Udayavni Special

ಪರಭಾಷೆಯತ್ತ ಥ್ರಿಲ್ಲರ್‌ ಸ್ಟೋರಿ

ಚಿತ್ರತಂಡದ ಪ್ರಕಾರ ಸಿನಿಮಾ ಗೆದ್ದಿದೆ

Team Udayavani, Sep 6, 2019, 5:58 AM IST

b-31

ಕೆಲವು ಸಿನಿಮಾಗಳು ಬಿಡುಗಡೆಯಾದ ದಿನ ಭರ್ಜರಿ ಓಪನಿಂಗ್‌ ಪಡೆದು ಆ ನಂತರ ಪ್ರೇಕ್ಷಕರ ಕೊರತೆ ಎದುರಿಸುತ್ತವೆ. ಇನ್ನೊಂದಿಷ್ಟು ಸಿನಿಮಾಗಳು ಆರಂಭದಲ್ಲಿ ನಿಧಾನಗತಿಯಲ್ಲಿ ಟೇಕಾಫ್ ಆಗಿ ಆ ನಂತರ ಪ್ರೇಕ್ಷಕರನ್ನು ಸೆಳೆದು ಚಿತ್ರತಂಡದ ಮೊಗದಲ್ಲಿ ನಗುತರಿಸುತ್ತವೆ. ಇದರಲ್ಲಿ ‘ನನ್ನ ಪ್ರಕಾರ’ ಚಿತ್ರ ಎರಡನೇ ವರ್ಗಕ್ಕೆ ಸೇರುತ್ತದೆ. ಆರಂಭದಲ್ಲಿ ದೊಡ್ಡ ಅಬ್ಬರ ಮಾಡದೇ ಬಿಡುಗಡೆಯಾಗಿ ಮೆಚ್ಚುಗೆ ಪಡೆದ ಚಿತ್ರ, ಈಗ ಪ್ರೇಕ್ಷಕರನ್ನು ಸೆಳೆಯುತ್ತಾ 25ನೇ ದಿನದತ್ತ ದಾಪುಗಾಲು ಹಾಕುತ್ತಿದೆ. ಆರಂಭದಲ್ಲಿ ಹೆಚ್ಚು ಶೋ ಕೊಡಲು ಹಿಂದೇಟು ಹಾಕಿದ್ದ ಮಲ್ಟಿಪ್ಲೆಕ್ಸ್‌ಗಳು ಈಗ ‘ನನ್ನ ಪ್ರಕಾರ’ ಚಿತ್ರದ ಶೋ ಹೆಚ್ಚಿಸಿವೆ. ಜೊತೆಗೆ ಚಿತ್ರದ ತೆಲುಗು, ತಮಿಳು ಡಬ್ಬಿಂಗ್‌ ರೈಟ್ಸ್‌ ಮಾರಾಟವಾಗಿದ್ದರೆ, ಹಿಂದಿ ರೀಮೇಕ್‌ ರೈಟ್ಸ್‌ ಕುರಿತಾದ ಮಾತುಕತೆ ನಡೆಯುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಚಿತ್ರತಂಡ ಖುಷಿಯಾಗಿದೆ.

ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡುವ ನಿರ್ಮಾಪಕ ಗುರುರಾಜ್‌, ‘ಈಗಾಗಲೇ ತಮಿಳು, ತೆಲುಗು ಡಬ್ಬಿಂಗ್‌ ರೈಟ್ಸ್‌ ಮಾರಾಟವಾಗಿದೆ. ಹಿಂದಿ ರೀಮೇಕ್‌ ಮಾತುಕತೆ ನಡೆಯುತ್ತಿದೆ. ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಸೆಂಟರ್‌ಗಳಲ್ಲಿ ಸಿನಿಮಾವಿದೆ. ಈ ವಾರದಿಂದ ಬಿ.ಸಿ.ಸೆಂಟರ್‌ಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರಕ್ಕೆ ಹಾಕಿದ ಬಂಡವಾಳ ವಾಪಾಸ್‌ ಆಗಿದ್ದು, ಮುಂದೆ ಚಿತ್ರಮಂದಿರದಿಂದ ಬರುವ ಕಲೆಕ್ಷನ್‌ ಲಾಭ ಎನ್ನಬಹುದು’ ಎಂದು ಹೇಳಿಕೊಂಡರು.

ತಮ್ಮ ಚೊಚ್ಚಲ ಚಿತ್ರ ಹಿಟ್ಲಿಸ್ಟ್‌ ಸೇರಿದ್ದರಿಂದ ನಿರ್ದೇಶಕ ವಿನಯ್‌ ಬಾಲಾಜಿ ಖುಷಿಯಾಗಿದ್ದರು. ಸಿನಿಮಾ ನೋಡಿದವರೆಲ್ಲಾ, ಇದು ವಿನಯ್‌ ಅವರ ಮೊದಲ ಸಿನಿಮಾನಾ ಎಂದು ಕೇಳುತ್ತಿರುವುದರಿಂದ ಅವರ ಖುಷಿ ಮತ್ತಷ್ಟು ಹೆಚ್ಚಿದೆ. ಚಿತ್ರ 25 ದಿನ ಪೂರ್ಣಗೊಳಿಸುತ್ತಿದ್ದಂತೆ ವಿದೇಶಗಳಲ್ಲೂ ಬಿಡುಗಡೆಯಾಗಲಿದೆಯಂತೆ. ಇನ್ನು, ಪ್ರವಾಹದಿಂದ ಉತ್ತರ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಅಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಬೇರೆ ಭಾಷೆಯ ದೊಡ್ಡ ಸಿನಿಮಾಗಳ ಮಧ್ಯೆಯೂ ಚಿತ್ರದ ಕಲೆಕ್ಷನ್‌ ಚೆನ್ನಾಗಿರುವುದು ಖುಷಿ ತಂದಿದೆ ಎಂದು ವಿವರ ನೀಡಿದರು ನಿರ್ದೇಶಕ ವಿನಯ್‌.

