ವೈರಲ್‌ ಚೆಕ್‌: ಜನರ ಜೀವನ ಬದಲಿಸುವ ಘಟನೆಗಳ ಸುತ್ತ


Team Udayavani, Jul 13, 2018, 6:00 AM IST

b-34.jpg

“ತುಂಬಾ ಕೆಲಸ ಇದೆ. ಹಾಗಾಗಿ ಯಾರಾದರೂ ನಿರ್ದೇಶನ ಮಾಡಿ ಕೊಡಿ ಅಂತ ಬಂದರೆ ಯೋಚನೆ ಮಾಡುತ್ತೇನೆ. ನಾನಾಗೇ ಯಾರನ್ನೂ ಹುಡುಕಿಕೊಂಡು ಹೋಗುವುದಿಲ್ಲ …’

“ನಮೋ ಭೂತಾತ್ಮ’ ಚಿತ್ರದ ನಂತರ ನೃತ್ಯ ನಿರ್ದೇಶಕ ಮುರಳಿ ಯಾಕೆ ಯಾವೊಂದು ಚಿತ್ರವನ್ನೂ ನಿರ್ದೇಶಿಸಲಿಲ್ಲ ಎಂಬ ಸಂಶಯ ಎಲ್ಲರಲ್ಲೂ ಇತ್ತು. ಅದೇ ಪ್ರಶ್ನೆಯನ್ನು ಮುರಳಿ ಮುಂದಿಟ್ಟಾಗ, ಅವರಿಂದ ಈ ಉತ್ತರ ಬಂತು. ಇನ್ನಷ್ಟು ಮುಂದುವರೆಸಿದ ಮುರಳಿ, “ಇದು ಸಹ ಇಷ್ಟೇ. ನೃತ್ಯ ನಿರ್ದೇಶನದಲ್ಲಿ ಬಿಝಿ ಇದ್ದೆ. ಅದೊಂದು ದಿನ ಶ್ರೀನಿವಾಸ್‌ ಬಂದು ಒಂದು ಚಿತ್ರ ಮಾಡಿಕೊಡಿ ಎಂದರು. ಕಥೆ ಚೆನ್ನಾಗಿತ್ತು. ಹಾಗಾಗಿ ಇರುವ ಕೆಲಸದಲ್ಲಿ ಸ್ವಲ್ಪ ಸಮಯ ಹೊಂದಿಸಿಕೊಂಡು ಈ ಚಿತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ ಮುರಳಿ.

ಅಂದಹಾಗೆ, ಮುರಳಿ ನಿರ್ದೇಶನದ ಎರಡನೆಯ ಚಿತ್ರ “ವೈರಲ್‌’ ಕಳೆದ ವಾರ ಪ್ರಾರಂಭವಾಯಿತು. ಯಶ್‌ ಬಂದು ಚಿತ್ರಕ್ಕೆ ಕ್ಲಾಪ್‌ ಮಾಡಿ, ಶುಭ ಹಾರೈಸಿ ಹೋದರು. ಆ ನಂತರ ಮುರಳಿ ತಮ್ಮ ತಂಡದೊಂದಿಗೆ ಮಾತಿಗೆ ಕುಳಿತರು. ಈ ಚಿತ್ರವನ್ನು ಶ್ರೀನಿವಾಸ್‌ ನಿರ್ಮಿಸುತ್ತಿದ್ದಾರೆ. ಶ್ರೀನಿವಾಸ್‌ ಇದಕ್ಕೂ ಮುನ್ನ “ಶಾರ್ಪ್‌ಶೂಟರ್‌’ ಎಂಬ ಚಿತ್ರ ನಿರ್ಮಿಸಿದ್ದರು. ಈಗ “ವೈರಲ್‌’ ನಿರ್ಮಿಸುತ್ತಿರುವುದರ ಜೊತೆಗೆ, ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

