Udayavni Special

ಅಲೆದಾಡಿ ಸುಸ್ತಾದವರ ಸಿನಿಮಾ…


Team Udayavani, Aug 9, 2019, 5:00 AM IST

e-28

‘ಒಮ್ಮೊಮ್ಮೆ ಹೀಗೆಲ್ಲಾ ಆಗಿಬಿಡುತ್ತೆ…’

– ನಿರ್ದೇಶಕ ಎಂಜಿಆರ್‌ ಹೀಗೆ ಹೇಳುತ್ತಾ ಹೋದರು. ಅವರು ಹಾಗೆ ಹೇಳಿದ್ದು ತಮ್ಮ ಚೊಚ್ಚಲ ಚಿತ್ರ ‘ಶೈಬ್ಯ’ ಬಗ್ಗೆ. ಮೂಲತಃ ಹೈದರಾಬಾದ್‌ನವರಾದ ಎಂಜಿಆರ್‌ ಅವರಿಗೆ ಇದು ಕನ್ನಡದ ಮೊದಲ ಸಿನಿಮಾ. ಇಲ್ಲೊಂದು ಚಿತ್ರ ಮಾಡಬೇಕು ಅಂತ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಇಲ್ಲಿದ್ದು, ಹಲವರ ಬಳಿ ಕೆಲಸಕ್ಕಾಗಿ ಅಲೆದಾಡಿ, ಕೊನೆಗೆ ಗೆಳೆಯರೊಬ್ಬರ ಮೂಲಕ ಒಂದು ಕಿರುಚಿತ್ರಕ್ಕೆ ಅಣಿಯಾಗುವ ಅವರಿಗೆ, ಸಣ್ಣ ಸಿನಿಮಾ ಯಾಕೆ, ದೊಡ್ಡ ಚಿತ್ರವನ್ನೇ ಮಾಡಿಬಿಡೋಣ ಎಂಬ ಸಲಹೆ ಮತ್ತು ಸೂಚನೆ ಸಿಕ್ಕಿದ್ದೇ ತಡ, ಅವರು ‘ಶೈಬ್ಯ’ ಚಿತ್ರಕ್ಕೆ ಕೈ ಹಾಕುತ್ತಾರೆ. ಅದೀಗ ಪೂರ್ಣಗೊಂಡು, ತೆರೆಗೆ ಬರಲು ಅಣಿಯಾಗಿದೆ. ಆ ಬಗ್ಗೆ ಹೇಳಿಕೊಳ್ಳಲೆಂದೇ ಪತ್ರಕರ್ತರ ಎದುರು ಬಂದಿದ್ದ ನಿರ್ದೇಶಕ ಎಂಜಿಆರ್‌, ಹೇಳಿದ್ದಿಷ್ಟು.

