ಅನ್‌ಲಿಮಿಟೆಡ್‌ ಕಂಪನಿ!


Team Udayavani, Feb 2, 2018, 11:08 AM IST

20-15.jpg

ಈಗಂತೂ ಚಿತ್ರಗಳ ಶೀರ್ಷಿಕೆಗಳೇ ಆಕರ್ಷಕವಾಗಿರುತ್ತವೆ. ಆ ಸಾಲಿಗೆ “ಬಿಎಂಡಬ್ಲ್ಯು’ ಎಂಬ ಶೀರ್ಷಿಕೆಯೂ ಒಂದು. ಕಾರಿನ ಹೆಸರೂ ಚಿತ್ರವಾಗಿದೆಯಲ್ಲ ಅಂದುಕೊಂಡರೆ, ಆ ಊಹೆ ತಪ್ಪು. “ಬೆಂಗಳೂರು ಮೆನ್‌ ಆ್ಯಂಡ್‌ ವುಮೆನ್ಸ್‌ ಕಾಲೇಜ್‌’ ಈ ಹೆಸರನ್ನು ಚಿಕ್ಕದ್ದಾಗಿ “ಬಿಎಂಡಬ್ಲ್ಯು’ ಅಂತ ಇಟ್ಟು ಚಿತ್ರ ಮಾಡಿದ್ದಾರೆ ನಿರ್ದೇಶಕ ಗಂಧರ್ವರಾಯ ರಾವತ್‌. ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ನಿರ್ದೇಶಕರೇ ಕಥೆ, ಚಿತ್ರಕಥೆ ಮತ್ತು ಮೂರು ಗೀತೆ ರಚಿಸಿದ್ದಾರೆ. 

ಇದು ಯುವಕರ ಕುರಿತ ಕಥೆ. ಕಾಲೇಜಿನ ಹುಡುಗ, ಹುಡುಗಿಯರ ತುಂಟಾಟ, ಚೆಲ್ಲಾಟ, ಪ್ರೀತಿ, ಪ್ರೇಮ, ಒಳ್ಳೆಯದು, ಕೆಟ್ಟದ್ದು ಇವೆಲ್ಲವನ್ನೂ ಇಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಚಿತ್ರದ ಶೀರ್ಷಿಕೆಗೆ “ಫ‌ನ್‌ ಅನ್‌ಲಿಮಿಟೆಡ್‌’ ಎಂಬ ಅಡಿಬರಹವೂ ಇದೆ. 

ಅಂದು ಪ್ರಥಮ್‌ ಕೂಡ ಆಗಮಿಸಿದ್ದರು. “ನಿರ್ದೇಶಕರ ಸಿನಿಮಾ ಪ್ರೀತಿ ಬಗ್ಗೆ ಮಾತನಾಡಿದರು. ಒಂಥರಾ ಓಂಪ್ರಕಾಶ್‌ ರಾವ್‌ರಂತೆ ಕೆಲಸ ಮಾಡುತ್ತಾರೆ. ಇವರು ಅವರಂತೆಯೇ ಇನ್ನೂ ಎತ್ತರಕ್ಕೆ ಬೆಳೆಯಲಿ. ಇಲ್ಲಿ ಪ್ರವೀಣ್‌ ತನ್ನ ಗೆಳೆಯನ ಹುಡುಗಿಯ ಜೊತೆಗೇ ಫ್ಲರ್ಟ್‌ ಮಾಡುವುದಕ್ಕೆ ಹೋಗುತ್ತಾರೆ. ಆದರೆ, ಅದು ನಿಜಜೀವನದಲ್ಲಿ ಆಗುವುದು ಬೇಡ. ಬೇರೆಯವರ ತಟ್ಟೆಗೆ ಕೈ ಹಾಕಬಾರದು ಅಂತ ಕಾಲೆಳೆದು ಮಾತಾಡುತ್ತಲೇ, ಹಣ ಕೊಟ್ಟು ಆಡಿಯೋ ಸಿಡಿ ಖರೀದಿಸಿದರು ಪ್ರಥಮ್‌.

ಚಿತ್ರದ ವಿಶೇಷವೆಂದರೆ, ನಿರ್ದೇಶಕರ ಪುತ್ರ ಶ್ರೀರಾಂ ಗಂಧರ್ವ ಅವರು ಆರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಗೀತ ನೀಡುವುದರೊಂದಿಗೆ ಒಂದು ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ಪ್ರವೀಣ್‌, ಆಕಾಶ್‌ಸಿಂಗ್‌ ರಜಪೂತ್‌, ಚಿಕ್ಕಣ್ಣ , ಪ್ರಿಯಾಂಕ ಮಲಾ°ಡ್‌, ಅನುಷಾ ರೈ, ಏಕ್ತಾ ರಾಥೋಡ್‌ ಮುಂತಾದವರು ಅಭಿನಯಿಸಿದ್ದಾರೆ. ಗೌರವ್‌ ಅವರಿಲ್ಲಿ ಎರಡು ಗೀತೆಗಳನ್ನು ಬರೆದಿದ್ದಾರೆ. ಜಿ.ಎಸ್‌. ವಾಲಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಸೂರಜ್‌ ಚಿತ್ರಕ್ಕೆ ಸಂಕಲನ ಮಾಡಿದರೆ, ಮುರಳಿ ಅವರು ನೃತ್ಯ ಸಂಯೋಜಿಸಿದ್ದಾರೆ. ನಿರ್ಮಾಪಕ ಜಗದೀಶ್‌ ಪುರುಶೋತ್ತಮ್‌ ಅವರು, ಚಿತ್ರದ ಹೆಸರು “ಬಿಎಂಡಬ್ಲ್ಯು’ ಅಂತ ಇದ್ದರೂ, ಸಿನಿಮಾ ಟಿಕೆಟ್‌ ಅಂಬಾಸಿಡರ್‌ ಕಾರ್‌ ಬೆಲೆಯಷ್ಟೆ ಇರುತ್ತದೆ ಎಂದರು. ಅಂದು ನಟಿ ಸ್ಪರ್ಶ ರೇಖಾ, ನಿರ್ಮಾಪಕ ಜಾಕ್‌ ಮಂಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.