Udayavni Special

ವಿನಾಯಕ ಜೋಶಿಲೇ


Team Udayavani, Aug 31, 2018, 6:00 AM IST

29.jpg

ಅಲ್ಲಿ ಕಣ್ಣಾಡಿಸಿದ ಕಡೆಯೆಲ್ಲಾ ಜೋಶ್‌ ತುಂಬಿತ್ತು. ಸೇರಿದ್ದವರ ಮಾತಲ್ಲಿ ಜೋಶ್‌ ಇತ್ತು, ನಗುವಲ್ಲೂ ಜೋಶ್‌ ಇತ್ತು. ಅತ್ತಿತ್ತ ನಡೆದಾಡುವುದರಲ್ಲೂ ಜೋಶ್‌ ಮನೆಮಾಡಿತ್ತು. ಅಂಥದ್ದೊಂದು “ಜೋಶ್‌’ಗೆ ಕಾರಣವಾಗಿದ್ದು, ಜೋಶಿ. ಹೌದು, ನಟ ಕಮ್‌ ಮಾತಿನ ಮಲ್ಲ ವಿನಾಯಕ ಜೋಶಿ ಅಂಥದ್ದೊಂದು “ಜೋಶ್‌’ ವಾತಾವರಣಕ್ಕೆ ಕಾರಣವಾಗಿದ್ದರು. ಅದಕ್ಕೆ ಕಾರಣ, ಅವರ “ಜೋಶೀಲೇ’.

ಕನ್ನಡದಲ್ಲೀಗ ವೆಬ್‌ಸೀರೀಸ್‌ ಪರ್ವ. ಅದಕ್ಕೆ ವಿನಾಯಕ ಜೋಶಿ ಕೂಡ ಹೊರತಲ್ಲ. ಅವರ “ಜೋಶೀಲೇ’, ವೆಬ್‌ಸೀರೀಸ್‌ಗೆ ಹೊಸ ಸೇರ್ಪಡೆ. ಏಳು ಕಂತುಗಳಲ್ಲಿ ಪ್ರಸಾರವಾಗಲಿರುವ ಕನ್ನಡ ವೆಬ್‌ಸೀರೀಸ್‌ಗೆ ವಿನಾಯಕ ಜೋಶಿ ಅವರದೇ ನಿರ್ದೇಶನ ಮತ್ತು ನಿರ್ಮಾಣ. ಅವರ ಪರಿಕಲ್ಪನೆಯಲ್ಲೇ “ಜೋಶೀಲೇ’ ಶುರುವಾಗಿದೆ. ಅವರ ಜೋಶಿ ಚಿತ್ರ ಬ್ಯಾನರ್‌ನಲ್ಲೇ “ಜೋಶೀಲೇ’ ಶುರುವಾಗಲಿದೆ. ತಮ್ಮ ಹೊಸ ಪ್ರಯತ್ನವನ್ನು ಮಾಧ್ಯಮ ಮುಂದೆ ಹೇಳಿಕೊಳ್ಳಲೆಂದೇ ವಿನಾಯಕ ಜೋಶಿ, ಒಂದು ಎಪಿಸೋಡ್‌ ತೋರಿಸಿದರು.