‘ಒಂದು ಕಿರುಚಿತ್ರ ಮಾಡೋಣ ಅಂತ ಮುಂದಾದೆ. ಅದಕ್ಕೆ ಮುಂದಾಗಿದ್ದು, ಹೀರೋ ಸನ್ಮಿತ್‌ ವಿಹಾನ್‌. ಕಥೆ ಕೇಳಿ, ಸಿನಿಮಾ ಮಾಡೋಣ ಅಂತ ಹೇಳಿದರು. ಚಿತ್ರವಾಯ್ತು. ಇದಕ್ಕೂ ಮುನ್ನ ಸಾಕಷ್ಟು ನಿರ್ಮಾಪಕರ ಬಳಿ ಹೋದೆ. ಆ ಹೀರೋಗೆ ಕಥೆ ಹೇಳಿ, ಒಪ್ಪಿಸಿ ಅಂದರು. ಅವರು ಹೇಳಿದ ಹೀರೋ ಬಳಿ ಹೋದರೆ, ನಿರ್ಮಾಪಕರ ಜೊತೆ ಬನ್ನಿ ಅಂದರು. ಹೀಗೆ ಅಲೆದಾಡುತ್ತಲೇ ವರ್ಷಗಳು ಕಳೆದವು. ಬೇಸರವಾಯ್ತು. ಮುಂದೇನು ಮಾಡಬೇಕು ಎಂದು ಗೊತ್ತಾಗದ ಸಂದರ್ಭದಲ್ಲಿ ಗೆಳೆಯರೊಬ್ಬರು ಬಂದು ಈ ಚಿತ್ರ ಆಗೋಕೆ ಕಾರಣರಾದರು. ಇದೊಂದು ರೊಮ್ಯಾಂಟಿಕ್‌ ಕಾಮಿಡಿ, ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ. ಇನ್ನು, ಚಿತ್ರದ ಶೀರ್ಷಿಕೆ ‘ಶೈಬ್ಯ’ ಬಗ್ಗೆ ಎಲ್ಲರಿಗೂ ಪ್ರಶ್ನೆ ಇದೆ. ಇಲ್ಲಿ ಶೈಬ್ಯ ಅಂದರೆ, ನಂಬಿಕೆಗೆ ಅರ್ಹವಾದ ಹೆಂಡತಿ ಎಂದರ್ಥ. ಇಲ್ಲಿ ನಂಬಿಕೆ ಇಡುವಂತಹ ಅಂಶಗಳು ಹೆಚ್ಚಾಗಿವೆ. ಎಲ್ಲರಿಗೂ ಇಷ್ಟವಾಗುವಂತಹ ಚಿತ್ರ ಇದಾಗಲಿದೆ’ ಎಂದರು ಎಂಜಿಆರ್‌.

ನಾಯಕ ಸನ್ಮಿತ್‌ಗೆ ಇದು ಮೊದಲ ಚಿತ್ರ. ರಂಗಭೂಮಿಯ ಹಿನ್ನೆಲೆ ಇರುವ ಸನ್ಮಿತ್‌ಗೆ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಆ ಬಗ್ಗೆ ಹೇಳುವ ಅವರು, ‘ಜೇಬಲ್ಲಿ ಹತ್ತು ರುಪಾಯಿ ಕೂಡ ಇಲ್ಲದ, ಯಾವುದೇ ಕೆಲಸವೂ ಇಲ್ಲದ ಹುಡುಗನೊಬ್ಬ ಸಾಧನೆ ಮಾಡಬೇಕು ಅಂತ ಹೊರಡುತ್ತಾನೆ. ದಾರಿ ಮಧ್ಯೆ ಏನೋ ಒಂದು ಘಟನೆ ನಡೆಯುತ್ತದೆ. ಅಲ್ಲಿಂದ ಕಥೆ ಶುರುವಾಗುತ್ತೆ. ಅವನು ತನ್ನ ಗುರಿ ಮುಟ್ಟುತ್ತಾನೋ, ಇಲ್ಲವೋ ಅನ್ನೋದೇ ಕಥೆ’ ಎಂದರು ಸನ್ಮಿತ್‌.ನಾಯಕಿ ಮೇಘಶ್ರೀ ಗೌಡ ಅವರಿಗೂ ಇದು ಮೊದಲ ಅನುಭವ. ಅವರಿಲ್ಲಿ ಮಾಡರ್ನ್ ಹುಡುಗಿಯ ಪಾತ್ರ ನಿರ್ವಹಿಸಿದ್ದಾರಂತೆ. ಸದಾ ಕೆಲಸದ ಮೇಲೆ ಫೋಕಸ್‌ ಮಾಡುವ ಹುಡುಗಿಯ ಲೈಫ‌ಲ್ಲಿ ಲವ್ವು, ಮದುವೆ ಎಲ್ಲವೂ ಬರುತ್ತೆ. ತುಂಬಾ ಬೋಲ್ಡ್ ಹುಡುಗಿಯಾಗಿರುವ ಆಕೆಯ ಬದುಕಲ್ಲಿ ಒಂದಷ್ಟು ತಿರುವುಗಳು ಎದುರಾಗುತ್ತವೆ. ಅದೇ ಚಿತ್ರದ ಸಸ್ಪೆನ್ಸ್‌’ ಎಂಬುದು ಮೇಘಶ್ರೀ ಗೌಡ ಮಾತು.

