ತಿರ್ಬೋಕಿಗಳು ಬಂದ್ರು:ಡ್ಯಾನ್ಸಿಂಗ್‌ ಸ್ಟಾರ್‌ಗಳ ಲೋ ಬಜೆಟ್‌ ಸಿನಿಮಾ


Team Udayavani, Jul 28, 2017, 10:12 AM IST

28-SSCH-2.jpg

ಗಾಂಧಿನಗರಕ್ಕೆ ತಿರ್ಬೋಕಿಗಳ ತಂಡ ಬಂದಿದೆ. ಕೇವಲ ಬಂದಿದ್ದಷ್ಟೇ ಅಲ್ಲ, 10 ದಿನಗಳ ಕಾಲ ಚಿತ್ರೀಕರಣ ಕೂಡಾ ಆಗಿದೆ! 

ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಾವು ಹೇಳುತ್ತಿರೋದು ಸಿನಿಮಾವೊಂದರ ಬಗ್ಗೆ. “ತಿರ್ಬೋಕಿಗಳು’ ಎಂಬ ಟೈಟಲ್‌ನಡಿ ಸಿನಿಮಾವೊಂದು ಆರಂಭವಾಗಿದೆ. ಇದು ಸಂಪೂರ್ಣ ಹೊಸಬರ ತಂಡ. ಕೆಲಸ ಕಾರ್ಯವಿಲ್ಲದೇ, ಹಳ್ಳಿಕಟ್ಟೆಯಲ್ಲಿ ಕುಳಿತು ಹರಟೆ ಹೊಡೆಯುವವರಿಗೆ ತಿರ್ಬೋಕಿಗಳು ಎಂದು ಕರೆಯುತ್ತಾರೆ. ಈ ಚಿತ್ರ ಕೂಡಾ ಅದೇ ಕಾನ್ಸೆಪ್ಟ್ನಡಿ ತಯಾರಾಗುತ್ತಿದೆ. ನಾಲ್ಕು ಮಂದಿ ಹುಡುಗರ ಸುತ್ತ ಈ ಸಿನಿಮಾ ಸುತ್ತಲಿದೆಯಂತೆ. ಮಾಗಡಿ ಕೆಂಪೇಗೌಡ ಎನ್ನುವವರು ಈ ಸಿನಿಮಾದ ನಿರ್ದೇಶಕರು. ಸಿನಿಮಾ ಬಗ್ಗೆ ಹೆಚ್ಚೇನು ಅವರು ಮಾತನಾಡಲಿಲ್ಲ. ಈಗಾಗಲೇ 10 ದಿನ ಚಿತ್ರೀಕರಣ ಮಾಡಿದ್ದಾಗಿ ಹೇಳಿಕೊಂಡರು. ಇತ್ತೀಚೆಗೆ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಯಿತು.

ಚಿತ್ರದಲ್ಲಿ ಪರಿಚಿತ ಮುಖ ಎಂದಿರೋದು ಭೂಷಣ್‌. ಈ ಹಿಂದೆ ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ತಮ್ಮ ಪ್ರತಿಭೆ ತೋರಿಸಿದ್ದ ಭೂಷಣ್‌, “ತಿರ್ಬೋಕಿಗಳು’ ಚಿತ್ರದ ಮೂಲಕ ನಾಯಕರಾಗುತ್ತಿದ್ದಾರೆ. ಭೂಷಣ್‌ ಮೂಲತಃ ಡ್ಯಾನ್ಸರ್‌ ಆಗಿರುವುದರಿಂದ ಸಿನಿಮಾದಲ್ಲೂ ಡ್ಯಾನ್ಸ್‌ಗೆ ಹೆಚ್ಚಿನ ಸ್ಕೋಪ್‌ ಇದೆಯಂತೆ. “ಡ್ಯಾನ್ಸ್‌ ಮಾಡುತ್ತಿದ್ದ ನನ್ನನ್ನು ಎಲ್ಲರೂ ಬೆನ್ನು ತಟ್ಟಿದ ಪರಿಣಾಮ ಈಗ ಹೀರೋ ಆಗುತ್ತಿದ್ದೇನೆ. ಹಾಗಂತ ಇದು ದೊಡ್ಡ ಬಜೆಟ್‌ ಸಿನಿಮಾವಲ್ಲ. ಹೊಸಬರಾಗಿರುವುದರಿಂದ ರಿಸ್ಕ್ ಹಾಕಿಕೊಳ್ಳೋದು ಬೇಡವೆಂದು ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಈ ಸಿನಿಮಾ ಮೂಲಕ ಒಂದಷ್ಟು ಮಂದಿ ಡ್ಯಾನ್ಸರ್‌ಗಳು ಒಟ್ಟಾಗಿದ್ದೇವೆ’ ಎಂದರು ಭೂಷಣ್‌. 