“ಇದೊಂದು ಮೆಸೇಜ್‌ ಒರಿಯೆಂಟೆಡ್‌ ಸಿನಿಮಾ’ ಎಂದು ಮಾತು ಪ್ರಾರಂಭಿಸಿದರು ಮುರಳಿ. “ಒಂದು ಘಟನೆಯಿಂದೆ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇವೆ. ವೈರಲ್‌ ಎನ್ನುವ ವಿಷಯವನ್ನೇ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೇವೆ. ಇತ್ತೀಚೆಗೆ ಒಬ್ಬ ಕುರಿ ಕಾಯೋ ಹುಡುಗ ಹಾಡಿದ್ದು ದೊಡ್ಡದಾಗಿ ವೈರಲ್‌ ಆಯಿತು. ಅದೇ ತರಹ ಕೆಲವು ನೆಗೆಟಿವ್‌ ಎನ್ನುವಂತಹ ವಿಷಯಗಳು ಸಹ ವೈರಲ್‌ ಆಗಿ ಸುದ್ದಿ ಮಾಡುತ್ತವೆ. ಆ ತರಹದ ನೆಗೆಟಿವ್‌ ವಿಷಯಗಳು ಹೇಗೆ ಜನರ ಜೀವನವನ್ನು ಬದಲಿಸುತ್ತದೆ ಎಂಬ ಅಂಶ ಇಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಇಲ್ಲಿ ಕಾಮಿಡಿ, ಥ್ರಿಲ್ಲರ್‌ ಮತ್ತು ಹಾರರ್‌ ಅಂಶಗಳಿವೆ’ ಎನ್ನುತ್ತಾರೆ ಮುರಳಿ.

“ವೈರಲ್‌’ನಲ್ಲಿ ಶ್ರೀನಿವಾಸ್‌, ಸಚಿನ್‌, “ಉಗ್ರಂ’ ಮಂಜು, ಮಾನ್ವಿತಾ ರಾಜ್‌, ವಂದನ, ಮಿಮಿಕ್ರಿ ಗೋಪಿ, ವಿಜಯ್‌ ಚೆಂಡೂರ್‌ ಮುಂತಾದವರು ನಟಿಸುತ್ತಿದ್ದಾರೆ. ಅರುಣ್‌ ಆ್ಯಂಡ್ರೂ ಸಂಗೀತ ಸಂಯೋಜಿಸಿದರೆ, “ಸಂಕಷ್ಟಕರ ಗಣಪತಿ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಉದಯ್‌ ಲೀಲ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಬೆಂಗಳೂರು ಮತ್ತು ಕೇರಳದಲ್ಲಿ ಚಿತ್ರೀಕರಣ ನಡೆಯಲಿದೆಯಂತೆ.

ಮೂರು ವರ್ಷಗಳ ಹಿಂದೆ “ಶಾರ್ಪ್‌ ಶೂಟರ್‌’ ಚಿತ್ರ ಮಾಡಿದ್ದ ಶ್ರೀನಿವಾಸ್‌, ಒಂದು ವರ್ಷದ ಹಿಂದೆ ಅಕಸ್ಮಾತ್‌ ಆಗಿ ಮುರಳಿ ಅವರನ್ನು ಭೇಟಿ ಮಾಡಿದ್ದಾರೆ. ಆಗ ಚಿತ್ರ ಮಾಡುವ ವಿಚಾರ ಬಂದಿದೆ. “ನನಗೆ ಮೊದಲಿನಿಂದಲೂ ನಟಿಸುವ ಆಸಕ್ತಿ ಇತ್ತು. ಇದು ಹೀರೋಯಿಸಂ ಸಿನಿಮಾ ಅಲ್ಲ. ಹಾಗಾಗಿ ಕಥೆಗೆ ಏನು ಬೇಕೋ, ಅದಕ್ಕೆ ತಯಾರಿ ನಡೆಸಿ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೇನೆ. ಇಲ್ಲಿ ಎರಡು ಶೇಡ್‌ನ‌ ಪಾತ್ರವಿದೆ’ ಎಂದು ಹೇಳಿಕೊಂಡರು.

ಅಂದು ಸಚಿನ್‌, ಮಾನ್ವಿತಾ ರಾಜ್‌, ಅರುಣ್‌ ಆ್ಯಂಡ್ರೂ ಮುಂತಾದವರು ಇದ್ದರು. ಎಲ್ಲರೂ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪ ಡಿಸಿದರು. 

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.