ನಾವೆಲ್ಲಾ ಗ್ರೇಟ್‌ ಅಂದ್ಕೊಂಡಿದ್ವಿ ,ಆದರೆ ಈಗ …


Team Udayavani, Aug 28, 2020, 8:42 PM IST

ನಾವೆಲ್ಲಾ ಗ್ರೇಟ್‌ ಅಂದ್ಕೊಂಡಿದ್ವಿ , ಆದರೆ ಈಗ …

ಕಳೆದ ಐದಾರು ತಿಂಗಳಿನಲ್ಲಿ ಕೋವಿಡ್ ಲಾಕ್‌ಡೌನ್‌ನಿಂದಾಗಿ ಇತರರಂತೆ, ಉಪ್ಪಿ ಅವರ ಬಹುತೇಕ ಎಲ್ಲ ಚಟುವಟಿಕೆಗಳಿಗೂ ಬ್ರೇಕ್‌ ಬಿದ್ದಿದೆಯಂತೆ. ಈ ವೇಳೆ ಉಪ್ಪಿ ಸಿನಿಮಾ ಶೂಟಿಂಗ್‌, ಪ್ರಜಾಕೀಯದ ಓಡಾಟಗಳನ್ನು ಮತ್ತಿತರ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ ಈ ಸಮಯವನ್ನು ಉಪ್ಪಿ ಒಂದಷ್ಟು ರಚನಾತ್ಮಕ ಕೆಲಸಗಳಲ್ಲಿ ವಿನಿಯೋಗಿಸಿದ್ದಾರೆ. ಅವರೇ ಹೇಳುವಂತೆ, “ಕೊರೊನಾ ಲಾಕ್‌ಡೌನ್‌ ನಮ್ಮ ಆ್ಯಕ್ಟಿವಿಟಿಸ್‌ಗೆ ಒಂದಷ್ಟು ಬ್ರೇಕ್‌ ಹಾಕಿದ್ದೇನೋ ನಿಜ.

ಆದ್ರೆ ಈ ಸಮಯವನ್ನ ನಾನು ಬೇರೆ ರೀತಿಯಲ್ಲಿ ಉಪಯೋಗಿಸಿಕೊಂಡೆ. ಅದರ ಭಾಗವಾಗಿ ತಮ್ಮ ತೋಟದಲ್ಲಿ ಒಂದಷ್ಟು ಸಹಜ ಕೃಷಿ ಪ್ರಯೋಗಗಳನ್ನು ಮಾಡಿದೆವು. ಅದು ಒಳ್ಳೆಯ ರಿಸಲ್ಟ್ ಕೊಟ್ಟಿತು. ಕೃಷಿಯಲ್ಲಿ ನಾವು ಏನೇನು ಪ್ರಯೋಗಗಳನ್ನ ಮಾಡಬಹುದು ಅಂಥ ಸ್ವತಃ ನನ್ನ ಅನುಭವಕ್ಕೆ ಬಂದಿತು. ಅಲ್ಲದೆ ಮುಂದೆ ಯಾವಾಗಲಾದ್ರೂ ಉಪಯೋಗಕ್ಕೆ ಬಂದ್ರೂ ಬರಬಹುದು ಅಂಥ ಒಂದಷ್ಟು ಒಳ್ಳೆಯ ಸಬ್ಜೆಕ್ಟ್ ಗಳನ್ನು ಸ್ಕ್ರಿಪ್ಟ್ ಮಾಡಿಕೊಂಡಿದ್ದೇನೆ. ಮಿಕ್ಕಂತೆ ಹೇಳಬೇಕು ಅಂದ್ರೆ ನಮ್ಮನ್ನ ನಾವು ತಿಳಿದುಕೊಳ್ಳೋಕ  ಇದು ಒಳ್ಳೆಯ ಟೈಮ್‌ ಆಗಿತ್ತು ಎನ್ನುತ್ತಾರೆ ಉಪ್ಪಿ.

