲಿ ಆರು ವರ್ಷದ ಬಾಲಕಿ ನಿಗೂಢ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಜಿಲ್ಲಾಡಳಿತ, ಜಿಲ್ಲಾ...

  • ಹಾವೇರಿ: ಇತ್ತೀಚೆಗೆ ಜಿಲ್ಲೆಯಲ್ಲಿ ಉಲ್ಬಣಿಸಿದ ನೆರೆ ಹಾಗೂ ಅತಿವೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಷ್ಟೇ ಅಲ್ಲ ನಗರ ಪ್ರದೇಶಗಳಲ್ಲಿಯೂ ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು...

  • ಗಜೇಂದ್ರಗಡ: ರಾಜ್ಯ ಶಿಕ್ಷಣ ಇಲಾಖೆ, ಜಿಲ್ಲಾ ಸ್ವಿಪ್‌ ಸಮಿತಿ, ಜಿಪಂ ಹಾಗೂ ಬಿ.ಎಸ್‌. ಸಿಂಹಾಸನದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಮತದಾರ...

  • ಗಜೇಂದ್ರಗಡ: ವಾಯು ವಿವಾಹರ ಜೊತೆಗೆ ಪಟ್ಟಣದ ಜನರ ಮನತಣಿಸುವ ಉದ್ದೇಶದಿಂದ ನಿರ್ಮಿಸಿದ್ದ ಉದ್ಯಾನವನ ಇದೀಗ ಕುರಿಗಳ ದೊಡ್ಡಿಯಾಗಿ ಪರಿವರ್ತನೆಯಾಗಿದೆ. ಇದು...

  • ಸವದತ್ತಿ: ಹಳ್ಳಿಗಳ ರಾಷ್ಟ್ರ ಭಾರತದಲ್ಲಿರುವ ಪ್ರತಿ ಕುಟುಂಬಗಳಿಗೆ ನೀರಿನ ಕೊರತೆಯಾಗದಂತೆ ನಳಗಳ ಮೂಲಕ ನೀರಿನ ಪೂರೈಕೆ ಮಾಡುವ ಜವಾಬ್ದಾರಿ ಕೇಂದ್ರ ಸರಕಾರದ್ದು...