ಪ್ರೇಮ್‌ ಮುಖದಲ್ಲಿ ವಿಲನ್‌ ನಗು

Team Udayavani, Oct 5, 2018, 6:00 AM IST

s-21.jpg

“ಪ್ರೇಮ್‌ ಇಷ್ಟ್ ಬೇಗ ಡೇಟ್‌ ಅನೌನ್ಸ್‌ ಮಾಡಿಬಿಟ್ರಾ ಎಂದು ಬೇಸರವಾಯಿತು’
– ನಿರ್ಮಾಪಕ ಸಿ.ಆರ್‌.ಮನೋಹರ್‌ ಹೀಗೆ ಹೇಳುತ್ತಿದ್ದಂತೆ ಎಲ್ಲರಿಗೂ ಅಚ್ಚರಿ. ಅವರು ಹೇಳಿದ್ದು ತಮ್ಮ ನಿರ್ಮಾಣದ “ದಿ ವಿಲನ್‌’ ಚಿತ್ರದ ಬಗ್ಗೆ. ಎಲ್ಲರೂ ಪ್ರೇಮ್‌ ಯಾವಾಗ ಸಿನಿಮಾ ಮುಗಿಸ್ತಾರೆ, ಯಾವಾಗ ಡೇಟ್‌ ಅನೌನ್ಸ್‌ ಮಾಡ್ತಾರೆಂದು ಕಾಯುತ್ತಿದ್ದರೆ, ನಿರ್ಮಾಪಕರಿಗೆ ಯಾಕೆ ಬೇಜಾರಾಗಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡಿತ್ತು. ಮನೋಹರ್‌ ಮುಂದೆ ಮಾತನಾಡಿದರು. “ಇದು ನನ್ನ ಬ್ಯಾನರ್‌ ಹಾಗೂ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಗುವ ಸಿನಿಮಾ. ಇಡೀ ತಂಡ ತುಂಬಾ ಚೆನ್ನಾಗಿ ಕೆಲಸ ಮಾಡಿದೆ. ತುಂಬಾ ಖುಷಿಯಿಂದ ಇದ್ದೆವು. ಶಿವರಾಜಕುಮಾರ್‌ ಜೊತೆ ಇದು ನನ್ನ ಎರಡನೇ ಸಿನಿಮಾ. ಶಿವಣ್ಣ ಕಥೆ ಕೇಳಿ ಇಷ್ಟಪಟ್ಟು, ನನಗೆ ಫೋನ್‌ ಮಾಡಿ, “ಈ ಸಿನಿಮಾವನ್ನು ಮಾಡಿ, ನಿಮಗೆ ಒಳ್ಳೆಯದಾಗುತ್ತದೆ’ ಎಂದರು. ಅದರಂತೆ ಮಾಡಿದ್ದೇನೆ. ಮೊನ್ನೆ ಪ್ರೇಮ್‌ ಡೇಟ್‌ ಅನೌನ್ಸ್‌ ಮಾಡಿದಾಗ ಇಷ್ಟು ಬೇಗ ಮುಗಿಯಿತಾ ಎಂದು ಬೇಸರವಾಯಿತು’ ಎನ್ನುತ್ತಾ ಸಿನಿಮಾಕ್ಕೆ ದುಡಿದವರಿಗೆ ಥ್ಯಾಂಕ್ಸ್‌ ಹೇಳಿದರು. 

ನಿರ್ದೇಶಕ ಪ್ರೇಮ್‌ ಎಂದಿನಂತೆ ಹೆಚ್ಚು ಮಾತನಾಡಲಿಲ್ಲ. “ಶಿವರಾಜಕುಮಾರ್‌ ಜೊತೆ ಮೂರನೇ ಸಿನಿಮಾ ಮಾಡುತ್ತಿದ್ದೇನೆ. ಅವರ ಜೊತೆ ಸಿನಿಮಾ ಮಾಡಲು ಪುಣ್ಯ ಮಾಡಿದ್ದೇನೆ. ಸುದೀಪ್‌ ಅವರು ಕೂಡಾ ಈ ಚಿತ್ರಕ್ಕೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಸುದೀಪ್‌ ಲೇಟಾಗಿ ಬರ್ತಾರೆ, ಕ್ಯಾರ್‌ವಾನ್‌ನಿಂದ ಬೇಗ ಬರಲ್ಲ ಎಂದು ಕೆಲವರು ಹೇಳುತ್ತಿದ್ದರು. ಆದರೆ, ನಮ್ಮ ಸಿನಿಮಾಕ್ಕಾಗಿ ಬೆಳಗ್ಗೆ 6 ರಿಂದ ಸಂಜೆ 6ರವರೆಗೂ ಇದ್ದು ಸಹಕರಿಸಿದ್ದಾರೆ’ ಎನ್ನುತ್ತಾ ನಿರ್ಮಾಪಕರ ಹಾಗೂ ಸಂಗೀತ ನಿರ್ದೇಶಕರ ಗುಣಗಾನ ಮಾಡಿದರು. ಅಕ್ಟೋಬರ್‌ 11 ರಿಂದ ಚಿತ್ರದ ಮುಂಗಡ ಬುಕ್ಕಿಂಗ್‌ ಆರಂಭವಾಗುತ್ತಿದೆ.

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ, ಪ್ರೇಮ್‌ ಅವರ ಸಂಗೀತ ಪ್ರೀತಿಯ ಬಗ್ಗೆ ಮಾತನಾಡಿದರು. “ಒಂದು ಸಣ್ಣ ಕರೆಕ್ಷನ್‌ ಇದ್ದರೂ ಪ್ರೇಮ್‌ ವಿಜಯನಗರದಿಂದ ನನ್ನ ಸ್ಟುಡಿಯೋಗೆ ಬರುತ್ತಿದ್ದರು. ಅವರಿಗೆ ಯಾವುದಾದರೂ ಬಿಟ್ಸ್‌ ಇಷ್ಟವಾಗಲಿಲ್ಲ ಅಂದ್ರೆ, ತುಂಬಾ ಕೂಲ್‌ ಆಗಿ, “ಮಗ ಡಿಲೀಟ್‌’ ಅನ್ನುತ್ತಿದ್ದರು. ಮುಖದಲ್ಲಿ ನಗು ಇದ್ದರೂ ಕಣ್ಣಲ್ಲಿ ನೋವು ಎದ್ದು ಕಾಣುತ್ತಿತ್ತು’ ಎನ್ನುತ್ತಾ ಪ್ರೇಮ್‌ ಬಗ್ಗೆ ಹೇಳಿದರು. ಇನ್ನು, ನಟ ಶಿವರಾಜ ಕುಮಾರ್‌ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು. “ಈ ಚಿತ್ರದ ನಿಜವಾದ ಹೀರೋ ನಿರ್ಮಾಪಕ ಮನೋಹರ್‌. ಬೇರೆ ಯಾರೇ ಆಗಿದ್ರೂ ಅರ್ಧಕ್ಕೆ ಹೋಗುತ್ತಿದ್ದರು. ಆದರೆ, ಮನೋಹರ್‌ ಧೈರ್ಯದಿಂದ ಸಿನಿಮಾ ಮಾಡಿದ್ದಾರೆ’ ಎಂದರು. ಅನಾರೋಗ್ಯದ ಕಾರಣದಿಂದ ಪತ್ರಿಕಾಗೋಷ್ಠಿಗೆ ಸುದೀಪ್‌ ಬಂದಿರಲಿಲ್ಲ. 

ಟಾಪ್ ನ್ಯೂಸ್

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.