ಗಿರಿಗಿಟ್‌ ತಂದ ಸಂತಸ

ಹಿಟ್‌ಲಿಸ್ಟ್‌ಗೆ ತುಳು ಸಿನಿಮಾ

Team Udayavani, Sep 13, 2019, 5:00 AM IST

“ಗಿರಿಗಿಟ್‌’ ಎಂಬ ತುಳು ಸಿನಿಮಾವೊಂದು ಬಿಡುಗಡೆಯಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಆಗಸ್ಟ್‌ 23 ರಂದು ತೆರೆಕಂಡಿದ್ದ ಈ ಚಿತ್ರ ಈಗ ಚಿತ್ರತಂಡ ಮೊಗದಲ್ಲಿ ನಗುತರಿಸಿದೆ. ಅದಕ್ಕೆ ಕಾರಣ ಚಿತ್ರಕ್ಕೆ ಎಲ್ಲೆಡೆಯಿಂದ ಸಿಗುತ್ತಿರುವ ಪ್ರತಿಕ್ರಿಯೆ. ಹೌದು, “ಗಿರಿಗಿಟ್‌’ ಚಿತ್ರ ನೋಡಿದವರು ಮೆಚ್ಚಿಕೊಳ್ಳುವ ಮೂಲಕ ಚಿತ್ರ ಹಿಟ್‌ಲಿಸ್ಟ್‌ ಸೇರಿದ ಖುಷಿಯಲ್ಲಿದೆ ಚಿತ್ರತಂಡ. ಈ ವಿಷಯವನ್ನು ಹೇಳಲೆಂದೇ ಚಿತ್ರತಂಡ ಮಾಧ್ಯಮ ಮುಂದೆ ಬಂದಿತ್ತು. ಅಂದು ತುಳು ಚಿತ್ರತಂಡಕ್ಕೆ ಸಾಥ್‌ ನೀಡಿದವರು ನಟ, ನಿರ್ದೇಶಕ ರಿಷಭ್‌ ಶೆಟ್ಟಿ. “ಇವತ್ತು ತುಳು ಭಾಷೆಯಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆ. ಆ ಸಾಲಿಗೆ “ಗಿರಿಗಿಟ್‌’ ಕೂಡಾ ಸೇರಿದೆ. ಪ್ರಾದೇಶಿಕವಾಗಿ ಈ ತರಹದ ಸಿನಿಮಾಗಳು ಗೆದ್ದಾಗ ಅಲ್ಲಿನ ಚಿತ್ರರಂಗ ಬೆಳೆಯುತ್ತದೆ. ಪ್ರಾದೇಶಿಕವಾಗಿ ಭಾಷೆ, ಸಂಸ್ಕೃತಿ ಭಿನ್ನವಾಗಿ­ರುತ್ತದೆ. ಆ ನಿಟ್ಟಿನಲ್ಲಿ ಸಿನಿಮಾ ಮಾಡಿ, ಗೆದ್ದಾಗ ಅಲ್ಲೊಂದು ಚಿತ್ರರಂಗವೇ ಆರಂಭವಾಗುತ್ತದೆ ಮತ್ತು ಸಾಕಷ್ಟು ಮಂದಿಗೆ ಅದು ಸಹಾಯ­ವಾಗುತ್ತದೆ. ಈಗ “ಗಿರಿಗಿಟ್‌’ ಗೆದ್ದು ಮತ್ತಷ್ಟು ಮಂದಿಗೆ ಉತ್ಸಾಹ ತಂದಿದೆ’ ಎಂದರು.

