ರಘು ಬರೆದ ಕಥೆ ವ್ಯಥೆ…


Team Udayavani, Jun 8, 2018, 6:00 AM IST

cc-36.jpg

ಇದುವರೆಗೂ 39 ಚಿತ್ರಗಳನ್ನು ನಿರ್ದೇಶಿಸಿರುವ ರಘು ಅವರ ಪರಿಸ್ಥಿತಿ ಇಂದು ದಾರುಣವಾಗಿದೆ. ಚಿಕಿತ್ಸೆಗಷ್ಟೇ ಅಲ್ಲ, ಪ್ರತಿ ನಿತ್ಯದ ಖರ್ಚಿಗೂ ಕಷ್ಟಪಡುತ್ತಿರುವ ರಘು ಅವರು, ತಮ್ಮ ನೋವಿನ ಕಥೆಯನ್ನು ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ಚಿತ್ರರಸಿಕರಿಗೆ ಬರೆದಿರುವ ಈ ಪತ್ರದ ಸಾರಾಂಶ ಹೀಗಿದೆ.

ನಮಸ್ಕಾರ,
ನನ್ನ ಕನ್ನಡ ಚಿತ್ರರಂಗದ ನಂಟು ಪ್ರಾರಂಭವಾಗಲು ಸಾಹಿತ್ಯ ರತ್ನ ಚಿ. ಉದಯಶಂಕರ್‌ ಕಾರಣ. ಅಣ್ಣಾವ್ರ ಕಂಪೆನಿಯಲ್ಲಿ ಮುಖ್ಯ ಬರಹಗಾರರಾದ ಅವರು ನನ್ನ ಕನ್ನಡ ಬರವಣಿಗೆ ಮೆಚ್ಚಿ ಅವರು ಅಣ್ಣಾವ್ರ ಸಿನಿಮಾಗೆ ಬರೆಯುವ ಎಲ್ಲಾ ಸ್ಕ್ರಿಪ್ಟ್ಗಳನ್ನು ಕಾಪಿ ಮಾಡಲು ನನ್ನನ್ನು ನೇಮಕ ಮಾಡಿದರು. ಆ ಮೂಲಕ ಅಣ್ಣಾವರ ಸಿನಿಮಾಗೆ ಕಿರು ಸೇವೆ ಮಾಡುವ ಅವಕಾಶ ನನಗೆ ಲಭಿಸಿತು. ಮೊದ ಮೊದಲು ನಾನು ಸ್ಕ್ರಿಪ್ಟ್ ಕಾಪಿ ಮಾಡಿದ್ದು “ಬಂಗಾರದ ಪಂಜರ’. ಆ ವೇಳೆ ನನಗೆ ಅಣ್ಣಾವ್ರ ತಮ್ಮ ವರದಣ್ಣನವರ ಪರಿಚಯವಾಗಿ ಅವರ ಮೂಲಕ ಅಣ್ಣಾವ್ರು ನಟಿಸಿದ “ಮೂರುವರೆ ವಜ್ರಗಳು’ ಎಂಬ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟರು. ನಂತರದ ದಿನಗಳಲ್ಲಿ ಚಿ. ಉದಯಶಂಕರ್‌ ಅವರು ನನ್ನನ್ನು ಹಿರಿಯ ನಿರ್ದೇಶಕ ವೈ.ಆರ್‌. ಸ್ವಾಮಿ ಹಾಗೂ ಅನಂತ ಆಚಾರಿ ಅವರ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟರು. “ದೇವರ ಕಣ್ಣು’ ಚಿತ್ರದ ಮೂಲಕ ನನಗೆ ಅಂಬರೀಶ್‌ ಅವರ ಪರಿಚಯವಾಯಿತು. ಹಾಗೆ ಸಹ ನಿರ್ದೇಶಕರಾಗಿ ಅವರ ಜೊತೆ ಏಳು ಚಿತ್ರಗಳಲ್ಲಿ ಕೆಲಸ ಮಾಡಿದ ಅವಕಾಶ ನನಗೆ ಲಭಿಸಿತು. ನನ್ನ ಮೇಲೆ ಅಂಬರೀಶ್‌ ಅವರು ನಂಬಿಕೆ ಇಟ್ಟು, ಅಭಿಮಾನದಿಂದ ನಟನಾಗಿ ನಟಿಸಿದ “ನ್ಯಾಯ ನೀತಿ ಧರ್ಮ’ ಚಿತ್ರವನ್ನು ಸ್ವತಂತ್ರವಾಗಿ ನಿರ್ದೇಶನ ಮಾಡುವ ಅವಕಾಶ ಕೊಟ್ಟರು. ಜೊತೆಗೆ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿನಯದ “ಮೇರಿ ಅದಾಲತ್‌’ ಎಂಬ ಹಿಂದಿ ಚಿತ್ರವನ್ನೂ ನಿರ್ದೇಶಿಸಿದ್ದೇನೆ.