ಚಿತ್ರದಲ್ಲಿ ನಟಿಸಿರುವ ಕಿಶೋರ್‌, ಮಯೂರಿ, ತಮ್ಮ ಸಿನಿಮಾಗಳ ಸಕ್ಸಸ್‌ಮೀಟ್ ನೋಡದೇ ತುಂಬಾ ದಿನಗಳೇ ಆಗಿತ್ತು. ಈ ಸಿನಿಮಾ ಸಕ್ಸಸ್‌ ಆಗಿರುವುದು ಖುಷಿ ಕೊಟ್ಟಿದೆ ಎಂದರು. ಉಳಿದಂತೆ ಚಿತ್ರದಲ್ಲಿ ನಟಿಸಿದ ಕಲಾವಿದರು ಹಾಗೂ ತಾಂತ್ರಿಕ ವರ್ಗ ಗೆಲುವನ್ನು ಸಂಭ್ರಮಿಸಿತು.

ಟಾಪ್ ನ್ಯೂಸ್

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

eshwarappa

ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು : ಸಚಿವ ಕೆ.ಎಸ್. ಈಶ್ವರಪ್ಪ

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

1-bc

ಕರ್ನಾಟಕದ 12 ದ್ವೀಪಗಳಿಗಾಗಿ ಗೋವಾ ಸರಕಾರದಿಂದ ಕೇಂದ್ರಕ್ಕೆ ಮನವಿ

1-bb

ಬಜರಂಗದಳದಿಂದ ಐವನ್ ಡಿಸೋಜ ಮನೆಗೆ ಮುತ್ತಿಗೆ ಯತ್ನ

Untitled-1

ಆರ್ ಎಸ್ಎಸ್ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಒಬ್ಬ ಬುದ್ಧಿಮಾಂದ್ಯ: ಸೋಮಶೇಖರ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಪೋ ಕಲ್ಪಿತಂ

ಸೆನ್ಸಾರ್‌ ಪಾಸಾದ ‘ಕಪೋ ಕಲ್ಪಿತಂ’

ಡಿಜಿಟಲ್‌ ಲೋಕದ ಸುತ್ತ ‘ಗ್ರೇ ಗೇಮ್ಸ್‌’ ಶುರು

ಡಿಜಿಟಲ್‌ ಲೋಕದ ಸುತ್ತ ‘ಗ್ರೇ ಗೇಮ್ಸ್‌’ ಶುರು

dhanya ramkumar

‘ಶೋ ಪೀಸ್‌ ಆಗಲಾರೆ’: ರಾಜ್‌ ಮೊಮ್ಮಗಳು ಧನ್ಯಾ ಉತ್ತರಿಸಿದ 5 ಪ್ರಶ್ನೆಗಳು

ಸಕ್ಸಸ್‌ ಮೀಟ್‌ ಸಂಭ್ರಮ ತಂದ ಭರವಸೆ

ಸಕ್ಸಸ್‌ ಮೀಟ್‌ ಸಂಭ್ರಮ ತಂದ ಭರವಸೆ: ಸಕ್ಸಸ್‌ ರೇಟ್‌ ಹೆಚ್ಚಾಗೋ ನಿರೀಕ್ಷೆ

ಈ ವಾರ ತೆರೆ ಕಾಣಲಿದೆ ನಾಲ್ಕು ಚಿತ್ರಗಳು

ಈ ವಾರ ತೆರೆ ಕಾಣಲಿದೆ ನಾಲ್ಕು ಚಿತ್ರಗಳು

MUST WATCH

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

udayavani youtube

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

ಹೊಸ ಸೇರ್ಪಡೆ

Sakleshpur: Destroy paddy crop for forest attack

ಸಕಲೇಶಪುರ: ಕಾಡಾನೆ ದಾಳಿಗೆ ಭತ್ತದ ಬೆಳೆ ನಾಶ

Devi Brahmarathotsava celebration

ಚಾ.ಬೆಟ್ಟದಲ್ಲಿ ದೇವಿ ಬ್ರಹ್ಮರಥೋತ್ಸವ ಸಂಭ್ರಮ

chitradurga news

ಭೋವಿ ಸಮುದಾಯದ ಅಭಿವೃದಿಗೆ ಬದ್ಧ

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

davanagere news

ಕೆಳಸೇತುವೆ ನಿರ್ಮಿಸಲು ಆಗ್ರಹಿಸಿ 22ರಂದು ಹೆದ್ದಾರಿ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.