“ಇದು ಕಳೆದ ನಾಲ್ಕು ವರ್ಷಗಳ ಹಿಂದೆ ಹುಟ್ಟಿಕೊಂಡ ಪರಿಕಲ್ಪನೆ. ಎಲ್ಲೇ ಹೋದರೂ, ನನಗೊಂದು ಪ್ರಶ್ನೆ ಕಾಡುತ್ತಲೇ ಇತ್ತು. ತನ್ನನ್ನು ತಾನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಒಂದಷ್ಟು ರೂಪಗೊಳ್ಳಬೇಕೆಂಬ ಉದ್ದೇಶ ನನ್ನ ಪ್ರಶ್ನೆ ಹಿಂದಿತ್ತು. ಸಾಧನೆಗೈದಿರುವ ಅನೇಕರ ಹಿಂದೆ ಹಲವು ನೋವುಗಳಿವೆ. ಅದನ್ನು ಎಲ್ಲಾ ವರ್ಗಕ್ಕೂ ಪರಿಚಯಿಸಬೇಕು ಎಂಬ ಹಠವಿತ್ತು. ನಮ್ಮ ನಡುವಿನ ಸಾಮಾನ್ಯ ಜನರೇ ಹೀರೋಗಳಿದ್ದಾರೆ. ಅಂತಹವರ ಬದುಕಿನ ಸಾಹಸಗಾಥೆ ಹೇಳಬೇಕೆಂಬ ಆಸೆ ಹೆಚ್ಚಾಯ್ತು. ಅಂತಹ ಸಾಧಕರನ್ನು ಹುಡುಕಿ ಅವರ ಹಿಂದಿನ ಪರಿಶ್ರಮ, ನೋವು-ಗೆಲುವು ಎಲ್ಲವನ್ನೂ ತೋರಿಸುವ ಮೂಲಕ “ಜೋಶ್‌’ ಬರುವಂತೆ ಮಾಡಬೇಕು ಅಂತ ಮನಸ್ಸು ಮಾಡಿದ್ದರಿಂದಲೇ “ಜೋಶೀಲೇ’ ಹುಟ್ಟುಕೊಂಡಿತು’ ಎಂದು ವಿವರ ಕೊಟ್ಟರು ವಿನಾಯಕ ಜೋಶಿ.

“ಇಲ್ಲಿ ಪ್ರತಿ ಎಪಿಸೋಡ್‌ ಕೇವಲ ಹದಿನೈದು ನಿಮಿಷಗಳಲ್ಲಿ ಮೂಡಿಬರುತ್ತೆ. ಯುಟ್ಯೂಬ್‌ನಲ್ಲಿ ಎಲ್ಲೆಂದರಲ್ಲಿ, ಯಾವಾಗ ಬೇಕೆಂದರೆ ಆವಾಗ, ಕುಳಿತಲ್ಲೇ, ನಿಂತಲ್ಲೇ, ಮಲಗಿದ್ದಲ್ಲೇ ಜನರು ವೆಬ್‌ಸೀರೀಸ್‌ ಮೂಲಕ “ಜೋಶೀಲೇ’ ವೀಕ್ಷಿಸಬಹುದು. ಒಂದು ಲೆಕ್ಕದಲ್ಲಿ ಇದು ಯುಟ್ಯೂಬ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ. ಆರಂಭದಲ್ಲಿ ಒಬ್ಬನೇ ಹೊರಟೆ. ನನ್ನ ಜರ್ನಿಯಲ್ಲಿ ಒಬ್ಬೊಬ್ಬರೇ ಕೈ ಜೋಡಿಸಿದರು. ಅದೀಗ 120 ಜನರ ಸಹಕಾರ, ಪ್ರೋತ್ಸಾಹ ಮತ್ತು ಶ್ರಮದಿಂದ “ಜೋಶೀಲೇ’ ಶುರುವಾಗಿದೆ. ಪ್ರತಿ ಸಂಚಿಕೆಯಲ್ಲೂ ಸಾಧಕರು ಮತ್ತು ಅವರ ಸಾಧನೆ ತೋರಿಸುವ ಮೂಲಕ ನೋಡುಗರಲ್ಲಿ ಮತ್ತಷ್ಟು ಆತ್ಮಸ್ಥೈರ್ಯ ತುಂಬಿ ಪ್ರೋತ್ಸಾಹಿಸುವ ಪ್ರಯತ್ನ “ಜೋಶೀಲೆ’ ಮಾಡಲಿದೆ. ನೋಡುಗರಲ್ಲಿ ಇದರಿಂದ ಸಣ್ಣ ಬದಲಾವಣೆಯಾದರೆ, ಅದೇ “ಜೋಶೀಲೇ’ ಮಾಡಿದ್ದಕ್ಕೂ ಸಾರ್ಥಕ. ಇಲ್ಲಿ ಹಿರಿಯ ಕಲಾವಿದರಾದ ಶ್ರೀನಾಥ್‌, ಮಾಸ್ಟರ್‌ ಹಿರಣ್ಣಯ್ಯ, ಉಪೇಂದ್ರ, ಪ್ರಸಿದ್ಧ ಮನೋವೈದ್ಯ ಡಾ.ಸಿ.ಆರ್‌.ಚಂದ್ರಶೇಖರ್‌ ಸೇರಿದಂತೆ ಹಲವರು “ಜೋಶೀಲೇ’ ಭಾಗವಾಗಿ ತಮ್ಮ ಅನುಭವ ಹಂಚಿಕೊಂಡು ಸ್ಪೂರ್ತಿಯಾಗಿದ್ದಾರೆ’ ಎನ್ನುವ ವಿನಾಯಕ ಜೋಶಿ, “ಇಲ್ಲಿ ಏಳು ಹಾಡುಗಳಿವೆ. ಸುಜಿತ್‌ ವೆಂಕಟರಾಮಯ್ಯ, ಚಂದನ್‌ ಶೆಟ್ಟಿ ಜೊತೆ ನಾನೂ ಗೀತೆ ರಚಿಸಿದ್ದೇನೆ. ಧೀರೇಂದ್ರ ದಾಸ್‌ ಅವರ ಸಂಗೀತವಿದೆ. ಸೆಪ್ಟೆಂಬರ್‌ 17 ರಂದು ಸಖತ್‌ ಸ್ಟುಡಿಯೋ ವೆಬ್‌ಸೈಟ್‌ ಮತ್ತು ಯುಟ್ಯೂಬ್‌ನಲ್ಲಿ “ಜೋಶೀಲೇ’ ಪ್ರಸಾರವಾಗಲಿದೆ’ ಎಂಬುದು ವಿನಾಯಕ ಜೋಶಿ ಮಾತು.