ಅಂಬರೀಶ್‌ ಅವರ ಅತಿ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ನನಗೆ ಸೇರಿದೆ. ಆದ್ದರಿಂದ ಅಭಿಮಾನಿಗಳು ನನ್ನನ್ನು ಅಂಬರೀಶ್‌ ಅವರ ಆತ್ಮೀಯ ನಿರ್ದೇಶಕರೆಂದು ನನ್ನನ್ನು ಪ್ರೀತಿಸಿದರು. ಅಣ್ಣಾವರ ಕಂಪೆನಿಯಲ್ಲಿ ಕನ್ನಡ ಚಿತ್ರಗಳಿಗೆ ಕೆಲಸ ಮಾಡುವ ಅವಕಾಶ ಸಿಕ್ಕಂತೆ, ಅವರ ಮಕ್ಕಳಾದ ಶಿವರಾಜಕುಮಾರ್‌ ಜೊತೆ “ಶಿವಸೈನ್ಯ’, “ಕುರುಬನ ರಾಣಿ’, “ಅಶೋಕ’ ಚಿತ್ರಗಳಲ್ಲಿ ಪೋಷಕ ಪಾತ್ರ ಮಾಡಿದ್ದೇನೆ. ಅಲ್ಲದೆ, ನಟ ಮುರಳಿ ಅವರ ಜೊತೆ “ಗೋಪಿ’, ದೇವರಾಜ್‌ ಮತ್ತು ಮಾಲಾಶ್ರೀ ನಟಿಸಿದ “ಅಗ್ನಿ ಸಾಕ್ಷಿ’, “ದುನಿಯಾ’ ವಿಜಯ್‌ ನಟಿಸಿದ “ವೀರಬಾಹು’, ದರ್ಶನ್‌ ಅಭಿನಯದ “ಪ್ರಿನ್ಸ್‌’ ಚಿತ್ರದಲ್ಲೂ ನಟಿಸಿದ್ದೇನೆ. ಹಲವು ನಾಯಕ ನಟರು, ಕಲಾವಿದರು ನನ್ನ ನಿರ್ದೇಶನದಲ್ಲಿ ಮಿಂಚಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ಜನಪ್ರಿಯ ನಟರಾಗಿ ನಿರ್ಮಾಪಕ, ನಿರ್ದೇಶಕರಾಗಿರುವ ಅರ್ಜುನ್‌ ಸರ್ಜಾ ಅವರು ಹಿಂದೆ ಬಾಲನಟರಾಗಿ ನಟಿಸುತ್ತಿದ್ದರು. ಅವರನ್ನು “ಆಶಾ’ ಚಿತ್ರದ ಮೂಲಕ ನಾಯಕ ನಟರಾಗಿ ನಟಿಸುವ ಮೂಲಕ ಅವಕಾಶ ನೀಡಿರುತ್ತೇನೆ. ಜೊತೆಗೆ ಬಾಲನಟಿಯಾಗಿದ್ದ ಬೇಬಿ ಇಂದಿರಾಳಿಗೂ ಕೂಡ ನಾಯಕಿ ನಟಿಯಾಗಿ ನಟಿಸುವ ಅವಕಾಶವನ್ನು ನೀಡಿರುತ್ತೇನೆ. ಅಷ್ಟೇ ಅಲ್ಲ, ಕನ್ನಡದಲ್ಲಿ ನಟ ರಘುವೀರ ಅವರನ್ನು “ಅಜಯ ವಿಜಯ’ ಚಿತ್ರದ ಮೂಲಕ ನಾಯಕ ನಟರನ್ನಾಗಿಸಿ, ಚಿತ್ರರಂಗಕ್ಕೆ ಪರಿಚಯ ಮಾಡಿರುತ್ತೇನೆ. ಜೊತೆಗೆ ರಘುವೀರನ ಸ್ನೇಹಿತರಾದ ಶೋಭರಾಜ್‌ ಅವರನ್ನು ಸಹ ಕನ್ನಡ ಚಿತ್ರರಂಗದಲ್ಲಿ ನಟಿಸುವಂತೆ ಮಾಡಿ ಅವಕಾಶ ನೀಡಿ ಇಂದು ಶೋಭರಾಜ್‌ ಅವರು ದೊಡ್ಡ ಮಟ್ಟದ ಖಳನಾಯಕರಾಗಿ ಜನಪ್ರಿಯರಾಗಿದ್ದಾರೆ. “ಅಜಯ್‌ ವಿಜಯ್‌’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ದುಡಿದ ಎಸ್‌. ನಾರಾಯಣ್‌ ಮುಂದೆ, ರಘುವೀರ್‌ ನಿರ್ಮಾಣದಲ್ಲಿ “ಚೈತ್ರದ ಪ್ರೇಮಾಂಜಲಿ’ ಚಿತ್ರ ನಿರ್ದೇಶಿಸುವ ಮೂಲಕ ಇಂದು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ನಿರ್ಮಾಪಕ, ನಟ, ಗೀತೆ ರಚನೆಕಾರ, ಸಂಗೀತ ನಿರ್ದೇಶಕರಾಗಿ ಜನಪ್ರಿಯತೆ ಕಂಡಿದ್ದಾರೆ. ನಟ ದೇವರಾಜ್‌, ಸತ್ಯಜಿತ್‌, ಚರಣ್‌ರಾಜ್‌, ಅವಿನಾಶ್‌, ಲಕ್ಷ್ಮಣ, ಬ್ಯಾಂಕ್‌ ಜನಾರ್ದನ್‌ ಇವರ ಪ್ರತಿಭೆ ಗುರುತಿಸಿ, ನನ್ನ ಬಹುತೇಕ ಚಿತ್ರಗಳಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. 