ಚಿತ್ರ ಈಗಾಗಲೇ ಬೆಂಗಳೂರಿನಲ್ಲೂ ಬಿಡುಗಡೆಯಾಗಿದ್ದು, ಇಲ್ಲಿನ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆಯಂತೆ. ವಿತರಕ ಜಯಣ್ಣ ಹಾಗೂ ಜಯಣ್ಣ ಅವರನ್ನು ಸೂಚಿಸಿದ ರಿಷಭ್‌ಗೆ ಚಿತ್ರತಂಡ ಥ್ಯಾಂಕ್ಸ್‌ ಹೇಳಲು ಮರೆಯಲಿಲ್ಲ. ಈಗಾಗಲೇ ಕನ್ನಡ, ತುಳು ಚಿತ್ರಗಳಲ್ಲಿ ನಟಿಸಿರುವ ರೂಪೇಶ್‌ ಶೆಟ್ಟಿ ಈ ಚಿತ್ರದ ನಾಯಕ. ಕೇವಲ ನಾಯಕರಾಗಿಯಷ್ಟೇ ಇವರು ಈ ಚಿತ್ರದಲ್ಲಿ ತೊಡಗಿಸಿಕೊಂಡಿಲ್ಲ. ನಿರ್ದೇಶನದಲ್ಲೂ ಭಾಗಿಯಾಗಿದ್ದಾರೆ. ರೂಪೇಶ್‌ ಶೆಟ್ಟಿ ಹಾಗೂ ರಾಕೇಶ್‌ ಕದ್ರಿ ಜೊತೆಯಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಬಗ್ಗೆ ಖುಷಿಯಿಂದ ಮಾತನಾಡಿದರು ರೂಪೇಶ್‌. ನಾಯಕಿ ಶಿಲ್ಪಾ ಕೂಡಾ ಸಿನಿಮಾಕ್ಕೆ, ಪಾತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಯಿಂದ ಖುಷಿಯಾಗಿದ್ದರು.

ಮಂಜುನಾಥ ಅತ್ತಾವರ್‌ ಹಾಗೂ ಶೂಲಿನ್‌ ಫಿಲಂಸ್‌ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಖಳನಾಯಕನಾಗಿ ರೋಶನ್‌ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇನ್ನು ಚಿತ್ರಕ್ಕೆ ಡೇರಲ್‌ ಮಸ್ಕರೇನಸ್‌ ಹಾಗೂ ಜೋಯೆಲ್‌ ರೆಬೆಲ್ಲೊ ಸಂಗೀತ, “ಬಲೆ ತೆಲಿಪಾಲೆ’ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಚಿತ್ರಕ್ಕಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನಟ ವಿನೋದ್‌ ಪ್ರಭಾಕರ್‌ ಅಭಿನಯದ ಹೊಸಚಿತ್ರ "ಶ್ಯಾಡೊ' ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ...

  • ಹಿಂದಿಯಲ್ಲಿ "ಪದ್ಮಾವತ್‌', "ತಾನಾಜಿ', ತೆಲುಗಿನಲ್ಲಿ "ಸೈರಾ ನರಸಿಂಹ ರೆಡ್ಡಿ', ಮಲೆಯಾಳಂನ "ಮಾಮಂಗಮ್‌' ನಂತಹ ಐತಿಹಾಸಿಕ ಕಥಾ ಹಂದರದ ಚಿತ್ರಗಳನ್ನು ಕನ್ನಡದಲ್ಲಿ...

  • 29 ದಿನ 34 ಸಿನಿಮಾ...! -ಇದು ಫೆಬ್ರವರಿಯಲ್ಲಿ ಬಿಡುಗಡೆಗೊಂಡ ಚಿತ್ರಗಳ ವಿಷಯ. ಹೌದು. ಜನವರಿಯಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆ ಕಂಡಿದ್ದವು. ಆದರೆ, ಗೆಲುವಿನ ಸಂಖ್ಯೆ...

  • ಗಾಯಕ ಕಮ್‌ ನಾಯಕ ಸುನೀಲ್‌ ರಾವ್‌ ಮತ್ತೆ ಬಂದಿದ್ದಾರೆ. ವರ್ಷಗಳ ಗ್ಯಾಪ್‌ ಬಳಿಕ "ತುರ್ತು ನಿರ್ಗಮನ' ಎಂಬ ಸಿನಿಮಾ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ...

  • ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ "ದ್ರೋಣ' ಚಿತ್ರದ ಮೂಲಕ ಈ ವರ್ಷದ ಸಿನಿ ಇನ್ನಿಂಗ್ಸ್‌ ಶುರು ಮಾಡಲು ರೆಡಿಯಾಗಿದ್ದಾರೆ. ಹೌದು, ಈ ವರ್ಷ ಶಿವಣ್ಣ ಅಭಿನಯದ ಮೊದಲ...

ಹೊಸ ಸೇರ್ಪಡೆ