ಮತ್ತೂಬ್ಬ ನಾಯಕಿ ಮಿಲನಾ ರಮೇಶ್‌ ಅವರಿಗೆ ಇದು ಮೊದಲ ಚಿತ್ರ. ಅವರಿಗಿಲ್ಲಿ ಮುಗ್ಧ ಹುಡುಗಿಯ ಪಾತ್ರ ಸಿಕ್ಕಿದೆಯಂತೆ. ಕೆಲವರಿಂದ ಅವರಿಗೆ ಏನೆಲ್ಲಾ ಮೋಸ ಆಗುತ್ತೆ ಎಂಬುದು ಕಥೆಯಂತೆ.

‘ಕುರಿ’ ಸುನೀಲ್ ಅವರಿಗಿಲ್ಲಿ ಹಾಸ್ಯ ಪಾತ್ರ ಸಿಕ್ಕಿದೆಯಂತೆ. ಈವರೆಗೆ 112 ಚಿತ್ರಗಳಲ್ಲಿ ನಟಿಸಿರುವ ಕುರಿ ಸುನೀಲ್ಗೆ ‘ಶೈಬ್ಯ’ ಒಂದು ಹೊಸ ಬಗೆಯ ಚಿತ್ರವಂತೆ. ಹೊಸಬರೇ ಸೇರಿ ಮಾಡಿರುವ ಈ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಇರಲಿ’ ಎಂದರು ಸುನೀಲ್.

ಯಶೋಧ ಸನ್ನಪ್ಪನವರ್‌ ಈ ಚಿತ್ರದ ನಿರ್ಮಾಪಕರು. ಅವರಿಗೆ ಇದು ಹೊಸ ಚಿತ್ರ. ನಮ್ಮ ಈ ಪ್ರಯತ್ನವನ್ನು ಬೆಂಬಲಿಸಬೇಕು ಎಂದಷ್ಟೇ ಹೇಳಿ ಸುಮ್ಮನಾದರು. ಚಿತ್ರಕ್ಕೆ ನಾಗರಾಜ್‌ ಮೂರ್ತಿ ಛಾಯಾಗ್ರಹಣವಿದೆ. ಕಾರ್ತಿಕ್‌ ಶರ್ಮ ಸಂಗೀತವಿದೆ. ಮಣಿ, ರಮೇಶ್‌ ಇತರರು ‘ಶೈಬ್ಯ’ ಕುರಿತು ಮಾತನಾಡುವ ಹೊತ್ತಿಗೆ ಸಮಯ ಮೀರಿತ್ತು. ಮಾತುಕತೆಗೂ ಬ್ರೇಕ್‌ ಬಿತ್ತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದು ಬೇಡ: ಸಚಿವರಿಗೆ ಎಸ್ ಜಿ ಸಿದ್ದರಾಮಯ್ಯ ಪತ್ರ

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದು ಬೇಡ: ಸಚಿವರಿಗೆ ಎಸ್ ಜಿ ಸಿದ್ದರಾಮಯ್ಯ ಪತ್ರ

ದಿಲ್ಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿ ಮಡಿಲು ಸೇರಿದ 5 ವರ್ಷದ ವಿಹಾನ್

ದಿಲ್ಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿ ಮಡಿಲು ಸೇರಿದ 5 ವರ್ಷದ ವಿಹಾನ್!

ಶಸ್ತ್ರಾಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ಸೋಂಕು ದೃಢ: ಉಡುಪಿ ಎಸ್ ಪಿ ಕಚೇರಿ ಸೀಲ್ ಡೌನ್?

ಶಸ್ತ್ರಾಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ಸೋಂಕು ದೃಢ: ಉಡುಪಿ ಎಸ್ ಪಿ ಕಚೇರಿ ಸೀಲ್ ಡೌನ್?

ದುಬಾರಿ ವಸ್ತುಗಳು : ಪೆನ್ಸಿಲ್‌ : ಬೆಲೆ: 9 ಲಕ್ಷ 68 ಸಾವಿರ ರೂ

ದುಬಾರಿ ವಸ್ತುಗಳು : ಅಟೋಮ್ಯಾಟಿಕ್‌ ಲೇಸ್‌ ಶೂ ಬೆಲೆ ಕೇಳಿದ್ರೆ ಹುಬ್ಬೇರಿಸುತ್ತೀರಿ!

