ಭೂತಕಾಲಕ್ಕೆ ರಿವೈಂಡ್‌ ಆದಾಗ…


Team Udayavani, Dec 15, 2017, 11:25 AM IST

15-12.jpg

ಈಗಂತೂ ಕನ್ನಡ ಚಿತ್ರರಂಗದಲ್ಲಿ ಹೊಸಬರದ್ದೇ ಕಾರುಬಾರು. ಅದರಲ್ಲೂ ಹೊಸ ಬಗೆಯ ಕಥೆಯೊಂದಿಗೆ ಒಂದಷ್ಟು ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆ ಸಾಲಿಗೆ “ಟೋರ ಟೋರ’ ಸಿನಿಮಾವೂ ಒಂದು. ಈ ಚಿತ್ರ ಇದೀಗ ಡಿ.22ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಗಾಂಧಿನಗರದ ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ಸಿನಿಮಾ ಮಾಡಿರುವ ಖುಷಿಯಲ್ಲಿ ಹೊಸಬರಿದ್ದಾರೆ. ಹರ್ಷ್‌ ಗೌಡ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಜೊತೆಗೆ ನಿರ್ಮಾಣ ಕೂಡಾ ಇವರದೇ. ತಮ್ಮ ತಂಡದೊಂದಿಗೆ ಚಿತ್ರದ ಬಗ್ಗೆ ಹೇಳಲೆಂದೇ ಪತ್ರಕರ್ತರ ಮುಂದೆ ಆಗಮಿಸಿದ್ದರು ಹರ್ಷ್‌ ಗೌಡ. 

“ಇದೊಂದು ಟೈಮ್‌ ಮೆಷಿನ್‌ ಕುರಿತ ಸಿನಿಮಾ. ಈ ಕಾನ್ಸೆಪ್ಟ್ ಕನ್ನಡಕ್ಕೆ ಹೊಸದು. ಕನ್ನಡಕ್ಕೆ ಹೊಸದಾದ ಈ ಕಾನ್ಸೆಪ್ಟ್ ಅನ್ನು ಜನರು ಸ್ವೀಕರಿಸುತ್ತಾರೆಂಬ ವಿಶ್ವಾಸವೂ ನನಗಿದೆ. ಕನ್ನಡದವರು  ಹೊಸ ಕಾನ್ಸೆಪ್ಟ್ ಅನ್ನು ಯಾವತ್ತೂ ಕೈ ಬಿಟ್ಟಿಲ್ಲ. ಹಾಗಾಗಿ, ನಮಗೆ ಸಿನಿಮಾ ಮೇಲೆ ವಿಶ್ವಾಸವಿದೆ’ ಎನ್ನುತ್ತಾರೆ ಹರ್ಷ್‌ ಗೌಡ. “ಟೈಮ್‌ ಮೆಷಿನ್‌ ಕಾನ್ಸೆಪ್ಟ್ ಬಗ್ಗೆ ಹೇಳುವುದಾದರೆ, “ಇದೊಂದು ಕಾಲ್ಪನಿಕ ಕಥೆ. ಟೈಮ್‌ ಮೆಷೀನ್‌ ಮೂಲಕ ನಮ್ಮ ಭೂತಕಾಲವನ್ನು ರಿವೈಂಡ್‌ ಮಾಡಿ ನೋಡಬಹುದು. ಭೂತಕಾಲಕ್ಕೆ ಹೋಗುವಾಗ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ಪ್ರೇಕ್ಷಕರು ತಾಳ್ಮೆಯಿಂದ ನೋಡಿದರೆ ಈ ಸಿನಿಮಾ ಖಂಡಿತಾ ಇಷ್ಟವಾಗುತ್ತದೆ ಎನ್ನುತ್ತಾರೆ ಅವರು, ಈಗಿನ ಯೂತ್ಸ್ಗೆ ಬೇಕಾದ ಅಂಶಗಳು ಚಿತ್ರದಲ್ಲಿವೆ. ಇನ್ನು, ಇಲ್ಲಿ ಅಶ್ಲೀಲತೆಯಾಗಲಿ, ಡಬಲ್‌ ಮೀನಿಂಗ್‌ ಸಂಭಾಷಣೆಗಳಾಗಲೀ ಇಲ್ಲ’ ಎಂಬುದು ಅವರ ಮಾತು.

