ಬಿಟೌನ್‌ ಕದ ತಟ್ಟಿದ ಕರಾವಳಿ ಹುಡುಗಿ

ಹಿಂದಿ ಸಿನಿಮಾದತ್ತ ಸೋನಾಲ್‌ ಮಾಂತೆರೋ

Team Udayavani, Jun 14, 2019, 5:00 AM IST

ತುಳುನಾಡಿನ ಬಹುತೇಕ ನಟಿಮಣಿಯರು ಕನ್ನಡದಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಕಾಲಿಟ್ಟ ಕೂಡಲೇ ಅವರಿಗೆ ಪರಭಾಷೆಯಲ್ಲೂ ಅವಕಾಶಗಳು ಹುಡುಕಿ ಬರುತ್ತಿವೆ ಎಂಬುದು ವಿಶೇಷ. ಹೌದು, ಈಗಾಗಲೇ ಕರಾವಳಿಯ ಅನೇಕ ನಟಿಯರು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಆ ಸಾಲಿಗೆ ಸೋನಾಲ್‌ ಮಾಂತೆರೋ ಎಂಬ ಬೆಡಗಿ ಹೊಸ ಸೇರ್ಪಡೆ­ಯಾಗಿದ್ದಾರೆ.

ಹಾಗೆ ನೋಡಿದರೆ, ಸೋನಾಲ್‌ ಮಾಂತೆರೋ, ತುಳು ಭಾಷೆಯಲ್ಲಿ ಬಿಡುಗಡೆಯಾಗಿ ಸೂಪರ್‌ಹಿಟ್‌ ಚಿತ್ರ ಎನಿಸಿಕೊಂಡ “ಪಿಲಿಬೈಲ್‌ ಯಮನಕ್ಕ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಅದಾದ ನಂತರ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಅವರು, ಯೋಗರಾಜ್‌ಭಟ್‌ ನಿರ್ದೇಶನದ “ಪಂಚತಂತ್ರ’ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡರು. ಆ ಸಿನಿಮಾದಲ್ಲಿ ನಟಿಸುತ್ತಲೇ, ನಿರ್ದೇಶಕರ ಅಚ್ಚುಮೆಚ್ಚಿನ ನಟಿ ಎನಿಸಿಕೊಂಡ ಸೋನಾಲ್‌, ಪುನಃ ಯೋಗರಾಜ್‌ಭಟ್‌ ನಿರ್ದೇಶನದ “ಗಾಳಿಪಟ-2′ ಚಿತ್ರದಲ್ಲೂ ಅವಕಾಶ ಪಡೆದರು. ಅದಷ್ಟೇ ಅಲ್ಲ, ಅವರು ಸ್ಟಾರ್‌ ನಟ ಉಪೇಂದ್ರ ಅಭಿನಯದ “ಬುದ್ಧಿವಂತ-2′ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾದರು. ಸದ್ಯಕ್ಕೆ ಆ ಚಿತ್ರಗಳ ಚಿತ್ರೀಕರಣದತ್ತ ಗಮನಹರಿಸಿರುವ ಅವರು, ಈಗ ಬಾಲಿವುಡ್‌ ಕಡೆಗೂ ಮುಖ ಮಾಡಿದ್ದಾರೆ. ಹೌದು, ಸೋನಾಲ್‌ ಮಾಂತೆರೋ, ಇದೇ ಮೊದಲ ಸಲ ಹಿಂದಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಹಿಂದಿ ಚಿತ್ರದ ಜೊತೆಯಲ್ಲಿ ಅವರು ಟಾಲಿವುಡ್‌ನ‌ತ್ತ ಕೂಡ ತಮ್ಮ ಚಿತ್ತ ಹರಿಸಿದ್ದಾರೆ ಎಂಬುದು ಗಮನಕ್ಕಿರಲಿ.