ಶಾಸಕ ರಘುಪತಿ ಭಟ್ ರವರ ಉಚಿತ ಬಸ್ಸಿನ ಸೇವೆ ರಾಜ್ಯಕ್ಕೆ ಹೊಸ ಪ್ರಯೋಗ – ಶೋಭಾ ಕರಂದ್ಲಾಜೆ

ಶಾಸಕ ರಘುಪತಿ ಭಟ್ ರವರ ಉಚಿತ ಬಸ್ಸಿನ ಸೇವೆ ರಾಜ್ಯಕ್ಕೆ ಹೊಸ ಪ್ರಯೋಗ : ಶೋಭಾ ಕರಂದ್ಲಾಜೆ

ಕೋವಿಡ್: ಎರಡು ತಿಂಗಳ ಬಳಿಕ ಪುನರಾರಂಭ-ಹಲವು ವಿಮಾನ ಸಂಚಾರ ರದ್ದು

ಕೋವಿಡ್: ಎರಡು ತಿಂಗಳ ಬಳಿಕ ಪುನರಾರಂಭ-ಹಲವು ವಿಮಾನ ಸಂಚಾರ ರದ್ದು

ಕಲಬುರಗಿಗೆ ‘ಕೋವಿಡ್’ ಸಿಹಿ-ಕಹಿ: 14 ಜನ ಆಸ್ಪತ್ರೆಗೆ, 10 ಜನ ಆಸ್ಪತ್ರೆಯಿಂದ ಮನೆಗೆ!

ಕಲಬುರಗಿಗೆ ‘ಕೋವಿಡ್’ ಸಿಹಿ-ಕಹಿ: 14 ಜನ ಆಸ್ಪತ್ರೆಗೆ, 10 ಜನ ಆಸ್ಪತ್ರೆಯಿಂದ ಮನೆಗೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dharavahi

ಮಾರ್ಗಸೂಚಿಯಡಿ ಧಾರಾವಾಹಿ ಚಿತ್ರೀಕರಣ

olleya-cinema

“ಒಳ್ಳೆಯ ಸಿನಿಮಾವನ್ನು ಪ್ರೇಕ್ಷಕ ಕೈಬಿಡಲ್ಲ’

indira-kathe

ಇಂದಿರಾ ಗಾಂಧಿ ಕಥೆ ಹೇಳಲು ಹೊರಟ ರಘು ಕೋವಿ

pradesha

ಹಿಮಾಚಲ ಪ್ರದೇಶದಲ್ಲಿ ಗಾಳಿಪಟ

kamsa sidd

ಕಲಿಯುಗದ ಕಂಸನ ಎಂಟ್ರಿಗೆ ಸಿದ್ಧತೆ…

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

25-May-19

ಆಯುರ್ವೇದದಿಂದ ಕೋವಿಡ್ ತಡೆ ಸಾಧ್ಯ

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದು ಬೇಡ: ಸಚಿವರಿಗೆ ಎಸ್ ಜಿ ಸಿದ್ದರಾಮಯ್ಯ ಪತ್ರ

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದು ಬೇಡ: ಸಚಿವರಿಗೆ ಎಸ್ ಜಿ ಸಿದ್ದರಾಮಯ್ಯ ಪತ್ರ

25-May-17

ಕೋವಿಡ್ ವಾರಿಯರ್ಸ್ ಗಳ ಸೇವೆ ಅನನ್ಯ: ಗೋಪಾಲ ಕಾರಜೋಳ

ದಿಲ್ಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿ ಮಡಿಲು ಸೇರಿದ 5 ವರ್ಷದ ವಿಹಾನ್

ದಿಲ್ಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿ ಮಡಿಲು ಸೇರಿದ 5 ವರ್ಷದ ವಿಹಾನ್!

25-May-16

ವಾರಿಯರ್ಸ್ ಗೆ ಹೋಮಿಯೋಪಥಿ ಮಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.