ವಿಧಿಯ ಆಟಕ್ಕೆ ಸಿಲುಕಿ ಬಿರುಗಾಳಿಗೆ ಸಿಲುಕಿದ ತರಗಲೆಯಂತೆ ನನ್ನ ಜೀವನ ಆಗುತ್ತೆ ಅಂತ ನನ್ನ ಕನಸಿನಲ್ಲಿ ಊಹಿಸಿರಲಿಲ್ಲ. ಅದಕ್ಕೆ ಕಾರಣ ನನ್ನ ನಿರ್ಮಾಣದಲ್ಲಿ ತಯಾರಾದ “ರ್‍ಯಾಂಬೋ ರಾಜ ರಿವಾಲ್ವರ್‌ ರಾಣಿ’ ಹಾಗು “ಕಾಳಿ’ ಚಿತ್ರಗಳ ಅನಿರೀಕ್ಷಿತ ಸೋಲು. ಅದು ನನ್ನ ಸಿನಿಮಾ ಬದುಕಿಗೆ ದೊಡ್ಡ ಆಘಾತ ಉಂಟು ಮಾಡಿತು. ಮುಂದೆ ನನ್ನ ಸಂಸಾರ ಜೀವನ ಹೇಗೆ ಎಂಬ ಪ್ರಶ್ನೆಗೆ ಒಳಗಾಗಿ ದಿಕ್ಕು ತೋಚದಂತಾದೆ. ನಾನು ಆಸೆಯಿಂದ ಬಸವೇಶ್ವರ ನಗರದಲ್ಲಿ “ಆಶಾ’ ಎಂಬ ಹೆಸರಲ್ಲಿ ಒಂದು ಮಹಡಿ ಮನೆ ಕಟ್ಟಿದ್ದೆ. ಆ ಮನೆಯನ್ನು ಮಾರಿ ನನ್ನ ಸಾಲವನ್ನು ತೀರಿಸಿಕೊಳ್ಳಬೇಕಾದ ಅನಿವಾರ್ಯತೆ ಮೂಡಿಬಂತು. ಜೊತೆಗೆ ಸಣ್ಣಪುಟ್ಟ ಸಾಲಗಾರರ ಹಿಂಸೆಗೆ ಬದುಕು ಬೇಡವೆನಿಸಿದ ಸಂದರ್ಭ ಕೂಡ ಒದಗಿಬಂದರೂ ಧೃತಿಗೆಡದೆ ಬಸವೇಶ್ವರ ನಗರದಲ್ಲಿ ಒಂದು ಚಿಕ್ಕ ಬಾಡಿಗೆ ಮನೆ ಮಾಡಿ ಜೀವನ ಸಾಗಿಸುವ ಧೈರ್ಯ ಮಾಡಿದೆ.