ಅಂದು ತಮ್ಮ “ಜೋಶೀಲೇ’ ಹಿಂದೆ ನಿಂತ ಅವರ ತಾಯಿ, ಗೆಳೆಯರು, ಹಿತೈಷಿಗಳನ್ನೆಲ್ಲಾ ವೇದಿಕೆಗೆ ಕರೆದು ವಿನಾಯಕ ಜೋಶಿ ಗೌರವಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

IPL ಕಲರವ : ಮೊದಲ ಪಂದ್ಯ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಿಯಲ್‌ಸ್ಟಾರ್‌ ಉಪ್ಪಿಗೆ ಬರ್ತ್‌ಡೇ ಸಂಭ್ರಮ : ಕೈಯಲ್ಲಿವೆ ಸಾಲು ಸಾಲು ಸಿನಿಮಾ

ರಿಯಲ್‌ಸ್ಟಾರ್‌ ಉಪ್ಪಿಗೆ ಬರ್ತ್‌ಡೇ ಸಂಭ್ರಮ : ಕೈಯಲ್ಲಿವೆ ಸಾಲು ಸಾಲು ಸಿನಿಮಾ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ಭ್ರಮೆಯಲ್ಲಿ ಹೊಸಬರು

ಭ್ರಮೆಯಲ್ಲಿ ಹೊಸಬರು

suchitra-tdy-5

ಎಂಟ್ರಿಗೆ ರೆಡಿಯಾದ ‌ಟಿಪ್ಪುವರ್ಧನ್‌

ಹೀರೋ ಆಗಿಬಿಟ್ರಲ್ಲಾ ರಿಷಭ್‌!

ಹೀರೋ ಆಗಿಬಿಟ್ರಲ್ಲಾ ರಿಷಭ್‌!

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಮಂಗಲಪಾದೆ ಜಿನಬಿಂಬಕ್ಕೆ ಅಪಚಾರ; ಕೇಸು

ಮಂಗಲಪಾದೆ ಜಿನಬಿಂಬಕ್ಕೆ ಅಪಚಾರ; ಕೇಸು

ಮಟ್ಕಾ: ಜಿಲ್ಲೆಯಾದ್ಯಂತ 7 ಮಂದಿ ಮೇಲೆ ಕೇಸು

ಮಟ್ಕಾ: ಜಿಲ್ಲೆಯಾದ್ಯಂತ 7 ಮಂದಿ ಮೇಲೆ ಕೇಸು

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

4 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ನೊಯ್ಡಾದಲ್ಲಿ ದೇಶದ ಅತಿದೊಡ್ಡ ಫಿಲಂ ಸಿಟಿ ನಿರ್ಮಾಣ: ಯೋಗಿ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

ಉಡುಪಿ: ಬಿರುಸಿನ ಮಳೆ; ಬನ್ನಂಜೆ ಪರಿಸರ ಸಂಪೂರ್ಣ ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.