“ನಾವೆಲ್ಲ ಗ್ರೇಟ್‌! ಏನೋ ಮಾಡ್ತೀವಿ ಅಂಥ ಇಷ್ಟು ದಿನ ಭ್ರಮೆಯಲ್ಲಿದ್ದೆವು. ಆದ್ರೆ ಒಂದೇ ಒಂದು ಕೋವಿಡ್ ನೀವೆಲ್ಲ ಏನೂ ಅಲ್ಲ. ನಿಮ್ಗಿಂತ ಗ್ರೇಟ್‌ ಬೇರೆ ಏನೋ ಇದೆ ಅಂಥ ತೋರಿಸಿಕೊಟ್ಟಿದೆ. ಇನ್ನಾದ್ರೂ ನಾವು ಇದನ್ನ ಅರ್ಥ ಮಾಡಿಕೊಳ್ಬೇಕು. ಪ್ರಕೃತಿಗಿಂತ ಯಾರೂ ದೊಡ್ಡವರಲ್ಲ. ಪ್ರಕೃತಿ ಜೊತೆ ಹೋರಾಟ ಮಾಡೋದನ್ನ ಬಿಟ್ಟು, ಹೊಂದಾಣಿಕೆ ಮಾಡಿಕೊಂಡು ಬದುಕೋದನ್ನ ಕಲಿಯಬೇಕು. ಅವಾಗ ಪ್ರಕೃತಿನೇ ನಮ್ಮನ್ನ ಕಾಪಾಡುತ್ತೆ…’ ಹೀಗೆ ಹೇಳುತ್ತ ವಾಸ್ತವತೆ ತೆರೆದಿಡುತ್ತಾರೆ ನಟ ಕಂ ನಿರ್ದೇಶಕ, ರಿಯಲ್‌ ಸ್ಟಾರ್‌ ಉಪೇಂದ್ರ. ಸದ್ಯ ಉಪೇಂದ್ರ ಏಕಕಾಲಕ್ಕೆ ಕನ್ನಡ ಐದಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ತೆಲುಗಿನಲ್ಲಿ ಅಲ್ಲು ಅರ್ಜುನ್‌ ನಿರ್ಮಾಣ ಸಂಸ್ಥೆಯ “ಬಾಕ್ಸರ್‌’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ “ಹೋಮ್‌ ಮಿನಿಸ್ಟರ್‌’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಈಗಾಗಲೇ ಸೆನ್ಸಾರ್‌ನಿಂದ ಗ್ರೀನ್‌ ಸಿಗ್ನಲ್‌ ಪಡೆದುಕೊಂಡಿರುವ “ಹೋಮ್‌ ಮಿನಿಸ್ಟರ್‌’ ಥಿಯೇಟರ್‌ಗಳು ತೆರೆಯುತ್ತಿದ್ದಂತೆ,

ಬಿಡುಗಡೆಯಾಗಲಿದೆ. ಇನ್ನು ಉಪೇಂದ್ರ ಅಭಿನಯದ “ಕಬ್ಜ’ ಚಿತ್ರ ಕೂಡ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಆರ್‌. ಚಂದ್ರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಒಂದಷ್ಟು ಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು, ಬಾಕಿಯಿರುವ ಚಿತ್ರೀಕರಣ ಸೆಪ್ಟೆಂಬರ್‌ನಿಂದ ಶುರುವಾಗಲಿದೆ. ಇದರೊಂದಿಗೆ ರವಿಚಂದ್ರನ್‌ ಅವರೊಂದಿಗೆ ಅಭಿನಯಿಸುತ್ತಿರುವ ಇನ್ನೂ ಟೈಟಲ್‌ ಅಂತಿಮವಾಗದ ಹೊಸಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದ್ದು, ಆ ಚಿತ್ರ ಕೂಡ ಈ ವರ್ಷದ ಕೊನೆಗೆ ತೆರೆಗೆ ಬರುವ ಸಾಧ್ಯತೆಯಿದೆ. ಇನ್ನು ಶಶಾಂಕ್‌ ಮತ್ತು ಮಂಜು ಮಾಂಡವ್ಯ ನಿರ್ದೇಶನದ ಎರಡು ಚಿತ್ರಗಳಲ್ಲಿ ಉಪೇಂದ್ರ ಅಭಿನಯಿಸುತ್ತಿದ್ದು, ಆ ಚಿತ್ರಗಳ ಟೈಟಲ್‌ ಮತ್ತಿತರ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.­