ತಂದೆಯಾಗಿ ಮಾಡಬೇಕಾದ ಕರ್ತವ್ಯ ನನ್ನ ಎರಡು ಮಕ್ಕಳ ಮದುವೆಯನ್ನು ಸಾಲ ಸೂಲ ಮಾಡಿ ನನ್ನ ಹೆಂಡತಿಯ ಒಡವೆ ಅಡಮಾನ ಇಟ್ಟು ಮಾಡಿ ಮುಗಿಸಿದೆ. ನಾನು ನನ್ನ ಹೆಂಡತಿ ಮಕ್ಕಳನ್ನು ಸುಖವಾಗಿ ಸಾಕಲಾಗದೆ ಅವಳನ್ನು ಕೆಲಕಾಲ ಅವಳ ತಾಯಿಯ ಮನೆಯಲ್ಲಿ ಇರುವಂತೆ ಒತ್ತಾಯ ಮಾಡಿ ಅಲ್ಲಿಗೆ ಕಳಿಸಿಕೊಟ್ಟೆ. ನನ್ನ ಮಗಳು, ಮಗ ಮದುವೆಯಾಗಿ ಸಂಸಾರ ನಡೆಸುತ್ತಿರುವುದು ನನಗೆ ಒಂದಿಷ್ಟು ನೆಮ್ಮದಿ ತಂದಿದೆ. ನನ್ನ ಹೆಂಡತಿ ಒಂಟಿಯಾಗಿ ಅವಳ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿರುವುದು ನನಗೆ ತೀರಾ ದುಃಖ ಉಂಟು ಮಾಡಿದೆ. ಇಷ್ಟಾದರೂ ನಾನು ನನಗಿರುವ ಸ್ವಾಭಿಮಾನದಿಂದಾಗಿ ನನ್ನ ಪರಿಸ್ಥಿತಿಯನ್ನು ಯಾರಲ್ಲೂ ಹಂಚಿಕೊಳ್ಳಲಿಲ್ಲ. ಹೇಗಿದ್ದವನು ಹೇಗಾದೆ ಎಂದು ನಾನು ಒಂಟಿಯಾಗಿ ಕಣ್ಣೀರು ಹಾಕಿದ್ದು ಎಷ್ಟೋ ಬಾರಿ. ಹೇಗೋ ಬದುಕು ಸಾಗಿಸುತ್ತಿದ್ದ ನನಗೆ ಕಾಡಿದ್ದು ಮೂತ್ರಪಿಂಡ ರೋಗ. ನನ್ನ ಎರಡು ಮೂತ್ರಪಿಂಡಗಳ ವೈಫ‌ಲ್ಯತೆಯಿಂದ ನಾನು ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ ಮಾಡಿಸಿಕೊಳ್ಳುವಂತೆ ವೈದ್ಯರು ನನಗೆ ಸಲಹೆ ನೀಡಿದರು. ವೈದ್ಯಕೀಯ ಚಿಕಿತ್ಸೆಗೆ ಹಣದ ಕೊರತೆಯಿಂದಾಗಿ ಮತ್ತೆ ಬದುಕು ಬೇಡವೆನಿಸಿತು.  ಮಕ್ಕಳಿಗೆ, ಹೆಂಡತಿಗೆ ಪತ್ರ ಬರೆದು ಈ ಲೋಕವನ್ನು ಬಿಟ್ಟು ಹೋಗೋಣವೆನಿಸಿತು. ಅಷ್ಟೊತ್ತಿಗಾಗಲೇ ಒಂದಷ್ಟು ಜನರಿಗೆ ನನ್ನ ಪರಿಸ್ಥಿತಿ ಬಗ್ಗೆ ತಿಳಿದಿತ್ತು. ಆಗ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ಅಂಬರೀಶ್‌, ಅರ್ಜುನ್‌ ಸರ್ಜಾ, ಸುಧಾ ಮೂರ್ತಿ ಸೇರಿದಂತೆ ಹಲವರು ನನ್ನ ಚಿಕಿತ್ಸೆಗೆ ಹಣ ಸಹಾಯ ಮಾಡಿದರು.

ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ. ಗೋವಿಂದು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ವಿಶುಕುಮಾರ್‌ ಅವರ ಪ್ರಯತ್ನದಿಂದ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನನಗೆ ಹಣ ಮಂಜೂರು ಮಾಡಿಸಿಕೊಟ್ಟರು.  ನನಗೆ ಸಹಾಯ ಮಾಡಿದ ಎಲ್ಲರನ್ನು ತುಂಬು ಹೃದಯದಿಂದ ಸ್ಮರಿಸುತ್ತ ಅವರ ಹೃದಯವಂತಿಕೆ ನಡೆಗೆ ನಾನೆಂದೂ ಚಿರಋಣಿಯಾಗಿರುತ್ತೇನೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರಬೇಕಾದರೆ ನನಗೆ ಮತ್ತೂಂದು ಆಘಾತ ಮತ್ತೆ ಕತ್ತಲೆಯ ಕೋಣೆಗೆ ತಳ್ಳಿದೆ. ಅದು ನನಗಾದ ಹೃದಯಾಘಾತ. ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆ ಮಾಡಿಸಿದಾಗ, ಓಪನ್‌ ಸರ್ಜರಿ ಮಾಡಲೇಬೇಕೆಂದು ವೈದ್ಯರು ಸಲಹೆ ನೀಡಿದರು. ಮಾನವ ದೇಹ ಎಷ್ಟೊಂದು ನೋವನ್ನು ನರಳುವಿಕೆಯನ್ನು ಅನುಭವಿಸಲು ಸಾಧ್ಯ? ವೈದ್ಯರ ಸಲಹೆಯಂತೆ ಈಗ ನನಗೆ ಹಾರ್ಟ್‌ ಸರ್ಜರಿ ಆಗಿದೆ. ಹದಿನೈದು ದಿನ ಐಸಿಯುವಿನಲ್ಲಿದ್ದ ನನಗೆ ನಾನು ಬದುಕಿದ್ದೇನೋ, ಸತ್ತಿದ್ದೇನೋ ಯಾವೊಂದು ಅರಿವಿಲ್ಲದೆ ಇದ್ದೆ. ಈಗ ಔಟ್‌ ಪೇಶೆಂಟ್‌ ಆಗಿ ಅಸ್ಟರ್‌ ಸಿಎಂಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಚಿಕಿತ್ಸೆ ವೆಚ್ಚವನ್ನು ಭರಿಸುವ ಶಕ್ತಿ ನನ್ನಲ್ಲಿ ಸಂಪೂರ್ಣ ಕುಗ್ಗಿ ಹೋಗಿದೆ. ಚಿತ್ರರಂಗದ ನಿರ್ದೇಶಕರ ಸಂಘ, ಕಲಾವಿದರ ಸಂಘ, ಚಲನಚಿತ್ರ ಅಕಾಡೆಮಿ ಹಾಗೂ ನನ್ನ ಆತ್ಮೀಯ, ನಟ, ನಟಿಯರು ನನ್ನ ನೆರವಿಗೆ ಬಂದು ನನ್ನನ್ನು ಈ ಲೋಕದಲ್ಲಿ ಕೆಲಕಾಲ ಬಾಳಿ ಬದುಕುವಂತೆ ಸಹಾಯ ಮಾಡಬೇಕೆಂಬುದೇ ನನ್ನ ಭಿನ್ನವಿಕೆ. ನಾನು ಈಗ ಒಂಟಿಯಾಗಿ ನನ್ನಿಂದ ಓಡಾಡಲು ಸಾಧ್ಯವಾಗದೆ ಇರುವುದರಿಂದ ನಾನು ನನ್ನ ಬಸವೇಶ್ವರ ನಗರದಲ್ಲಿರುವ ಪುಟ್ಟ ಬಾಡಿಗೆ ಮನೆಯನ್ನೂ ಖಾಲಿ ಮಾಡಿ ಆರ್‌.ಟಿ. ನಗರದಲ್ಲಿರುವ ನನ್ನ ಅತ್ತೆ ಮನೆಯಲ್ಲಿ ವಾಸವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. 

