ಮೀಸೆ ತಿರುಗಿಸುವವರ ಹಾಡು…

ತೆಲುಗು ನಟನ ಕನ್ನಡ ಎಂಟ್ರಿ

Team Udayavani, Nov 8, 2019, 4:55 AM IST

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಮಂದಿ ತೆಲುಗಿನಿಂದ ಬರುತ್ತಿದ್ದಾರೆ. ಅಲ್ಲಿನ ನಿರ್ಮಾಪಕ, ನಿರ್ದೇಶಕ, ಹೀರೋಗಳು ಕನ್ನಡ ಚಿತ್ರಗಳನ್ನು ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಾಣುತ್ತಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ “ತಿರುಗ್ಸೋ ಮೀಸೆ’. ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣವಾಗಿ ಬಿಡುಗಡೆಯ ಹಂತಕ್ಕೆ ಬಂದಿದೆ. ಕೇವಲ ಕನ್ನಡವಷ್ಟೇ ಅಲ್ಲದೇ, ತೆಲುಗಿನಲ್ಲೂ ಈ ಸಿನಿಮಾ ತಯಾರಾಗಿದೆ. ತೆಲುಗಿನ ಕೆಲವು ಚಿತ್ರಗಳಲ್ಲಿ ನಾಯಕರಾಗಿ ನಟಿಸಿರುವ ಶ್ರೀ ವಿಷ್ಣು ಈ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಕನ್ನಡದ ಶ್ರೀನಿವಾಸ್‌ ಹಾಗೂ ತೆಲುಗಿನ ರಿಜ್ವಾನ್‌ ಸೇರಿಕೊಂಡು ಈ ದ್ವಿಭಾಷಾ ಸಿನಿಮಾವನ್ನು ನಿರ್ಮಿಸಿದ್ದಾರೆ. ಕೃಷ್ಣ ವಿಜಯ ಈ ಸಿನಿಮಾದ ನಿರ್ದೇಶಕರು.

ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಲಹರಿ ಸಂಸ್ಥೆಯ ವೇಲು ಚಿತ್ರದ ಹಾಡುಗಳನ್ನು ಹೊರತಂದರು. ಚಿತ್ರಕ್ಕೆ ವಿ.ಮನೋಹರ್‌, ರಾಘವೇಂದ್ರ ಕಾಮತ್‌ ಹಾಗೂ ಪತ್ರಕರ್ತ ಚಂದ್ರಶೇಖರ್‌ ಹಾಡುಗಳನ್ನು ಬರೆದಿದ್ದಾರೆ. ಅಂದಹಾಗೆ, ಇದೊಂದು ಮಾಸ್‌ ಸಿನಿಮಾವಾಗಿದ್ದು, ಚಿತ್ರದಲ್ಲಿ ತಾಯಿ ಸೆಂಟಿಮೆಂಟ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆಯಂತೆ. ಇವತ್ತು ಪ್ರೇಕ್ಷಕ ಇಷ್ಟಪಡುವ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ ಎನ್ನುವುದು ಚಿತ್ರತಂಡ ಮಾತು. ನಾಯಕ ಶ್ರೀವಿಷ್ಣು ಸಿನಿಮಾ, ಪಾತ್ರ ಬಗ್ಗೆ ಮಾತನಾಡಿದರು. ಮೊದಲ ಕನ್ನಡ ಸಿನಿಮಾವಾದ್ದರಿಂದ ಭಾಷೆ ಕಷ್ಟವಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಕಲಿತು ಮಾತನಾಡುವ ಭರವಸೆ ನೀಡಿದರು. ಚಿತ್ರದಲ್ಲಿ ನಾಯಕಿಯಾಗಿ ನಿಕ್ಕಿ ತಂಬೋಲಿ ನಟಿಸಿದ್ದಾರೆ. ಚಿತ್ರಕ್ಕೆ ಹಾಡು ಬರೆದ ವಿ.ಮನೋಹರ್‌ ಕೂಡಾ ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ಸುರೇಶ್‌ ಸಂಗೀತವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ....' -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌...

  • ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ....

  • ರಮೇಶ್‌ ಅರವಿಂದ್‌ ನಾಯಕಾಗಿರುವ "ಶಿವಾಜಿ ಸುರತ್ಕಲ್‌' ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್‌ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ...

  • ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ "ಶಿವ' ಎನ್ನುವ ಚಿತ್ರವೂ...

  • ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು...

ಹೊಸ ಸೇರ್ಪಡೆ