ಅದೆಲ್ಲಾ ಸರಿ, ಸೋನಾಲ್‌ ಮಾಂತೆರೋ, ಬಾಲಿವುಡ್‌ಗೆ ಹೋಗುತ್ತಿರುವುದು ಯಾವ ಚಿತ್ರಕ್ಕೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಅದಕ್ಕೆ ಉತ್ತರ “ಸಾಜನ್‌ ಚಲೆ ಸಸುರಾಲ್‌-2′. ಹೌದು 1996 ರಲ್ಲಿ ಬಿಡುಗಡೆಯಾಗಿದ್ದ “ಸಾಜನ್‌ ಚಲೆ ಸಸುರಾಲ್‌’ ಚಿತ್ರದಲ್ಲಿ ಗೋವಿಂದ ನಾಯಕರಾಗಿದ್ದರು. ಅವರಿಗೆ ಟಬು ಹಾಗು ಕರಿಷ್ಮಾ ನಾಯಕಿಯರಾಗಿ ನಟಿಸಿದ್ದರು. ಈಗ “ಸಾಜನ್‌ ಚಲೆ ಸಸುರಾಲ್‌-2′ ಚಿತ್ರ ಶುರುವಾಗಲಿದೆ. ಈ ಚಿತ್ರದಲ್ಲಿ ಸೋನಾಲ್‌ ಮಾಂತೆರೋ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅದೇನೆ ಇರಲಿ, ಕನ್ನಡದಲ್ಲಿ ನಟಿಸುವ ಮೂಲಕ ಇತರೆ ಭಾಷೆಗಳಲ್ಲೂ ಗುರುತಿಸಿ ಕೊಳ್ಳುತ್ತಿರುವ ನಾಯಕಿಯರ ಸಾಲಿಗೆ ಸೋನಾಲ್‌ ಮಾಂತೆರೋ ಅವರೂ ಸೇರಿದ್ದಾರೆ. ಬಾಲಿವುಡ್‌ನ‌ “ಸಾಜನ್‌ ಚಲೆ ಸಸುರಾಲ್‌-2′ ಚಿತ್ರದಲ್ಲಿ ಸೋನಾಲ್‌ ಪಾತ್ರ ಹೇಗಿರುತ್ತೆ, ಯಾವಾಗ ಶುರುವಾಗುತ್ತೆ. ಅವರಿಗೆ ಜೋಡಿ ಯಾರು ಇತ್ಯಾದಿ ಎಂಬ ಪ್ರಶ್ನೆಗಳಿಗೆ ಇಷ್ಟರಲ್ಲೇ ಉತ್ತರ ಸಿಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಏನ್‌ ಸಖತ್‌ ಗುರು ಅವ್ನು....' - ಸಿನಿಮಾ ನೋಡಿ ಹೊರಬಂದವರು ಹೀಗೆ ಹೇಳಬೇಕು. ಅಂಥದ್ದೊಂದು ಸಿನಿಮಾ ಕಟ್ಟಿಕೊಡುವ ನಿಟ್ಟಿನಲ್ಲೇ ಕೆಲಸ ಮಾಡುತ್ತಿದ್ದೇನೆ. ಹೀಗೆ ಹೇಳುತ್ತಾ...

  • ಎರಡು ಹಾಡುಗಳನ್ನು ಫಾರಿನ್‌ನಲ್ಲಿಪ್ಲ್ಯಾನ್‌ ಮಾಡಿದ್ದೇವೆ... | ಚಿತ್ರದ ಮುಕ್ಕಾಲು ಭಾಗ ವಿದೇಶದಲ್ಲೇ ನಡೆಯಲಿದೆ.. | ವಿದೇಶದಲ್ಲಿ ಯಾರೂ ಮಾಡದ ಲೊಕೇಶನ್‌ನಲ್ಲಿ...

  • "ಟಗರು' ಚಿತ್ರದ "ಡಾಲಿ' ಪಾತ್ರದ ಮೂಲಕ ಅಬ್ಬರಿಸಿದ "ಡಾಲಿ' ಅಂದಿನಿಂದ ಇಂದಿನವರೆಗೆ ತಿರುಗಿ ನೋಡಿಲ್ಲ. ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ....

  • "ಸಿನಿಮಾ ಅಂದ್ರೆ ಅದು ಒಬ್ಬರಿಂದ ಆಗುವ ಕೆಲಸವಲ್ಲ. ಅಲ್ಲಿ ಹತ್ತಾರು ಜನರಿಸುತ್ತಾರೆ. ನೂರಾರು ಯೋಚನೆಗಳಿರುತ್ತವೆ. ಸಾವಿರಾರು ಚರ್ಚೆಗಳಾಗುತ್ತವೆ. ಅವೆಲ್ಲವೂ...

  • ಬಿಗ್‌ಬಾಸ್‌ ವಿನ್ನರ್‌ ಆಗಿ ಹೊರಬಂದ ಮೇಲೆ ಹತ್ತಾರು ಸಿನಿಮಾಗಳ ಆಫ‌ರ್ ಬರುತ್ತಿರು ವುದೇನೋ ನಿಜ. ಈಗಲೂ ನನಗೆ ಬರುವ ಸಿನಿಮಾ ಆಫ‌ರ್‌ಗಳ ಕಥೆ ಕೇಳುತ್ತೇನೆ. ಒಳ್ಳೆಯ...

ಹೊಸ ಸೇರ್ಪಡೆ