ಕೋಡ್ಲು ಮತ್ತೆ ಉದ್ಭವ

Team Udayavani, Jan 24, 2020, 6:00 AM IST

ಕೋಡ್ಲು ರಾಮಕೃಷ್ಣ ನಿರ್ದೇಶನದ “ಉದ್ಭವ’ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ್ದ ಚಿತ್ರ. ಈಗ “ಮತ್ತೆ ಉದ್ಭವ’ ಚಿತ್ರ ನಿರ್ದೇಶಿಸುವ ಮೂಲಕ ಒಂದಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ ಕೋಡ್ಲು ರಾಮಕೃಷ್ಣ. ಹೌದು, ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಬಿಡಗಡೆಗೆ ಸಜ್ಜಾಗಿದೆ. ನಟ ದರ್ಶನ್‌ ಅವರು ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

1990ರ ದಶಕದಲ್ಲಿ “ಉದ್ಭವ’ ಮಾಡಿದ್ದ ಕೋಡ್ಲು, “ಮತ್ತೆ ಉದ್ಭವ’ ಚಿತ್ರಕ್ಕೆ ಕಳೆದ ಏಳೆಂಟು ವರ್ಷಗಳಿಂದಲೂ ಕಥೆ, ಚಿತ್ರಕಥೆ ರೆಡಿಮಾಡಿಕೊಂಡು ಇದೀಗ ಚಿತ್ರ ಮುಗಿಸಿದ್ದಾರೆ. ಮೊದಲ ಚಿತ್ರ ಕ್ಲಾಸ್‌ ಆಗಿತ್ತು. ಈ ಚಿತ್ರ ಮಾಸ್‌ ಆಗಿದೆ ಎಂಬುದು ಕೋಡ್ಲು ಮಾತು. ಅಂದಹಾಗೆ, ಆ ಚಿತ್ರದಲ್ಲಿ ಅನಂತ್‌ನಾಗ್‌ ಇದ್ದರು. ಈ ಚಿತ್ರದಲ್ಲಿ ರಂಗಾಯಣ ರಘು ಇದ್ದಾರೆ. ಅಪ್ಪನಿಗೆ ತಕ್ಕ ಮಗನಾಗಿ ಪ್ರಮೋದ್‌ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಸಹೋದರನಾಗಿ ಮಂಡ್ಯ ರವಿ ನಟಿಸಿದ್ದಾರೆ. ಇನ್ನು, ಮಿಲನ ನಾಗರಾಜ್‌ ಅವರು ಪರಿಸರ ಪ್ರೇಮಿಯಾಗಿ, ರಾಜಕಾರಣಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮೋಹನ್‌ ಸಂಭಾಷಣೆಯ ಜೊತೆಯಲ್ಲಿ ಸ್ವಾಮೀಜಿ ಪಾತ್ರ ನಿರ್ವಹಿಸಿದರೆ, ಆವರ ಆಪ್ತ ಭಕ್ತೆಯಾಗಿ ಶುಭರಕ್ಷಾ ನಟಿಸಿದ್ದಾರೆ.

ಚಿತ್ರವನ್ನು ನಿತ್ಯಾನಂದ ಭಟ್‌, ಸತ್ಯ, ಮಹೇಶ್‌ ಮುದ್ಗಲ್‌ ಮತ್ತು ರಾಜೇಶ್‌ ನಿರ್ಮಾಣ ಮಾಡಿದ್ದಾರೆ. ಅಷ್ಟಕ್ಕೂ ಕೋಡ್ಲು ರಾಮಕೃಷ್ಣ “ಮತ್ತೆ ಉದ್ಭವ’ ಚಿತ್ರ ಮಾಡೋಕೆ ಕಾರಣ, ಅವರು ಎಲ್ಲೇ ಹೋದರೂ ಜನರು “ಉದ್ಭವ’ ರೀತಿಯ ಸಿನಿಮಾ ಮಾಡಿ ಅಂತ ಹೇಳುತ್ತಿದ್ದರಂತೆ.ಹಾಗಾಗಿ, ಕಥೆ ಬರೆದು, ಅದಕ್ಕೆ ತಕ್ಕ ಚಿತ್ರಕಥೆ ರೆಡಿಮಾಡಲು ವರ್ಷಗಟ್ಟಲೇ ಹಿಡಿಯಿತಂತೆ. ಈಗ ಚಿತ್ರ ಮಾಡಿ, ಪ್ರೇಕ್ಷಕರ ಮುಂದೆ ತರೋಕೆ ಅಣಿಯಾಗಿದ್ದಾರೆ.