ನಾನು ಅಣ್ಣಾವ್ರ ಕಂಪೆನಿಯಲ್ಲಿ ಚಿ.ಉದಯಶಂಕರ್‌ ಅವರ ಜೊತೆ ಕೆಲಸ ಮಾಡಿದ್ದೇನೆ ಎನ್ನುವುದಕ್ಕೆ ಅವರ ತಮ್ಮನಾದ ಚಿ.ದತ್ತರಾಜ ಹಾಗು ಅಕ್ಕ ಪಾರ್ವತಮ್ಮ ರಾಜಕುಮಾರ್‌ ಸಹೋದರ ಶ್ರೀನಿವಾಸ ಅವರು ಸಾಕ್ಷಿ. 50 ವರ್ಷ ಕನ್ನಡ ಚಿತ್ರರಂಗದಲ್ಲಿ ಸೇವೆ ಮಾಡಿದ ಒಬ್ಬ ನಿರ್ದೇಶಕ-ನಟನಿಗೆ ಚಿತ್ರರಂಗದ ಕಲಾವಿದರು, ತಾಂತ್ರಿಕ ವರ್ಗದವರು ತುಂಬ ಹೃದಯದಿಂದ ಮುಂದೆ ಬಂದು ನನ್ನ ಚಿಕಿತ್ಸೆಗೆ ನೆರವು ನೀಡಿ ಎಂದು ಮತ್ತೂಮ್ಮೆ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ರಜನಿಕಾಂತ್‌ ಅವರು ಮದ್ರಾಸ್‌ ಫಿಲ್ಮ್ ಇನ್ಸ್‌ಟಿಟ್ಯೂಟ್‌ ಒಂದರಲ್ಲಿ ವಿದ್ಯಾರ್ಥಿಯಾಗಿ ನಟನೆ ಕಲೆ ಅಭ್ಯಾಸ ಮಾಡುತ್ತಿದ್ದಾಗಲೇ ಅವರ ಪರಿಚಯವಿತ್ತು. ನಂತರ ಅವರು ಸೂಪರ್‌ಸ್ಟಾರ್‌ ಆದ ಮೇಲೆ ಅವರ ಒಂದು ಚಿತ್ರ ನಿರ್ದೇಶಿಸುವ ಸುಯೋಗವೂ ಸಿಕ್ಕಿತು. ನನ್ನ ಈ ದಾರುಣ ಸ್ಥಿತಿಯ ಚಿತ್ರಣ ಅವರಿಗೆ ತಿಳಿದು ನನಗೆ ಸಹಾಯ ಮಾಡಿದರೆ ಅದು ನನಗೆ ಪುಣ್ಯವೆಂದು ಭಾವಿಸುತ್ತೇನೆ.ಒಂದು ವೇಳೆ ಈ ಲೇಖನವನ್ನು ನೀವು ಓದುವ ಮುಂಚೆ ನಾನೇನಾದರೂ ಈ ಲೋಕ ತ್ಯಜಿಸಿಬಿಟ್ಟರೆ ನೀವು ಮಾಡುವ ಸಹಾಯವನ್ನು ನನ್ನ ಹೆಂಡತಿಗೆ ತಲುಪಿಸಿರಿ. ಅವಳನ್ನಾದರೂ ನೆಮ್ಮದಿಯಿಂದ ಬಾಳುವಂತೆ ಮಾಡಿ. ನನ್ನ ಮೊಬೈಲ್‌ (9900643345) ನನ್ನ ಹೆಂಡತಿ ಬಳಿ ಇರುತ್ತದೆ. ಅವರೇ ಮಾತಾಡುತ್ತಾರೆ. ಯಾಕೆಂದರೆ, ನನಗಿನ್ನೂ ಸರಿಯಾಗಿ ಮಾತನಾಡಲು ಹಾಗು ಓಡಾಡಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ನನ್ನ ಮೊಬೈಲ್‌ ನಿಮಗೇನಾದರೂ ಸಿಗದಿದ್ದರೆ, ನನ್ನ ಸಹ ನಿರ್ದೇಶಕರಾಗಿ ದುಡಿದು ಈಗ ನಿರ್ದೇಶಕ, ನಟರಾಗಿರುವ ವಿಕ್ಟರಿ ವಾಸು ಅವರ ಮೊಬೈಲ್‌ 9844281115 ಸಂಪರ್ಕಿಸಲು ಮನವಿ.

ನಿಮ್ಮ ಅಭಿಮಾನದ ಕಲಾವಿದ, ತಂತ್ರಜ್ಞ ಹಾಗೂ ಮಿತ್ರ
ಎ.ಟಿ.ರಘು

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.