ಈ ಚಿತ್ರವನ್ನು ನಾಗರಾಜ್‌ ಅವರು ನಿರ್ಮಿಸುತ್ತಿದ್ದಾರೆ. ಭೂಷಣ್‌ ಪ್ರತಿಭೆಯನ್ನು ಗಮನಿಸಿದ ಅವರು ಈ ಸಿನಿಮಾ ಮಾಡಲು ಮುಂದಾದರಂತೆ. ಚಿತ್ರದಲ್ಲಿ ನಟಿಸುತ್ತಿರುವ ರಣಧೀರ್‌, ಸಂತೋಷ್‌ ಹಾಗೂ ಮನೋಜ್‌ ಕುಮಾರ್‌ ತಮ್ಮ ಅನಿಸಿಕೆ ಹಂಚಿಕೊಂಡರು.  ಚಿತ್ರದಲ್ಲಿ ಮಾನ್ಯ ನಾಯಕಿ. ಮೂಲತಃ ಡ್ಯಾನ್ಸರ್‌ ಆದ ಮಾನ್ಯಗೆ ಈಗ ಡ್ಯಾನ್ಸರ್‌ಗಳ ತಂಡದಲ್ಲಿ ಕೆಲಸ ಮಾಡುತ್ತಿರುವ ಖುಷಿ. ತಿರ್ಬೋಕಿಗಳ ತಂಡದಲ್ಲಿ ಬೆಸ್ಟ್‌ ತಿಬೋìಕಿಯನ್ನು ಲವ್‌ ಮಾಡುವ ಪಾತ್ರವಂತೆ. ಚಿತ್ರದಲ್ಲಿ ಹಿರಿಯ ನೃತ್ಯ ನಿರ್ದೇಶಕ ಸುಂದರಂ ಮಾಸ್ಟರ್‌ ಕೂಡಾ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಅವರದ್ದು ಜ್ಞಾನಿಯ ಪಾತ್ರ. ಅವರ ಮಾತಿನಿಂದ ತಿರ್ಬೋಕಿಗಳು ಹೇಗೆ ಬದಲಾಗುತ್ತಾರೆಂಬುದು ಚಿತ್ರದ ಟ್ವಿಸ್ಟ್‌ ಅಂತೆ. ಸುಂದರಂ ಮಾಸ್ಟರ್‌ ಅವರಿಗೆ ನಟಿಸಬೇಕೆಂದು ಇಷ್ಟು ವರ್ಷ ಅನಿಸಿರಲಿಲ್ಲವಂತೆ. ಆದರೆ, ಈಗ ಕೆಲವರು ಒತ್ತಾಯ ಮಾಡುತ್ತಿರುವುರಿಂದ ನಟಿಸುತ್ತಿರುವುದಾಗಿ ಹೇಳಿದರು. ಜೊತೆಗೆ ಭೂಷಣ್‌ ಅವರ ಟ್ಯಾಲೆಂಟ್‌ ಅನ್ನು ಕೊಂಡಾಡಿದರು. ಚಿತ್ರಕ್ಕೆ ಪ್ರಖ್ಯಾತ್‌ ಛಾಯಾಗ್ರಹಣ, ಸುರೇಂದ್ರನಾಥ್‌ ಸಂಗೀತವಿದೆ.

ಟಾಪ್ ನ್ಯೂಸ್

13fund

ಕೇರಳ ಮಾದರಿಯಲ್ಲಿ ಗ್ರಾ.ಪಂ. ಸದಸ್ಯರಿಗೆ ಗೌರವ ಧನ ಸಿಗಲು ಪ್ರಯತ್ನ:  ಮಹಾಂತೇಶ ಕವಟಗಿಮಠ

1-asdas

ದೇಶದಲ್ಲಿ ನಾಗರಿಕರಾಗಲಿ,ಭದ್ರತಾ ಸಿಬ್ಬಂದಿಗಳಾಗಲಿ ಸುರಕ್ಷಿತವಾಗಿಲ್ಲ : ರಾಹುಲ್ ಕಿಡಿ

1-sadsds

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ ಸ್ಪಷ್ಟನೆ

ಮುಂದುವರಿದ ಪ್ರಶಸ್ತಿ ಬರ: ಬಿಡಬ್ಲ್ಯೂಎಫ್ ಫೈನಲ್ ನಲ್ಲಿ ಸಿಂಧುಗೆ ಸೋಲು

ಮುಂದುವರಿದ ಪ್ರಶಸ್ತಿ ಬರ: ಬಿಡಬ್ಲ್ಯೂಎಫ್ ಫೈನಲ್ ನಲ್ಲಿ ಸಿಂಧುಗೆ ಸೋಲು

12accident

ಸಾೖಬ್ರಕಟ್ಟೆ: ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಸಚಿವ ಗೋವಿಂದ ಕಾರಜೋಳ