ಚಿತ್ರದಲ್ಲಿ ಸುಧಾಬೆಳವಾಡಿ, ಅವಿನಾಶ್‌, ಗಿರೀಶ್‌ಭಟ್‌, ಚೇತನ್‌ ಚಮನ್‌, ನರೇಶ್‌, ಶಂಕರ್‌ ಅಶ್ವಥ್‌, ನಿರಂಜನ್‌ ಇತರರು ನಟಿಸಿದ್ದಾರೆ. ಜಯಂತ್‌ ಕಾಯ್ಕಣಿ, ಪ್ರಹ್ಲಾದ್‌ ಸಾಹಿತ್ಯದ ಮೂರು ಗೀತೆಗಳಿಗೆ ವಿ. ಮನೋಹರ್‌ ಸಂಗೀತ ನೀಡಿದ್ದಾರೆ. ಮೋಹನ್‌ ಛಾಯಾಗ್ರಹಣ ಮಾಡಿದ್ದಾರೆ.

ಅಂದಹಾಗೆ, “ಮತ್ತೆ ಉದ್ಭವ’ ಹಾಡುಗಳ ಬಿಡುಗಡೆ ವೇಳೆ ನಿರ್ದೇಶಕ ಟಿ.ಎನ್‌.ಸೀತಾರಾಮ್‌ ಸೇರಿದಂತೆ ಇತರರು ಇದ್ದರು. ಚಿತ್ರವನ್ನು ಧೀರಜ್‌ಎಂಟರ್‌ ಪ್ರೈಸಸ್‌ನ ಮೋಹನ್‌ದಾಸ್‌ ಪೈ ವಿತರಣೆ ಮಾಡುತ್ತಿದ್ದು, ಫೆಬ್ರವರಿ 7ರಂದು ಬಿಡುಗಡೆ ಮಾಡಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಶಸ್ವಿಯಾಗಿ ನೂರು ಚಿತ್ರಗಳಲ್ಲಿ ಅಭಿನಯಿಸಿ, ಶತಕದ ಸಂಭ್ರಮದಲ್ಲಿರುವ ನಟ ರಮೇಶ್‌ ಅರವಿಂದ್‌, ಈ ವಾರ 101ನೇ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ....

  • ನಾನು ಎಲ್ಲಾ ಬಿಟ್ಟು, ಈ ರಂಗಕ್ಕೆ ಬಂದಿದ್ದೇ ಏನೋ ಮಾಡಬೇಕು ಅಂತ. ಚಾಲೆಂಜ್‌ ತೆಗೆದುಕೊಳ್ಳದಿದ್ದರೆ ಹೇಗೆ? ಕಂಫ‌ರ್ಟ್‌ ಜೋನ್‌ ಬಿಟ್ಟು ಬೇರೆ ಮಾಡಬೇಕು ಅಂದಾಗ,...

  • ಈಗಂತೂ ಮೊಬೈಲ್‌ನದ್ದೇ ಸುದ್ದಿ. ಯಾರ ಕೈ ನೋಡಿದರೂ ಮೊಬೈಲ್‌ ಇದ್ದೇ ಇರುತ್ತೆ. ಅದರಲ್ಲೂ ವಾಟ್ಸಾಪ್‌, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಟ್ವಿಟ್ಟರ್‌...ಹೀಗೆ ಒಂದಾ...

  • ಪ್ರೇಮ್‌ ನಿರ್ದೇಶನದ "ಏಕಲವ್ಯ' ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ದೊಡ್ಡ ಗ್ಯಾಪ್‌ನ ಬಳಿಕ ಲವ್‌ಸ್ಟೋರಿ ಮಾಡುತ್ತಿರುವ ಪ್ರೇಮ್‌, ಈ ಬಾರಿ ಸಖತ್‌ ಬೋಲ್ಡ್‌ ಕಥೆಯನ್ನೇ...

  • ಹಿರಿಯ ಸಾಹಿತಿ ಡಾ.ಬಿ.ಎಲ್‌.ವೇಣು ಅವರ ಐತಿಹಾಸಿಕ ಕಾದಂಬರಿ "ದಳವಾಯಿ ಮುದ್ದಣ' ಈಗ ದೃಶ್ಯರೂಪ ಪಡೆದುಕೊಂಡಿದೆ. "ದಳವಾಯಿ ಮುದ್ದಣ್ಣ' ಕಾದಂಬರಿ ಈಗ ಚಲನಚಿತ್ರಕ್ಕೆ...

ಹೊಸ ಸೇರ್ಪಡೆ