ಟಾಪ್ ನ್ಯೂಸ್

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಸಂಸದರ ಅಮಾನತು ಆದೇಶ ಹಿಂಪಡೆಯಲ್ಲ, ನನಗೆ ಪಾಠ ಹೇಳೋದು ಬೇಡ; ಖರ್ಗೆಗೆ ನಾಯ್ದು

ಸಂಸದರ ಅಮಾನತು ಆದೇಶ ಹಿಂಪಡೆಯಲ್ಲ, ನನಗೆ ಪಾಠ ಹೇಳೋದು ಬೇಡ; ಖರ್ಗೆಗೆ ನಾಯ್ದು

Untitled-2

ಪಾದಯಾತ್ರೆಯಿಂದ ಆರಂಭವಾಯಿತು ಲಕ್ಷದೀಪೋತ್ಸವ

say no to lockdown

ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ” ಎನ್ನುತ್ತಿರುವ ನೆಟ್ಟಿಗರು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

akshi

ನೇತ್ರದಾನದ ಮಹತ್ವಸಾರುವ ಚಿತ್ರ :  ಡಿ.3ಕ್ಕೆ ಅಕ್ಷಿ ತೆರೆಗೆ

shivaji surathkal 2

ಡಿಸೆಂಬರ್‌ನಿಂದ ಶಿವಾಜಿ ಸುರತ್ಕಲ್‌ 2 ಶುರು

jhjhgfd

ಜಮಾಲಿಗುಡ್ಡದಲ್ಲಿ ಧನಂಜಯ್‌-ಅದಿತಿ ಪ್ರಭುದೇವ

ಅಪ್ಪು ಸ್ಮರಣೆಯೊಂದಿಗೆ ‘ಬನಾರಸ್‌’ ಪ್ರಚಾರ ಕಾರ್ಯಕ್ಕೆ ಚಾಲನೆ

ಅಪ್ಪು ಸ್ಮರಣೆಯೊಂದಿಗೆ ‘ಬನಾರಸ್‌’ ಪ್ರಚಾರ ಕಾರ್ಯಕ್ಕೆ ಚಾಲನೆ

ನನಗೆ ತೃಪ್ತಿ ಕೊಟ್ಟ ಸಿನಿಮಾವಿದು: 100 ಬಗ್ಗೆ ರಮೇಶ್‌ ವಿಶ್ವಾಸ

ನನಗೆ ತೃಪ್ತಿ ಕೊಟ್ಟ ಸಿನಿಮಾವಿದು: 100 ಬಗ್ಗೆ ರಮೇಶ್‌ ವಿಶ್ವಾಸ

MUST WATCH

udayavani youtube

ಈ ನೀರು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ ಇನ್ನೂ ಅಪಾಯಕಾರಿ ರೋಗ ಬರಬಹುದು

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಹೊಸ ಸೇರ್ಪಡೆ

ಅಮೃತ್‌ ಅಪಾರ್ಟ್‌ಮೆಂಟ್ಸ್‌

‘ಅಮೃತ್‌ ಅಪಾರ್ಟ್‌ಮೆಂಟ್ಸ್‌’ ನಲ್ಲಿ ಗೆಲುವಿನ ನಗೆ

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಗುಂಡ್ಲುಪೇಟೆ: ಕೊಡಗಾಪುರ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

girls hostel

ಹಾಸ್ಟೆಲ್‌ನಲ್ಲಿ ಓದಲು ಕರೆಂಟಿಲ್ಲ, ಸ್ನಾನ, ಶೌಚಾಲಯಕ್ಕೂ ನೀರಿಲ್ಲ!

oreo kannada movie

ಬಿಸ್ಕೆಟ್‌ ಹೆಸರು ಈಗ ಸಿನಿಮಾ ಟೈಟಲ್‌

23indian

ಸಂವಿಧಾನ ನಮಗೆಲ್ಲ ದಾರಿದೀಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.