ಸಿದ್ದು ಮೂಲೀಮನಿ ಅವರಿಗೆ ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಈಗಾಗಲೇ ಧ್ರುವ ಸರ್ಜಾ, ಯೋಗಿ ಅವರು ಟ್ರೇಲರ್‌ ನೋಡಿ ಮೆಚ್ಚುಗೆ ಪಟ್ಟಿರುವುದರಿಂದ ಸಹಜವಾಗಿ ಅವರಿಗೂ ಖುಷಿಯಾಗಿದೆಯಂತೆ. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ವಿಶೇಷತೆ ಹೊಂದಿದೆ. ಇದು ರೆಗ್ಯುಲರ್‌ ಪ್ಯಾಟರ್ನ್ ಸಿನಿಮಾವಲ್ಲ. ಇಡೀ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಹರ್ಷ್‌ ಬೇರೆ ರೀತಿಯೇ ಮಾಡಿಕೊಂಡಿದ್ದು, ಫ‌ನ್ನಿಯಾಗಿ ಸಿನಿಮಾ ಸಾಗುತ್ತದೆ. ಹರ್ಷ್‌ ಅವರು ಕಲಾವಿದರಿಗೆ ಸಂಪೂರ್ಣ ಸ್ವತಂತ್ರ ಕೊಟ್ಟಿದ್ದರಿಂದ ಪಾತ್ರ ಕೂಡಾ ಚೆನ್ನಾಗಿ ಮೂಡಿಬಂದಿದೆ ಎಂಬುದು ಸಿದ್ದು ಮಾತು. ಉಳಿದಂತೆ ಚಿತ್ರದಲ್ಲಿ ನಟಿಸಿರುವ ಸನಿಹ ಅವರಿಗೆ ಇದು ಮೊದಲ ಸಿನಿಮಾವಂತೆ. ಈ ಹಿಂದೆ ಅವರು ನಟಿಸಿದ “ವುಮೆನ್ಸ್‌ ಡೇ’ ಚಿತ್ರ ಬಿಡುಗಡೆಯಾಗಿದೆ. ಅವರಿಗಿಲ್ಲಿ ಸಾಕಷ್ಟು ಕಲಿಯಲು ಸಾಧ್ಯವಾಗಿದೆಯಂತೆ. ಇನ್ನು ಪೂಜಾ ರಾಜು ಅವರಿಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ. ಚಿತ್ರ ಮನರಂಜನೆಯ ಜತೆಯಲ್ಲಿ ಒಳ್ಳೆಯ ಸಂದೇಶ ಕೊಡಲಿದೆ ಅಂದರು ಪೂಜಾ. ರಾಮಮೂರ್ತಿ, ಸನತ್‌, ಮಂಜು ಹೆದ್ದೂರು, ಅನಿರುದ್ಧ ಎಲ್ಲರೂ ಮಾತನಾಡಿದರು. ಚಿತ್ರಕ್ಕೆ ಸಿದ್ಧಾರ್ಥ್ ಕಾಮತ್‌ ಸಂಗೀತ ನೀಡಿದ್ದಾರೆ.

ಟಾಪ್ ನ್ಯೂಸ್

ಪಂಚಮಸಾಲಿ ಮೀಸಲು ಹೋರಾಟಕ್ಕೆ ಸದಾ ಬೆಂಬಲ: ಮನಗೂಳಿ ಅಭಿನವಶ್ರೀ

ಪಂಚಮಸಾಲಿ ಮೀಸಲು ಹೋರಾಟಕ್ಕೆ ಸದಾ ಬೆಂಬಲ: ಮನಗೂಳಿ ಅಭಿನವಶ್ರೀ

ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು

ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ

ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ?

suicide

ಜಿಲ್ಲೆಯಲ್ಲಿ ಆತ್ಮಹತ್ಯೆ ಹೆಚ್ಚಳ

ಕೋವಿಡ್ 19: ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ

ಕೋವಿಡ್ 19: ಭಾರತ ಸೇರಿದಂತೆ 16 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದ ಸೌದಿ ಅರೇಬಿಯಾ

Don’t Think Rohit Sharma Needs A Break,” Says Ravi Shastri

ರೋಹಿತ್ ಶರ್ಮಾಗೆ ಬ್ರೇಕ್ ಕೊಟ್ಟಿದ್ಯಾಕೆ? ಇದು ಅನಗತ್ಯ: ರವಿ ಶಾಸ್ತ್ರಿ

siddaramaih

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಂಟಿಯಾಗುತ್ತಿದ್ದಾರೆಯೇ? ಹೈಕಮಾಂಡ್ ನೀಡಿದ ಸಂದೇಶವೇನು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಜಾರು ಮಾಡ್ಕೊಂಡ್ರು ಸಂಹಿತಾ!

ಬೇಜಾರು ಮಾಡ್ಕೊಂಡ್ರು ಸಂಹಿತಾ!

twenty one hours kannada movie

ಕಿಚ್ಚ ಮೆಚ್ಚಿದ “ಟ್ವೆಂಟಿ ಒನ್‌ ಹವರ್”: ಧನಂಜಯ್ ನಟನೆಯ ಚಿತ್ರ

cutting shop kannada movie

ಸಂಕಲನಕಾರನ ಬದುಕು-ಬವಣೆ: ಕಟ್ಟಿಂಗ್‌ ಶಾಪ್‌ ನಲ್ಲಿ ಹೊಸಬರ ಕನಸು

‘ಸಕುಟುಂಬ ಸಮೇತ’ ಸಿನಿಮಾಗೆ ಬನ್ನಿ! ರಿಲೀಸ್ ಗೆ ಮುನ್ನವೇ ಡಬಲ್ ಲಾಭದ ಖುಷಿ

‘ಸಕುಟುಂಬ ಸಮೇತ’ ಸಿನಿಮಾಗೆ ಬನ್ನಿ! ರಿಲೀಸ್ ಗೆ ಮುನ್ನವೇ ಡಬಲ್ ಲಾಭದ ಖುಷಿ

critical keerthanegalu

ಬೆಟ್ಟಿಂಗ್‌ ಸುತ್ತ ‘ಕ್ರಿಟಿಕಲ್ ಕೀರ್ತನೆಗಳು’ ಇಂದು ತೆರೆಗೆ

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

6

ಸಂವಿಧಾನ ಓದಿದ್ದರೂ ಅರ್ಥೈಸಿಕೊಂಡಿಲ್ಲ: ನಾಗಮೋಹನದಾಸ

neralakatte

ನೇರಳಕಟ್ಟೆ: ಇನ್ನೂ ಆಗಿಲ್ಲ ಸುಸಜ್ಜಿತ ಸರ್ಕಲ್‌

ಪಂಚಮಸಾಲಿ ಮೀಸಲು ಹೋರಾಟಕ್ಕೆ ಸದಾ ಬೆಂಬಲ: ಮನಗೂಳಿ ಅಭಿನವಶ್ರೀ

ಪಂಚಮಸಾಲಿ ಮೀಸಲು ಹೋರಾಟಕ್ಕೆ ಸದಾ ಬೆಂಬಲ: ಮನಗೂಳಿ ಅಭಿನವಶ್ರೀ

ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು

ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ

ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.