ನಾವು ಕುಸ್ತಿ ಆಡದೆಯೇ ಗೆಲ್ಲುತ್ತೇವೆ: ಸಚಿವ ಗೋವಿಂದ ಕಾರಜೋಳ

ಮುಂಬೈ ಟೆಸ್ಟ್: ನ್ಯೂಜಿಲ್ಯಾಂಡ್ ಗೆ ಬೃಹತ್ ಗುರಿ ನೀಡಿದ ಟೀಂ ಇಂಡಿಯಾ

ಮತ್ತೆ ಮಿಂಚಿದ ಮಯಾಂಕ್: ನ್ಯೂಜಿಲ್ಯಾಂಡ್ ಗೆ ಬೃಹತ್ ಗುರಿ ನೀಡಿದ ಟೀಂ ಇಂಡಿಯಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಫಿಯಾ ಅಡ್ಡದಲ್ಲಿ ಖಡಕ್‌ ಪ್ರಜ್ವಲ್‌: ಲೋಹಿತ್‌ ನಿರ್ದೇಶನದ ಚಿತ್ರ

‘ಮಾಫಿಯಾ’ ಅಡ್ಡದಲ್ಲಿ ಖಡಕ್‌ ಪ್ರಜ್ವಲ್‌: ಲೋಹಿತ್‌ ನಿರ್ದೇಶನದ ಚಿತ್ರ

ashika ranganath

ಬ್ಯಾಕ್‌ ಟು ಬ್ಯಾಕ್‌ ಆಶಿಕಾ: ಈ ವಾರ ಒಂದು ಮುಂದಿನ ವಾರ ಮತ್ತೂಂದು ರಿಲೀಸ್‌

“ಮದಗಜ’ ಕ್ಲಾಸ್‌-ಮಾಸ್‌ ಗೆ ಖುಷಿ ಕೊಡೋ ಸಿನಿಮಾ: ಮುರಳಿ

“ಮದಗಜ’ ಕ್ಲಾಸ್‌-ಮಾಸ್‌ ಗೆ ಖುಷಿ ಕೊಡೋ ಸಿನಿಮಾ: ಮುರಳಿ

ombatthane dikku kannada movie

ಡಿ. 31ಕ್ಕೆ ಒಂಬತ್ತನೇ ದಿಕ್ಕು

akshi

ನೇತ್ರದಾನದ ಮಹತ್ವಸಾರುವ ಚಿತ್ರ :  ಡಿ.3ಕ್ಕೆ ಅಕ್ಷಿ ತೆರೆಗೆ

MUST WATCH

udayavani youtube

ಜೋಯಿಡಾ : ರೈತರಿಗೆ ಒಂದು ಕಡೆ ಮಳೆಯ ಸಮಸ್ಯೆಯಾದರೆ ಇನ್ನೊಂದೆಡೆ ಆನೆಗಳ ಹಾವಳಿ

udayavani youtube

ವಿಭಿನ್ನ ರೀತಿಯಲ್ಲಿ ಹೂವು ಕಟ್ಟುವ ವಿಧಾನ

udayavani youtube

ಬೆಳ್ತಂಗಡಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಎದುರಾಯ್ತು 9 ಅಡಿ ಉದ್ದದ ಮೊಸಳೆ

udayavani youtube

ಇಲ್ಲಿಗೇಕೆ ಬಂದಿದ್ದೀಯ? ಸಿದ್ದರಾಮಯ್ಯ ಪ್ರಶ್ನೆಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

ಹೊಸ ಸೇರ್ಪಡೆ

bjp jds

ಬಿಜೆಪಿ ಜತೆ ಜೆಡಿಎಸ್‌ ವಿಲೀನ ಆಗಲಿದೆ: ಲಕ್ಷ್ಮಣ್‌

14kannada

ಜಗತ್ತಿನ ಎಲ್ಲ ಭಾಷೆಗಳಿಗೆ ಕನ್ನಡವೇ ತಾಯಿ: ಶೆಟ್ಟಿ

ಕರಾವಳಿ ಸಂಸ್ಕೃತಿ, ಆಚಾರ ವಿಚಾರ ಪ್ರಸಿದ್ಧ

ಕರಾವಳಿ ಸಂಸ್ಕೃತಿ, ಆಚಾರ ವಿಚಾರ ಪ್ರಸಿದ್ಧ

13fund

ಕೇರಳ ಮಾದರಿಯಲ್ಲಿ ಗ್ರಾ.ಪಂ. ಸದಸ್ಯರಿಗೆ ಗೌರವ ಧನ ಸಿಗಲು ಪ್ರಯತ್ನ:  ಮಹಾಂತೇಶ ಕವಟಗಿಮಠ

1-asdas

ದೇಶದಲ್ಲಿ ನಾಗರಿಕರಾಗಲಿ,ಭದ್ರತಾ ಸಿಬ್ಬಂದಿಗಳಾಗಲಿ ಸುರಕ್ಷಿತವಾಗಿಲ್ಲ : ರಾಹುಲ್ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.